ಬಿಗ್‌ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ, ಕುಚ್ಚಲಕ್ಕಿ ಗಂಜಿ, ಉಪ್ಪಿನಕಾಯಿ ಮತ್ತು ಮಜ್ಜಿಗೆ ಮೆಣಸನ್ನು ತಮ್ಮ "ಸ್ವರ್ಗ" ಎಂದು ಬಣ್ಣಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ತಮ್ಮ ಸರಳತೆಯನ್ನು ಮೆರೆದಿದ್ದಾರೆ. ಬಿಗ್‌ಬಾಸ್ ನಂತರ 'ಬಾಯ್ಸ್ ವರ್ಸಸ್ ಗರ್ಲ್ಸ್' ಶೋನಲ್ಲೂ ಭಾಗವಹಿಸಿದ್ದಾರೆ.
ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿ ಹಾಗೂ ಫೈರ್ ಬ್ರ್ಯಾಂಡ್ ಭಾಷಣಗಾರ್ತಿ ಚೈತ್ರಾ ಕುಂದಾಪುರ (Big Boss Kannada 11 contestant and fire brand speaker Chaitra Kundapura) ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳನ್ನು ಚೈತ್ರಾ ಹಂಚಿಕೊಳ್ತಿದ್ದಾರೆ. ಈಗ ತಮಗೆ ಸ್ವರ್ಗ ಸಿಗುತ್ತೆ ಯಾವುದರಿಂದ ಎಂಬುದನ್ನು ಚೈತ್ರಾ ಹೇಳಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಚೈತ್ರಾ ಕುಂದಾಪುರ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಊಟದ ಪ್ಲೇಟ್ ಮುಂದೆ ಚೈತ್ರಾ ಕುಳಿತುಕೊಂಡಿರೋದನ್ನು ನೀವು ಕಾಣ್ಬಹುದು. ಅವರ ಊಟದ ಪ್ಲೇಟ್ ನಲ್ಲಿ ಕುಚ್ಚಲಕ್ಕಿ ಗಂಜಿ (Kuchchalakki Ganji), ಮೊಸಲು, ಉಪ್ಪಿನಕಾಯಿ ಹಾಗೂ ಮಜ್ಜಿಗೆ ಮೆಣಸಿದೆ. ಕುಚ್ಚಲಕ್ಕಿ ಗಂಜಿ, ಉಪ್ಪಿನಕಾಯಿ, ಮಜ್ಜಿಗೆ ಮೆಣಸಿದ್ರೆ ಅದೇ ಸ್ವರ್ಗ ಎಂದು ಚೈತ್ರಾ ಕುಂದಾಪುರ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾರೆ. ಅಲ್ಲದೆ ವಿಡಿಯೋದಲ್ಲಿ ಅವರು ಇದೇ ವಿಷ್ಯವನ್ನು ಹೇಳ್ತಿದ್ದಾರೆ. ಸ್ವರ್ಗ ಹೇಗಿರುತ್ತೆ ಅನ್ನೋದನ್ನು ನಾನು ನೋಡಿಲ್ಲ. ಸ್ವರ್ಗ ಹೇಗಿರಬಹುದು ಅಂತ ಕೇಳಿದ್ರೆ ನನ್ನ ಪ್ರಕಾರ, ಕುಚ್ಚಲಕ್ಕಿ ಗಂಜಿ, ಉಪ್ಪಿನಕಾಯಿ, ಮಜ್ಜಿಗೆ ಮೆಣಸು ತಿಂದ್ರೆ ಬಹುಷಃ ಇದಕ್ಕಿಂತ ದೊಡ್ಡ ಸ್ವರ್ಗ ನನಗೆಲ್ಲೂ ಸಿಗಲಿಕ್ಕೆ ಇಲ್ಲ. ತುಂಬಾ ಸಮಯದ ನಂತ್ರ ಕುಚ್ಚಲಕ್ಕಿ ಗಂಜಿ ತಿಂತಾ ಇದೆನೆ. ಅದ್ರ ಖುಷಿಯೇ ಬೇರೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರೋ ಗೋಲ್ಡ್ ಸುರೇಶ್ ತಲೆ ಸವರಿ ಧೈರ್ಯ ಹೇಳಿದ ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ ಅವರ ಈ ಕುಚ್ಚಲಕ್ಕಿ ಗಂಜಿ ವಿಡಿಯೋವನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಅವರ ಸರಳತೆಯನ್ನು ಮೆಚ್ಚಿದ್ದಾರೆ. ಸಿಂಪ್ಲಿಸಿಟಿ ಹೀಗೆ ಮುಂದುವರೆಯಲಿ ಎಂದಿದ್ದಾರೆ ಫ್ಯಾನ್ಸ್. ಇದ್ರ ಜೊತೆ ಒಣ ಮೀನು ಹಾಗೆ ಚಟ್ನಿ ಇದ್ರೆ ಅದ್ರ ಮಜವೇ ಬೇರೆ ಎಂದು ಕೆಲ ಬಳಕೆದಾರರು ಕಮೆಂಟ್ ಹಾಕಿದ್ದಾರೆ.
ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದ ಚೈತ್ರಾ ಕುಂದಾಪುರ ತುಂಬಾ ದಿನ ಮನೆಯಲ್ಲಿ ಉಳಿಯೋದಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದ್ರೆ 105 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಲಕ್ಷಾಂತರ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದ ಚೈತ್ರಾ ಕುಂದಾಪುರ ತಮ್ಮ ವ್ಯಕ್ತಿತ್ವವನ್ನು ಜನರಿಗೆ ತೋರಿಸಿದ್ದರು. ಸಿಂಪಲ್ ಸೀರೆಯುಟ್ಟು ವೀಕ್ಷಕರ ಮನಸ್ಸು ಗೆದ್ದಿರುವ ಚೈತ್ರಾ, ಸಾಕುಪ್ರಾಣಿ, ಪಾಲಕರ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಟಾಸ್ಕ್ ಬಂದಾಗ ಸ್ವಲ್ಪ ಹಿಂದೆ ಸರಿಯುತ್ತಿದ್ದ ಚೈತ್ರಾ, ಮಾತಿನ ಮೂಲಕವೇ ಸ್ಪರ್ಧಿಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದರು. ಬಿಗ್ ಬಾಸ್ ಶೋ ನಂತ್ರ ಈಗ ಮತ್ತೊಂದು ಶೋಗೆ ಚೈತ್ರಾ ಎಂಟ್ರಿಯಾಗಿದ್ದಾರೆ. ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಪಾಲ್ಗೊಳ್ಳಲು ಅವರಿಗೆ ಅವಕಾಶ ಸಿಕ್ಕಿದೆ. ಭವ್ಯಾ ಗೌಡ, ಶೋನಲ್ಲಿ ಕಾಣಿಸಿಕೊಳ್ತಾರೆ ಎನ್ನಲಾಗಿತ್ತು. ಆದ್ರೆ ಕೊನೆಕ್ಷಣದಲ್ಲಿ ಪ್ಲಾನ್ ಬದಲಾಗಿದೆ. ಭವ್ಯಾ ಬದಲು ಚೈತ್ರಾ ಕುಂದಾಪುರ ಶೋಗೆ ಬಂದಿದ್ದಾರೆ. ರಜತ್ ಹಾಗೂ ಚೈತ್ರಾ ಮಧ್ಯೆ ಅಲ್ಲಿಯೂ ಮಾತಿನ ಯುದ್ಧ ನಡೆದಿದೆ. ಡಾನ್ಸ್ ಬರದ ಚೈತ್ರಾ ಕ್ಯೂಟ್ ಆಗಿ ಸ್ಟೆಪ್ಸ್ ಹಾಕಿ ನಟಿ ತಾರಾ ಹಾಗೂ ಶ್ರುತಿ ಮನಸ್ಸು ಗೆದ್ದಿದ್ದಾರೆ.
ಬಿಗ್ ಬಾಸ್ ನಂತರ ಬಂಪರ್ ಆಫರ್ ಪಡೆದ ಚೈತ್ರಾ ಕುಂದಾಪುರ; ವೀಕ್ಷಕರು ಫುಲ್ ಶಾಕ್
ಚೈತ್ರಾ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪದವಿ ಮುಗಿಸಿ, ವಾಹಿನಿಗಳಲ್ಲಿ, ಪತ್ರಿಕೆಯಲ್ಲಿ ಕೆಲಸ ಮಾಡಿರುವ ಚೈತ್ರಾ ಕುಂದಾಪುರ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ. ಟಿಕೆಟ್ ವಂಚನೆಯಲ್ಲಿ ಜೈಲು ಸೇರಿದ್ದ ಚೈತ್ರಾ ಕುಂದಾಪುರ, ಹಿಂದುತ್ವದ ಬಗ್ಗೆ ಅಪಾರ ಜ್ಞಾನ ಹೊಂದಿದ್ದು, ಅತ್ಯುತ್ತಮ ಭಾಷಣಕಾರ್ತಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
