Yeh Rishta Kya Kehlata Hai Serial Cast: ಸೀರಿಯಲ್ ಎಂದಕೂಡಲೇ ಎಳೆಯುತ್ತಾರೆ ಎಂದು ದೂರು ಬರುವುದು. ಆದರೆ ಇಲ್ಲೊಂದು ಧಾರಾವಾಹಿ 4325 ಎಪಿಸೋಡ್‌ಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. 16 ವರ್ಷಗಳಿಂದ ಪ್ರಸಾರ ಆಗುತ್ತಿರುವ ಈ ಧಾರಾವಾಹಿಯಲ್ಲಿ ಬರುವ ಒಂದು ಮದುವೆಗೆ ಎರಡು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದರೆ ನಂಬ್ತೀರಾ?
ಸೀರಿಯಲ್ ಎಂದತಕ್ಷಣ ಯಪ್ಪಾ.. ಎಂಥ ರಬ್ಬರ್ ಬ್ಯಾಂಡ್ ಎಳೀತಾರೆ ಅಂತ ದೂರೋದುಂಟು. ಬಹುಶಃ ಹಿಂದಿಯ ʼಯೇ ರಿಶ್ತಾ ಕ್ಯಾ ಕೆಹಲಾತಾ ಹೇʼ ಧಾರಾವಾಹಿ ನೋಡಿ ಈ ರೀತಿ ಹೇಳಿರಬಹುದು. ಹೌದು, 4325 ಎಪಿಸೋಡ್‌ಗಳನ್ನು ಪೂರೈಸಿರುವ ಈ ಧಾರಾವಾಗಿ ಮುಗಿಯುವ ಥರವೇ ಕಾಣ್ತಿಲ್ಲ.
4325 ಎಪಿಸೋಡ್ ಅಂದ್ರೆ ಸುಮ್ನೇನಾ?
2009ರಿಂದ ಈ ಧಾರಾವಾಹಿ ಪ್ರಸಾರ ಆಗಿತ್ತು. ಆರಂಭದಲ್ಲಿ ಅಕ್ಷರಾ, ನೈತಿಕ್ ಲವ್‌ಸ್ಟೋರಿ ಕಥೆ ಹೇಳಲಾಗಿತ್ತು. ಇದಾದ ನಂತರದಲ್ಲಿ ಇವರ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳ ಕಥೆ ಹೇಳಲಾಗುತ್ತಿದೆ. ಈ ಧಾರಾವಾಹಿಯಲ್ಲಿ ಸಾಕಷ್ಟು ನಿರ್ದೇಶಕರು, ಬರಹಗಾರರು ಬದಲಾದರೂ ಕೂಡ ಸೀರಿಯಲ್ ಮಾತ್ರ ಅಂತ್ಯವನ್ನೇ ಕಾಣ್ತಿಲ್ಲ. ಇಂದು ಒಂದು ಧಾರಾವಾಹಿ 500 ಎಪಿಸೋಡ್ ಪೂರೈಸಿದ್ರೆ ಅದೇ ಯಶಸ್ಸು ಎಂದು ಹೇಳುವ ಕಾಲದಲ್ಲಿರುವಾಗ ಈ ಸೀರಿಯಲ್ 4325 ಎಪಿಸೋಡ್ ಪೂರೈಸಿದೆ ಅಂದ್ರೆ ಸಣ್ಣ ವಿಷಯವೇ?
ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಗೆ ಧನ್ಯವಾದ ಹೇಳಿದ ಕ್ಯಾನ್ಸರ್ ಪೀಡಿತ ಹೀನಾ ಖಾನ್
ಅಜ್ಜ-ಅಜ್ಜಿ ಪಾತ್ರಧಾರಿಗಳು ಸಾಯೋದಿಲ್ವಾ?
ಅಕ್ಷರಾ, ನೈತಿಕ್ ನಂತರದಲ್ಲಿ ಇವರ ಮಗಳು ನಾಯ್ರಾ, ಕಾರ್ತಿಕ್ ಲವ್‌ಸ್ಟೋರಿ ಶುರುವಾಗುವುದು. ಕಾರ್ತಿಕ್-ನಾಯ್ರಾ ಸತ್ತರೂ ಕೂಡ ಅವರ ತಂದೆ-ತಾಯಿ ಪಾತ್ರಗಳು, ಈ ಪಾತ್ರಧಾರಿಗಳು ಇನ್ನೂ ಈ ಸೀರಿಯಲ್‌ನಲ್ಲಿ ಬದುಕಿರೋದು ಮಾತ್ರ ದೊಡ್ಡ ಅಚ್ಚರಿ ಎನ್ನಬಹುದು.
ಈಗ ಯಾವ ರೀತಿ ಕತೆ ಸಾಗುತ್ತಿದೆ?
ನಾಯ್ರಾ ಮಗಳು ಅಕ್ಷರಾ, ಅಭಿಮನ್ಯು ಲವ್‌ಸ್ಟೋರಿ ಶುರುವಾಗುವುದು. ಈ ಜೋಡಿಯ ಮಕ್ಕಳ ಕುರಿತು ಈಗ ಕಥೆ ಸಾಗುತ್ತಿದೆ. ಬಳಿಕ ಅರ್ಮಾನ್, ಅಭಿರಾ, ರೂಹಿ ಕಥೆ ಸಾಗುತ್ತಿದೆ. ಕಳೆದ ಮೂರು ಸೀಸನ್‌ಗಳಿಂದ ಮುಖ್ಯ ಪಾತ್ರಧಾರಿಗಳು ಬದಲಾಗುತ್ತಿದ್ದಾರೆ, ಆದರೆ ಕಾರ್ತಿಕ್ ಅಪ್ಪ-ಅಮ್ಮನ ಪಾತ್ರಗಳು ಮಾತ್ರ ಹಾಗೆ ಇರೋದು ಮಾತ್ರ ನಂಬಲು ಅಸಾಧ್ಯ. ಈ ಧಾರಾವಾಹಿ ಟಿಆರ್‌ಪಿಯಲ್ಲಿಯೂ ಕೂಡ ಕಮಾಲ್ ಮಾಡುತ್ತಿರೋದರಿಂದ ಒಂದಷ್ಟು ಸಮಯ ಪೀಳಿಗೆಯ ಕಥೆ ಹೇಳಲಾಗುತ್ತಿದೆ. ಹೀಗೆ ಧಾರಾವಾಹಿ ಕತೆ ಸಾಗುತ್ತಿದೆ. ಈ ಸೀರಿಯಲ್ ಕಲಾವಿದರ ಜನಪ್ರಿಯತೆ ಹೆಚ್ಚಿದೆ. ಅದರಲ್ಲಿಯೂ ಆರಂಭದಲ್ಲಿ ಹೀನಾ ಖಾನ್ ಅವರು ಅಕ್ಷರಾ ಆಗಿ ಹಿಂದಿ ಕಿರುತೆರೆ ಲೋಕವನ್ನೇ ಆಳಿದ್ದರು ಎನ್ನಬಹುದು.
2024ರಲ್ಲಿ ಅತಿಹೆಚ್ಚು ಮಂದಿ ಗೂಗಲ್ ಸರ್ಚ್ ಮಾಡಿದ ಜಗತ್ತಿನ ಟಾಪ್ 10 ನಟ-ನಟಿಯರಿವರು!
ದುಬಾರಿ ಮದುವೆಗೆ ಖರ್ಚು ಆಗಿದ್ದೆಷ್ಟು?
2022ರಲ್ಲಿ ನಟಿ ಪ್ರಣಾಲಿ ರಾಥೋಡ್ ಅವರು ಈ ಧಾರಾವಾಹಿಯಲ್ಲಿನ ಮದುವೆಯಲ್ಲಿ 2.5 ಲಕ್ಷ ರೂಪಾಯಿಯ ಲೆಹೆಂಗಾ ಧರಿಸಿದ್ದರು. ʼಯೇ ರಿಶ್ಯಾ ಕ್ಯಾ ಕೆಹಲಾತಾ ಹೈʼ ಇತಿಹಾಸದಲ್ಲಿ ಯಾವ ನಟಿಯೂ ಇಷ್ಟು ದುಬಾರಿಯಾದ ಬಟ್ಟೆ ಧರಿಸಿರಲಿಲ್ಲ. ಇನ್ನು ಅಕ್ಷರಾ-ಅಭಿಮನ್ಯು ಕಲ್ಯಾಣವನ್ನು ಕೂಡ ತುಂಬ ಗ್ರ್ಯಾಂಡ್ ಆಗಿ ಮಾಡಲಾಗಿತ್ತು. ಇನ್ನು ರಾಜಸ್ಥಾನದ ಅರಮನೆಯಲ್ಲಿ ಈ ಮದುವೆ ಪ್ಲ್ಯಾನ್ ಮಾಡಲಾಗಿತ್ತು. ಮದುವೆ ಸೆಟ್, ಕಲಾವಿದರಿಗೆ ವಸತಿ ವ್ಯವಸ್ಥೆ ಎಲ್ಲವೂ ಸೇರಿ ಈ ಮದುವೆಗೆ ಎರಡು ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು ಎನ್ನಲಾಗಿದೆ.
ಈ ಧಾರಾವಾಹಿಗಳಲ್ಲಿ ಬಿರ್ಲಾ ಹಾಗೂ ಗೋಯಂಕಾ ಕುಟುಂಬದ ಕತೆಯಿದೆ. ಇವೆರಡು ಕುಟುಂಬಗಳು ಬಹಳ ಶ್ರೀಮಂತವಾಗಿವೆ. ಹೀಗಾಗಿ ಈ ಸೀರಿಯಲ್‌ನ್ನು ಬಹಳ ಅದ್ದೂರಿಯಾಗಿ ಶೂಟ್ ಮಾಡಲಾಗಿತ್ತು.
