ಬಿಗ್‌ಬಾಸ್ ಸೀಸನ್ 14ರಲ್ಲಿ ಕಂಟೆಸ್ಟೆಂಟ್ಸ್ ಸದ್ಯ ಬೈಗುಳ ಬಿಟ್ಟು ಬೇರೇನನ್ನೂ ತಿನ್ನೋ ಹಾಗಿಲ್ಲ. ಯಾಕಂದ್ರೆ ತಿನ್ನೋದಕ್ಕೆ ಬಿಗ್‌ಬಾಸ್ ಮನೆಯಲ್ಲಿ ಏನೂ ಇಲ್ಲ. ಇದರಲ್ಲಿ ಡ್ಯಾನ್ಸಿಂಗ್ ಬ್ಯೂಟಿ ರಾಖಿ ಸಾವಂತ್ ಕೂಡಾ ಇದ್ದಾರೆ.

ಇತ್ತೀಚೆಗಷ್ಟೇ ಬಿಗ್‌ಬಾಸ್ ಸ್ಪರ್ಧಿಗಳು ಸ್ಪರ್ಧೆಯೊಂದರಲ್ಲಿ ರೂಲ್ಸ್ ಎಲ್ಲಾ ಬ್ರೇಕ್ ಮಾಡಿದ್ದಾರೆ. ಪರಿಣಾಮ ಮನೆಯಲ್ಲಿರೋ ಅಷ್ಟೂ ಜನಕ್ಕೆ ಉಪವಾಸ. ಕೊಟ್ಟ ರೇಷನ್ ಎಲ್ಲವನ್ನೂ ಹಿಂಪಡೆದಿದ್ದಾರೆ ಬಿಗ್‌ಬಾಸ್. ರಾಖಿ ಸಾವಂತ್ ಅಂತೂ ಭಾರೀ ಹಸಿವಿನಿಂದ ಕಷ್ಟ ಪಡ್ತಿದ್ದು, ಪ್ರೇಕ್ಷಕರಲ್ಲಿ ಆಹಾರಕ್ಕಾಗಿ ಕೇಳ್ಕೊಂಡಿದ್ದಾರೆ.

ಮಸ್ತಾನಿ, ಪದ್ಮಾವತಿಯಾದ ನಂತರ ಈಗ ದ್ರೌಪದಿಯಾಗ್ತಿದ್ದಾರೆ ದೀಪಿಕಾ

ಮುಜೆ ಭೂಕ್ ಲಗಿ ಹೈ ಬಿಗ್ ಬಾಸ್. ಯೆ ದೇಖೋ ಮೇರಾ ಪೇಟ್ ಪಾತ್ಲಾ ಹೋ ಗಯಾ ಹೈ - ನನಗೆ ಹಸಿವಾಗಿದೆ ಮತ್ತು ನನ್ನ ಹೊಟ್ಟೆ ತೆಳ್ಳಗಾಗಿದೆ ಎಂದು ರಾಖಿ ದಣಿದ ಮತ್ತು ಸಂಪೂರ್ಣವಾಗಿ ಬರಿದಾದಂತೆ ವರ್ತಿಸಿದ್ದಾರೆ. ವಿಕಾಸ್ ಗುಪ್ತಾ ಕುಚ್ ಖಾನೆ ಕೋ ದೇ ದೋ ಎಂದು ಬೇಡಿದ್ದಾರೆ. ರಾಖಿ ಸಾವಂತ್ ಅವರು ಬಾಳೆಹಣ್ಣಿನೊಂದಿಗೆ ಮಾತನಾಡಿದ್ದಾರೆ. ಹೇ ಬಾಳೆಹಣ್ಣು ನೀವು ಮಾತ್ರ ಬಾಕಿ ಇನ್ನು.ದಯವಿಟ್ಟು ನನ್ನ ಹೊಟ್ಟೆಯನ್ನು ತುಂಬಿಸಿ ಎಂದಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳಿಗೆ, ನಿಯಮಗಳನ್ನು ಮುರಿಯುವುದು ಮನೆಯಲ್ಲಿ ಒಂದು ಸಾಧನೆಯಂತಾಗಿದೆ. ಇಂದಿನಿಂದ, ವಿನಾಯಿತಿ ಪಡೆಯಲು ಯಾವುದೇ ಟಾಸ್ಕ್ ನೀಡಲಾಗುವುದಿಲ್ಲ ಮತ್ತು ಕ್ಯಾಪ್ಟನ್ ಇರುವುದಿಲ್ಲ. ಮಾತ್ರವಲ್ಲದೆ ನೀವೆಲ್ಲರೂ ನಿಮ್ಮ ಆಹಾರವನ್ನು ಪ್ರತ್ಯೇಕವಾಗಿ ಸಂಪಾದಿಸಬೇಕು ಎಂದು ಬಿಗ್‌ಬಾಸ್ ಹೇಳಿದ್ದಾರೆ.