'ಬ್ರೋ' ಶಬ್ದಕ್ಕೆ ಅರ್ಥ ತಿಳಿದ್ಮೇಲೆ, ಯಾರನ್ನೂ ಹಾಗೆ ಕರೀತಿಲ್ಲವೆಂದ ಸತ್ಯ ಸೀರಿಯಲ್​ 'ಕೀರ್ತನಾ'!

ಸತ್ಯ ಧಾರಾವಾಹಿಯಲ್ಲಿ ಕೀರ್ತನಾ ಎನ್ನುವ ವಿಲನ್​ ಪಾತ್ರಧಾರಿಯಾಗಿರೋ ನಟಿ ಅನು ಅವರ ಜೀವನದ ಕೆಲವೊಂದು ಕುತೂಹಲದ ಮಾಹಿತಿ ಇಲ್ಲಿದೆ. 
 

Sathya Kannada serial Kirtana revealed about the word bro and relationshp secrets suc

ಜೀ ಟಿ.ವಿಯಲ್ಲಿ ನಿತ್ಯ ಪ್ರಸಾರವಾಗ್ತಿರೋ ಸತ್ಯ (Sathya) ಧಾರಾವಾಹಿ ಕಳೆದ ಎರಡೂವರೆ ವರ್ಷಗಳಿಂದ ಜನಮನ ಗೆದ್ದಿದೆ. 2020ರ ಡಿಸೆಂಬರ್​ನಿಂದ ಪ್ರಸಾರವಾಗ್ತಿರೋ ಈ ಧಾರಾವಾಹಿಗೆ ಅದರದ್ದೇ ಆದ ಪ್ರೇಕ್ಷಕರಿದ್ದಾರೆ. ಮಾಮೂಲು ಧಾರಾವಾಹಿಗಳಂತೆ ನಾಯಕಿ, ಮನೆಯಲ್ಲೊಬ್ಬಳು ವಿಲನ್​ ಕಥಾ ವಸ್ತು ಇದ್ದರೂ ಬೇರೆ ಧಾರಾವಾಹಿಗಳಿಗಿಂತಲೂ ತುಸು ಭಿನ್ನ ಎನ್ನುವಂಥ ಪಾತ್ರ ಇದರಲ್ಲಿ ಇರುವ ಕಾರಣ ಜನರಿಗೆ ಇದು ತುಂಬಾ ಇಷ್ಟವಾಗುತ್ತಿದೆ. ಗಂಡುಬೀರಿಯಂತಿದ್ದ ನಾಯಕಿ ಸತ್ಯ ಅನಿವಾರ್ಯವಾಗಿ ಮದುವೆಯಾಗಿ ಸಂಪ್ರದಾಯಸ್ಥ ಕುಟುಂಬದಲ್ಲಿ ಹೊಂದಿಕೊಳ್ಳಲು ಹೆಣಗಾಡುವುದು, ಇವಳು ಹೊಂದಿಕೊಳ್ಳಲು ನೋಡಿದರೂ ಅತ್ತೆಗೆ ಇವಳನ್ನು ಕಂಡರೆ ಆಗಿರುವುದು, ಪತ್ನಿಯನ್ನು ಕಂಡರೆ ಸಿಡಿಮಿಡಿ ಎನ್ನುತ್ತಿರುವ ಗಂಡ ಕಾರ್ತೀಕ್​ಗೆ ಕೊನೆಗೂ ಪತ್ನಿ ಮೇಲೆ ಲವ್​ ಆಗುವುದು... ಹೀಗೆ ಒಂದು ಸಂಸಾರದ ಸುತ್ತಲೂ ಹೆಣೆದಿರುವ ಈ ಕಥೆಯಲ್ಲಿ ನಾಯಕಿಯಂತೆಯೇ ಎಲ್ಲರ ಗಮನ ಸೆಳೆಯುವುದು ವಿಲನ್​ ಪಾತ್ರಧಾರಿ ಕೀರ್ತನಾ. ಸುರಸುಂದರಿ ಕೀರ್ತನಾ ಅವರನ್ನು ನೋಡಿದಾಗ ವಿಲನ್​ ಎಂದು ಕರೆಯುವುದು ಹೆಚ್ಚಿನವರಿಗೆ ಸಹ್ಯ ಎನ್ನಿಸದಿದ್ದರೂ ತಮ್ಮ ಅದ್ಭುತ ನಟನೆಯಿಂದ ಥೇಟ್​ ಮನೆಹಾಳಿಯಂತೆಯೇ ಕಾಣಿಸಿಕೊಳ್ಳುತ್ತಿದ್ದಾರೆ ಕೀರ್ತನಾ. ಮದುವೆಯಾದರೂ ತವರಿನಲ್ಲಿಯೇ ಇದ್ದು, ತಮ್ಮನ ಪತ್ನಿಯ (ನಾಯಕಿ ಸತ್ಯ) ಮೇಲೆ ಸದಾ ಕುತಂತ್ರ ಹೆಣೆಯುತ್ತಾ ಇರುವ ಈ ಕೀರ್ತನಾಳ ನಿಜವಾದ ಹೆಸರು ಅನು ಜನಾರ್ಧನ.

ಇವರು ಎಷ್ಟು ಸುಂದರಿಯೋ ಅವರ ಸ್ಟೈಲಿಷ್​ ಲುಕ್​ (Stylish Lood) ಕೂಡ ವಿಲನ್​ ಪಾತ್ರಕ್ಕೆ ಅಷ್ಟೇ ಮೆರುಗು ನೀಡಿದೆ. ಅಸಲಿಗೆ ಕೀರ್ತನಾ ಅಲಿಯಾಸ್​ ಅನು ಜನಾರ್ಧನ ಅವರು ನಿಜ ಜೀವನದಲ್ಲಿಯೂ ಇನ್ನೂ ಹೆಚ್ಚು ಸ್ಟೈಲಿಷ್​ ಅಂತೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ. ಭಾರತನಾಟ್ಯ ಕಲಾವಿದೆಯೂ ಆಗಿರುವ ಅನು ಅವರಿಗೆ ಕಲೆಯಲ್ಲಿ ಮೊದಲಿನಿಂದಲೂ  ಆಸಕ್ತಿ.  ಶ್ರೀ ವಿಷ್ಣು, ಜೈ ಹನುಮಾನ್​ ಪೌರಾಣಿಕ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಬಳಿಕ 'ರಂಗನಾಯಕಿ' ಧಾರಾವಾಹಿಗೆ ಎಂಟ್ರಿ ಕೊಟ್ಟ ಅನು,  ಬ್ರಹ್ಮಗಂಟ, ಅಮ್ನೋರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಸತ್ಯ ಅವರಿಗೆ ಸಕತ್​ ಹೆಸರು ತಂದುಕೊಟ್ಟಿದೆ. ಸತ್ಯ ಧಾರಾವಾಹಿಯಲ್ಲಿ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಅನು ಬಳಕುವ ಬಳ್ಳಿಯಂತೆ ಇರುವುದನ್ನು ನೋಡಬಹುದು. ಆದರೆ ಅನು ಮೊದಲು ಹೀಗಿರಲಿಲ್ಲವಂತೆ. ನಟನಾ ಕ್ಷೇತ್ರಕ್ಕೆ ಬರುವ ಮೊದಲು ತಾವು ದಪ್ಪ ಆಗಿದ್ದು, ಆಮೇಲೆ ಸಕತ್​ ಡಯಟ್​ ಮಾಡಿ ಒಂದು ವರ್ಷಗಳ ಸತತ ಪರಿಶ್ರಮದ ನಂತರ ತೆಳ್ಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ.

18ನೇ ಮದುವೆಗೆ ರೆಡಿಯಾದ ಖ್ಯಾತ ನಟ ನಕುಲ್! ಏನಿದು ಸುದ್ದಿ?
 
ಸಾಮಾಜಿಕ ಜಾಲತಾಣದಲ್ಲಿ ಅನು (Anu Janardhan) ಸಕತ್​ ಆ್ಯಕ್ಟೀವ್​. ಹಲವಾರು ರೀಲ್ಸ್​ಗಳನ್ನು ಮಾಡಿ ಹಾಕುತ್ತಾರೆ. ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್​ ಕೂಡ ಆಗಿರುವ  ಅನು, ಇನ್​ಸ್ಟಾಗ್ರಾಮ್​ನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಇವರು ಹೆಚ್ಚಾಗಿ ಕನ್ನಡ ಮಾತ್ರವಲ್ಲದೇ ಇಂಗ್ಲಿಷ್​ನಲ್ಲಿಯೂ ರೀಲ್ಸ್​ ಮಾಡುವ ಕಾರಣ, ಟ್ರೋಲ್​ ಮಾಡುವವರೂ ಇದ್ದಾರೆ. ಆದರೆ ಇದಕ್ಕೆ ಸ್ಪಷ್ಟನೆ ಕೊಟ್ಟಿರೋ ನಟಿ ಅನು, ನೋಡಿ ನಾನು ಕೇವಲ ನಟಿಯಾಗಿ ಗುರುತಿಸಿಕೊಂಡಿಲ್ಲ. ಕೆಲವು ಪ್ರಸಿದ್ಧ ಬ್ರ್ಯಾಂಡ್​ಗಳಿಗೆ ಪ್ರಮೋಟರ್​ ಕೂಡ ಆಗಿದ್ದೇನೆ. ನನ್ನ ಫಾಲೋವರ್ಸ್​ಗಳು ಕನ್ನಡಿಗರು ಮಾತ್ರವಲ್ಲದೇ ಹೊರ ರಾಜ್ಯ, ದೇಶಗಳಲ್ಲಿಯೂ ಇದ್ದಾರೆ. ಅದಕ್ಕಾಗಿ ಇಂಗ್ಲಿಷ್​ ಮಾತನಾಡುವುದು ಅನಿವಾರ್ಯ ಆಗುತ್ತದೆ. ಹಾಗಂತ, ನನ್ನನ್ನು ಟ್ರೋಲ್​ ಮಾಡುವುದು ಸರಿಯಲ್ಲ ಎಂದಿದ್ದಾರೆ. ಅಂದ ಮಾತ್ರಕ್ಕೆ ನಾನು ಮಾಡೆಲ್​ ಏನೂ ಅಲ್ಲ. ಫೋಟೋಶೂಟ್​ ಎಲ್ಲಾ ನನಗೆ ಇಷ್ಟ ಆಗಲ್ಲ ಎಂದೂ ಹೇಳಿದ್ದಾರೆ. 
 
  ಅಂದಹಾಗೆ ಈಗ ಸಾಮಾನ್ಯವಾಗಿ ಎಲ್ಲರೂ ಬ್ರೋ ಬ್ರೋ (Bro) ಎಂದು ಕರೆಯುವುದು ಮಾಮೂಲಾಗಿದೆ. ಹೆಣ್ಣು ಮಕ್ಕಳಾಗಲೀ, ಗಂಡುಮಕ್ಕಳಾಗಲೀ ಒಬ್ಬರನ್ನೊಬ್ಬರು ಹಾಗೆ ಕರೆಯೋದು ಮಾಮೂಲು. ಹಾಗೆ ಅನು ಕೂಡ ಎಲ್ಲರನ್ನೂ ಬ್ರೋ ಎಂದು ಕರೆಯುತ್ತಿದ್ದರಂತೆ. ಆದರೆ ಒಂದು ದಿನ ನಟ ಸೀರುಂಡೆ ರಘು ಅವರು (ಇವರು ಸತ್ಯ ಧಾರಾವಾಹಿಯಲ್ಲಿಯ ಮೈದುನನ ಪಾತ್ರ ಮಾಡಿದ್ದಾರೆ) ಬ್ರೋ ಅನ್ನೋ ಶಬ್ದದ ಅರ್ಥ ಹೇಳಿದ್ಮೇಲೆ ತಾವು ಹಾಗೆ ಕರೆಯೋದನ್ನೇ ಬಿಟ್​ಬಿಟ್ಟೆ ಎಂದಿದ್ದಾರೆ ಅನು. ಅಷ್ಟಕ್ಕೂ  ಸೀರುಂಡೆ ರಘು ಅವರು ಹೇಳಿದ ಅರ್ಥ ಏನೆಂದರೆ  ಬ್ರೋ ಎಂದರೆ, 'ಬಾರೋ ರಾಜ ಓಡಿ ಹೋಗೋಣ' ಅಂತ ಹೇಳಿದ್ದರಂತೆ. ಇದನ್ನು ಕೇಳಿ ನನಗೆ ಶಾಕ್​ ಆಗಿ ಆವತ್ತಿನಿಂದ ಯಾರಿಗೂ  ಬ್ರೋ ಅಂತ ಕರೆಯಲ್ಲ ಎಂದಿದ್ದಾರೆ.

ಸತ್ತರೂ ಬದುಕೋದು, ಸ್ಕೂಟರನ್ನು ವಿಮಾನದಂತೆ ಹಾರಿಸೋದು ಸಾಧ್ಯವಾಗಿಸೋ ಟಿವಿ ಸೀರಿಯಲ್ಸ್!

 

Latest Videos
Follow Us:
Download App:
  • android
  • ios