ಯೇ ರಿಷ್ತಾ ಕ್ಯಾ ಕೆಹ್ಲತಾ ಹೇ ನಟ ಮೊಹ್ಸಿನ್ ಖಾನ್ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ತಮನ್ನಾ ಜೊತೆ ಸದ್ದಿಲ್ಲದೆ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮದುವೆ ಫೋಟೋವನ್ನು ನಟ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮುಂಬೈ (ಅ.05) ಜನಪ್ರಿಯ ಧಾರವಾಹಿ ಯೇ ರಿಷ್ತಾ ಕ್ಯಾ ಕೆಹ್ಲತಾ ನಟ ಮೊಹ್ಸಿನ್ ಖಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ನಡೆದ ಅದ್ಧೂರಿ ಮದುವೆ ಸಮಾರಂಭದಲ್ಲಿ ನಟ ಮೊಹ್ಸಿನ್ ಖಾನ್, ತಮನ್ನಾ ಕೈಹಿಡಿದಿದ್ದಾರೆ. ತಮನ್ನಾ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದ ಮೊಹ್ಸಿನ್ ಖಾನ್ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆ ಫೋಟೋವನ್ನು ಮೊಹ್ಸಿನ್ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಮನ್ನಾ ಅಪ್ಪಿಕೊಂಡ ಫೋಟೋ
ಮೊಹ್ಸಿನ್ ಖಾನ್ ಪ್ರೀತಿಯಿಂದ ತಮನ್ನಾ ಅಪ್ಪಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊಹ್ಸಿನ್ ಖಾನ್ ಬ್ಲಾಕ್ ಆ್ಯಂಡ್ ವೈಟ್ ಟುಕ್ಸೆಡೋ ಡ್ರೆಸ್ ಧರಿಸಿದ್ದಾರೆ. ಇನ್ನು ತಮನ್ನಾ ಸಾಂಪ್ರಾದಾಯಿಕ ಉಡುಗೆ ಧರಿಸಿದ್ದಾರೆ. ಮೊಹ್ಸಿನ್ ಖಾನ್ ಮದುವೆ ಫೋಟೋ ಹಂಚಿಕೊಂಡ ಬೆನ್ನಲ್ಲೇ ಮದುವೆ ಸಮಾರಂಭದ ಹಲವು ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮೊಹ್ಸಿನ್ ಖಾನ್ ಜೊತೆ ಹೆಜ್ಜೆ ಹಾಕಿದ ತಮನ್ನಾ
ಮೊಹ್ಸಿನ್ ಹಾಗೂ ತಮನ್ನಾ ಡ್ಯಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮದುವೆ ಸಮಾರಂಭದಲ್ಲಿ ಆಪ್ತರ ಜೊತೆ ನವ ಜೋಡಿ ಹೆಜ್ಜೆ ಹಾಕಿದೆ. ಹಲವು ಟಿವಿ ಧಾರವಾಹಿ ನಟ ನಟಿಯರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಮೊಹ್ಸಿನ್ ಖಾನ್ ಹಾಗೂ ತಮನ್ನಾ ಆಗಸ್ಟ್ ತಿಂಗಳಲ್ಲಿ ತಮ್ಮ ಎಂಗೇಜ್‌ಮೆಂಟ್ ಘೋಷಣೆ ಮಾಡಿಕೊಂಡಿದ್ದರು. ಎಂಗೇಜ್‌ಮೆಂಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಪರಿಚಯ ಆತ್ಮೀಯವಾಗಿ, ಸ್ನೇಹವಾಗಿ ಪ್ರೀತಿಯಾಗಿ ಗಟ್ಟಿಗೊಂಡಿದೆ. ಕನಸುಗಳ ಬೆನ್ನಟ್ಟಿ ಜೋಡಿ ಹಕ್ಕಿಯಾಗಿ ಹಾರಲು ನಿರ್ಧರಿಸಿದ್ದೇವೆ ಎಂದು ನಿಶ್ಚಿತಾರ್ಥ ಫೋಟೋ ಹಂಚಿಕೊಂಡು ಮೊಹ್ಸಿನ್ ಖಾನ್ ಹೇಳಿಕೊಂಡಿದ್ದರು. ನನ್ನ ಬಾಳ ಸಂಗಾತಿಯಾಗಿ ತಮನ್ನಾ ಆಗಮಿಸುತ್ತಿರುವುದು ಅತೀವ ಸಂತಸವಿದೆ ಎಂದು ಮೊಹ್ಸಿನ್ ಖಾನ್ ಹೇಳಿಕೊಂಡಿದ್ದರು. ಮೊದಲ ಬಾರಿ ತಮನ್ನಾ ನೋಡಿದಾಗ, ಆಕೆಯ ಕೈಹಿಡಿದಾಗ, ಮಾತನಾಡಿದಾಗಲೇ ಈಕೆ ನನ್ನ ಬಾಳ ಸಂಗಾತಿ ಅನ್ನೋದು ದೃಋಪಟ್ಟಿತ್ತು ಎಂದು ಮೊಹ್ಸಿನ್ ಖಾನ್ ಹೇಳಿಕೊಂಡಿದ್ದರು.
ಮೊಹ್ಸಿನ್ ಖಾನ್ ಯೇ ರಿಶ್ತಾ ಕ್ಯಾ ಕೆಹ್ಲತಾ ಹೈ ಧಾರವಾಹಿಯಲ್ಲಿ ಮೊಹ್ಸಿನ್ ಖಾನ್ ಅತ್ಯಂತ ಜನಪ್ರಿಯವಾಗಿದ್ದಾರೆ. ಕಾರ್ತಿಕ್ ಗೊಯೆಂಕಾ ಪಾತ್ರವನ್ನು ಮಾಡುತ್ತಿರುವ ಮೊಹ್ಸಿನ್ ಖಾನ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಮೇರಿ ಆಶಿಕಿ ತುಮ್‌ಸೆ ಹೀ, ಡ್ರೀಮ್ ಗರ್ಲ್, ಎಕ್ ಲಡ್ಕಿ ದಿವಾನಿ ಸಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಮೊಹ್ಸಿನ್ ಖಾನ್ ನಟಿಸಿದ್ದಾರೆ.



