2024ರಲ್ಲಿ ಅತಿಹೆಚ್ಚು ಮಂದಿ ಗೂಗಲ್ ಸರ್ಚ್ ಮಾಡಿದ ಜಗತ್ತಿನ ಟಾಪ್ 10 ನಟ-ನಟಿಯರಿವರು!
ಗೂಗಲ್ 2024ರಲ್ಲಿ ಜಗತ್ತಿನಾದ್ಯಂತ ಹೆಚ್ಚು ಸರ್ಚ್ ಆದ ನಟ-ನಟಿಯರ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಮೂರು ಜನ ಸ್ಥಾನ ಪಡೆದಿದ್ದಾರೆ. ಆದರೆ ಬಾಲಿವುಡ್‌ನ ದೊಡ್ಡ ನಟ-ನಟಿಯರು ಯಾರೂ ಇಲ್ಲ.
ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಬ್ರಿಗಿಟ್ ಮರೀನಾ ಬೂಜೊ ಆರ್ಕಿಲಾ ಇದ್ದಾರೆ. ಇವರು ವೆನೆಜುವೆಲಾದ ನಟಿ. ಇವರಿಗೆ 23 ವರ್ಷ.
ಪಟ್ಟಿಯಲ್ಲಿ 9ನೇ ಸ್ಥಾನ ಸಟನ್ ಫೋಸ್ಟರ್ ಅವರದ್ದು. 49 ವರ್ಷದ ಸಟನ್ ಅಮೇರಿಕನ್ ನಟಿ. ಇವರಿಗೆ ಟೋನಿ ಅವಾರ್ಡ್ ಕೂಡಾ ದೊರೆತಿದೆ.
ಸ8ನೇ ಸ್ಥಾನದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದ 'ಏರ್‌ಲಿಫ್ಟ್' ಸಿನಿಮಾದ ನಾಯಕಿ ನಮ್ರತ್ ಕೌರ್ ಇದ್ದಾರೆ. 42 ವರ್ಷದ ನಮ್ರತ್ ಅಭಿಷೇಕ್ ಬಚ್ಚನ್ ಜೊತೆ ಹೆಸರು ತಳುಕು ಹಾಕಿಕೊಂಡಿದ್ದರಿಂದ ಸುದ್ದಿಯಲ್ಲಿದ್ದರು.
ಟೆರೆನ್ಸ್ ಹೊವಾರ್ಡ್
7ನೇ ಸ್ಥಾನದಲ್ಲಿ ಅಮೇರಿಕನ್ ನಟ ಟೆರೆನ್ಸ್ ಹೊವಾರ್ಡ್ ಇದ್ದಾರೆ. ಇವರಿಗೆ 55 ವರ್ಷ. ಇವರಿಗೆ ಹೈಸ್ಕೂಲ್‌ನಲ್ಲಿರುವಾಗಲೇ ಎರಡೂ ಕಿವಿಗಳು ಕೇಳುತ್ತಿರಲಿಲ್ಲ.
ಪಟ್ಟಿಯಲ್ಲಿ 6ನೇ ಸ್ಥಾನ 42 ವರ್ಷದ ಕೀರನ್ ಕಲ್ಕಿನ್ ಅವರದ್ದು, ಅವರು ಅಮೇರಿಕನ್ ನಟ. HBO ಟಿವಿ ಸೀರೀಸ್‌ನಲ್ಲಿ ಕಲ್ಕಿನ್ ತನ್ನದೇ ಆದ ಛಾಪು ಮೂಡಿಸಿದ್ದಾರೆ.
5ನೇ ಸ್ಥಾನದಲ್ಲಿ 'ಯೇ ರಿಶ್ತಾ ಕ್ಯಾ ಕೆಹಲಾತಾ ಹೈ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಹಿನಾ ಖಾನ್ ಇದ್ದಾರೆ. 37 ವರ್ಷದ ಹಿನಾ ಈ ವರ್ಷ ಮೂರನೇ ಹಂತದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿ ಸುದ್ದಿಯಲ್ಲಿದ್ದರು.
ನಾಲ್ಕನೇ ಸ್ಥಾನದಲ್ಲಿ 28 ವರ್ಷದ ಎಲ್ಲಾ ಪರ್ನೆಲ್ ಇದ್ದಾರೆ, ಅವರು ಬ್ರಿಟಿಷ್ ನಟಿ. ಬಾಲ ನಟಿಯಾಗಿಯೇ ಸಿನಿಮಾ ಜಗತ್ತಿಗೆ ಎಂಟ್ರಿಕೊಟ್ಟಿರುವ ಪರ್ನೆಲ್, ಈಗ ಜನಪ್ರಿಯ ನಟಿಯಾಗಿದ್ದಾರೆ.
ಮೂರನೇ ಸ್ಥಾನದಲ್ಲಿ 44 ವರ್ಷದ ಆಡಮ್ ಬ್ರಾಡಿ ಇದ್ದಾರೆ, ಅವರು ಅಮೇರಿಕನ್ ನಟ. ಮಿ.&ಮಿ. ಸ್ಮಿತ್, ಥ್ಯಾಂಕ್ಯೂ ಫಾರ್ ಸ್ಮೋಕಿಂಗ್‌ನಂತಹ ಸಿನಿಮಾದಲ್ಲಿ ನಟಿಸಿದ್ದಾರೆ.
ಪಟ್ಟಿಯಲ್ಲಿ ಎರಡನೇ ಸ್ಥಾನ ತೆಲುಗು ಸೂಪರ್‌ಸ್ಟಾರ್ ಮತ್ತು ತೆಲಂಗಾಣ ರಾಜ್ಯದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರದ್ದು. ಅವರು ಈ ವರ್ಷ ಲೋಕಸಭಾ ಚುನಾವಣೆ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಜನಸೇನಾ ಪಕ್ಷದ ಭಾಗವಹಿಸುವಿಕೆ ಮತ್ತು ಉತ್ತಮ ಪ್ರದರ್ಶನದಿಂದಾಗಿ ಸುದ್ದಿಯಲ್ಲಿದ್ದರು.
ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಅಮೇರಿಕನ್ ಸ್ಟ್ಯಾಂಡ್‌ಅಪ್ ಹಾಸ್ಯನಟ ಮತ್ತು ನಟ ಕ್ಯಾಟ್ ವಿಲಿಯಮ್ಸ್ ಇದ್ದಾರೆ, ಅವರಿಗೆ ಈಗ 53 ವರ್ಷ.