Asianet Suvarna News Asianet Suvarna News

ನೀನು ಹೋದ ಮನೆ ನಾಶವಾಗುತ್ತೆ... ನಿನ್ನ ಹಳೆ ಪುರಾಣ ಬಯಲಾಗುತ್ತೆ.. ಮದ್ವೆಯಾದ್ರೆ ಹುಷಾರ್​...

ಸೀತಾ-ರಾಮ ರೊಮ್ಯಾನ್ಸ್ ಮೂಡ್​ನಲ್ಲಿ ಇರುವಾಗಲೇ ಸೀತಾಳಿಗೆ ಬೆದರಿಕೆ ಹಾಕಲಾಗಿದೆ. ಮದುವೆಯಾಗದಂತೆ ಎಚ್ಚರಿಕೆ ನೀಡಲಾಗಿದೆ. ಏನಿದು ಟ್ವಿಸ್ಟ್​?
 

While Seeta and Rama is in a romantic mood warning  given to Seeta on wall not to marry suc
Author
First Published Jun 20, 2024, 11:26 AM IST

ಸೀತಾರಾಮ ಸೀರಿಯಲ್​ ಈಗ ದಿನದಿಂದ ದಿನಕ್ಕೆ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಇತ್ತ ಎಲ್ಲಾ ಅಡೆತಡೆಗಳನ್ನು ಮೀರಿ ಸೀತಾರಾಮರ ಕಲ್ಯಾಣಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಅದ್ಧೂರಿ ನಿಶ್ಚಿತಾರ್ಥದ ಬಳಿಕ, ಈಗ ಮದುವೆಯ ರೆಡಿಯೂ ನಡೆಯುತ್ತಿದೆ. ಎಲ್ಲಾ ಶಾಪಿಂಗ್​ ಮಾಡಿಯಾಗಿದೆ. ಸೀತಾ ಮತ್ತು ರಾಮರ ಲವ್​ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಭಾವಿ ಪತಿ-ಪತ್ನಿಯ ರೊಮ್ಯಾನ್ಸ್​ ಕೂಡ ಜೋರಾಗಿಯೇ ಇದೆ. ಇದೀಗ ಸೀತಾಳನ್ನು ಬಿಟ್ಟು ಇರದ ರಾಮ್​ ಅವಳ ಮನೆಗೆ ಕಳ್ಳನ ರೀತಿ ಬಂದಿದ್ದಾನೆ. ಯಾರೋ ಮನೆಯನ್ನು ಹೊಕ್ಕಿದ್ದಾರೆಂದು ಸಿಹಿ ಮತ್ತು ಅವಳ ಗ್ಯಾಂಗ್ ಹುಡುಕುತ್ತಾ ಬರುತ್ತಾರೆ. ಆದರೆ ರಾಮ್​ ಸೀತಾಳ ಚಾದರ್​ ಅಡಿ ಅಡಗಿ ಕುಳಿತುಕೊಳ್ಳುತ್ತಾನೆ. ಹೀಗೆ ಸೀತಾ-ರಾಮರ ಲವ್​ ಸ್ಟೋರಿ ಮುಂದುವರೆದಿದೆ. 

ಆದರೆ ಅದೇ ಇನ್ನೊಂದೆಡೆ, ಸೀತಾಳ ಮನೆಯ ಗೋಡೆಯ ಮೇಲೆ ಆಗಂತುಕನೊಬ್ಬ ಬೆದರಿಕೆ ಬರಹ ಬರೆದಿದ್ದಾನೆ. ನೀನು ಹೋದ ಮನೆ ನಾಶವಾಗುತ್ತದೆ. ಮದುವೆಯಾದ್ರೆ ನಿನ್ನ ಹಳೆಯ ಪುರಾಣ ಬಯಲಾಗುತ್ತದೆ. ಮದ್ವೆಯಾಗಬೇಡ ಎಂದು ಅದರ ಮೇಲೆ ಬರೆಯಲಾಗಿದೆ. ಇದು ಸೀತಾ ಮತ್ತು ರಾಮ್​ ಇಬ್ಬರಿಗೂ ಗೊತ್ತಿಲ್ಲ. ಸದ್ಯ ಮುಂದೇನು? ಸೀತಾರಾಮರ ಕಲ್ಯಾಣ ಆಗುತ್ತಾ ಇಲ್ವಾ ಎನ್ನುವುದು ಈಗಿರುವ ಪ್ರಶ್ನೆ. ಅಷ್ಟಕ್ಕೂ ಸೀತಾ ತನ್ನ ಇತಿಹಾಸದ ಬಗ್ಗೆ ಇದುವರೆಗೆ ಬಾಯಿಬಿಟ್ಟಿಲ್ಲ. ಏಕೆಂದರೆ ಇಡೀ ಸೀರಿಯಲ್​ನಲ್ಲಿ ಇರುವ ಸಸ್ಪೆನ್ಸ್ ಇದೊಂದೇ. ಸಿಹಿ ಯಾರು? ಸೀತಾಳಿಗೆ ನಿಜಕ್ಕೂ ಮದ್ವೆಯಾಗಿತ್ತಾ? ಸಿಹಿ ಅವಳ ಮಗಳಾ ಎನ್ನುವುದು ಬಯಲಾಗಿಲ್ಲ. 

ಅರೆರೆ.. ಇದೇನು ಹೊಸ ಟ್ವಿಸ್ಟ್​? ಗೌತಮ್​- ಭೂಮಿಕಾ ಮನೆಯಲ್ಲಿ ಸೀತಾ-ಸಿಹಿ!

  ಸೀತಾ ಮತ್ತು ಸಿಹಿಯ ಹಿನ್ನೆಲೆಯನ್ನು ಇದುವರೆಗೆ ಗುಟ್ಟಾಗಿ ಇಡಲಾಗಿದೆ. ಸಿಹಿಯ ಅಪ್ಪ ಯಾರು? ನಿಜಕ್ಕೂ ಸಿಹಿ ಸೀತಾಳ ಮಗಳೇನಾ? ಹಾಗೊಂದು ವೇಳೆ ಹೌದಾಗಿದ್ದರೆ ಸೀತಾಳ ಗಂಡ ಯಾರು? ಅವನು ಬದುಕಿದ್ದಾನಾ? ಡಿವೋರ್ಸ್​ ಆಗಿದ್ಯಾ? ಸತ್ತು ಹೋಗಿದ್ದಾನಾ ಯಾವುದಕ್ಕೂ ಇದುವರೆಗೆ ಸೀರಿಯಲ್​ನಲ್ಲಿ ಉತ್ತರ ಸಿಗಲಿಲ್ಲ. ಸಿಹಿಯ ಹುಟ್ಟಿನ ರಹಸ್ಯ ಇನ್ನುಮುಂದೆ ತನ್ನಿಂದ ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗ್ತಿಲ್ಲ ಎಂದು ಹಲವು ಬಾರಿ ಸೀತಾ ಅಂದುಕೊಂಡು ರಾಮ್​ಗೆ ವಿಷಯ ತಿಳಿಸಲು ಹೋಗಿದ್ದಳು. ಆದರೆ ನಿನ್ನ ಇತಿಹಾಸ ನನಗೆ ಬೇಡ, ಸಿಹಿಯ ಬಗ್ಗೆ ತಿಳಿದುಕೊಂಡು ನನಗೆ ಏನೂ ಆಗುವುದು ಇಲ್ಲ, ಅವಳು ಎಂದಿಗೂ ನನ್ನ ಮಗಳೇ ಎಂದಿದ್ದಾನೆ ರಾಮ್​. 

ಇದರ ನಡುವೆಯೇ ಮದುವೆಗೆಂದು ಆಭರಣದ ಅಂಗಡಿಗೆ ಹೋದಾಗ  ಯುವತಿಯೊಬ್ಬಳನ್ನು ಸೀತಾ ಗಾಬರಿಯಾಗಿದ್ದಳು. ಇವಳು ಯಾರು ಎನ್ನುವುದು ಈಗಿರುವ ಪ್ರಶ್ನೆ.   ಅನಂತ ಲಕ್ಷ್ಮಿಯವರ ಕುರಿತು ರಾಮ್​ ಹತ್ರ ಹೇಳಬೇಕಾ ಎಂದು ಯುವತಿಯೊಬ್ಬಳು ತನ್ನಷ್ಟಕ್ಕೇ ತಾನು ಮಾತನಾಡಿಕೊಂಡಿದ್ದಾಳೆ. ಅವಳನ್ನು ನೋಡಿದ ಸೀತಾಳಿಗೆ ಶಾಕ್​ ಆಗಿತ್ತು. ಇವೆಲ್ಲಾ ಪ್ರಶ್ನೆಗಳು ಸದ್ಯ ಸೀರಿಯಲ್​ನಲ್ಲಿ ಬಾಕಿ ಇವೆ. ಈ ಮಧ್ಯೆ, ಗೋಡೆ ಬರಹ ನೋಡಿ ಫ್ಯಾನ್ಸ್​ ಸೀತಾರಾಮ ಕಲ್ಯಾಣ ಆಗುವುದು ಡೌಟ್​ ಎನ್ನುತ್ತಿದ್ದಾರೆ. ಅಷ್ಟಕ್ಕೂ ಸೀತಾ ತನ್ನ ಇತಿಹಾಸ ಹೇಗಾದರೂ ಮಾಡಿ ಹೇಳಬೇಕಿತ್ತು, ಇಲ್ಲದಿದ್ದರೆ ಮದ್ವೆಯಾದ್ಮೇಲೆ ಸುಮ್ಮನೇ ತೊಂದರೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ ಕೂಡ. 

ರಾತ್ರಿಯ ವೇಳೆ ರಾಜಿಯ ಮನೆಗೆ ಬಂದ ಹೆಣ್ಣು ದೆವ್ವ! ಲೇಡಿ ವಿಲನ್​ ಸುಸ್ತೋ ಸುಸ್ತು...


Latest Videos
Follow Us:
Download App:
  • android
  • ios