Asianet Suvarna News Asianet Suvarna News

ಒದ್ದೆ ಕೂದಲಲ್ಲಿ ಬಂದು ಗಂಡನಿಗೆ ಟೀ ಕುಡಿಸಿ ನೋಡಿ... ಕೌನ್​ ಬನೇಗಾ ಕರೋರ್​ಪತಿಯಲ್ಲಿ ಅಮಿತಾಭ್​ ಸಲಹೆ!

ಕೌನ್​ ಬನೇಗಾ ಕರೋರ್​ಪತಿಯಲ್ಲಿ ಅಮಿತಾಭ್​ ಬಚ್ಚನ್​ ಅವರು ಸ್ಪರ್ಧಿಯೊಬ್ಬರ ಪತ್ನಿಗೆ ಒದ್ದೆ ಕೂದಲಲ್ಲಿ ಬಂದು ಗಂಡನಿಗೆ ಟೀ ಕುಡಿಸಿ ನೋಡಿ ಎಂದು ಸಲಹೆ ಕೊಟ್ಟರು. ಏಕಿದು? 
 

Amitabh Bachchan tells contestant wife Once you wet your hair give husband a cup of tea suc
Author
First Published Nov 25, 2023, 1:02 PM IST

ಅಮಿತಾಭ್​ ಬಚ್ಚನ್ (Amitabh Bachchan) ಬಾಲಿವುಡ್​ ಕಂಡ ಅಪರೂಪದ ನಟ. ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದಿಂದ ಹಿಡಿದು ಈ 80ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. 1970ರ ದಶಕದಲ್ಲಿ ಜಂಜೀರ್, ದೀವಾರ್, ಆನಂದ್, ರೋಟಿ ಕಪಾಡಾ ಮತ್ತು ಮಕಾನ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಮಿತಾಭ್​ ಬಚ್ಚನ್​ ಅವರಿಗೆ ಈ ವಯಸ್ಸಿನಲ್ಲಿಯೂ ಉತ್ಸಾಹ ಬತ್ತಿಲ್ಲ. ಅವರ ಎನರ್ಜಿ ಇನ್ನೂ ಹಾಗೆಯೇ ಇದೆ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ.  80ರ ಹರೆಯದಲ್ಲಿ ಬಿಗ್ ಬಿ ಫುಲ್ ಎನರ್ಜಿಯಿಂದ ಕಾಣಿಸಿಕೊಳ್ಳುತ್ತಿದ್ದಾರೆ. ಕೂಲಿ ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್​ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್​ ಬಚ್ಚನ್​ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ. 

ಇದೀಗ ಕೌನ್​ ಬನೇಗಾ ಕರೋರ್​ಪತಿ (KBC)ಯ 15ನೇ ಸೀಸನ್​ನಲ್ಲಿ ಅದೇ ಉತ್ಸಾಹದಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳಷ್ಟೇ 81ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಅಮಿತಾಭ್​ ಅವರ ಹಾಸ್ಯಪ್ರಜ್ಞೆ ಮಾತ್ರ ಯಾವತ್ತಿಗೂ ನಿಲ್ಲುವುದೇ ಇಲ್ಲ. ಕೌನ್​ ಬನೇಗಾ ಕರೋರ್​ಪತಿಯಲ್ಲಿಯೂ ಅವರು ಸದಾ ಸ್ಪರ್ಧಿಗಳನ್ನು ನಗಿಸುತ್ತಲೇ ಇರುತ್ತಾರೆ. ಇದೀಗ ಸ್ಪರ್ಧಿಯೊಬ್ಬರ ಪತ್ನಿಗೆ ಟಿಪ್ಸ್​ ನೀಡುವ ಮೂಲಕ ಜನರನ್ನು ಇನ್ನಷ್ಟು ನಕ್ಕು ನಗಿಸಿದ್ದಾರೆ. 

KBC ವೇದಿಕೆಯಲ್ಲಿಯೇ ಕಣ್ಣೀರು ಹಾಕಿದ ಅಮಿತಾಭ್​: ಅದೆಷ್ಟು ಅಂತ ನನ್ನ ಅಳಿಸುವಿರಿ ಎಂದ ಬಿಗ್​-ಬಿ

ರೂಪಕ್​ ಕುಮಾರ್​ ಎನ್ನುವ ಸ್ಪರ್ಧಿ  'ಫಾಸ್ಟೆಸ್ಟ್ ಫಿಂಗರ್ ಫಸ್ಟ್' ಸುತ್ತಿನ ನಂತರ ಹಾಟ್‌ಸೀಟ್ ನಲ್ಲಿ ಕುಳಿತುಕೊಂಡರು.  ಬಿಹಾರದ ಬೇಗುಸರೈ ಮೂಲದವರಾದ ಇವರು,  ಅಸ್ಸಾಂನ ಪೆಟ್ರೋಲಿಯಂ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಂತರ ಹೀಗೆ ಮಾತನಾಡುವ ಸಮಯದಲ್ಲಿ, ರೂಪಕ್​ ಅವರು, ಅಮಿತಾಭ್​ ಬಚ್ಚನ್​ ಮತ್ತು ಜಯಾ ಬಾಧುರಿ ಅವರ ಚಿತ್ರ ಅಭಿಮಾನ್​ ನೆನಪಿಸಿಕೊಂಡರು. ಅಭಿಮಾನ್​ ಚಿತ್ರದಲ್ಲಿ  ಜಯಾ ಬಚ್ಚನ್ ಅವರು ಒದ್ದೆಯಾದ ಕೂದಲಿನಲ್ಲಿ ಟೀ ಕಪ್​ ಹಿಡಿದುಕೊಂಡು ಅಮಿತಾಭ್​ ಬಳಿ ಬಂದು ಪ್ರೇಮದ ನೋಟವನ್ನು ಬೀರುವ ದೃಶ್ಯವನ್ನು ವರ್ಣಿಸಿದ ರೂಪಕ್​ ಅವರು ಆ ದೃಶ್ಯವು ನನಗೆ ತುಂಬಾ ಇಷ್ಟ ಎಂದರು.
 
 ಹೀಗೆ ಹೇಳುತ್ತಿದ್ದಂತೆಯೇ ಅವರ ಪತ್ನಿ ಸರಿತಾ ಅವರತ್ತ ಹೊರಳಿದ ಅಮಿತಾಭ್​ ಬಚ್ಚನ್​ ಅವರು, ನೀವೂ ಒಮ್ಮೆ ಕೂದಲು ಒದ್ದೆ ಮಾಡಿಕೊಂಡು ಟೀ ಕಪ್​ ಹಿಡಿದು ಪತಿಯ ಬಳಿ ಬಂದು ಅವರ ಆಸೆ ಈಡೇರಿಸುವಂತೆ ಹೇಳಿದಾಗ, ಅಲ್ಲಿದ್ದವರೆಲ್ಲಾ ಗೊಳ್ಳೆಂದು ನಕ್ಕರು. ಆಗ ಸರಿತಾ ಅವರು, ಪತಿ ಟೀ ಕುಡಿಯುವುದೇ ಇಲ್ಲ ಎಂದರು. ಕೂಡಲೇ ರೂಪಕ್​ ಅವರು, ಈಗ ಬೇಕಿದ್ರೆ ಟೀ ಕುಡಿಯುತ್ತೇನೆ ಎಂದಾಗ, ಅಮಿತಾಭ್​ ತಮ್ಮ ಎಂದಿನ ಹಾಸ್ಯದ ಧಾಟಿಯಲ್ಲಿ ನೀವು ಕೂದಲು ಒದ್ದೆ ಮಾಡಿಕೊಂಡು ಟೀ ಕಪ್​ ಹಿಡಿದು ಬನ್ನಿ, ಆಮೇಲೆ ನೋಡಿ ಬೇಡ ಎಂದರೂ ಮೂರ್ನಾಲ್ಕು ಕಪ್​ ಟೀ ಅವರ ಹೊಟ್ಟೆಗೆ ಹೋಗುತ್ತದೆ ಎಂದು ತಮಾಷೆ  ಮಾಡಿದರು. 

ಇಂಥ ಪತ್ನಿಯರೂ ಇರ್ತಾರಾ? ಸವತಿ ಹೇಮಾ ಮಾಲಿನಿಯನ್ನೇ ಹಾಡಿ ಹೊಗಳಿದ್ದ ಧರ್ಮೇಂದ್ರ ಮೊದಲ ಪತ್ನಿ!

Follow Us:
Download App:
  • android
  • ios