ಬಿಗ್‌ಬಾಸ್ ಸೀಸನ್ 8 ಶುರುವಾಗಿ ಆಗಲೇ ತಿಂಗಳಾಗುತ್ತಾ ಬಂತು. ಒಂದೆರಡು ದೊಡ್ಡ ಮಟ್ಟಿನ ಜಗಳ, ಶೀತಲ ಸಮರಗಳ ನಡುವೆಯೂ ಬಿಗ್ ಬಾಸ್ ರಂಗೇರುತ್ತಲೇ ಇದೆ. ಈ ಬಾರಿಯ ಬಿಗ್‌ಬಾಸ್ ಟಾಸ್ಕ್‌ಗಳೂ ಗಮನ ಸೆಳೆಯೋ ಹಾಗಿವೆ. ಒಬ್ಬೊಬ್ಬರೇ ಕಂಟೆಸ್ಟೆಂಟ್ ಹೊರ ಹೋಗುತ್ತಿರುವಂತೆ ಟೀಮ್ ಇನ್ನಷ್ಟು ಸ್ಟ್ರಾಂಗ್ ಆಗುತ್ತಾ ಬರುತ್ತಿದೆ.

ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ಗಳದ್ದು, ಮನೆಮಂದಿಯ ಮಾತುಕತೆ, ಸ್ವಭಾವ ಇತ್ಯಾದಿಗಳದ್ದು ಒಂದು ತೂಕವಾದ್ರೆ ವೀಕೆಂಡ್‌ನಲ್ಲಿ ಬರೋ ಕಿಚ್ಚನ ಜೊತೆಗಿನ ಮಾತುಕತೆಯ ಮಜಾವೇ ಬೇರೆ. ಸೀರಿಯಸ್‌ ಜೊತೆಗೆ ಹ್ಯೂಮರಸ್ಸಾಗಿಯೂ ಸಾಗುವ ಈ ವೀಕೆಂಡ್ ಕತೆ ಕಿಚ್ಚ ಸುದೀಪನ ಜೊತೆ ಪ್ರೋಗ್ರಾಂ ಸಖತ್ ಇಂಟೆರೆಸ್ಟಿಂಗ್. ಈ ಪ್ರೋಗ್ರಾಂ ನೋಡ್ತಿದ್ರೆ ಮಧ್ಯೆ ಚಾನೆಲ್ ಚೇಂಜ್ ಮಾಡೋಕೂ ಆಗಲ್ಲ, ಅಷ್ಟು ಎಂಟರ್‌ಟೈನಿಂಗ್ ಅನ್ನೋದು ವೀಕ್ಷಕರ ಕಮೆಂಟ್‌.

ದುಬಾರಿ ಲ್ಯಾಂಬರ್ಗಿನಿ ಖರೀದಿಸಿದ ನಟ ಪ್ರಭಾಸ್; ಇದರ ಬೆಲೆ ಕೇಳಿದ್ದೀರಾ? ...

ಈ ಬಾರಿಯ ವೀಕೆಂಡ್‌ ಶೋನಲ್ಲೂ ಕಿಚ್ಚ ಸುದೀಪ್ ಸಖತ್ ಜೋಕ್ ಹಾರಿಸಿ ನಗಿಸಿದ್ದಾರೆ. ಕೆಲವು ಅನುಮಾನಗಳನ್ನೂ ಕ್ಲಿಯರ್‌ ಮಾಡಿದ್ದಾರೆ. ಶುಭಾಪೂಂಜಾ ಹಾಗೂ ನಿಧಿ ಸುಬ್ಬಯ್ಯ ಈ ಸೀಸನ್‌ನಲ್ಲಿ ಬಿಗ್‌ಬಾಸ್‌ ಮನೆಯಿಂದ ಹೆಣ್ಮಕ್ಕಳೇ ಆಚೆ ಹೋಗ್ತಿದ್ದಾರೆ, ಟಾಸ್ಕ್‌ನಲ್ಲೂ ಅವರನ್ನು ಮೂಲೆಗುಂಪು ಮಾಡಲಾಗುತ್ತೆ ಅನ್ನೋ ಥರದ ಚರ್ಚೆ ಮಾಡಿದ್ದರು. ಆದರೆ ಇಲ್ಲಿ ನಿಮ್ಮ ಆಟವನ್ನು ಗಮನಿಸಿ ಯೋಗ್ಯತೆ ಅಳೆಯಲಾಗುತ್ತದೆಯೇ ವಿನಃ ಸ್ಪರ್ಧಿಗಳ ಜೆಂಡರ್‌ ಮುಖ್ಯ ಆಗೋದೇ ಇಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ.

ಇದೆಲ್ಲದವರ ನಡುವೆ ಬಹಳ ಗಮನಸೆಳೆದಿದ್ದು ಕಿಚ್ಚ ಸುದೀಪ್ ಹೇಳಿರೋ ಒಂದು ಮಾತು. 'ಹೀಗೇ ಆದ್ರೆ ನಾನು ಆಕ್ಟಿಂಗ್‌ ಕೆರಿಯರ್‌ಗೇ ಗುಡ್‌ ಬೈ ಹೇಳಬೇಕಾಗುತ್ತೆ' ಅನ್ನೋ ಮಾತನ್ನು ಅವರು ಹೇಳಿದ್ರು. ಸಿನಿಮಾ ರಂಗದಲ್ಲಿ 25 ವರ್ಷದ ಜರ್ನಿ ಪೂರ್ಣಗೊಳಿಸಿ ಯಶಸ್ಸಿನ ಉತ್ತುಂಗದಲ್ಲಿರುವ ಅವರು ಸಡನ್ನಾಗಿ ಹೀಗೊಂದು ನಿರ್ಧಾರಕ್ಕೆ ಬರೋದಿಕ್ಕೆ ಏನ್ ಕಾರಣ ಇರಬಹುದು.

ರಾಖಿ ಸಾವಂತ್‌ಗೆ ಬಂಪರ್ ಗಿಫ್ಟ್ ಕೊಟ್ಟ ಬಿಗ್‌ಬಾಸ್..! ಕಾರ್ ಒಳಗಿದ್ದ ಮಗು ಯಾರದ್ದು..? ...

ಅದು ಹೇಗಾಯ್ತು ಅನ್ನೋ ವಿವರ ಇಲ್ಲಿದೆ ನೋಡಿ. ಸುದೀಪ್ ಈ ಬಾರಿ ಅರವಿಂದ್-ದಿವ್ಯಾ ಉರುಡುಗ ಜೋಡಿಯನ್ನು ಎಂದಿಗಿಂತ ತುಸು ಹೆಚ್ಚೇ ಕಾಲೆಳೆದರು. ಈ ಮಾತುಕತೆ ತುಂಬ ಫನ್ನಿಯಾಗಿತ್ತು, ಅಷ್ಟೇ ಎಂಟರ್‌ಟೈನಿಂಗ್ ಆಗಿತ್ತು. ಕಿಚ್ಚ ರಾಪಿಡ್‌ ಫೈರ್‌ ರೌಂಡ್ ನಲ್ಲಿ ಅರವಿಂದ್, ದಿವ್ಯಾ ಅವರಿಗೆ ಕೇಳಿದ ಪ್ರಶ್ನೆ, ಉತ್ತರ ಹೀಗಿದೆ. 

ಸುದೀಪ್ : ಅರವಿಂದ್ ಡಿಗ್ರಿ ಓದಿದ್ದೆಲ್ಲಿ?
ದಿವ್ಯಾ ಯು : ಅಲೋಶಿಯಸ್ ಕಾಲೇಜು ಮಂಗಳೂರು
ಸುದೀಪ್‌ : ಅರವಿಂದ್‌ಗೆ ಇಷ್ಟ ಆಗೋ ತಿಂಡಿ?
ದಿವ್ಯಾ: ಎಲ್ಲವನ್ನೂ ಇಷ್ಟಪಡುತ್ತಾರೆ. 
ಸುದೀಪ್‌ : ಅರವಿಂದ್‌ ಬೆನ್ನ ಮೇಲೆ ಎಷ್ಟು ಮಚ್ಚೆ ಇದೆ?
ದಿವ್ಯಾ: ಒಂದು
ಸುದೀಪ್: ಎಷ್ಟು ಬಾರಿ ಅರವಿಂದ್ ಡಕಾರ್ ಓಡಿಸಿದ್ದಾರೆ?
ದಿವ್ಯಾ: 3 ಸಲ
ಸುದೀಪ್ : ಅರವಿಂದ್ ಮೈಯಲ್ಲಿ ಎಷ್ಟು ರಾಡ್ ಇದೆ?
ದಿವ್ಯಾ: 1 ರಾಡ್, 16 ಸ್ಕ್ರೂ, 3 ಪ್ಲೇಟ್
ಸುದೀಪ್: ಅರವಿಂದ್‌ಗೆ ಇಷ್ಟ ಆಗೋ ಸಿನಿಮಾ?
ದಿವ್ಯಾ : ಬರ್ಫಿ
ಆಗ ಅರವಿಂದ್ ಇಲ್ಲ ನಂಗೆ ಆವೆಂಜರ್ಸ್ ಇಷ್ಟ ಅಂತಾರೆ. 
ಸುದೀಪ್ : ಅವ್ರಿಗೆ ಯಾರ ಥರದ ಹುಡುಗಿ ಇಷ್ಟ?
ದಿವ್ಯಾ: ಟ್ರೆಡಿಶನಲ್ ಆಗಿರೋ ಹುಡುಗಿ
ಸುದೀಪ್ (ಕಿಂಡಲ್ ಮಾಡುತ್ತಾ): ಅಂದುಕೊಂಡೆ, ಹಾಗೇ ಇರಬೇಕು ಅಂತ.

ಬಿಗ್ ಬಾಸ್ ಯಾರು ಗೆಲ್ತಾರೆ? ಮನೆಯಿಂದ ಹೊರಬಂದು ಅಚ್ಚರಿ ಭವಿಷ್ಯ ನುಡಿದ ಚಂದ್ರಕಲಾ ...

ಇದೇ ಥರ ದಿವ್ಯಾಗೂ ಸೇಮ್ ಪ್ರಶ್ನೆ ಕೇಳ್ತಾರೆ. ಉತ್ತರ ಆಲ್ ಮೋಸ್ಟ್‌ ಸೇಮ್ ಇರುತ್ತೆ. ಆ ಟೈಮ್‌ನಲ್ಲಿ ಈ ಜೋಡಿಯ ಕಾಲೆಳೆಯೋ ಸುದೀಪ್ ಇಲ್ಲೀವರೆಗೂ ಬಿಗ್‌ಬಾಸ್ ಮನೆಗೆ ಆಟ ಆಡಕ್ಕೆ ಅಂತ ಕಂಟೆಸ್ಟೆಂಟ್ಸ್‌ ಬರ್ತಿದ್ರು. ಇನ್ಮೇಲೆ ಮದ್ವೆ ಆಗೋ ಇಂಟೆನ್ಶನ್ ಇರೋರೂ ಬರಬಹುದು ಅಂದಾಗ ಎಲ್ಲ ಕಡೆ ನಗುವಿನ ಅಲೆ. ಒಂದು ವೇಳೆ ಹಾಗಾದ್ರೆ ತಾನು ಈ ನಟನೆ, ಹೋಸ್ಟಿಂಗ್‌ ಎಲ್ಲವನ್ನೂ ಬಿಟ್ಟು ಮದುವೆ ಮಾಡಿಸೋ ಕೆಲಸ ಮಾಡಬೇಕಾಗ್ಬಹುದು ಅಂತಾರೆ. ಕಿಚ್ಚನ ಈ ಮಾತಿಗೆ ದಿವ್ಯಾ ಹಾಗೂ ಅರವಿಂದ್ ಇಬ್ಬರೂ ನಾಚಿ ನೀರಾಗ್ತಾರೆ.