ಇಂಟರ್ನೆಟ್ಗೆ ಬೆಂಕಿ ಹಚ್ಚಿದೆ ಜಾನ್ವಿ ಕಪೂರ್ ಕಸಿನ್ ಫೋಟೋಗಳು!
ಬಾಲಿವುಡ್ ನಟ ಸಂಜಯ್ ಕಪೂರ್ರ ಮಗಳು ಶಾನಯಾ ಕಪೂರ್ ಶೀಘ್ರದಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈ ನಡುವೆ ಇವರ ಹಾಟ್ ಪೋಟೋಗಳು ಇಂಟರ್ನೆಟ್ಗೆ ಬೆಂಕಿ ಹಚ್ಚಿವೆ. ಶಾನಯಾ ಕಪೂರ್ರ ಪೋಟೋಗಳು ಸಖತ್ ವೈರಲ್ ಆಗಿವೆ.
ಜಾನ್ವಿ, ಅರ್ಜುನ್, ಸೋನಮ್, ಹರ್ಷವರ್ಧನ್ ನಂತರ ಕಪೂರ್ ಫ್ಯಾಮಿಲಿಯ ಮತ್ತೊಂದು ಕುಡಿ ಬಾಲಿವುಡ್ಗೆ ಎಂಟ್ರಿ ಕೊಡಲು ಸಿದ್ಧವಾಗಿದೆ.
ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಮಗಳು ಶಾನಯಾ ಕಪೂರ್ ಶೀಘ್ರದಲ್ಲೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಂಜಯ್ ಮತ್ತು ಮಹೀಪ್ ಕಪೂರ್ ಅವರ ಪುತ್ರಿ ಶಯಾನಾ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.
ಕೆಲವು ದಿನಗಳ ಹಿಂದೆ ಶಾನಯಾ ತಮ್ಮ ಇನ್ಸ್ಟಾಗ್ರಾಮ್ ಆಕೌಂಟ್ ಅನ್ನು ಪಬ್ಲಿಕ್ ಮಾಡಿದ್ದಾರೆ.
ಅಸಿಸ್ಟೆಂಟ್ ಡೈರೆಕ್ಟ್ರರ್ ಆಗಿ ಸಿನಿಮಾರಂಗಕ್ಕೆ ಕಾಲಿಟ್ಟರು ಶಾನಯಾ ಕಪೂರ್.
ಅವರ ಮೊದಲ ಪ್ರಾಜೆಕ್ಟ್ ಕಸಿನ್ ಜಾನ್ವಿ ಕಪೂರ್ಳ ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್.