ಭೂಮಿಕಾಗೆ ಮಗು ಆಗ್ಲಿಲ್ಲಾ ಅಂತಂದ್ರೆ ಗೌತಮ್ ಸುಮ್ನೆ ಬಿಡ್ತಾನಾ? ತಲೆ ತಗ್ಗಿಸೇ ಬಿಟ್ರಲ್ಲಾ ಹೆಂಗಸ್ರು!
ಭೂಮಿಕಾಳಿಗೆ ಮಗುವಾಗಲಿಲ್ಲ ಎಂದು ಮನೆಗೆ ಬಂದ ಹೆಂಗಸರು ಹೀಯಾಳಿಸಿದರೆ ಡುಮ್ಮಾ ಸರ್ ಸುಮ್ನೆ ಬಿಡ್ತಾನಾ? ಆ ಹೆಂಗಸರೆಲ್ಲಾ ತಲೆ ತಗ್ಗಿಸುವ ಉತ್ತರ ನೀಡಿ ಫ್ಯಾನ್ಸ್ ಕೈಲಿ ಭೇಷ್ ಎನ್ನಿಸಿಕೊಂಡಿದ್ದಾನೆ ಗೌತಮ್.
ದೇವ್ರೆ ನನಗೂ ಇಂಥದ್ದೇ ಗಂಡ ಕೊಡಪ್ಪಾ.. ಅಂತ ಬಹುತೇಕ ಹೆಣ್ಣುಮಕ್ಕಳು ಅಮೃತಧಾರೆಯ ಗೌತಮ್ ಮತ್ತು ಸೀತಾರಾಮ ಸೀರಿಯಲ್ ಅಶೋಕನನ್ನು ನೋಡಿದಾಗಲೆಲ್ಲಾ ಅಂದುಕೊಳ್ಳುವುದು ಇದೆ. ಈ ಸೀರಿಯಲ್ಗಳ ಪ್ರೊಮೋ ರಿಲೀಸ್ ಆದಾಗಲೆಲ್ಲಾ ಇದೇ ರೀತಿಯ ಕಮೆಂಟ್ಸ್ ಬರುತ್ತವೆ. ಈಗ ಅಮೃತಧಾರೆ ಸೀರಿಯಲ್ನ ಪ್ರೊಮೋ ನೋಡಿ, ಗೌತಮ್ ಮೇಲೆ ವೀಕ್ಷಕರ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ. ಗಂಡ ಎಂದರೆ ಹೀಗಿರಬೇಕು ಎಂದೆಲ್ಲಾ ಹಾಡಿ ಕೊಂಡಾಡುತ್ತಿದ್ದಾರೆ. ಅದಕ್ಕೆ ಕಾರಣ, ಮನೆಗೆ ಬಂದ ಹೆಂಗಸರು ಮಕ್ಕಳಾಗಲಿಲ್ಲ ಎಂದು ಭೂಮಿಕಾಗೆ ಅವಮಾನ ಮಾಡಿದ್ದು! ಹೌದು. ಇದು ಅತ್ತೆ ಶಕುಂತಲಾ ದೇವಿಯ ಕುತಂತ್ರವೇ. ಮಲ್ಲಿಗೆ ಸೀಮಂತ ಮಾಡುವ ಸಂಭ್ರಮದಲ್ಲಿ ಭೂಮಿಕಾಗೆ ಅವಹೇಳನ ಮಾಡಲಿ, ಆಕೆ ತಲೆ ತಗ್ಗಿಸಲಿ ಎಂದೇ ಬಂದಿರೋ ಹೆಂಗಸರ ಕೈಯಲ್ಲಿ ಅವಮಾನ ಆಗುವ ಹಾಗೆ ಮಾಡಿದ್ದಾಳೆ. ಆದರೆ ಎಲ್ಲಾ ಉಲ್ಟಾ ಹೊಡೆದಿದೆ.
ಬಂದಿರುವ ಹೆಂಗಸರು ಸುಮ್ಮನೇ ಇರಲಾರದೇ ಮಲ್ಲಿಯ ಸೀಮಂತನಾ? ನಾನೇನೋ ನಿನ್ನದೇ ಅಂದುಕೊಂಡೆ. ನಿನಗೆ ಮಕ್ಕಳಾಗಲಿಲ್ವಾ? ಮಗು ಯಾವಾಗ ಆಗೋದು ಅಂತೆಲ್ಲಾ ಕೇಳಿದ್ದಾರೆ. ಇದನ್ನು ಕೇಳಿ ಭೂಮಿಕಾಗೆ ವಿಪರೀತ ನೋವಾಗಿದೆ. ಕಣ್ಣೀರು ಹಾಕಿದ್ದಾಳೆ. ಇದು ಗೌತಮ್ಗೆ ಗೊತ್ತಾಗುತ್ತಿದ್ದಂತೆಯೇ ಉರಿದು ಹೋಗಿದ್ದಾನೆ. ನಖಶಿಖಾಂತ ಉರಿ ಹತ್ತಿದೆ ಅವನಿಗೆ. ಮುದ್ದಿನ ಪತ್ನಿಗೆ ಯಾರಾದರೂ ಅವಮಾನ ಮಾಡಿದ್ರೆ ಸುಮ್ನೆ ಬಿಡ್ತಾನಾ ಈ ಡುಮ್ಮಾ ಸರ್. ಅವಕಾಶಕ್ಕಾಗಿ ಕಾಯ್ತಿದ್ದ.
ಸಮರ್ಥ್ ಕಣ್ಣಮುಂದೆ ತುಳಸಿಯ ಶವ! ಮಾಡಿದ ತಪ್ಪಿಗೆ ಪಶ್ಚಾತ್ತಾಪಪಟ್ಟು ಅಮ್ಮನನ್ನು ತಬ್ಬಿಕೊಂಡು ಕಣ್ಣೀರು...
ಮಲ್ಲಿಗೆ ಸೀಮಂತ ಮಾಡುವ ಸಮಯದಲ್ಲಿ ಆಕೆಗೆ ಮುತ್ತೈದೆಯರೆಲ್ಲರೂ ಬಂದು ಪೂಜೆ ಮಾಡುವಂತೆ ಶಕುಂತಲಾ ಹೇಳುತ್ತಾಳೆ. ಮನೆಗೆ ಬಂದ ಅದೇ ಮಹಿಳೆಯರನ್ನು ಆಕೆ ಕರೆಯುತ್ತಾಳೆ. ಆದರೆ ಗೌತಮ್ ಅವರನ್ನು ಅಲ್ಲಿಯೇ ತಡೆದು ಮನೆಯ ಕೆಲಸದವರನ್ನು ಕರೆದು ಪೂಜೆ ಮಾಡುವಂತೆ ಹೇಳುತ್ತಾರೆ. ಇದನ್ನು ಕೇಳಿ ಶಕುಂತಲಾಗೆ ಶಾಕ್ ಆಗುತ್ತದೆ. ಮನೆ ಕೆಲಸದವರಿಂದ ಪೂಜೆ ಮಾಡಿಸುವುದಾ ಕೇಳುತ್ತಾಳೆ. ಅದಕ್ಕೆ ಗೌತಮ್ ಅವರಿಗೆ ಒಳ್ಳೆಯ ಮನಸ್ಸು ಇದೆ ಎನ್ನುತ್ತಾನೆ. ಆಗ ಶಕುಂತಲಾ ಏನಿದರ ಅರ್ಥ ಎಂದು ಪ್ರಶ್ನಿಸುತ್ತಾಳೆ. ಏನಂದ್ರಿ ನೀವು? ಭೂಮಿಕಾಗೆ ಮಗು ಆಗಿಲ್ಲ ಅಂತನಾ? ಮಗುಯಾವಾಗ ಬೇಕು ಬೇಡ ಎಂದು ನಿರ್ಧಾರ ಮಾಡುವವರು ನಾವು, ಬೇರೆಯವರು ಅದನ್ನು ಕೇಳೋಕೆ ಯಾರು ಎಂದೆಲ್ಲಾ ದಬಾಯಿಸುತ್ತಾನೆ. ಅವಮಾನದಿಂದ ಮನೆಗೆ ಬಂದ ಮಹಿಳೆಯರು ತಲೆ ತಗ್ಗಿಸುತ್ತಾರೆ. ಶಕುಂತಲಾಳ ಮುಖಭಂಗವಾಗುತ್ತದೆ.
ಇದರ ಪ್ರೊಮೋಗೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗಿದೆ. ಇದು ಈ ಮಹಿಳೆಯರಿಗೆ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಮಕ್ಕಳಾಗದವರನ್ನು ಕೊಂಕು ಮಾತಿನಿಂದ ಚುಚ್ಚುವ ಹಲವರು ಇದ್ದಾರೆ. ಅದರಲ್ಲಿಯೂ ಮಹಿಳೆಯರು ಈ ರೀತಿಯ ಕೊಂಕು ಮಾತನಾಡಿ ಮಕ್ಕಳಾಗದವರನ್ನು ಮಾತಿನಲ್ಲಿಯೇ ಕೊಲ್ಲುವುದು ಹೆಚ್ಚು. ಅಂಥವರು ಗೌತಮ್ ಡೈಲಾಗ್ ಕೇಳಿ ತಲೆತಗ್ಗಿಸಬೇಕು. ಇದು ಇತರರಿಗೂ ಮಾದರಿಯಾಗಲಿ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಸ್ವಲ್ಪ ವಯಸ್ಸಾಗಿ ಮದ್ವೆಯಾಗದಿದ್ದರೆ, ಮದುವೆ ಯಾವಾಗ ಯಾವಾಗ ಎಂದು ಕೇಳುತ್ತಲೇ ಹಿಂಸೆ ಕೊಡುವವರು ಮದುವೆಯಾಗುತ್ತಲೇ ಮಕ್ಕಳ ಬಗ್ಗೆ ಮಾತನಾಡಿ ಹಿಂಸಿಸುತ್ತಾರೆ. ಅವರಿಗೆ ಮಕ್ಕಳಾಗದಿದ್ದರೆ ಇವರಿಗೆ ಏನು ಸಮಸ್ಯೆ ಎನ್ನುವುದೇ ತಿಳಿಯುವುದಿಲ್ಲ, ಇಂಥವರಿಗೆಲ್ಲಾ ಇದು ಪಾಠವಾಗಲಿ, ಗೌತಮ್ನಂಥ ಗಂಡಂದಿರು ಪ್ರತಿ ಮನೆಯಲ್ಲಿಯೂ ಇರಲಿ, ಪತ್ನಿಯನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಗೌತಮ್ ಮಾದರಿಯಾಗಲಿ ಎಂದೆಲ್ಲಾ ಹೇಳುತ್ತಿದ್ದಾರೆ.
ಬಿಗ್ಬಾಸ್ಗೆ ಕ್ಷಣಗಣನೆ: ಇವರೇ ನೋಡಿ ದೊಡ್ಮನೆ ಹೋಗ್ತಿರೋ ಸಂಭಾವ್ಯ ಸ್ಪರ್ಧಿಗಳು- ನಿಮ್ಮ ನೆಚ್ಚಿನ ಸ್ಟಾರ್ ಯಾರು?