ನಡೆದಾಡುವ ವಿಶ್ವಕೋಶ ಎಂದೇ ಫೇಮಸ್‌ ಆಗಿರೋ ಥಟ್‌ ಅಂತ ಹೇಳಿ ಖ್ಯಾತಿಯ ನಾ.ಸೋಮೇಶ್ವರ ಅವರ ಹಾಸ್ಯದ ಹೊನಲಿನ ಸಂದರ್ಶನ ಇಲ್ಲಿದೆ ನೋಡಿ... 

ದೂರದರ್ಶನ ಚಂದನದಲ್ಲಿ ಪ್ರಸಾರ ಆಗ್ತಿರೋ ಥಟ್‌ ಅಂತ ಹೇಳಿ ಎಂದಾಕ್ಷಣ ಎಲ್ಲರ ಮುಂದೆ ಬರೋದು ನಾ.ಸೋಮೇಶ್ವರ್‍‌ ಅವರು. ಕಳೆದ 22 ವರ್ಷಗಳಿಂದ ಈ ಕಾರ್ಯಕ್ರಮವನ್ನು ಒಂದೇ ಧಾಟಿಯಲ್ಲಿ, ಒಂದೇ ರೀತಿಯಲ್ಲಿ ನಡೆಸಿಕೊಡುತ್ತಲೇ ಖ್ಯಾತಿ ಗಳಿಸಿದವರು ಇವರು. ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ‘ಥಟ್ ಅಂತ ಹೇಳಿ’ ಕಾರ್ಯಕ್ರಮ ದಾಖಲೆ ಬರೆದಿದೆ. ರಸಪ್ರಶ್ನೆ ಮಾಸ್ಟರ್ ಎಂದೇ ಪ್ರಖ್ಯಾತರಾಗಿರುವ ಲೇಖಕ, ನಾ.ಸೋಮೇಶ್ವರ್‍‌ ಅವರದ್ದು ಹಾಸ್ಯದಲ್ಲಿಯೂ ಎತ್ತಿದ ಕೈ. ಥಟ್‌ ಅಂತ ಹೇಳಿ ಕಾರ್ಯಕ್ರಮವನ್ನು ಎಷ್ಟು ಸೊಗಸಾಗಿ, ಗಂಭೀರವಾಗಿ ನಡೆಸಿಕೊಡುತ್ತಾರೆಯೋ, ಅದಕ್ಕಿಂತಲೂ ಹೆಚ್ಚಾಗಿ ಅವರ ಹಾಸ್ಯಪ್ರಜ್ಞೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಇದೀಗ ಕೀರ್ತಿ ಎಂಟರ್‍‌ಟೇನ್‌ಮೆಂಟ್‌ ಶೋನಲ್ಲಿ ನಾ. ಸೋಮೇಶ್ವರ ಅವರು ಹಾಸ್ಯ ಪ್ರಜ್ಞೆಯನ್ನುಮರೆದಿದ್ದಾರೆ. ಅವರಿಗೆ ಕೇಳಿರುವ ಪ್ರಶ್ನೆಗಳಿಗೆ ಹಾಸ್ಯದ ಮೂಲಕವೇ ಉತ್ತರ ಕೊಟ್ಟಿದ್ದಾರೆ. ಇದರ ಪ್ರೊಮೋ ಮಾತ್ರ ಸದ್ಯ ಬಿಡುಗಡೆ ಮಾಡಿದ್ದಾರೆ ಕೀರ್ತಿ ಅವರು.

ರಾಖಿ, ರೇಖಾ, ಹೇಮಾ ಮಾಲಿನಿ, ಯೋಗಿತಾ ಬಾಲಿ, ಜಯಾಬಾಧುರಿ ಇವರನ್ನೆಲ್ಲಾ ಸಿಕ್ಕಾಪಟ್ಟೆ ಪ್ರೀತಿಸಿದೆ, ಒಬ್ಬರೂ ಸಿಗಲಿಲ್ಲ ಎಂದು ತಮಾಷೆ ಮಾಡಿದ್ದಾರೆ. ಪತ್ನಿಯ ಹೆಸರೇನು, ಆಯ್ಕೆ ಬೇಕಾ, ಹಾಗೇ ಉತ್ತರ ಕೊಡುತ್ತೀರಾ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ನಾ.ಸೋಮೇಶ್ವರ್‍‌ ಜೋರಾಗಿ ನಕ್ಕಿದ್ದಾರೆ. ಹೆಣ್ಣು ಮಕ್ಕಳು ಬಂದಾಗ ಖುಷಿ ಖುಷಿಯಾಗಿ ಪ್ರಶ್ನೆ ಕೇಳ್ತೀರಲ್ಲಾ ಸರ್‍‌ ಎಂದಾಗ, ನಾನೂ ಒಬ್ಬಮನುಷ್ಯ ತಾನೆ, ಅದು ಸಹಜ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಪತ್ನಿಗಾಗಿ ಒಂದು ಪ್ರೇಮ ಕವಿತೆ ಹಾಡಿ ಎಂದಾಗ, ನೀವು ಪ್ರೇಯಸಿ ಎಂದಿದ್ರೆ ಕವಿತೆ ಬರುತ್ತಿತ್ತೇನೋ ಎಂದು ಹೇಳಿದ್ದಾರೆ. ಮದುವೆ ಎಷ್ಟು ಆಗಿದೆ ಕೇಳಿದ್ರೆ, ಕನಸಲ್ಲಿ ಹತ್ತು ಹದಿನೈದು ಆಗಿರುತ್ತೆ, ವಿಶೇಷ ದಿನಗಳಲ್ಲಿ ಇನ್ನೂ ಹೆಚ್ಚು ಆಗತ್ತೆ ಎನ್ನುವ ಮೂಲಕ ಮತ್ತೆ ಹಾಸ್ಯದ ಹೊನಲು ಹರಿಸಿದ್ದಾರೆ. 

ಕತ್ತೆ ಮುಖ ನೋಡಿದ್ರೆ ಐಟಿ ರೇಡ್‌ ಆಗತ್ತೆ! ಖ್ಯಾತ ಪಶುವೈದ್ಯ ಡಾ. ಜಗನ್ನಾಥ್‌ ಇಂಟರೆಸ್ಟಿಂಗ್‌ ಮಾಹಿತಿ...

ಇದೇ ವೇಳೆ, ಬಿಟ್ಟ ಸ್ಥಳ ತುಂಬಿ ಎಂದಾಗ, ಕೈ ಕೆಸರಾದರೆ ಎಂದಾಗ, ನೀರು ಹಾಕಿಯೇ ತೊಳೆದುಕೊಳ್ಳಬೇಕು ಎಂದಿದ್ದಾರೆ. ಗಂಡನಿಗೆ ನಿಕ್ಕರ್‍‌ ಚಿಂತೆಯಾದರೆ, ಹೆಂಡ್ತಿಗೆ ಡ್ಯಾಷ್‌ ಎಂದಾಗ, ಹೆಂಡ್ತಿಗೆ ಅದನ್ನು ಒಣಗಿಸೋ ಚಿಂತೆ ಎಂದಿದ್ದಾರೆ. ಇದೇ ವಿಡಿಯೋದಲ್ಲಿ ಸಾಕಷ್ಟು ಹಾಸ್ಯ ಮಾಡಿದ್ದು, ಅದರ ಪ್ರೊಮೋ ಈಗ ಬಿಡುಗಡೆಯಾಗಿದೆ. ಇದರಲ್ಲಿ ನನ್ನ ಹೆಂಡತಿ ಈ ವಿಡಿಯೋ ನೋಡುತ್ತಿಲ್ಲ ಎಂದೇ ಭಾವಿಸಿ ಇವನ್ನೆಲ್ಲಾ ಹೇಳುತ್ತಿದ್ದೇನೆ ಎಂದೂ ಪಂಚಿಂಗ್‌ ಲೈನ್‌ ಕೊಟ್ಟಿದ್ದಾರೆ! 

ಇನ್ನು ನಾ. ಸೋಮೇಶ್ವರ ಕುರಿತು ಹೇಳುವುದಾದರೆ, 22 ವರ್ಷಗಳಿಂದ ಥಟ್ ಅಂತ ಹೇಳಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಇವರನ್ನು ನಡೆದಾಡುವ ಗ್ರಂಥಾಲಯ ಎಂದೇ ಹೇಳಲಾಗುತ್ತಿದೆ. 1986ರಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ ಪಡೆದ ಇವರು ಕೈಗಾರಿಕಾ ಕ್ಷೇತ್ರದಲ್ಲಿ ವೈದ್ಯಕೀಯ ತಜ್ಞರಾಗಿ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮೇಡಂ ಕ್ಯೂರಿ ಹಾಗೂ ಥಾಮಸ್ ಆಲ್ವಾ ಎಡಿಸನ್ ಅವರ ಬದುಕು ಡಾ ನಾ ಸೋಮೇಶ್ವರ್ ಮೇಲೆ ಅತೀವ ಪ್ರಭಾವ ಬೀರಿತು. 9ನೇ ಕ್ಲಾಸ್‌ನಲ್ಲಿ ಇರುವಾಗಲೇ 14 ನಾಟಕಗಳನ್ನ ಬರೆದವರು ಡಾ ನಾ ಸೋಮೇಶ್ವರ್. ವೈದ್ಯಕೀಯ ಹಾಗೂ ಸಾಹಿತ್ಯ ಲೋಕದ ಅವಿಸ್ಮರಣೀಯ ಸೇವೆಗೆ ಡಾ ನಾ ಸೋಮೇಶ್ವರ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.

ಸ್ನೇಹಾ ಸತ್ತದ್ದಕ್ಕೆ ನಗಬೇಕಿತ್ತು, ಆದ್ರೆ ಚಿತೆ ನೋಡಿ ಅಪ್ಪನ ನೆನಪಾಗೋಯ್ತು... ಕಣ್ಣೀರಾದ ಪುಟ್ಟಕ್ಕನ ಮಕ್ಕಳು ವಿಲನ್‌ ರಾಧಾ!

YouTube video player