ಲಕ್ಷ್ಮೀ ನಿವಾಸ ಜಯಂತ್ ಮೂಗಿನ ಮೇಲೆ ಗಾಯ… ಸೈಕೋ ನಟನೆ ನೋಡಿ ವೀಕ್ಷಕರಿಂದಲೇ ಪೆಟ್ಟು ಬಿತ್ತಾ?
ಲಕ್ಷ್ಮೀ ನಿವಾಸ ಧಾರಾವಾಹಿ ನಟ ದೀಪಕ್ ಸುಬ್ರಹ್ಮಣ್ಯ ಮೂಗಿಗೆ ಪೆಟ್ಟು ಬಿದ್ದಿದ್ದು, ಸೀರಿಯಲ್ ನಲ್ಲೂ ರಿಯಾಲಿಟಿ ಶೋನಲ್ಲೂ ಮೂಗಿನ ಮೇಲೆ ಪ್ಲಾಸ್ಟರ್ ಹಾಕಿಕೊಂಡಿರೋದು ಕಂಡು ಬಂದಿದೆ. ಸೈಕೋ ನಟನೆ ನೋಡಿ ವೀಕ್ಸಕರೇ ಪೆಟ್ಟು ಕೊಟ್ರ ಎನ್ನುವ ಅನುಮಾನ ಶುರುವಾಗಿದೆ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೈಕೋ ಜಯಂತ್ ಪಾತ್ರದಲ್ಲಿ ನಟಿಸುತ್ತಿರುವ ನಟ ದೀಪಕ್ ಸುಬ್ರಹ್ಮಣ್ಯ ನಟನೆಗೆ ವೀಕ್ಷಕರು ಮೆಚ್ಚುಗೆ ಸೂಚಿಸುತ್ತಲೇ ಇರುತ್ತಾರೆ. ಇದರ ಜೊತೆ ಜೊತೆಗೆ ಅವರ ಸೈಕೋ ಪಾತ್ರದ ಬಗ್ಗೆ ಜನ ನೆಗೆಟಿವ್ ಆಗಿ ಕಾಮೆಂಟ್ ಮಾಡಿದ್ದು ಇದೆ. ಯಾಕಂದ್ರೆ ಜಯಂತ್ ಪಾತ್ರವೇ ಹಾಗಿದೆ. ಹೆಂಡ್ತಿ ಜಾಹ್ನವಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಜಯಂತ್, ಆಕೆಯನ್ನು ಯಾರಿಗೂ ಬಿಟ್ಟುಕೊಡೋದಕ್ಕೆ ತಯಾರಿಲ್ಲ. ಅದೊಂತಹ ಹುಚ್ಚು ಪ್ರೀತಿ ಅಂತಾನೆ ಹೇಳಬಹುದು. ಈ ಅತಿಯಾದ ಪ್ರೀತಿಗೆ ಒಂದಷ್ಟು ವೀಕ್ಷಕರು ವಿರೋಧ ವ್ಯಕ್ತಪಡಿಸಿದ್ದೂ ಇದೆ.
ಚಿನ್ನುಮರಿ ಚಿನ್ನುಮರಿ ಅಂತ ತಲೆ ತಿನ್ನೋ ಜಯಂತ ಸೆಟ್‌ನಲ್ಲಿ ಚಿನ್ನುಮರಿ ಜೊತೆ ಹೇಗಿರ್ತಾರೆ ನೋಡಿ!
ಜಯಂತ ತನ್ನ ಚಿನ್ನುಮರಿಯತ್ತ ತೋರುತ್ತಿರುವ ಅತಿಯಾದ ಕಾಳಜಿ ಪ್ರೀತಿ, ಜಾಹ್ನವಿಗೆ ನಿಧಾನವಾಗಿ ಉಸಿರುಕಟ್ಟಿಸುವಂತಿದೆ. ಮನೆಗೆ ಯಾರೂ ಬರುವಂತಿಲ್ಲ. ಜಾಹ್ನವಿ ಅಮ್ಮನ ಜೊತೆ ಅಥವಾ ಮನೆಯವರ ಜೊತೆ ಮಾತನಾಡುವಂತಿಲ್ಲ, ಫೋನ್ ಇಲ್ಲ, ಟಿವಿ ಇಲ್ಲ ಏನೂ ಇಲ್ಲ, ಜಯಂತ್ ಮತ್ತು ಜಾಹ್ನವಿ ಮಧ್ಯೆ ಯಾರನ್ನು ಬರೋದಕ್ಕೂ ಬಿಡೋದಿಲ್ಲ ಜಯಂತ್ ಅಂತಹ ವಿಚಿತ್ರ ಮನುಷ್ಯ. ಆತನ ವಿಚಿತ್ರ ವರ್ತನೆ ನೋಡಿ, ವೀಕ್ಷಕರು ಸಿಕ್ಕಾಪಟ್ಟೆ ಬಯ್ತಿದ್ದಾರೆ. ಅಷ್ಟೇ ಅಲ್ಲ ಹೊರಗಡೆ ಸಿಕ್ಕಾಗಲು ಜಯಂತ್ ನೋಡಿ ಬೈದಿದ್ದು ಇದೆ. ಇದರ ಮಧ್ಯೆ ಜಯಂತ್ ನಟನೆಗೂ, ಮೂಗಿನ ಮೇಲೆ ಆಗಿರುವ ಗಾಯಕ್ಕೂ ಹಾಗೂ ವೀಕ್ಷಕರ ಬೈಗುಳಕ್ಕೂ ಜನ ಲಿಂಕ್ ಮಾಡಿದ್ದು, ವೀಕ್ಷಕರೇ ಕೋಪದಿಂದ ಜಯಂತ್ ಅಂದ್ರೆ ದೀಪಕ್ ಸುಬ್ರಹ್ಮಣ್ಯ ಮೂಗಿಗೆ ಗುದ್ದಿದ್ದಾರ ಅನ್ನೋ ಸಂಶಯ ಕಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸೀರಿಯಲ್ ನಲ್ಲೂ ದೀಪಕ್ ಮೂಗಿನ ಮೇಲೆ ಗಾಯವಾಗಿ ಪ್ಲಾಸ್ಟರ್ ಹಾಕಿಕೊಂಡಿರೋದನ್ನ ಕಾಣಬಹುದು, ಅಷ್ಟೇ ಅಲ್ಲ ಝೀ ಎಂಟರ್ ಟೇನರ್ ರಿಯಾಲಿಟಿ ಶೋನಲ್ಲಿ ದೀಪಕ್ ಕಾಣಿಸಿಕೊಂಡಿದ್ದು, ಅಲ್ಲೂ ಮೂಗಿನ ಮೇಲಿನ ಪ್ಲಾಸ್ಟರ್ ಹಾಗೆ ಉಳಿದಿರೋದನ್ನ ಕಾಣಬಹುದು. ಯಾವ ಕಾರಣದಿಂದಾಗಿ ಜಯಂತ್ ಮೂಗಿನ ಮೇಲೆ ಗಾಯ ಆಗಿದೆ ಅನ್ನೋದರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಆದರೆ ಜನ ಮಾತ್ರ ಸೈಕೋ ಜಯಂತ್ ನ ಸೈಕೋ ನಟನೆ ನೋಡಿ, ಯಾರೋ ವೀಕ್ಷಕರು ಸರಿಯಾಗಿಯೇ ಕೊಟ್ಟಿರಬಹುದು ಏನೋ ಎಂದಿದ್ದಾರೆ. ಆದರೆ ಈ ಗಾಯದ ಹಿಂದಿನ ನಿಜ ಕಥೆ ಮಾತ್ರ ಗೊತ್ತಿಲ್ಲ.
ದೀಪಕ್ ಸುಬ್ರಹ್ಮಣ್ಯ…. ಕನ್ನಡ ಕಿರುತೆರೆಯ ನವರಸ ನಾಯಕ, ಸಕಲಕಲಾವಲ್ಲಭ ಇವರಂತೆ!
ಇನ್ನು ಝೀ ಎಂಟರ್ಟೇನರ್ ಕಾರ್ಯಕ್ರಮ ಭರ್ಜರಿಯಾಗಿ ಮೂಡಿ ಬರುತ್ತಿದ್ದು, ಸದ್ಯ ವೀಕ್ಷಕರಿಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಸದ್ಯ ಬಿಡುಗಡೆಯಾಗಿರುವ ಪ್ರೊಮೋದಲ್ಲಿ ಕೊಡಗಿನ ಕುಟುಂಬವೊಂದು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಲಕ್ಷ್ಮೀ ನಿವಾಸ ಹಾಗೂ ಶ್ರಾವಣಿ ಸುಬ್ರಹ್ಮಣ್ಯ ತಂಡದ ಸದಸ್ಯರು ಕೂರ್ಗು ಕುಟುಂಬದ ಜೊತೆ ಸೇರಿ ಕೂರ್ಗಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.