ಬಿಗ್ ಬಾಸ್ ಸೀಸನ್ 8 ಜೋಶ್‌ಫುಲ್ ಆಗಿ ಆರಂಭವಾಗಿದೆ. ಮನೆಯೊಳಗೆ ಸದಸ್ಯರು ಎಂಟ್ರಿ ಕೊಟ್ಟು ಆಗಲೇ ಒಂದು ವಾರ ಕಳೆದಿದೆ. ಅಷ್ಟರಲ್ಲಿ ವೀಕೆಂಡ್ ಬಂತು.

ಕಿಚ್ಚ ಸುದೀಪ್ ಸ್ಟೈಲಿಶ್ ಉಡುಗೆಯಲ್ಲಿ ಮನೆಮಂದಿಯ ಜೊತೆಗೆ ಮಾತಿಗೆ ನಿಂತರು. ಬಿಗ್‌ ಬಾಸ್ ಹೋಸ್ಟ್ ಸುದೀಪ್‌ ಅವರನ್ನು ಕಂಡ್ರೆ ಮನೇಲಿದ್ದೋರಿಗೆಲ್ಲ ಕುಣಿಯೋವಷ್ಟು ಕುಶಿ. ಆದ್ರೆ ರಘು ಮಾತ್ರ ಮನೆಯವ್ರನ್ನ ನೆನೆಸಿಕೊಂಡು ಕಣ್ಣೀರಾಗ್ತಾರೆ.

ನ್ಯೂಯಾರ್ಕ್‌ನಲ್ಲಿ ಹೊಸ ರೆಸ್ಟೋರೆಂಟ್ ತೆರೆದ ಬಾಲಿವುಡ್ ಬ್ಯೂಟಿ ...

ಸದ್ಯ ಬಿಗ್‌ ಬಾಸ್ ಮನೆಯಿಂದಾಚೆ ಬರೋರ ಲೀಸ್ಟ್‌ನಲ್ಲಿ ಅವರ ಹೆಸರೂ ಇದೆ. ಎಷ್ಟೇ ಸಬೂಬು ಹೇಳಿದ್ರೂ ಅವರ ಮುಖದಲ್ಲಿ ಮಡುಗಟ್ಟಿದ ದುಃಖ ನೋಡಿದ್ರೆ ಅವರು ಈ ಬಾರಿಯೋ, ಸದ್ಯದಲ್ಲೋ ಮನೆಯಿಂದಾಚೆ ಹೊರಡೋದು ಪಕ್ಕಾ ಅನಿಸ್ತಿದೆ.

ಈ ಸಲದ ಸುದೀಪ್ ಮಾತು ಶುಭಾ ಪೂಂಜಾ ಅವರಿಂದಲೇ ಶುರುವಾಯ್ತು. ಚಿಕ್ಕ ಮಗುವಿನ ಖುಷಿಯಲ್ಲಿ ಮೇಲೆದ್ದ ಶುಭಾ ಬಿಗ್ ಬಾಸ್ ಮನೆ ಬಗ್ಗೆ ಇದ್ದ ಭಯವೆಲ್ಲ ಮಾಯವಾಗಿದೆ. ಹೀಗೆ ಅಂತ ಗೊತ್ತಿದ್ದಿದ್ರೆ ಮೊದಲ ಸಲ ಕರೆದಾಗಲೇ ಬಂದುಬಿಡ್ತಿದ್ದೆ ಅಂದರು.

ಆದರೆ ಸ್ಪರ್ಧಿಗಳ ಜೊತೆಗೆ ಕಿಚ್ಚನ ಮಾತುಕತೆ ಬಹಳ ಇಂಟೆರೆಸ್ಟಿಂಗ್ ಘಟ್ಟಕ್ಕೆ ಬಂದು ನಿಂತಿದ್ದು ಅಡುಗೆ ಮನೆ ವಿಚಾರಕ್ಕೆ. ಆರಂಭದಲ್ಲಿ ಅಷ್ಟಕ್ಕೂ ಅಲ್ಲಿ ನಡೆದದ್ದೇನು ಅನ್ನೋದನ್ನ ತೋರಿಸಲಾಯ್ತು. ಸದ್ಯಕ್ಕೆ ನಾಮಿನೇಟ್ ಆಗಿರುವ ಧನುಶ್ರೀ ಗ್ರೂಪಿಂದಾಚೆ ಇದ್ದಾರೆ.

ನಾನಿನ್ನು 'ಅಗ್ಗ' ಅಲ್ಲ: ಐಟಿ ರೇಡ್‌ ಬಗ್ಗೆ ತಾಪ್ಸಿ ವ್ಯಂಗ್ಯ! ...

ಮನೆಮಂದಿಗೆ ಬೇಕಾದ ಅಷ್ಟೂ ತರಕಾರಿಗಳನ್ನು ಧನುಶ್ರೀ ಅವರೇ ಕಟ್ ಮಾಡ್ಬೇಕು ಅನ್ನೋ ರೂಲ್. ಆದ್ರೆ ಚಂದ್ರಕಲಾ ರೂಲ್ಸ್ ಬ್ರೇಕ್ ಮಾಡುತ್ತಾರೆ. ಅವರೇ ಈರುಳ್ಳಿ, ಕೊತ್ತಂಬರಿ ಸೊಪ್ಪು ಕಟ್ ಮಾಡಿ ಅಡುಗೆಗಿಟ್ಟು ಬಿಡ್ತಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಚಂದ್ರಕಲಾ ಅವರಿಗೆ ರೂಲ್ಸ್ ಬ್ರೇಕ್ ಮಾಡಿರೋದಕ್ಕೆ ವಾರ್ನ್ ಮಾಡುತ್ತಲೇ ಶಿಕ್ಷೆಯಾಗಿ ಮನೆಯಲ್ಲಿರುವ ಅಷ್ಟೂ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಹೊರಗಿಡೋದಕ್ಕೆ ಆದೇಶ ನೀಡ್ತಾರೆ. 

ತಾನು ಮೈಮರೆವಿನಿಂದ ಮಾಡಿದ ತಪ್ಪಿಗೆ ಪೇಚಾಡಿಕೊಂಡ ಚಂದ್ರಕಲಾ ಅದಕ್ಕೆ ಏನೇನೋ ಸಬೂಬು ಹೇಳಲು ಪ್ರಯತ್ನಿಸುತ್ತಾರೆ. ಅಡುಗೆ ಲೇಟ್ ಆಗ್ಬಾರ್ದು, ಆಮೇಲೆ ಟಾಸ್ಕ್ ಇದ್ರೆ ಇಲ್ಲರಿಗೂ ಸಮಸ್ಯೆ ಆಗುತ್ತೆ, ಹೀಗಾಗಿ ಬೇಗ ಬೇಗ ಅಡುಗೆ ಮಾಡೋಣ ಅಂತ ತಾನೇ ಈರುಳ್ಳಿ, ಕೊತ್ತಂಬರಿ ಕಟ್ ಮಾಡಿದೆ ಅನ್ನೋದು ಅವರು ಕೊಟ್ಟ ಮೊದಲೇ ಕಾರಣ.

ಇಷ್ಟು ಹೇಳ್ತಾ ಕಣ್ಣೀರು ಹಾಕೋ ಚಂದ್ರಕಲಾಗೆ ಮನೆಯ ಸದಸ್ಯರು ಸಮಾಧಾನ ಮಾಡುತ್ತಾರೆ. ಆದರೂ ಅವರ ಮೂಡ್ ಸರಿಹೋಗಿಲ್ಲ. ಮಧ್ಯಾಹ್ನದ ಹೊತ್ತಿಗೆ ಆ ಸಿಟ್ಟು ನಿರ್ಮಲಾ ಮೇಲೆ ತಿರುಗುತ್ತೆ. ಅಡುಗೆ ಮನೇಲಿ ತನ್ನ ಪಾಡಿಗೆ ಹಣ್ಣು ಕಟ್ ಮಾಡ್ಕೊಂಡಿದ್ದ ನಿರ್ಮಲಾನ ಕರೆದು, ಬೆಳಗ್ಗೆ ನಾನೇ ತರಕಾರಿ ಕಟ್ ಮಾಡೋ ಹಾಗೆ ಆಗಿದ್ದು ನಿನ್ನಿಂದಲೇ. ನೀನು ಮೂರು ದಿನದಿಂದ ಅಡುಗೆ ಮನೆಗೆ ಬರ್ತಿಲ್ಲ. ಹೀಗಾಗಿ ಅಡುಗೆ ಲೇಟ್ ಆಗ್ತಿದೆ ಅಂತ ರಾಂಗ್ ಆಗಿ ಮಾತನಾಡಲು ಶುರುವಾಗುತ್ತೆ.

ಖ್ಯಾತ ಸೀರಿಯಲ್ ನಟಿಯ ಮೇಲೆ ಹಲವು ಬಾರಿ ಅತ್ಯಾಚಾರ ...

ಆರಂಭದಲ್ಲಿ ತನ್ನ ತಪ್ಪಿಗೆ ಸಾರಿ ಕೇಳಿ, ಸಮಾಧಾನದಿಂದಲೇ ನಿರ್ಮಲಾ ಮಾತನಾಡಿದಷ್ಟೂ ಚಂದ್ರಕಲಾ ಸಿಟ್ಟು ಏರುತ್ತಲೇ ಹೋಗುತ್ತದೆ. ನಿರ್ಮಲಾ ಅವರ ಇತ್ತೀಚೆಗೆ ಒಬ್ಬೊಬ್ರೇ ಮಾತಾಡೋದು, ತನ್ನ ಪಾಡಿಗೆ ತಾನಿರೋದನ್ನೆಲ್ಲ ಹೇಳುತ್ತಾ ಬಿಗ್‌ಬಾಸ್ ಮನೆಯನ್ನು ರಣರಂಗ ಮಾಡ್ತಾರೆ ಚಂದ್ರಕಲಾ. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ನಿರ್ಮಲಾನೂ ಜಗಳಕ್ಕೆ ನಿಲ್ಲುತ್ತಾರೆ. ಇನ್ಮೇಲೆ ಯಾರೂ ಅಡುಗೆ ಮನೆಗೆ ಬರಬಾರ್ದು ಅನ್ನುವ ನಿರ್ಮಲಾ ಮಾತಿನೊಂದಿಗೆ ಜಗಳ ಒಂದು ಹಂತಕ್ಕೆ ಬರುತ್ತದೆ. 

ಈ ವಿಚಾರವನ್ನ ಎತ್ತಿಕೊಂಡು ಮಾತನಾಡಿದ ಸುದೀಪ್, ಚಂದ್ರಕಲಾ ಹಾಗೂ ನಿರ್ಮಲಾ ಅವರನ್ನು ಸಪರೇಟಾಗಿ ಕರೆದು ಮಾತನಾಡಿಸ್ತಾರೆ. ನಿರ್ಮಲಾ ತನ್ನೆಲ್ಲ ವರ್ತನೆಗೂ ಕನ್ವಿಸಿಂಗ್ ಅನಿಸೋ ಕಾರಣ ಕೊಟ್ರೆ ಚಂದ್ರಕಲಾ ಸಿಕ್ಕಿಬೀಳ್ತಾರೆ. ಆಗ ಚಂದ್ರಕಲಾ ಅವರಿಗೆ ಕಿಚ್ಚ ಸುದೀಪ್ ಹೇಳಿರೋ ಮಾತುಗಳು ರೇಷ್ಮೆ ಸಾಲಲ್ಲಿ ಸುತ್ಕೊಂಡು ಹೊಡೆಯೋ ಹಾಗಿದ್ದದ್ದು ಸುಳ್ಳಲ್ಲ. 'ಚಂದ್ರಕಲಾ ಅವರೇ, ನೀವು ನಿಮಗಾದ ಅವಮಾನವನ್ನು ನಿರ್ಮಲಾ ಮೇಲೆ ಹಾಕೋದಕ್ಕೆ ಪ್ರಯತ್ನ ಮಾಡಿದ್ರಿ. ನಿಮ್ಮ ಮಾತು ಅಡುಗೆ ಮನೆಗಷ್ಟೇ ಸೀಮಿತ ಆಗಿರಲಿಲ್ಲ. ನಿಮ್ಮ ಈ ವರ್ತನೆಯಿಂದ ನಿಮ್ಮ ಮೇಲಿನ ಅಭಿಪ್ರಾಯವೇ ಬದಲಾಗಬಹುದು. ದೊಡ್ಡೋರು ಅನಿಸಿಕೊಂಡೋರು ಇಂಥಾ ವಿಚಾರಗಳಿಂದ ಉಳಿದವರ ಕಣ್ಣಲ್ಲಿ ಚಿಕ್ಕವರಾಗ್ತಾ ಹೋಗ್ತಾರೆ' ಅಂತ ಚಂದ್ರಕಲಾಗೆ ಕ್ಲಾಸ್ ತಗೊಳ್ತಾರೆ ಸುದೀಪ್.