ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸಿನಿಮಾ, ಪುಸ್ತಕ ಬರೆಯುವುದರಲ್ಲಿ ಬ್ಯುಸಿಯಾಗಿ ತೊಡಗಿಸಿಕೊಂಡ ನಂತರ ಇದೀಗ ಇನ್ನೊಂದು ಪ್ರಯತ್ನವನ್ನು ಮಾಡಿದ್ದಾರೆ. ನ್ಯೂಯಾರ್ಕ್ನಲ್ಲಿ ಸ್ನೇಹಿತರೊಬ್ಬರ ಜೊತೆ ರೆಸ್ಟೋರೆಂಟ್ ಬ್ಯುಸಿನೆಸ್ ಆರಂಭಿದ್ದಾರೆ.
ನಟಿ ರೆಸ್ಟೋರೆಂಟ್ ಓಪನಿಂಗ್ ಫೋಟೋ ಶೇರ್ ಮಾಡಿ ಆ ಬಗ್ಗೆ ಬರೆದಿದ್ದಾರೆ. 

ಹೊಸ ರೆಸ್ಟೋರೆಂಟ್ ಸೋನಾವನ್ನು ನಿಮ್ಮ ಮುಂದಿಡಲು ನಾನು ಖುಷಿಯಾಗಿದ್ದೇನೆ. ಅದು ಭಾರತೀಯ ಆಹಾರದ ಬಗ್ಗೆ ನನ್ನ ಪ್ರೀತಿಯನ್ನು ಒಳಗೊಂಡಿದೆ. ಚೆಫ್ ಹರಿನಾಯಕ್ ಅಡುಗೆ ಮಾಡಲಿದ್ದಾರೆ. ಅವರು ಅತ್ಯಂತ ರುಚಿಕರವಾದ ಮತ್ತು ಹೊಸತನವಿರುವ ಮೆನುವನ್ನು ರಚಿಸಿದ್ದಾರೆ. ನನ್ನ ಸುಂದರ ದೇಶದ ಆಹಾರ ಪ್ರಯಾಣಕ್ಕೆ ಅವರು ನಿಮ್ಮನ್ನು ಕರೆದೊಯ್ಯುತ್ತಾರೆ ಎಂದು ಬರೆದಿದ್ದಾರೆ.

ಈ ತಿಂಗಳ ಕೊನೆಯಲ್ಲಿ ಸೋನಾ ತೆರೆಯುತ್ತಿದೆ. ಅಲ್ಲಿ ನಿಮ್ಮನ್ನು ನೋಡಲು ನಾನು ಕಾಯುತ್ತಿದ್ದೇನೆ. ನನ್ನ ಸ್ನೇಹಿತರಾದ ಮನೀಶ್ ಗೋಯಲ್ ಮತ್ತು ಡೇವಿಡ್ ರಾಬಿನ್ ಅವರ ನಾಯಕತ್ವ ಇಲ್ಲದಿದ್ದರೆ ಈ ಪ್ರಯತ್ನ ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದಿದ್ದಾರೆ.

ನಾನಿನ್ನು 'ಅಗ್ಗ' ಅಲ್ಲ: ಐಟಿ ರೇಡ್‌ ಬಗ್ಗೆ ತಾಪ್ಸಿ ವ್ಯಂಗ್ಯ!

ನಮ್ಮ ಊಹನೆಯನ್ನು ಸ್ಪಷ್ಟವಾಗಿ ಅರಿತುಕೊಂಡಿದ್ದಕ್ಕಾಗಿ ನಮ್ಮ ಡಿಸೈನರ್ ಮೆಲಿಸ್ಸಾ ಬೋವರ್ಸ್ ಮತ್ತು ತಂಡದ ಉಳಿದವರಿಗೆ ಧನ್ಯವಾದಗಳು ಎಂದು ಬರೆದಿದ್ದಾರೆ.