Asianet Suvarna News Asianet Suvarna News

ಬಿಗ್‌ ಬಾಸ್‌ ಮನೆಯಲ್ಲಿ ವೈಷ್ಣವಿ ಇಷ್ಟೊಂದು ವೋಟ್‌ ಪಡೆದು ಸೇಫ್ ಅಗುತ್ತಿರುವುದು ಈ ಕಾರಣಕ್ಕೆ?

ವೈಷ್ಣವಿ ಎಷ್ಟು ಸಲ ನಾಮಿನೇಟ್ ಆದರೂ ಎಲ್ಲರಿಗಿಂತ ಮೊದಲು ಸೇಫ್ ಆಗುವ ಸ್ಪರ್ಧಿ. ಇದಕ್ಕೆ ಕಾರಣವೇನು? ಸೈಲೆಂಟ್ ಆಗಿ ವೀಕ್ಷಕರ ಪ್ರೀತಿ ಎಲ್ಲಿ ಪಡೆದುಕೊಳ್ಳುತ್ತಿದ್ದಾರೆ ಎಂದು ರಘು ಗೌಡ ಹಾಗೂ ಮಂಜು ವಿವರಿಸಿದ್ದಾರೆ.
 

Why vaishnavi is getting more votes in Colors Kannada BBK8 vcs
Author
Bangalore, First Published May 3, 2021, 2:22 PM IST

ಬಿಗ್ ಬಾಸ್‌ ಸೀಸನ್‌ 8ರ ನಗು ಮುಖದ ಚೆಲುವೆ ಅಗ್ನಿಸಾಕ್ಷಿ ಸನ್ನಿಧಿ ಅಲಿಯಾಸ್ ವೈಷ್ಣವಿ ಈ ವರ್ಷದ ವಿನ್ನರ್ ಆಗುವ ಸಾಧ್ಯತೆ ಹೆಚ್ಚಿದೆ. ಮಲ್ಟಿ ಟಾಸ್ಕಿಂಗ್ ಮಾಡುವ ಹುಡುಗಿ ಅಂತಲ್ಲ, ರಘು ಗೌಡ ಹಾಗೂ ಮಂಜು ಪಾವಗಡ ಹಾಕಿರುವ ಲೆಕ್ಕಾಚಾರದ ಪ್ರಕಾರ ಅಷ್ಟೆ...

ಅಗ್ನಿಸಾಕ್ಷಿ ವೈಷ್ಣವಿ ಹಾಕೊಳ್ತಿರೋ ಬಟ್ಟೆ ನೋಡೋಕೆನೇ 'ಬಿಗ್‌ ಬಾಸ್‌' ನೋಡ್ತಿದ್ದಾರೆ ಹೆಣ್ಣುಮಕ್ಕಳು? 

ಮಂಜು- ರಘು ಮಾತುಕತೆ:

ಬಿಗ್ ಬಾಸ್ ಏನೇ ಟಾಸ್ಕ್ ಕೊಟ್ಟರೂ ವೈಷ್ಣವಿ ಅದೆಲ್ಲವನ್ನು ಮುಗಿಸಿ ತಮ್ಮ ಕೆಲಸ ಮುಂದುವರೆಸಿಕೊಂಡು ಹೋಗುತ್ತಾರೆ. ಯೋಗ ಅಂದ್ರೆ ವೈಷ್ಣವಿಗೆ ಸಿಕ್ಕಾಪಟ್ಟೆ ಇಷ್ಟ ಬಿಡುವು ಸಿಕ್ಕಾಗಲೆಲ್ಲಾ ವ್ಯಾಯಾಮ ಮತ್ತು ಧ್ಯಾನ ಮಾಡುತ್ತಾರೆ. ಒಂದು ದಿನ ಧ್ಯಾನ ಮಾಡುತ್ತಲೇ ನಿಧಿ ಕೂಡ ಮಾಡಿದ್ದರು. ಅದು ಬಿಡಿ ಈಗ ರಘು ಹಾಗೂ ಮಂಜು ಕಾರಣ ಕೊಟ್ಟ ಲಿಸ್ಟ್‌ ನೋಡಿ...

Why vaishnavi is getting more votes in Colors Kannada BBK8 vcs

ವೈಷ್ಣವಿ ಧ್ಯಾನ ಮಾಡುತ್ತಿದ್ದ ವೇಳೆ ರಘು ದೂರದಲ್ಲಿ ನಿಂತು 'ಈಗ ರಘುಗೆ ಒಳ್ಳೆಯದಾಗಲಿ ಬಾಳು ಬಂಗಾರವಾಗಲಿ ನನ್ನ ಪಾಲಿನ ಸುಖ ಎಲ್ಲ ಅವನಿಗೆ ಹೋಗಲಿ ಬಿಗ್‌ ಬಾಸ್‌ ನನ್ನ ಪೇಮೆಂಟ್‌ ಅವರ ಬ್ಯಾಂಕ್ ಅಕೌಂಟ್‌ಗೆ ಹೋಗಲಿ ಎಂದು ವೈಷ್ಣವಿ ಬೇಡಿಕೊಳ್ಳುತ್ತಿದ್ದಾರೆ.  ನಿದ್ದೆ ಮಾಡಿದ್ರೂ ಯಾವತ್ತೂ ಎದ್ದೇಳು ಮಂಜುನಾಥ ಹಾಡೇ ಬಂದಿಲ್ಲ ಅಂತ ಹೇಳುತ್ತಾ ನಗುತ್ತಿದ್ದರು' ಎಂದು ಹೇಳುತ್ತಾರೆ.  ಪಕ್ಕದಲ್ಲಿದ ಮಂಜು 'ರಘು ಹೇಳಿದೆಲ್ಲಾ ಬೇಗ ಸುಳ್ಳಾಗಲಿ. ಹೇಂಗ್ ಬರುತ್ತೆ? ಕಣ್ಮುಚ್ಚಿಕೊಂಡು ನಾಟಕಗಳನ್ನೆಲ್ಲಾ ಮಾಡಿದಾಗ ಸಾಂಗ್ ಹೆಂಗ್ ಬರುತ್ತೆ. ಇವಳಿಲ್ಲಿ ತೂಕಡಿಸುತ್ತಿದ್ದರೂ ಅಲ್ಲಿ ಬಿಗ್ ಬಾಸ್‌ ಕ್ಯಾಮೆರಾಮನ್‌ಗಳು ಅಯ್ಯೋ ಪಾಪ ಯೋಗ ಮಾಡ್ತಾವ್ರೆ ಅಂದುಕೊಂಡು ಇರ್ತಾರೆ' ಎಂದು ಮಂಜು ಹೇಳುತ್ತಾರೆ. 

#BBK8: ಯೋಗ, ಡ್ರೆಸ್ ಮಾಡ್ಕೊಂಡೇ ವೈಷ್ಣವಿ ಸೈಲೆಂಟ್ ಆಗಿದ್ರೆ ಬೇಗ ಎಲಿಮಿನೇಟ್ ಆಗ್ತಾರಾ?

ವೈಷ್ಣವಿಗೆ ವೋಟ್‌ ಎಲ್ಲಿಂದ ಬರ್ತಿದೆ? 

ರಘು: ನಾಯಿ ಎಂದು ಹೇಳ್ತಾ ಈ ನಾಯಿ ಲವರ್ಸ್‌ಗಳ ವೋಟ್‌ ಬರುತ್ತೆ.
ಮಂಜು: ಯೋಗ ಮತ್ತೆ ಜಿಮ್ ಮಾಡುವವರ ವೋಟ್‌ಗಳು ಕೂಡ ಫಿಕ್ಸ್
ರಘು:ಕಿಚನ್‌ ಅಲ್ಲಿ ಇದ್ದಾಗ ಅಂಟಿಯಂದಿರು ವೋಟ್ ಹಾಕ್ತಾರೆ.
ಮಂಜು: ಜೀನ್ಸ್‌ ಟೀ ಶರ್ಟ್ ಹಾಕೊಂಡು ಟಾಮ್‌ ಬಾಯ್ ಥರ ಇದ್ದು ಹುಡುಗಿಯರ ವೋಟ್ ಬರುತ್ತೆ.
ರಘು: ವೀಕೆಂಡ್‌ನಲ್ಲಿ ಮೇಕಪ್ ಡ್ರೆಸ್‌ ನೋಡಿ ನನ್ನ ಹೆಂಡ್ತಿನೇ ವೈಷ್ಣವಿಗೆ ವೋಟ್ ಹಾಕಿರ್ತಾಳೆ.
ಮಂಜು: ನಗುವೊಂದು ಇದೆ ಗುರು...
ರಘು: ಹೌದು, ಹುಡುಗರೆಲ್ಲ ವೈಷ್ಣವಿ ನಗುವೆ ಫ್ಲ್ಯಾಟ್ ಆಗಿ  ಅವರ ವೋಟ್‌ ಕೂಡ ಇವಳಿಗೆ ಬೀಳುತ್ತೆ. ಎಂದು ಹೇಳುತ್ತಾ ವೈಷ್ಣವಿ ಕಾಲು ಎಳೆಯುತ್ತಿದ್ದರು.

Follow Us:
Download App:
  • android
  • ios