ಬಿಗ್‌ಬಾಸ್ ಸೀಸನ್ 8 ಯಾಕೋ ಮನೆಯಲ್ಲಿರುವ ಹೆಣ್ಮಕ್ಕಳಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಸತತ ನಾಲ್ಕನೇ ವಾರವೂ ಮನೆಯಿಂದ ಮಹಿಳಾ ಸ್ಪರ್ಧಿಯನ್ನು ಆಚೆ ಕಳಿಸೋದು ಆಲ್ ಮೋಸ್ಟ್ ಪಕ್ಕಾ ಆಗಿದೆ.

ಶಮಂತ್‌, ಪ್ರಶಾಂತ್‌ ಸಂಬರಗಿ, ಶಂಕರ್ ಅಶ್ವತ್ಥ್‌, ಚಂದ್ರಕಲಾ ಮೋಹನ್ ಮೊದಲಾದವರು ಈ ಬಾರಿಯ ನಾಮಿನೇಶನ್ ಲೀಸ್ಟ್ ನಲ್ಲಿದ್ದಾರೆ. ಈ ಲೀಸ್ಟ್‌ನಲ್ಲಿರುವ ಮಹಿಳಾ ಸ್ಪರ್ಧಿಯೊಬ್ಬರು ಮನೆಯಿಂದ ಈ ಬಾರಿ ಆಚೆ ಬರಲಿದ್ದಾರೆ. ಅದು ಮತ್ಯಾರೂ ಅಲ್ಲ, ಚಂದ್ರಕಲಾ ಮೋಹನ್‌.

ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗುತ್ತಿರುವ ಸ್ಪರ್ಧಿಗಳನ್ನು ಗಮನಿಸಿದರೆ ಮೊದಲ ಸಲ ಕೋಟ್ಯಂತರ ಫಾಲೋವರ್ಸ್ ಇದ್ದ ಧನುಶ್ರೀ ಒಂದೇ ವಾರಕ್ಕೆ ಮನೆಯಿಂದ ಹೊರಬಂದರು. ಇದಕ್ಕೆ ಆಕೆಯ ಕಳಪೆ ಆಟ ಕಾರಣವಾಗಿತ್ತು. ಮುಂದಿನ ವಾರ ನಿರ್ಮಲಾ ಮನೆಯಿಂದಾಚೆ ಬಂದರು. ಇದಕ್ಕೆ ಆಕೆಯ ವರ್ತನೆ, ಟಾಸ್ಕ್‌ಗಳನ್ನು ಸರಿಯಾಗಿ ನಿರ್ವಹಿಸದಿದ್ದದ್ದು ಕಾರಣವಾಯ್ತು. ಮೂರನೇ ವಾರ ಗೀತಾ ಭಾರತಿ ಮನೆಯಿಂದ ಆಚೆ ಬಂದರು. ಪದೇ ಪದೇ ಸಾರಿ ಅನ್ನುತ್ತಾ, ತಮ್ಮದಲ್ಲದ ತಪ್ಪನ್ನು ಹೊರುತ್ತಿದ್ದದ್ದು, ಅತೀ ಒಳ್ಳೆಯತನ, ಅತೀ ಸೂಕ್ಷ್ಮ, ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ಇಲ್ಲದೇ ಹೋದದ್ದು ಮುಖ್ಯ ಕಾರಣ. ಆದರೆ ಅವರಿಗಿಂತ ಎಷ್ಟೋ ಕಳಪೆಯಾಗಿ ಆಡಿದ್ದ ಶಮಂತ್ ಮಾತ್ರ ಮನೆಯವರೆಲ್ಲರ ವಿರೋಧದ ನಡುವೆಯೂ ಮನೆಯಲ್ಲಿ ಉಳಿದುಕೊಂಡರು. ಅವರನ್ನು ಬಚಾವ್ ಮಾಡಿದ್ದು ಜನರ ಓಟಿಂಗ್‌.

ಇನ್ನು ಚಂದ್ರಕಲಾ ಮೋಹನ್ ಅವರ ಆಟ ಗಮನಿಸಿದರೆ ಅವರು ಶುರು ಶುರುವಿಗೆ ಅದರಲ್ಲೂ ನಿರ್ಮಲಾ ಇರುವಾಗ ಚರ್ಚೆಯಲ್ಲಿ, ಮಾತಿನಲ್ಲಿ ಇದ್ದೇ ಇರುತ್ತಿದ್ದರು. ಕ್ರಮೇಣ ವಯೋ ಸಹಜ ಕಾರಣಕ್ಕೋ ಏನೋ, ಗುಂಪಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ. ಮೂಲೆಗುಂಪಾಗುತ್ತಲೇ ಹೋದರು. ಶಂಕರ್‌ ಅಶ್ವತ್ಥ್‌ ಬಿಟ್ಟರೆ ಅವರಿಗೂ, ಮನೆಯ ಇತರರಿಗೂ ಜನರೇಶನ್ ಗ್ಯಾಪ್ ಇದ್ದೇ ಇದೆ. ಶುರುವಿನಲ್ಲಿ ಬಂಡೇಳುತ್ತಿದ್ದ ಚಂದ್ರಕಲಾ ಈಚೀಚೆಗೆ ಥಂಡಾ ಆಗಿದ್ದಾರೆ. ಸಂಪೂರ್ಣ ಗಮನಕೊಟ್ಟು ಟಾಸ್ಕ್‌ಗಳನ್ನು ನಿರ್ವಹಣೆ ಮಾಡುವುದು ಅವರಿಗೆ ಸಾಧ್ಯವಾಗುತ್ತಿಲ್ಲ ಅನ್ನೋದು ಕೆಲವೊಂದು ಟಾಸ್ಕ್ ಗಳಿಂದ ರಿವೀಲ್ ಆಗಿದೆ.

ಮಿಲನಾ ನಾಗರಾಜ್‌ ರಿಯಲ್ ಲೈಫ್‌ ಸ್ಟೋರಿ ತೆರೆ ಮೇಲೆ; 'ಮಿಲಿ'ಗೆ ಕೃಷ್ಣ ನಿರ್ದೇಶನ! ...

ಈ ಬಾರಿ ಚದುರಂಗದ ಆಟದಲ್ಲಿ ಚಂದ್ರಕಲಾ ಅವರೂ ಒಂದು ಟೀಮ್‌ನ ರಾಜ ಆಗಿದ್ದರು. ಶಂಕರ್ ಅಶ್ವತ್ಥ್‌ ಇನ್ನೊಂದು ಟೀಮ್‌ನ ರಾಜನಾಗಿದ್ದರು. ಇದರಲ್ಲಿ ಚಂದ್ರಕಲಾ ತೆಗೆದುಕೊಂಡ ಒಂದು ಡಿಸಿಶನ್ ನಿಂದಾಗಿ ಇನ್ನೊಂದು ಟೀಮ್ ಗೆಲ್ಲೋ ಹಾಗಾಯ್ತು. ಇನ್ನೊಂದು ಟೀಮ್‌ನ ರಾಣಿ ಆಟಗಾರ ಅರವಿಂದ್‌ ಅವರಿಗೆ ಚಂದ್ರಕಲಾ ಕ್ರೀಡೆಯ ಆಪ್ಶನ್ ಕೊಟ್ಟಿದ್ದರು. ಆದರೆ ಆಲ್‌ರೆಡೀ ರೇಸರ್‌ ಆಗಿ ಗುರುತಿಸಿಕೊಂಡಿದ್ದ ಅರವಿಂದ್‌ ಅವರಿಗೆ ಈ ಟಾಸ್ಕ್‌ ನಿಭಾಯಿಸೋದು ಕಷ್ಟ ಆಗಲಿಲ್ಲ. ಅವರು ಲೀಲಾಜಾಲವಾಗಿ ಟಾಸ್ಕ್‌ ನಿಭಾಯಿಸಿ ಟೀಮ್‌ಅನ್ನು ಗೆಲ್ಲಿಸಿಕೊಟ್ಟರು. ಅಲ್ಲಿಗೆ ಶಂಕರ್‌ ಅಶ್ವತ್ಥ್‌ ಟೀಮ್‌ ಗೆಲುವಿನ ಜಯಭೇಟಿ ಭಾರಿಸಿತು. ಚಂದ್ರಕಲಾ ಟೀಮ್ ಸೋತು ಹೋಯಿತು. ಇದೀಗ ಚಂದ್ರಕಲಾ ಅವರು ಈ ನಿರ್ಧಾರಕ್ಕೆ ದೊಡ್ಡ ಬೆಲೆಯನ್ನೇ ತೆರಬೇಕಾಗಿದೆ. ಅದು ಅವರ ತಲೆತಂಡ. ಇದರ ಜೊತೆಗೆ ಟಾಸ್ಕ್‌ಗಳನ್ನೂ ಸಾಧಾರಣವಾಗಿ ನಿಭಾಯಿಸಿದ್ದ ಚಂದ್ರಕಲಾಗೆ ಜನರ ಓಟಿಂಗ್‌ ಕೃಪೆಯೂ ಇದ್ದಂತಿಲ್ಲ.

ಸ್ಕರ್ಟ್-ಬ್ಲೌಸ್ ಮಾತ್ರ, ಸೀರೆಯೇ ಇಲ್ಲ: ಮಾಸ್ಟರ್ ಚೆಲುವೆಯ ಹಾಟ್ ಲುಕ್ ...

ಮಂಜು ಅವರಿಗೆ ಈ ಬಾರಿ ಹೆಚ್ಚು ಓಟ್‌ ಬಿದ್ದಿದೆ. ಅರವಿಂದ ಈ ನಾಮಿನೇಶನ್‌ನಿಂದ ಬಚಾವ್‌ ಆಗಿದ್ದಾರೆ. ಉಳಿದ ಕಂಟೆಸ್ಟೆಂಟ್‌ಗಳಲ್ಲಿ ಶಂಕರ್‌ ಟಾಸ್ಕ್‌ ವಿನ್ ಮಾಡಿದ್ದಾರೆ. ಅದಕ್ಕೆ ವೀಕೆಂಡ್‌ ಮಾತುಕತೆಯಲ್ಲಿ ಕಿಚ್ಚ ಸುದೀಪ್‌ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಇನ್ನು ಶಮಂತ್‌ ಸುದೀಪ್‌ ಹೇಳಿದಂತೆ ಮಂಜು ಕೖಯಲ್ಲಿ ಹೇರ್ ಕಟ್ ಮಾಡಿಸಿಕೊಂಡ ಮೇಲೆ ಅವರ ಚುರುಕುತನವನ್ನೂ ಸ್ವಲ್ಪ ಮಟ್ಟಿಗೆ ತಮ್ಮದಾಗಿಸಿಕೊಂಡಿದ್ದಾರೆ. ಅವರು ಬಚಾವ್ ಅನ್ನೋದು ಕಿಚ್ಚನ ಮಾತಿನಲ್ಲೇ ವ್ಯಕ್ತವಾಗಿದೆ. ಇನ್ನುಳಿದಂತೆ ಇರುವವರಲ್ಲಿ ವೀಕ್‌ ಸ್ಪರ್ಧಿ ಚಂದ್ರಕಲಾ ಮೋಹನ್. ಅವರೇ ಈ ಬಾರಿ ಎಮಿನೇಟ್‌ ಆಗುತ್ತಿರುವ ಸ್ಪರ್ಧಿ. ಶುಭಾ ಪೂಂಜಾ ಇತ್ತೀಚೆಗೆ ಮಹಿಳಾ ಕಂಟೆಸ್ಟೆಂಟ್‌ಗಳು ವೀಕ್‌ ಆಗ್ತಿರೋದನ್ನು ಪದೇ ಪದೇ ಹೇಳಿದ್ದರು. ಅವರ ಮಾತು ಮತ್ತೊಮ್ಮೆ ನಿಜವಾಗುತ್ತಿದೆ.

ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದೆ ಜಾನ್ವಿ ಕಪೂರ್‌ ಕಸಿನ್‌ ಫೋಟೋಗಳು! ...