Asianet Suvarna News Asianet Suvarna News

ಕತ್ತಲ ರೂಮಲ್ಲಿ ಭುವಿ, ಹರ್ಷ ರೊಮ್ಯಾಂಟಿಕ್ ಮೂಡ್: ಇದಾಗಿ ಹರ್ಷ ಅರೆಸ್ಟ್ ಆಗೋದು ಗ್ಯಾರಂಟಿ!

ಒಂದು ಕಡೆ ರೊಮ್ಯಾಂಟಿಕ್ ಮೂಡ್, ಇನ್ನೊಂದು ಕಡೆ ಮರ್ಡರ್ ಮಿಸ್ಟ್ರಿ ಹೀಗೆ ಇಂಟರೆಸ್ಟಿಂಗ್ ಕತೆಯೊಂದಿಗೆ ಸಾಗುತ್ತಿದೆ ಕನ್ನಡತಿ ಸೀರಿಯಲ್. ಮುಂದೆ ಹರ್ಷನ ಅರೆಸ್ಟ್ ಆಗೋದೂ ಬಹುತೇಕ ಖಚಿತವಾಗಿರೋ ಕಾರಣ ಅಭಿಮಾನಿಗಳು ಎದೆ ಗಟ್ಟಿ ಮಾಡ್ಕೊಳ್ಬೇಕು.

 

What happened in Kannadathi serial between Harsha and Bhuvi
Author
Bengaluru, First Published Oct 23, 2021, 3:10 PM IST
  • Facebook
  • Twitter
  • Whatsapp

ಕಲರ್ಸ್ ಕನ್ನಡದಲ್ಲಿ 'ಕನ್ನಡತಿ' (Kannadathi) ಸೀರಿಯಲ್ (serial) ಬಹಳ ಜನಪ್ರಿಯವಾಗುತ್ತಿದೆ. ಭುವಿ ಅಲಿಯಾಸ್ ಭುವನೇಶ್ವರಿ ಕಂ ಸೌಪರ್ಣಿಕಾ ಪಾತ್ರದಲ್ಲಿ ರಂಜನಿ ರಾಘವನ್ ನಟಿಸುತ್ತಿದ್ದಾರೆ. ಹರ್ಷ ಎಂಬ ನಾಯಕ ಪಾತ್ರದಲ್ಲಿ ಕಿರಣ್ ರಾಜ್ ಕಾಣಿಸಿಕೊಂಡಿದ್ದಾರೆ. ರಂಜನಿ, ಭುವಿ ಪಾತ್ರದಲ್ಲಿ ಕನ್ನಡ ಲೆಕ್ಚರರ್ ಆಗಿ ಅಚ್ಚಗನ್ನಡದ ಮೂಲಕ ಗಮನ ಸೆಳೆದರೆ ಹರ್ಷ ಮಾಲಾ ಕೆಫೆಯ ಸಿಇಓ ಆಗಿದ್ದಾನೆ.

ಪಾರ್ಟಿ, ಸ್ಟೈಲು ಅಂತೆಲ್ಲ ಐಷಾರಾಮಿ ಜೀವನ ನಡೆಸುತ್ತಿದ್ದ ಹರ್ಷ ಭುವಿಯ ಜೊತೆಗಿನ ಗೆಳೆತನದಿಂದ ಸಂಪೂರ್ಣ ಬದಲಾಗಿದ್ದಾನೆ. ಒಳ್ಳೆ ಹುಡುಗನಾಗಿ ರಂಜನಿಯ ಪ್ರೀತಿ ಪಡೆಯಲು ಹಪಿಹಪಿಸುತ್ತಿದ್ದಾನೆ. ಇದೀಗ ಜೋಡಿಗೆ ಮತ್ತೊಂದು ಕಂಟಕ ಎದುರಾಗಿದೆ. ಅದಕ್ಕೆ ಸಾಕ್ಷಿಯಾಗಿ ಭುವಿಯ ಅಚ್ಚಬಿಳಿಯ ಬಟ್ಟೆಯ ಮೇಲೆ ಕೊಚ್ಚೆ ಸುರಿದಿರುವುದನ್ನು ಸೀರಿಯಲ್ ನಲ್ಲಿ ತರಲಾಗಿದೆ.

ಭುವಿ - ಹರ್ಷನ ರೊಮ್ಯಾಂಟಿಕ್ ಸಮಯ

ಇದನ್ನು ಗಮನಿಸಿ ಕತೆ ಹೀಗಿರಬಹುದು ಅಂತ ಕನ್ನಡತಿ ಅಭಿಮಾನಿಗಳು ಗೆಸ್ ಮಾಡುತ್ತಿದ್ದಾರೆ. ಒಂದು ವೇಳೆ ಗೆಸ್ ಮಾಡಿದಂತಾದರೆ ಹರ್ಷ ಅರೆಸ್ಟ್ ಆಗೋದು ಗ್ಯಾರಂಟಿ. ಈಗಾಗಲೇ ಆತನಿಗಾಗಿ ಮನೆಯವರು ಕಾಯುತ್ತಿದ್ದಾರೆ. ಪೊಲೀಸರು ಹರ್ಷನ ಮನೆಗೆ ವಿಚಾರಣೆಗೆಂದು ಬಂದಿದ್ದಾರೆ. ಇತ್ತ ವಿಲನ್, ಹರ್ಷನ ಕಸಿನ್ ಆದಿಯ ಪತ್ನಿ ಸಾನಿಯಾ ತಾನು ಮಾಡಿಸುತ್ತಿರುವ ಮರ್ಡರ್ ನೊಳಗೆ ಹರ್ಷನನ್ನು ಸಿಲುಕಿಸಲು ಪ್ಲಾನ್ ಮಾಡುತ್ತಿರುವುದು ಅವಳ ಮುಖಭಾವದಿಂದಲೇ ಸ್ಪಷ್ಟವಾಗಿ ತಿಳಿಯುತ್ತದೆ.

'ಈ ತರಹ ಬಂದ್ರೆ  y + ಸೆಕ್ಯೂರಿಟಿ ಏನಕ್ಕೂ ಸಾಕಾಗಲ್ಲ!'

ಹರ್ಷ ಭುವಿಗೆ ಪ್ರೊಪೋಸ್ ಮಾಡಲು ಆಕೆಯ ಬರ್ತ್ ಡೇ ದಿನವನ್ನೇ ಆರಿಸಿಕೊಂಡಿದ್ದಾನೆ. ಬರ್ತ್ ಡೇ ಒಂದು ದಿನದ ಕತೆಯನ್ನು ಕಳೆದೊಂದು ತಿಂಗಳಿಂದ ಪ್ರಸಾರ ಮಾಡಲಾಗ್ತಾ ಇದೆ. ಇದರ ಜೊತೆಗೆ ಕ್ರೈಮ್ ಕತೆ, ವರೂಧಿನಿಯ ಕತೆಯನ್ನು ತಂದು ಹರ್ಷನ ಪ್ರೊಪೋಸ್‌ಅನ್ನು ಮುಂದೂಡಲಾಗ್ತಾ ಇದೆ. ಇದೀಗ ಸೀರಿಯಲ್‌ನಲ್ಲಿ ಮರ್ಡರ್ ಮಿಸ್ಟ್ರಿಯ ಎಳೆಯೂ ಸೇರಿಕೊಂಡಿದೆ. ಇದರಲ್ಲಿ ಮಾಲಾ ಕೆಫೆಯ ಮುಖ್ಯಸ್ಥೆ ರತ್ನಮಾಲಾ ಅವರ ಇಡೀ ಆಸ್ತಿ ಇರುವುದು ಸೌಪರ್ಣಿಕಾ ಹೆಸರಿಗೆ.

ಆ ಸೌಪರ್ಣಿಕಾ ಮತ್ಯಾರೂ ಅಲ್ಲ, ಹರ್ಷ ಇದೀಗ ಪ್ರೀತಿಸುತ್ತಿರುವ ಭುವಿಯೇ. ಆದರೆ ಅಮ್ಮಮ್ಮ ತನ್ನೆಲ್ಲ ಆಸ್ತಿಯನ್ನು ತಾನೀಗ ಪ್ರೀತಿಸುತ್ತಿರುವ ಹುಡುಗಿಯ ಹೆಸರಿಗೆ ಬರೆದಿರುವುದು ಹರ್ಷನಿಗಾಗಲೀ ಭುವಿಗಾಗಲಿ ತಿಳಿದಿಲ್ಲ. ಹರ್ಷನಿಗೆ ತನ್ನ ಲಾಯರ್ ಮುಖಾಂತರ ಸೌಪರ್ಣಿಕಾ ಹೆಸರಿನಲ್ಲಿ ಏನೋ ಇದೆ ಅನ್ನೋ ಹಿಂಟ್ ಸಿಕ್ಕಿದೆ. ಅದು ಸಾನಿಯಾಗೂ ತಿಳಿದಿದೆ. ಇಷ್ಟರಲ್ಲಾಗಲೇ ಸಿಕ್ಕಾಪಟ್ಟೆ ಮಾತಾಡೋ ಸೌಪರ್ಣಿಕಾ ಎಂಬ ಮತ್ತೊಂದು ಹುಡುಗಿ ಎಂಟ್ರಿ ಆಗಿದೆ. ಆಕೆಯೇ ಹರ್ಷ ಮದುವೆ ಆಗಬೇಕಿರುವ ಹುಡುಗಿ ಎಂದುಕೊಂಡಿರುವ ಸಾನಿಯಾ ಆಕೆಯ ಜೊತೆಗೆ ಫ್ರೆಂಡ್ ಶಿಪ್ ಟ್ರೈ ಮಾಡ್ತಾಳೆ.

ಆಕೆ ಸಾನಿಯಾಗೆ ಚಪ್ಪಲಿ ತೋರಿಸಿದಾಗ ಅಪಮಾನದಿಂದ ಸಿಟ್ಟಾಗಿ ಆಕೆಯ ಮರ್ಡರ್ ಗೆ ಸುಫಾರಿ ಕೊಟ್ಟಿರುತ್ತಾಳೆ. ಇತ್ತ ಸಾಕಷ್ಟು ಹೊಂಚು ಹಾಕಿರುವ ಹಂತಕರು ಆಕೆಯನ್ನು ಹುಡುಕಿ ಪಾಳುಕಟ್ಟಡದೊಳಗೆ ತಂದಿದ್ದಾರೆ. ಹಂತಕ ಆಕೆಗೆ ಪಿಸ್ತೂಲಿಂದ ಗುಂಡೇಟು ಹೊಡೆದಿದ್ದಾನೆ. ಆ ಗುಂಡು ಆಕೆಗೆ ತಗುಲಿ ಆಕೆ ರಕ್ತದ ಮಡುವಲ್ಲಿ ಬಿದ್ದಿದ್ದಾಳೆ. ಮುಂದೆ ಆಕೆ ಸಾಯ್ತಾಳೆ ಅನ್ನೋದನ್ನು ಇನ್ನೊಂದೆಡೆ ತಂದಿದ್ದಾರೆ.

ಊರ್ಫಿ ರಸ್ತೆಗಿಳಿದ ಅವತಾರ ನೋಡಿ ದಿಕ್ಕೇ ತೋಚದಂತೆ ನಿಂತ ಮಹಿಳೆ!

ಹರ್ಷ ಭುವಿಗೆ ಪ್ರೊಪೋಸ್ ಮಾಡುವ ಮುನ್ನ ದೇವಸ್ಥಾನಕ್ಕೆ ಬಂದಿದ್ದಾಗ ಅಲ್ಲಿ ದೇವಿ ಭವಿಷ್ಯ ನುಡಿದಿದ್ದಾಳೆ - ಆ ಪ್ರಕಾರ ಹರ್ಷ ಒಂದನ್ನು ಪಡೆದುಕೊಂಡು ಮತ್ತೊಂದನ್ನು ಕಳೆದುಕೊಳ್ಳಲಿದ್ದಾನೆ. ಆತ ಕಳೆದುಕೊಳ್ಳುವುದು ಅಮ್ಮಮ್ಮನನ್ನು ಅಂತ ಅಂದಾಜಿಸಲಾಗಿತ್ತು. ಆದರೆ ಈಗಿನ ಕತೆಯ ಎಳೆ ನೋಡಿದರೆ ಬಹುಶಃ ಮರ್ಯಾದೆಯನ್ನು ಅಂತ ಅನಿಸುತ್ತೆ. ಸೌಪರ್ಣಿಕಾ ಈಗಾಗಲೇ ನಾನು ಸತ್ತರೆ ಅದಕ್ಕೆ ಹರ್ಷನೇ ಕಾರಣ ಅಂತ ರೆಕಾರ್ಡ್ ಮಾಡಿ ಫೋನನ್ನು ಕಿಟಕಿಯಾಚೆ ಎಸೆದಿದ್ದಾಳೆ. ಅದು ಪೊಲೀಸರಿಗೆ ಸಿಕ್ಕಿದೆ.

ನನಗೆ ತಿಳಿದಿರುವ ಅತ್ಯಂತ ಕರುಣಾಳು ಆತ್ಮ: ರಕ್ಷಿತಾ ಪ್ರೇಮ್

ಒಂದು ವೇಳೆ ಆಕೆ ಸತ್ತರೆ ಹರ್ಷ ಜೈಲು ಸೇರೋದು ಖಚಿತ. ಆಗ ಮಾಲಾ ಕೆಫೆ ಸಿಇಓ ಮರ್ಯಾದೆ ಮಣ್ಣುಪಾಲಾಗೋದು ನಿಜ. ಇದನ್ನೆಲ್ಲ ನೋಡಿ ಅಮ್ಮಮ್ಮ ಉಳಿಯೋದೂ ಅನುಮಾನ. ಈ ಎಲ್ಲ ಸಂಕಷ್ಟಗಳ ನಡುವೆ ಭುವಿ ಹರ್ಷನ ಪ್ರೀತಿ ಹೇಗೆ ಮುಂದುವರಿಯಬಹುದು ಅನ್ನೋದು ಮತ್ತೊಂದು ಡೌಟು. ಆದರೆ ತುಂಬ ಒಳ್ಳೆಯ ಹುಡುಗಿ ಭುವಿ ಈ ಎಲ್ಲ ಸಂಕಷ್ಟದಿಂದ ಹರ್ಷನನ್ನು ಪಾರು ಮಾಡಿ ಮುಂದೆ ಮಾಲಾ ಕೆಫೆಯ ಒಡತಿಯೂ ಆಗೋದು ಕತೆಯ ಮುಂದಿನ ಬೆಳವಣಿಕೆ ಇರಬಹುದು.

ಈವರೆಗೆ ಇಂಥಾ ಊಹೆಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಕನ್ನಡತಿ ಶಾಕ್ ಕೊಡುತ್ತಿದೆ. ಆದರೆ ಸದ್ಯದ ಕತೆ ಗಮನಿಸಿದರೆ ಸಣ್ಣ ಪುಟ್ಟ ಬದಲಾವಣೆಗಳಿದ್ದರೂ ಸೀರಿಯಲ್ ಕತೆ ಕೊಂಚಮಟ್ಟಿಗೆ ಹೀಗೇ ಮುಂದುವರಿಯಬಹುದು ಅನಿಸುತ್ತೆ.

Follow Us:
Download App:
  • android
  • ios