Asianet Suvarna News Asianet Suvarna News

'ಆನೆ' ಬಲ ಹೆಚ್ಚಾಯ್ತಾ, ಕಾರ್ತಿಕ್ ಲವ್ ಕಡ್ಮೆಯಾಯ್ತಾ? ಬಿಗ್‌ಬಾಸ್‌ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ ಸಂಗೀತಾ?

ಬಿಗ್‌ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಆಟ ಜೋರಾಗಿದೆ. ವೀಕೆಂಡ್ ಮುಗಿದು ಎಲಿಮಿನೇಶನ್ ಆದ ನಂತರ ಸ್ಪರ್ಧಿಗಳು ಮತ್ತಷ್ಟು ಚುರುಕಾಗಿದ್ದಾರೆ. ಟ್ರೋಫಿಯನ್ನು ಗೆಲ್ಲುವತ್ತ ಗಮನ ನೆಟ್ಟಿದ್ದಾರೆ. ಈ ಮಧ್ಯೆ ಹೊಸ ಪ್ರೋಮೋದಲ್ಲಿ ಸಂಗೀತಾ ಬಿಕ್ಕಿ ಬಿಕ್ಕಿ ಅಳ್ತಿರೋದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಇಷ್ಟಕ್ಕೂ ಕರುನಾಡ ಕ್ರಶ್ ಅತ್ತಿದ್ಯಾಕೆ?

Why Actress Sangeetha sringeri cried in Biggboss house, promo out, fans in shock Vin
Author
First Published Nov 20, 2023, 2:56 PM IST

ಬಿಗ್‌ಬಾಸ್ ಅಂದ್ರೇನೆ ಹೈಡ್ರಾಮಾ. ಅಲ್ಲಿ ನಗು-ಅಳು, ಹರಟೆ, ಮಾತುಕತೆ, ಜಗಳ, ಕಿತ್ತಾಟ, ಗುದ್ದಾಟ ಎಲ್ಲವೂ ಇದೆ. ಸ್ಪರ್ಧಿಗಳು ಚಡ್ಡಿದೋಸ್ತಿಗಳಂತೆ ಜೊತೆಯಲ್ಲೇ ಓಡಾಡುವುದರಿಂದ ತೊಡಗಿ, ಬದ್ಧವೈರಿಗಳಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆದಾಡಿಕೊಳ್ಳುತ್ತಾರೆ. ಒಮ್ಮೆ ಎಲ್ಲವನ್ನೂ ಗೆಲ್ಲುವ ಹುಮ್ಮಸ್ಸಾದರೆ, ಮತ್ತೊಮ್ಮೆ ಯಾವುದೂ ಬೇಡವೆನ್ನುವಷ್ಟು ರೇಜಿಗೆ. ದೊಡ್ಮನೆಯಲ್ಲಿ ಇವೆಲ್ಲವೂ ಸಾಮಾನ್ಯ. ಕೊನೆಗೆ ಮುಖ್ಯವಾಗುವುದು ಸ್ಪರ್ಧಿಗಳು, ಆಟ, ಟ್ರೋಫಿ ಮಾತ್ರ. ಹಾಗೆಯೇ ಕನ್ನಡ ಬಿಗ್‌ಬಾಸ್‌ನಲ್ಲಿ ಈ ಬಾರಿ ಆಟದ ಕಾವೇರಿದೆ. ಕಲರ್ಸ್‌ ಕನ್ನಡ ವಾಹಿನಿ ರಿಲೀಸ್ ಮಾಡೋ ಪ್ರೋಮೋಗಳು ಕುತೂಹಲವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. 

ಬಿಗ್‌ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಆಟ ಜೋರಾಗಿದೆ. ವೀಕೆಂಡ್ ಮುಗಿದು ಎಲಿಮಿನೇಶನ್ ಆದ ನಂತರ ಸ್ಪರ್ಧಿಗಳು ಮತ್ತಷ್ಟು ಚುರುಕಾಗಿದ್ದಾರೆ. ಟ್ರೋಫಿಯನ್ನು ಗೆಲ್ಲುವತ್ತ ಗಮನ ನೆಟ್ಟಿದ್ದಾರೆ. ಬಿಗ್ ಬಾಸ್ ಮನೆಯಿಂದ ಇಶಾನಿ ಔಟ್ ಆಗಿದ್ದಾರೆ. ನಿನ್ನೆ ನಡೆದ ಎಲಿಮಿನೇಶನ್‌ ಮೂಲಕ ಇಶಾನಿ ಬಿಗ್ ಬಾಸ್ ಕನ್ನಡ ಸೀಸನ್ 10ರ ಮನೆಯಿಂದ ಹೊರಗಡೆ ಹೋಗಿದ್ದಾರೆ. ಈ ಮೂಲಕ ಇನ್ನೊಬ್ಬರು ಸ್ಪರ್ಧಿ ಅಲ್ಲಿ ಕಡಿಮೆ ಆಗಿದ್ದಾರೆ. ಹೀಗಾಗಿಯೇ ಸ್ಪರ್ಧಿಗಳ (Contestants) ನಡುವೆ ಪೈಪೋಟಿ ಹೆಚ್ಚಾಗಿದೆ. ಮೈಂಡ್‌ಗೇಮ್ ಸಹ ಬಿರುಸಾಗಿ ನಡೀತಿದೆ. ಈ ಮಧ್ಯೆ ಹೊಸ ಪ್ರೋಮೋದಲ್ಲಿ ಸಂಗೀತಾ ಬಿಕ್ಕಿ ಬಿಕ್ಕಿ ಅಳ್ತಿರೋದು ಪ್ರೇಕ್ಷಕರ ಕುತೂಹಲವನ್ನು (Curiosity) ಹೆಚ್ಚಿಸಿದೆ.

ಬಡ್ಡಿ ಸಮೇತ ವಿನಯ್‌ಗೆ ವಾಪಸ್ ಬರುತ್ತೆ; ಕಾರ್ತಿಕ್ ಕ್ಟಾಪ್ಟನ್‌ ಆದ್ಮೇಲೆ ಸಂಗೀತಾ ಮೈಂಡ್ ಗೇಮ್ ಶುರುನಾ?

ಕಾರ್ತಿಕ್ ಮತ್ತು ಸಂಗೀತಾ ಶೃಂಗೇರಿ ನಡುವೆ ಕುಚ್‌ಕುಚ್‌
ಬಿಗ್ ಬಾಸ್ 10ನೇ ಸೀಸನ್‌ ಮೊದಲ ದಿನವೇ ಕಾರ್ತಿಕ್ ಮತ್ತು ಸಂಗೀತಾ ಶೃಂಗೇರಿ ನಡುವೆ ಬಹಳಷ್ಟು ಕೆಮೆಸ್ಟ್ರಿ ಕಂಡು ಬಂದಿತ್ತು. ಬಳಿಕವಂತೂ ಇಬ್ಬರ ನಡುವೆ ಭಾರೀ ಹೊಂದಾಣಿಕೆ(Understanding) ಏರ್ಪಟ್ಟಿತ್ತು. ಇಬ್ಬರೂ ಬೆಸ್ಟ್‌ ಫ್ರೆಂಡ್ಸ್ ಆಗಿ ಸದಾ ಜೊತೆಗೇ ಕಾಣಿಸಿಕೊಳ್ಳುತ್ತಿದ್ದರು.  ಬಿಗ್ ಬಾಸ್ ವೀಕ್ಷಕರು ಸಹ ಅವರಿಬ್ಬರೂ ಅಲ್ಲಿ ಮಾತ್ರ ಅಲ್ಲ, ಹೊರಗಡೆ ಬಂದಮೇಲೂ ಲವರ್ಸ್ ಆಗಿರುತ್ತಾರೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ. ಇದಲ್ಲದೆ ವಿನಯ್‌ ಗೌಡ ಜೊತೆ ಸಂಗೀತಾ ದೊಡ್ಡ ಫೈಟ್ ನಡೆದಾಗಿದೆ.  ಬಿಗ್‌ಬಾಸ್‌ ಈ ಸೀಸನ್‌ನ ಪ್ರಾರಂಭದ ದಿನಂದಿಗಲೂ ಸಂಗೀತಾ ವರ್ಸಸ್ ವಿನಯ್‌ ಜಟಾಪಟಿ (Fight) ನಡೆಯುತ್ತಲೇ ಇದೆ. ಹಳ್ಳಿಜೀವನದ ಟಾಸ್ಕ್‌ಗಳಲ್ಲಿಯಂತೂ ಅದು ಅತಿರೇಕಕ್ಕೇ ಹೋಗಿತ್ತು. ಬಳೆ, ಆನೆ ವಿಚಾರಕ್ಕೂ ಇಬ್ಬರ ನಡುವೆ ಜಟಾಪಟಿಯಾಗಿತ್ತು.

ಕಾಪ್ಟನ್‌ ಆದ ತಕ್ಷಣ ವಿನಯ್ ಆ ಅಧಿಕಾರವನ್ನು ತಮ್ಮ ವಿರೋಧಿಗಳ ಮೇಲೆ ಸೇಡು ತೀರಿಕೊಳ್ಳಲು ಬಳಸಿಕೊಂಡಿದ್ದರು. ಸಂಗೀತಾ ಜೈಲು ಸೇರುವಂತಾಗಿತ್ತು. ಈ ಕಾರ್ತಿಕ್ ಕ್ಯಾಪ್ಟನ್ ಆಗಿದ್ದಾರೆ. ಅಂದ್ರೆ ಸಂಗೀತಾರ ಬೆಸ್ಟ್ ಫ್ರೆಂಡ್ ಹಾಗೂ ಲವರ್ ಕ್ಯಾಪ್ಟನ್ ಆಗಿದ್ದಾರೆ ಎಂದಮೇಲೆ ಸಂಗೀತಾ ಸುಮ್ಮನಿರಲು ಹೇಗೆ ಸಾಧ್ಯ? ವಿನಯ್ ಮೇಲೆ ಮುಗಿಬೀಳುವುದು ಪಕ್ಕಾ ಎಂಬುದನ್ನು ಎಲ್ಲರೂ ನಿರೀಕ್ಷೆ ಮಾಡಿದ್ದಾರೆ. ಅದರಂತೆ ಅಲ್ಲಿ ನಡೆಯುತ್ತಿದೆ. ಸಂಗೀತಾ ಮತ್ತು ಕಾರ್ತಿಕ್ ಸೇರಿ, ವಿನಯ್ ತಮಗಿಬ್ಬರೂ ಈ ಮೊದಲು ಕೊಟ್ಟಿದ್ದ ತೊಂದರೆಗೆ ಬಡ್ಡಿ ಸೇರಿಸಿ ವಾಪಸ್ ಕೊಡುವುದು ಶತಃಸಿದ್ಧ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ 'ಆನೆ' ವಿನಯ್ ಗೌಡಗೆ ಪಟ್ಟಾಭಿಷೇಕ; ಸಂಗೀತಾ ಎದೆಯಲ್ಲಿ ಗಡಗಡ ನಡುಕ!

ಟಾಸ್ಕ್‌ ವಿಚಾರದಲ್ಲಿ ತನಿಶಾ ಜೊತೆ ಸಂಗೀತಾಗೆ ಮುನಿಸು
ಇದಲ್ಲದೆ, ಬಿಗ್‌ಬಾಸ್‌ ಫೈರ್ ಎಂದು ಕರೆಸಿಕೊಳ್ಳೋ ತನಿಶಾ ಕುಪ್ಪಂಡ ಜೊತೆಗೂ ಸಂಗೀತಾ ಶೃಂಗೇರಿ ಮುನಿಸಿಕೊಂಡಿದ್ದಾರೆ. ಟಾಸ್ಕ್ ವಿಚಾರದಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಪರಸ್ಪರ ಮಾತನಾಡದೆ ಇಬ್ಬರೂ ಮುನಿಸಿಕೊಂಡಿದ್ದಾರೆ. ಈ ಮಧ್ಯೆ ಸಂಗೀತಾ ಮೈಂಡ್‌ಗೇಮ್ ಆಡ್ತಾರೆ ಎಂದೇ ಹಲವು ಪ್ರೇಕ್ಷಕರು ಟೀಕಿಸಿದ್ದರು. ಕಾರ್ತಿಕ್ ಜೊತೆ ಚೆನ್ನಾಗಿರುವಂತೆ ನಾಟಕವಾಡುತ್ತಿದ್ದಾರೆ. ಏನೂ ಗೊತ್ತಿಲ್ಲದವರಂತೆ ಆಕ್ಟ್ ಮಾಡುತ್ತಾರೆ ಎಂಬ ಆರೋಪವೂ ಎದುರಾಗಿತ್ತು. ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ಸಹ ಈ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದರು. ಇವೆಲ್ಲದರ ಮಧ್ಯೆ ಸಂಗೀತ  ಶೃಂಗೇರಿ ವಾಶ್‌ರೂಮ್‌ಗೆ ಹೋಗಿ ಬಿಕ್ಕಿ ಬಿಕ್ಕಿ ಅತ್ತಿರೋದು ಯಾಕೆ ಅನ್ನೋದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

Follow Us:
Download App:
  • android
  • ios