ಬಿಗ್‌ಬಾಸ್ ಸೀಸನ್ 14ರ ಸ್ಪರ್ಧಿ ರಾಖಿ ಸಾವಂತ್ ಅವರಿಗೆ ಬಿಗ್‌ಬಾಸ್ ಬಂಪರ್ ಗಿಫ್ಟ್ ಕೊಟ್ಟಿದೆ. ಹೌದು.. ನಟಿಗೆ 24 ಲಕ್ಷದ ಟಾಟಾ ಸಫಾರಿ ಬ್ಲೂ ಕಾರ್ ಗಿಫ್ಟ್ ಮಾಡಿದೆ ಬಿಗ್‌ಬಾಸ್.

ನಟಿ ಏರ್‌ಪೋರ್ಟ್‌ನಲ್ಲಿರುವಾಗ ತನಗೆ ಬಂದ ಗಿಫ್ಟ್‌ನ ವಿಡಿಯೋವನ್ನು ಫ್ಯಾನ್ಸ್ ಜೊತೆಗೆ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ನಟಿಗೆ ಕಾರಿನ ಜೊತೆ ಇನ್ನೊಂದು ಶಾಕಿಂಗ್ ಸರ್ಪೈಸ್ ಇತ್ತು.

ಡ್ಯಾನ್ಸ್ ಮಾಡ್ತಿದ್ದಾಗೆ ಬ್ಲೌಸ್ ಬಿಚ್ಚಿತು..! ರಾಖಿ ಸಾವಂತ್ ಗರಂ

ಬ್ಲೂ ಕಾರ್ ನೋಡಿ ಖುಷ್ ಆದ ರಾಖಿ ಸಾವಂತ್ ಕಾರನ್ನು ತಂದ ಸಿಬ್ಬಂದಿ ಬಳಿ ಬಿಗ್ ಬಾಸ್ ಕಳುಹಿಸಿದ್ದು ಹೌದಲ್ಲಾ ಎಂದು ಹಲವು ಬಾರಿ ಕೇಳಿ ಖಚಿತಪಡಿಸಿಕೊಂಡಿದ್ದಾರೆ. ನಂತರ ಸಿಬ್ಬಂದಿಯ ಬಾಯಿಯಿಂದಲೇ ಇದು ಬಿಗ್‌ಬಾಸ್ ಕೊಟ್ಟ ಗಿಫ್ಟ್ ಎಂದೂ ಹೇಳಿಸಿದ್ದಾರೆ.

ಬ್ಲೂ ಕಲರ್ ಟಾಟಾ ಸಫಾರಿ ಕಾರ್ ನೋಡೋದಕ್ಕೂ ಸೂಪರ್ ಆಗಿದ್ದು ಕಾರನ್ನು ನೋಡುತ್ತಾ ನಟಿ ಡೋರ್ ಓಪನ್ ಮಾಡಿದಾಗ ಅದರೊಳಗೆ ಒಂದು ಮಗುವಿತ್ತು. ಅರೆ ಇದ್ಯಾರ ಮಗು..? ನನಗೆ ಮಗುವಿಲ್ಲ ಎಂದು ಆಶ್ಚರ್ಯಪಟ್ಟಿದ್ದಾರೆ ನಟಿ.