Asianet Suvarna News Asianet Suvarna News

ಪಿವಿಆರ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಮಾರ್ನಿಂಗ್‌ ಶೋ ಕೊಡುತ್ತಿಲ್ಲ, ಪರಿಹಾರ ಹೇಳಿದ ಶಿವಣ್ಣ

ಘೋಸ್ಟ್ ಸಿನಿಮಾದಲ್ಲಿ ನಟ ಶಿವಣ್ಣ ನಾಯಕರಾಗಿ ನಟಿಸಿದ್ದಾರೆ. ಬಾಲಿವುಡ್ ನಟ ಅನುಪಮ್ ಖೇರ್ ಪ್ರಮುಖ ಪಾತ್ರವೊಂದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕರ್ನಾಟಕದಲ್ಲಿ ಸಕ್ಸಸ್‌ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ. ಈ ವಾರಾಂತ್ಯದೊಳಗೆ ಬೇರೆ ರಾಜ್ಯಗಳಲ್ಲಿ ಮತ್ತು ಮುಂಬೈನಲ್ಲಿ ಘೋಸ್ಟ್ ಸಿನಿಮಾ ಕಲೆಕ್ಷನ್ ಹೇಗಿದೆ ಎಂಬ ಮಾಹಿತಿ ಸಿಗಲಿದೆ. 

PVR morning show not available for Kannada Movies question for Shiva Rajkumar srb
Author
First Published Oct 21, 2023, 4:54 PM IST

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿನಯದ 'ಘೋಸ್ಟ್' ಸಿನಿಮಾ ಮೊನ್ನೆ (19 ಅಕ್ಟೋಬರ್ 2023) ಬಿಡುಗಡೆಯಾಗಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕರ್ನಾಟಕ ಸೇರಿದಂತೆ ಇಡೀ ಭಾರತದ ಹಲವು ಕಡೆ ರಿಲೀಸ್ ಆಗಿ ಸಕ್ಸಸ್ ಪ್ರದರ್ಶನ ಕಾಣುತ್ತಿದೆ. ಈ ವೇಳೆ ಶಿವಣ್ಣ ಘೋಸ್ಟ್ ಸಿನಿಮಾದ ಪ್ರಚಾರ ಕಾರ್ಯಕ್ರಮದ ಅಂಗವಾಗಿ ಸುವರ್ಣ ಚಾನೆಲ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಶಿವಣ್ಣ ಅವರಿಗೆ ಪ್ರಶ್ನೆಯೊಂದು ಎದುರಾಗಿದೆ. ಹಾಗಿದ್ದರೆ ಈ ಪ್ರಶ್ನೆಯೇನು ಗೊತ್ತೇ?

"ಪಿವಿಆರ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಮಾರ್ನಿಂಗ್ ಶೋಗಳು ಸಿಗುತ್ತಿಲ್ಲ ಎಕೆ?"  ಈ ಪ್ರಶ್ನೆಯನ್ನು ಶಿವಣ್ಣರಿಗೆ ಈ ವೇಳೆ ಕೇಳಲಾಯಿತು. ಅದಕ್ಕೆ ಶಿವಣ್ಣ "ಹೌದು, ಇದು ನಡೆಯುತ್ತಿದೆ. ಈ ಬಗ್ಗೆ ಕೇಳಬೇಕಾಗಿರುವುದು ಫಿಲಂ ಚೇಂಬರ್ಸ್‌ ಮತ್ತು ಪ್ರೊಡ್ಯೂಸರ್ಸ್‌. ಆದರೆ ಅವರು ಯಾಕೆ ಈ ಬಗ್ಗೆ ಪ್ರಶ್ನೆ ಎತ್ತುತ್ತಿಲ್ಲ ಎಂಬುದೇ ತಿಳಿಯುತ್ತಿಲ್ಲ. ನಾವು ಕಲಾವಿದರು ಈ ಬಗ್ಗೆ ಪ್ರಶ್ನೆ ಮಾಡಲು ಆಗುವುದಿಲ್ಲ. ಯಾವುದೇ ಒಬ್ಬ ಕಲಾವಿದ ತನ್ನ ಸಿನಿಮಾ ಬಿಡುಗಡೆ ಆದಾಗ ಮಾತ್ರ  ಈ ಪ್ರಶ್ನೆ ಕೇಳಲಾಗುವುದಿಲ್ಲ. ಇದು ಎಲ್ಲಾ ಕನ್ನಡ ಸಿನಿಮಾಗಳಿಗೆ ಸಂಬಂಧಿಸಿ ಆಗಬೇಕಾಗಿದ್ದು. 

Jyothi Rai: ನನಗೆ ಕನ್ನಡಿಗರು 'ಹರ್ಟ್ ಮಾಡಿದ್ದಾರೆ, ಕೆಟ್ಟದಾಗಿ ಕಾಮೆಂಟ್ಸ್‌ ಮಾಡಿದ್ದಾರೆ!

ನಾವು ಯಾವುದೇ ಭಾಷೆ ಅಥವಾ ರಾಜ್ಯವನ್ನು ಮಾತ್ರ ಪ್ರತಿನಿಧಿಸಲು ಆಗುವುದಿಲ್ಲ. ಇಡೀ ದೇಶವನ್ನೇ ಕಲಾವಿದರು ಆಶ್ರಯಿಸಬೇಕಾಗುತ್ತದೆ. ಆದರೆ, ನಿರ್ಮಾಪಕರು, ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ನಮಗೆ ಎಲ್ಲಾ ಭಾಷೆಗಳ ಮೇಲೂ ಗೌರವ ಇದೆ. ಎಷ್ಟೋ ಸಾರಿ ತಮಿಳು ಟೆಕ್ನಿ‍ಇಯನ್ ಸಿಕ್ಕರೆ ನಾವು ತಮಿಳಿನಲ್ಲೇ ಮಾತನಾಡುತ್ತೇವೆ. ಎಲ್ಲ ವಿಷಯಗಳ ಬಗ್ಗೆ ಕಲಾವಿದರೇ ಮಾತನಾಡಬೇಕು ಎಂದು ಹೇಳುವುದು ತಪ್ಪಾಗುತ್ತದೆ" ಎಂದಿದ್ದಾರೆ. 

ಪ್ರಜ್ವಲ್‌ ದೇವರಾಜ್‌ ಜೊತೆ ನಟಿಸಿದ್ದ ನಟಿ ಆಸ್ಪತ್ರೆಗೆ ದಾಖಲು, ಮೂಗಿಗೆ ಟ್ಯೂಬ್ ಹಾಕಿರುವ ಫೋಟೋ ವೈರಲ್‌

ಅಂದಹಾಗೆ, ಘೋಸ್ಟ್ ಸಿನಿಮಾದಲ್ಲಿ ನಟ ಶಿವಣ್ಣ ನಾಯಕರಾಗಿ ನಟಿಸಿದ್ದಾರೆ. ಬಾಲಿವುಡ್ ನಟ ಅನುಪಮ್ ಖೇರ್ ಪ್ರಮುಖ ಪಾತ್ರವೊಂದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕರ್ನಾಟಕದಲ್ಲಿ ಸಕ್ಸಸ್‌ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ. ಈ ವಾರಾಂತ್ಯದೊಳಗೆ ಬೇರೆ ರಾಜ್ಯಗಳಲ್ಲಿ ಮತ್ತು ಮುಂಬೈನಲ್ಲಿ ಘೋಸ್ಟ್ ಸಿನಿಮಾ ಕಲೆಕ್ಷನ್ ಹೇಗಿದೆ ಎಂಬ ಮಾಹಿತಿ ಸಿಗಲಿದೆ. ಒಟ್ಟಿನಲ್ಲಿ, ಸದ್ಯ ಕನ್ನಡದ ಹ್ಯಾಟ್ರಿಕ್ ಹೀರೋ  ಶಿವಣ್ಣ ಅವರ ಘೋಸ್ಟ್ ಹವಾ ರಾಜ್ಯದ ತುಂಬ ವ್ಯಾಪಿಸಿದೆ ಎನ್ನಬಹುದು. 

Follow Us:
Download App:
  • android
  • ios