ನಟಿ ರಾಖಿ ಸಾವಂತ್ ಬಿಗ್‌ಬಾಸ್ ಮನೆಗೆ ಬಂದ ಮೇಲೆ ಫುಲ್‌ಟೈಂ ಸುದ್ದಿಯಲ್ಲಿದ್ದಾರೆ.  ಪ್ಯಾಂಟ್‌ನಲ್ಲಿ ಸುಸ್ಸೂ ಮಾಡಿ, ಆಹಾರಕ್ಕಾಗಿ ಅತ್ತೂ ಕರೆದು ಅಂತೂ ರಾಖಿ ಏನ ಮಾಡಿದರೂ ಸುದ್ದಿಯಾಗುತ್ತಿದ್ದಾರೆ.

ಗೆಸ್ಟ್ ಕಂಟೆಸ್ಟೆಂಟ್ ಆಗಿ ಬಿಗ್‌ಬಾಸ್ ಮನೆಗೆ ಮರಳಿದ ರಾಖಿಗೆ ಒಂದು ಸರ್ಪೈಸ್ ಸಿಕ್ಕಿದೆ. ಅನಾರೋಗ್ಯದಿಂದಾಗಿ ಮನೆಯಿಂದ ಹೊರ ಹೋದ ಬಿಗ್‌ಬಾಸ್ 14ರ ಸ್ಪರ್ಧಿ ವಿಕಾಸ್ ಗುಪ್ತಾ ರಾಖಿ ಸಾವಂತ್‌ಗೆ ಗಿಫ್ಟ್ ಕೊಟ್ಟಿದ್ದಾರೆ.

ಬಿಗ್‌ಬಾಸ್ ಮನೆಯಲ್ಲಿ ಆಹಾರಕ್ಕಾಗಿ ಅಳ್ತಿದ್ದಾರೆ ಹಾಟ್ ಹುಡುಗಿ

ಆರೋಗ್ಯದ ಕಾರಣದಿಂದ ವಿಕಾಸ್ ಗುಪ್ತಾ ಬಿಗ್‌ಬಾಸ್ ಮನೆಯಿಂದ ಹೊರ ಹೋಗಿದ್ದರು. ಇದೀಗ ಮತ್ತೆ ಬಿಗ್‌ಬಾಸ್ ಮನೆಗೆ ಬಂದಿದ್ದು ಅವರಿಗೆ ಸ್ಪೆಷಲ್ ವೆಲ್‌ಕಮ್ ಸಿಕ್ಕಿದೆ. ಮನೆಗೆ ರೀಎಂಟ್ರಿ ಕೊಟ್ಟ ವಿಕಾಸ್ ಗುಪ್ತಾ ರಾಖಿ ಸಾವಂತ್‌ಗೆ ಒಂದು ಬಾಕ್ಸ್ ಜ್ಯು ವೆಲ್ಸ್ ಗಿಫ್ಟ್ ಮಾಡಿದ್ದಾರೆ.

ಇದು ನಿಮಗಾಗಿ, ನಿಮ್ಮಲ್ಲಿ ಇದು ಇಲ್ವಲ್ಲಾ..? ನೀವು ಪ್ರಯತ್ನ ಮಾಡೋದು ಕಾಣಿಸುತ್ತೆ ಎಂದು ಜ್ಯುವೆಲ್ಸ್ ತುಂಬಿದ ಬಾಕ್ಸ್ ಗಿಫ್ಟ್ ಕೊಟ್ಟಿದ್ದಾರೆ. ಉಡುಗೊರೆ ಪಡೆದು ಭಾವುಕರಾಗಿದ್ದಾರೆ ರಾಖಿ ಸಾವಂತ್. ಗಿಫ್ಟ್ ಕೊಟ್ಟ ನಂತರ ಇಬ್ಬರೂ ಪರಸ್ಪರ ತಬ್ಬಿಕೊಂಡಿದ್ದಾರೆ.

ನನ್ನ ಲೈಫಲ್ಲಿ ಗಂಡಸರಿಲ್ಲ, ಅಭಿನವ್ ಶುಕ್ಲಾ ವೀರ್ಯ ಬೇಕು ಎಂದ ರಾಖಿ ಸಾವಂತ್

ವಿಕಾಸ್ ಗುಪ್ತಾ ನಡೆಗೆ ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಕಾಸ್ ಮತ್ತು ರಾಖಿ ಬಿಗ್‌ಬಾಸ್ ಮನೆಯಲ್ಲಿ ಪ್ರತಿಬಾರಿ ಒಬ್ಬರನ್ನೊಬ್ಬರು ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ.