ಬಸವಾಪಟ್ಟಣ (ಸೆ.29): ಡಾ.ಬಿ.ಆರ್‌.ಅಂಬೇಡ್ಕರ್‌ ಜೀವನಾಧಾರಿತ ಮಹಾನಾಯಕ ಧಾರಾವಾಹಿಯ 25 ನೇ ಸಂಚಿಕೆ ಪ್ರಕಟವಾದ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಕೇರಳಾಪುರ ಗ್ರಾಮದ ಬಸ್‌ ನಿಲ್ದಾಣದ ಬಳಿ ವಿಶ್ವಜ್ಞಾನಿ ಡಾ.ಬಿ.ಆರ್‌ ಅಂಬೇಡ್ಕರ್‌ ಯುವಕ ಸಂಘ ಹೊನ್ನೇನಹಳ್ಳಿ ಹಾಗೂ ಡಾ. ಮಂತರ್‌ಗೌಡ ಅಭಿಮಾನಿ ಬಳಗದ ಸಹಯೋಗದಲ್ಲಿ ಭಾನುವಾರ ಸಂಜೆ ಕೇರಳಾಪುರ ಗ್ರಾಮದಲ್ಲಿ ಎಲ್‌ಇಡಿ ಪರದೆಯಲ್ಲಿ ಧಾರಾವಾಹಿ ಪ್ರರ್ದಶನವನ್ನು ಸಾರ್ವಜನಿಕರಿಗಾಗಿ ಆಯೋಜಿಸಲಾಗಿತ್ತು.

ಸಂಜೆ 6.30 ಕ್ಕೆ ಮಹಾ ನಾಯಕ ಧಾರಾವಾಹಿಯ ಬ್ಯಾನರ್‌ ಅನಾವರಣ ಮಾಡಿ ಪುಷ್ಪನಮನ ಸಲ್ಲಿಸಲಾಯಿತು. ಧಾರಾವಾಹಿ ಪ್ರರ್ದಶನದ ವೇಳೆ ಮಾಜಿ ಸಚಿವ ಎ. ಮಂಜು ಪ್ರರ್ದಶನ ವೀಕ್ಷೀಸಿ ಮಾತನಾಡಿ, ಡಾ.ಅಂಬೇಡ್ಕರ್‌ ಸಂವಿಧಾನ ಶಿಲ್ಪಿಯಾಗಿದ್ದು, ಅವರ ತತ್ವ ಆರ್ದಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಡಾ.ಬಿ.ಆರ್‌ ಅಂಬೇಡ್ಕರ್‌ ಮಹಾನ್‌ ನಾಯಕರು. ಇಂದಿನ ಪೀಳಿಗೆಗೆ ಅವರು ಆದರ್ಶಪ್ರಾಯ ಎಂದರು.

ಮಹಾನಾಯಕ ಧಾರಾವಾಹಿ ಸ್ಥಗಿತಕ್ಕೆ ಬೆದರಿಕೆ : ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

ಇದೇ ವೇಳೆ ದೊಡ್ಡಮಗ್ಗೆ ಜಿಲ್ಲಾ ಪಂಚಾಯ್ತಿ ಸದಸ್ಯ ರವಿ, ಯುವ ನಾಯಕ ಶಿವು, ವಿಶ್ವಜ್ಞಾನಿ ಡಾ.ಬಿ.ಆರ್‌ ಅಂಬೇಡ್ಕರ್‌ ಯುವಕ ಸಂಘದ ಅಧ್ಯಕ್ಷ ಎಚ್‌.ಪಿ. ಪುನೀತ್‌ಕುಮಾರ್‌, ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಜಾಚಿ ಹರೀಶ್‌, ರಾಜೇಶ್‌, ಸಮಾಸಮಾಜ ವೇದಿಕೆ ಬಸವಾಪಟ್ಟಣದ ಪುಟ್ಟಸ್ವಾಮಿ, ಬೇಲೂರಯ್ಯ, ಸ್ವಾಮಯ್ಯ ಇದ್ದರು.