ಸೀತಾರಾಮ ಸೀರಿಯಲ್ ಮುಗಿದಿದೆ. ಕೊನೆ ಎಪಿಸೋಡ್ ಇಂದು ಪ್ರಸಾರವಾಗಿದೆ. ಸೀರಿಯಲ್ ಬಗ್ಗೆ ವೈಷ್ಣವಿ ಗೌಡ ಏನು ಹೇಳಿದ್ದಾರೆ ಗೊತ್ತಾ?

ಜೀ ಕನ್ನಡ (Zee Kannada )ದಲ್ಲಿ ಪ್ರಸಾರವಾಗ್ತಿದ್ದ ಸೀತಾ ರಾಮ ಸೀರಿಯಲ್ (Seetha Raama serial) ಮುಕ್ತಾಯವಾಗಿದೆ. 490 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿರುವ ಸೀತಾ ರಾಮ ಸೀರಿಯಲ್ ಕೊನೆ ಎಪಿಸೋಡ್ ಇಂದು ಪ್ರಸಾರವಾಯ್ತು. ಫ್ಯಾಮಿಲಿ ಫೋಟೋ ಜೊತೆ ಸೀರಿಯಲ್ ಮುಗಿಸಿದ ನಿರ್ದೇಶಕರು ಮರಳಿ ಬರಲಿದ್ದಾರೆ ಸೀತಾರಾಮ ಅಂತ ಶೀರ್ಷಿಕೆ ಹಾಕಿದ್ದಾರೆ. ವಾರಗಳ ಹಿಂದೆಯೇ ತಂಡ ಶೂಟಿಂಗ್ ಮುಗಿಸಿದ್ದು, ಅದ್ರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೆ ಇತ್ತು. ಕಲಾವಿದರು ಕೊನೆ ದಿನದ ಶೂಟಿಂಗ್ ಮುಗಿಸಿ ಭಾವುಕರಾಗಿದ್ದರು. ಅದ್ರ ವಿಡಿಯೋಗಳನ್ನು ಜೀ ಕನ್ನಡ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತ್ತು. ಸೀರಿಯಲ್ ಚೆನ್ನಾಗಿ ಬರ್ತಿತ್ತು, ಯಾಕೆ ಮುಗಿಸಿದ್ರಿ ಎನ್ನುವ ಪ್ರಶ್ನೆಗಳು ವೀಕ್ಷಕರಿಂದ ಕೇಳಿ ಬರ್ತಾನೆ ಇದೆ. ಸೀರಿಯಲ್ ಇನ್ನೂ ಎಳೆದ್ರೆ ಚೆನ್ನಾಗಿರಲ್ಲ, ಇದು ಮುಕ್ತಾಯ ಮಾಡೋಕೆ ಬೆಸ್ಟ್ ಟೈಂ ಅಂತ ನಿರ್ದೇಶಕರು ಡಿಸೈಡ್ ಮಾಡಿದ್ರಿಂದ ಸೀರಿಯಲ್ ಕೊನೆ ಹಂತಕ್ಕೆ ಬಂದು ನಿಂತಿತ್ತು. ಸೀರಿಯಲ್ ಬಗ್ಗೆ ಕಲಾವಿದರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೀತಾ ರಾಮ ಸೀರಿಯಲ್ ನಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವೈಷ್ಣವಿ ಗೌಡ ಕೂಡ ಸೀರಿಯಲ್ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಸೀರಿಯಲ್ ಮುಗಿದಿದ್ದು ಬೇಸರ ತಂದಿಲ್ಲ : ಜೀ ಕನ್ನಡದ ಜೊತೆ ಮಾತನಾಡಿದ ವೈಷ್ಣವಿ ಗೌಡ (Vaishnavi Gowda) ಅಲಿಯಾಸ್ ಸೀತಾ, ಸೀರಿಯಲ್ ಮುಗಿದಿದ್ದು ನನಗೆ ಬೇಸರ ತಂದಿಲ್ಲ. ಎಲ್ಲರೂ ಬೇಜಾರ್ ಆಗ್ತಿದ್ಯಾ ಅಂತ ಪ್ರಶ್ನೆ ಕೇಳ್ತಿದ್ದಾರೆ. ನನಗೆ ಬೇಜಾರಾಗಿಲ್ಲ. ಒಳ್ಳೆ ಪ್ರಾಜೆಕ್ಟ್ ಮುಗಿಸ್ತಿರೋದಕ್ಕೆ ನನಗೆ ಖುಷಿ, ತೃಪ್ತಿ, ಸಮಾಧಾನ ಇದೆ. ಸೀತಾರಾಮ ಅನುಭವ ತುಂಬಾ ಚೆನ್ನಾಗಿತ್ತು. ಪ್ರತಿ ದಿನ ನಾವು ಸಂತೋಷದಿಂದ ಕಳೆದಿದ್ದೇವೆ. ಪ್ರತಿ ದಿನ ನಾನಿದನ್ನು ನೆನಪಿಸಿಕೊಳ್ತೇನೆ ಅಂತ ವೈಷ್ಣವಿ ಹೇಳಿದ್ದಾರೆ.

ಸೀತಾರಾಮ ಎಲ್ಲಿ ನೋಡ್ಬಹುದು? : ಮಾತು ಮುಂದುವರೆಸಿದ ವೈಷ್ಣವಿ, ಸೀತಾ ರಾಮನನ್ನು ನೀವು ಜಾಸ್ತಿ ಮಿಸ್ ಮಾಡಿಕೊಳ್ಬೇಕಾಗಿಲ್ಲ. ಪ್ರತಿ ದಿನ ನಮ್ಮನ್ನು ನೀವು ನೋಡ್ಬಹುದು ಎಂದಿದ್ದಾರೆ. ಸೀತಾರಾಮ ಸೀರಿಯಲ್ ಝೀ 5ನಲ್ಲಿ ಬರ್ತಿರುತ್ತೆ. ಅದನ್ನು ನೋಡಿ ಅಂತ ವೈಷ್ಣವಿ ಸಲಹೆ ನೀಡಿದ್ದಾರೆ.

ಏನು ಪ್ರಾಮೀಸ್ ಮಾಡಿದ್ದಾರೆ ವೈಷ್ಣವಿ : ದೇವಿ ಸೀರಿಯಲ್ ನಂತ್ರ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಅಗ್ನಿ ಸಾಕ್ಷಿ ಮೂಲಕ ಹೆಚ್ಚು ಪ್ರಸಿದ್ಧಿಗೆ ಬಂದಿದ್ದ ವೈಷ್ಣವಿ ಗೌಡ ನಂತ್ರ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ತಮ್ಮ ಸರಳತೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದ ವೈಷ್ಣವಿಗೆ ಜೀನಲ್ಲಿ ಅವಕಾಶ ಸಿಕ್ಕಿತ್ತು. ಜೀನಲ್ಲಿ ಸೀತಾರಾಮ ಸೀರಿಯಲ್ ನ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ವೈಷ್ಣವಿ ಎಲ್ಲರ ಅಚ್ಚುಮೆಚ್ಚಿನ ಸೀತಾ ಆಗಿದ್ರು. ಅವರ ಸರಳ ನಟನೆ ವೀಕ್ಷಕರನ್ನು ಸೆಳೆದಿತ್ತು. ಈಗ ಸೀತಾರಾಮ ಮುಗಿದಿದೆ. ವೈಷ್ಣವಿ ನೋಡೋಕೆ ಆಗಲ್ಲ ಅಂತ ಫ್ಯಾನ್ಸ್ ಬೇಸರದಲ್ಲಿದ್ದಾರೆ. ಇದಕ್ಕೆ ಮತ್ತೊಂದು ಕಾರಣ ವೈಷ್ಣವಿ ಗೌಡ ಮದುವೆ. ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿರುವ ವೈಷ್ಣವಿ, ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ. ಏರ್ ಪೋರ್ಸ್ ನಲ್ಲಿ ಕೆಲಸ ಮಾಡುವ ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಎಂಗೇಜ್ಮೆಂಟ್ ಮಾಡ್ಕೊಂಡಿದ್ದಾರೆ. ಅನುಕೂಲ್ ಮಿಶ್ರಾ ಕರ್ನಾಟಕದವರಲ್ಲ. ಹಾಗಾಗಿ ವೈಷ್ಣವಿ ಕರ್ನಾಟಕದಲ್ಲೇ ಇರ್ತಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಈಗಾಗಲೇ ಅದಕ್ಕೆ ಉತ್ತರವನ್ನು ವೈಷ್ಣವಿ ನೀಡಿದ್ದಾರೆ. ನಾನು ಎಲ್ಲಿಗೂ ಹೋಗೋದಿಲ್ಲ, ಕರ್ನಾಟಕದಲ್ಲಿದ್ದು, ನಟನೆ ಮುಂದುವರೆಸ್ತೇನೆ ಎಂದಿದ್ದರು. ಈಗ ಮತ್ತೆ ವೈಷ್ಣವಿ ಪ್ರಾಮೀಸ್ ಮಾಡಿದ್ದಾರೆ. ಶೀಘ್ರವೇ ಒಂದೊಳ್ಳೆ ಪ್ರಾಜೆಕ್ಟ್ ಜೊತೆ ನಿಮ್ಮ ಮುಂದೆ ಬರ್ತೇನೆ ಅಂತ ವೈಷ್ಣವಿ ಹೇಳಿದ್ದಾರೆ. ಸೀತಾರಾಮ ಸೀರಿಯಲ್ 2 ಬರುತ್ತಾ ಕಾದು ನೋಡ್ಬೇಕಿದೆ.

View post on Instagram