ಈ ಥರ ಭಯ ಇರೋರು ಮನೆ ಒಳಗೆ ಯಾಕೆ ಇದ್ಧೀರಾ, ಮೇನ್ ಡೋರ್ ಓಪನ್ ಪ್ಲೀಸ್: ಕಿಚ್ಚ ಸುದೀಪ್
ಇದೀಗ ಬಿಡುಗಡೆಯಾಗಿರುವ 'ಕಿಚ್ಚನ ಪಂಚಾಯಿತಿ' ಸಂಚಿಕೆ ಪ್ರೊಮೋದಲ್ಲಿ ಸುದೀಪ್ "ವಿನಯ್ ಮತ್ತು ಕಾರ್ತಿಕ್ ಇಬ್ಬರನ್ನು ಬಿಟ್ಟು ಮಿಕ್ಕ ಎಲ್ಲರೂ ಸೋಫಾದ ಹಿಂದೆ ಹೋಗಿ" ಎನ್ನುತ್ತಾರೆ. ಯಾಕೆ ಸುದೀಪ್ ಹಾಗೆ ಹೇಳಿದ್ದು? ಏನಾಯಿತು ಬಿಗ್ ಬಾಸ್ ಮನೆಯಲ್ಲಿ?

ಬಿಗ್ ಬಾಸ್ ಕನ್ನಡ ಸೀಸನ್ 10 ಎರಡನೇ ವಾರದ ಕೊನೆ ತಲುಪಿದೆ. ಇಂದು (21 ಅಕ್ಟೋಬರ್ 2023) ಶನಿವಾರವಾದ್ದರಿಂದ 'ಕಿಚ್ಚಿನ ಪಂಚಾಯಿತಿ' ನಡೆಯಲಿದೆ. ಈ ಶೋದ ಪ್ರೊಮೋ ಬಿಡುಗಡೆಯಾಗಿದ್ದು, ಇದರಲ್ಲಿ ಕಿಚ್ಚ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವುದು ಹೈಲೈಟ್ಸ್ ಆಗಿದೆ. ಸ್ಪರ್ಧಿಗಳ ಜತೆ ಮಾತನಾಡುತ್ತಾ ಕಿಚ್ಚ ಸುದೀಪ್ "ಈ ಥರ ಭಯ ಇರೋರು ಮನೆ ಒಳಗೆ ಯಾಕೆ ಇದ್ದೀರಾ? ಮೇನ್ ಡೋರ್ ಓಪನ್ ಪ್ಲೀಸ್" ಎಂದು ಹೇಳುತ್ತಾರೆ. ಸ್ಪರ್ಧಿಗಳ ಮುಖ ಸಪ್ಪೆಯಾಗಿದ್ದು ಕಂಡು ಬರುತ್ತಿದೆ.
ಇದೀಗ ಬಿಡುಗಡೆಯಾಗಿರುವ 'ಕಿಚ್ಚನ ಪಂಚಾಯಿತಿ' ಸಂಚಿಕೆ ಪ್ರೊಮೋದಲ್ಲಿ ಸುದೀಪ್ "ವಿನಯ್ ಮತ್ತು ಕಾರ್ತಿಕ್ ಇಬ್ಬರನ್ನು ಬಿಟ್ಟು ಮಿಕ್ಕ ಎಲ್ಲರೂ ಸೋಫಾದ ಹಿಂದೆ ಹೋಗಿ" ಎನ್ನುತ್ತಾರೆ. ಯಾಕೆ ಸುದೀಪ್ ಹಾಗೆ ಹೇಳಿದ್ದು? ಏನಾಯಿತು ಬಿಗ್ ಬಾಸ್ ಮನೆಯಲ್ಲಿ? ಸುದೀಪ್ ಈ ಸಂಚಿಕೆಯಲ್ಲಿ ಯಾವಯಾವ ವಿಷಯಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ , ಎಲ್ಲವನ್ನೂ ತಿಳಿಯಲು ಇಂದಿನ ಬಿಗ್ ಬಾಸ್ ಸಂಚಿಕೆಯನ್ನು ನೋಡಬೇಕು.
ಪಿವಿಆರ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಮಾರ್ನಿಂಗ್ ಶೋ ಕೊಡುತ್ತಿಲ್ಲ, ಪರಿಹಾರ ಹೇಳಿದ ಶಿವಣ್ಣ
ಈಗಾಗಲೇ ಬಿಗ್ ಬಾಸ್ ಕನ್ನಡ ಶೋ ಎರಡನೇ ವಾರದ ಕೊನೆಯನ್ನು ತಲುಪಿದ್ದು ಭಾರೀ ಕುತೂಹಲ ಕೆರಳಿಸುತ್ತಿದೆ. ಬಿಗ್ ಬಾಸ್ ಟಿಆರ್‌ಪಿ ಕೂಡ ಚೆನ್ನಾಗಿದ್ದು, ಈ ವಾರದ ಟಿಆರ್‌ಪಿ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಇಂದು ಕಿಚ್ಚನ ಪಂಚಾಯಿತಿ ಸಂಚಿಕೆ ಪ್ರಸಾರವಾಗಲಿದ್ದು, ನಾಳೆ 'ಸೂಪರ್ ಸಂಡೆ ವಿತ್ ಸುದೀಪ' ಟೆಲಿಕಾಸ್ಟ್ ಆಗಲಿದೆ. ನಾಳೆ ಒಬ್ಬರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯಿಂದ ಸ್ನೇಕ್ ಶ್ಯಾಮ್ ಮೊದಲ ಎಲಿಮಿನೇಶನ್ ಆಗಿ ಹೊರಬಿದ್ದಿದ್ದಾರೆ.
ಸೀರೆ ಸೀರೆ ಎಲ್ಲೆಲ್ಲೋ ಹಾರೈತೆ ಎಂದು ಫೋಟೋ ಶೇರ್ ಮಾಡಿದ Anupama Gowda: ನೀಲಿ ಸುಂದ್ರಿ ಎಂದ ಫ್ಯಾನ್ಸ್!
ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಯಾರು ಯಾವ ತಪ್ಪುಗಳನ್ನು ಮಾಡಿದ್ದಾರೆ, ಯಾವ ಸ್ಪರ್ಧಿಗಳಿಗೆ ಏನಾಯಿತು, ಯಾರು ಯಾರಿಗೆ ಏನು ಮಾಡಿದರು, ಎಲ್ಲವೂ ಇಂದು ಮತ್ತು ನಾಳಿನ ಸಂಚಿಕೆಗಳಲ್ಲಿ ರಿವೀಲ್ ಆಗಲಿದೆ. ನಾಳೆ ಮನೆಯಿಂದ ಹೊರಹೋಗಲಿರುವ ಸ್ಪರ್ಧಿ ಯಾರಿರಬಹುದು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ. ಯಾರೇ ಹೋದರೂ ಮಿಕ್ಕ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದು, ತಾವೇ ಗೆಲ್ಲುವ ಆಸೆಯಿಂದ ಆಟ ಮುಂದುವರಿಸುತ್ತಾರೆ. ಬದುಕಿನಂತೆ ಬಿಗ್ ಬಾಸ್ ಮನೆ ಆಟ-ಪಾಠಗಳು ಕೂಡ ಕಂಟಿನ್ಯೂ ಆಗಲಿವೆ.