ಹೆಂಡತಿ ಸ್ನೇಹಿತೆಯನ್ನೇ ಮದುವೆಯಾದ ಯೂಟ್ಯೂಬರ್; ಖಾತೆಯಲ್ಲಿ ಕೋಟಿ ಕೋಟಿ ಹಣ ಹೇಗೆ ಬಂತು?
ಮದುವೆಯಾದ 6 ವರ್ಷದ ನಂತರ ಪತ್ನಿಯ ಬೆಸ್ಟ್ ಫ್ರೆಂಡ್‌ನ ಮದುವೆ ಮಾಡಿಕೊಂಡ ಅರ್ಮಾನ್ ಮಲಿಕ್....
ಸೋಷಿಯಲ್ ಮೀಡಿಯಾದಿಂದ ಬದುಕು ಕಟ್ಟಿಕೊಂಡವರು ಸಾವಿರಾರು ಅವರಲ್ಲಿ ಅರ್ಮಾನ್ ಮಲಿಕ್ ಕೂಡ ಒಬ್ಬ. ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿರುವ ಯೂಟ್ಯೂಬರ್‌ಗಳಲ್ಲಿ ಒಬ್ಬರು.
'2011ರಲ್ಲಿ ಅರ್ಮಾನ್ ಮಲಿಕ್ ಪಾಯಲ್ ಎಂಬುವವರನ್ನು ಮದುವೆ ಮಾಡಿಕೊಂಡರು, 2018ರಲ್ಲಿ ಪಾಯಲ್ ಸ್ನೇಹಿತೆ ಕೃತಿಕಾಳನ್ನು ಮದುವೆ ಮಾಡಿಕೊಂಡಿದ್ದಾರೆ. ಈಗಲ್ಲಿ ಡಿವೋರ್ಸ್ ಕೊಡದೇ ಎರಡು ಮದುವೆ ಮಾಡಿಕೊಂಡಿದ್ದಾರೆ.
ಮದುವೆ ಆದ ಮೇಲೆ ಅರ್ಮಾನ್ ಹಣಬರಹ ಬದಲಾಗಿದೆ. ಮೊದಲು ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಅರ್ಮಾನ್ ಯೂಟ್ಯೂಬ್‌ನಿಂದ ದುಡಿದು 10 ಫ್ಲಾಟ್‌ಗಳನ್ನು ಖರೀದಿಸಿದ್ದಾರೆ.
ಅರ್ಮಾನ್ ಮಲ್ಲಿಕ್‌ಗೆ ಒಟ್ಟು ನಾಲ್ಕು ಮಕ್ಕಳಿದ್ದಾರೆ. ಒಂದು ಅಪಾರ್ಟ್‌ಮೆಂಟ್‌ನಲ್ಲಿ 10 ಮನೆಗಳನ್ನು ಅರ್ಮಾನ್ ಖರೀದಿ ಮಾಡಿದ್ದು ನಾಲ್ಕರಲ್ಲಿ ಇವರ ಸಂಸಾರವೇ ಇದೆ.
ಇನ್ನು ಉಳಿದ ಫ್ಲಾಟ್‌ನಲ್ಲಿ ಅರ್ಮಾನ್ ಕೆಲಸದವರು ಉಳಿದುಕೊಂಡಿರುತ್ತಾರೆ. ಅರ್ಮಾನ್ ಬಳಿ, ಆರು ಸಂಪಾದಕರು, ಎರಡು ಚಾಲಕರು, ನಾಲ್ಕು ಪಿಎಸ್ಯು ಹಾಗೂ ಆರು ಕೆಲಸಗಾರರಿದ್ದಾರೆ.
ಅರ್ಮಾನ್ ಬಳಿ ಸುಮಾರು 200 ಕೋಟಿ ಆಸ್ತಿ ಇದೆ ಎನ್ನಲಾಗಿದೆ. ಇದಕ್ಕೆ ಕಾರಣ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಂ ಕಾರಣ ಎನ್ನಲಾಗಿದೆ. ತಿಂಗಳಿನಲ್ಲಿ ಸುಮ್ಮನೆ ಇದ್ರೂ ಮೂರ್ನಾಲ್ಕು ಲಕ್ಷ ಹಣ ಬರುತ್ತದೆ.
ಯೂಟ್ಯೂಬ್‌ನಲ್ಲಿ ನಾನು ಎಂದೂ ಕೆಟ್ಟದನ್ನು ತೋರಿಸಿಲ್ಲ ನಾವು ಹಸಿಗೆ ಮೇಲೆ ಮಲಗಿರುವುದು ಅಥವಾ ತಬ್ಬಿಕೊಂಡು ಮುದ್ದಾಡುತ್ತಿರುವುದನ್ನು ತೋರಿಸಿಲ್ಲ. ಹೀಗೆ ಮಾಡಿದರೆ ನಾನು ಸಖತ್ ಫೇಮಸ್ ಆಗಿ ಬಿಡುತ್ತಿದ್ದೆ.
'ಎರಡು ಮದುವೆಯಾಗಿದ್ದೀನಿ ನೀವು ಎರಡು ಮದುವೆ ಆಗಿ ಎಂದು ಯಾರಿಗೂ ಹೇಳಲ್ಲ. ನನ್ನ ಪತ್ನಿಯರಂತೆ ಯಾರಿಗೂ ಸಿಗುವುದಿಲ್ಲ ಇದು ನನ್ನ ಅದೃಷ್ಟ' ಎಂದು ಅರ್ಮಾನ್ ಹೇಳಿದ್ದರು.