ಪೆಟ್ರೋಲ್ ಬೆಲೆಯೇರಿಕೆ ವಿರುದ್ದ ಪೋಸ್ಟ್‌ ಹಾಕಿದ ಕನ್ನಡ ಕಿರುತೆರೆ ನಟನಿಗೆ ನಿಂದನೆ ಎದುರಾಗಿದೆ. ಫೇಸ್ ಬುಕ್ ನಲ್ಲಿ ವಿಜಯ್ ಶೋಭಾರಾಜ್ ಪಾವೂರು ವಿರುದ್ದ ವಾರ್ ಶುರುವಾಗಿದೆ.

ತುಳು ಸಿನಿಮಾ ಮತ್ತು ಕನ್ನಡ ಕಿರುತೆರೆ ನಟ ವಿಜಯ್ ಶೋಭಾರಾಜ್ ಪಾವೂರು ನಮೋ ನಮಗೆ ಮೋಸ, ಪೆಟ್ರೋಲ್ ದಗ ದಗ, ಡೀಸೇಲ್ ಭಗಭಗ' ಎಂದು ಪೋಸ್ಟ್ ಮಾಡಿದ್ದರು.

ಎಲ್ಲೆಲ್ಲೂ ರಶ್, ಥಿಯೇಟರ್‌ಗೆ ಯಾಕೆ ನಿರ್ಬಂಧ..? ಸರ್ಕಾರಕ್ಕೆ ಧ್ರುವ ಪ್ರಶ್ನೆ: ಸಾಥ್ ಕೊಟ್ಟ KGF ತಂಡ

ಶೋಭಾರಾಜ್ ಪೋಸ್ಟ್ ಗೆ ನೂರಾರು ಜನರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಬಹಳಷ್ಟು ಜನರು ಬೆದರಿಕೆ ಜೊತೆಗೆ ನಿಂದನೆಯ ಕಮೆಂಟ್ ಹಾಕಿದ್ದಾರೆ. ಮೋದಿ ವಿರುದ್ದ ಮಾತನಾಡಿದ್ರೆ ಸರಿಯಿರಲ್ಲ ಅಂತ ಬೆದರಿಕೆ ಹಾಕಿದ್ದು, ಶೋಭಾರಾಜ್ ನೂತನ ತುಳು ಸಿನಿಮಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ನೂರಾರು ಕಮೆಂಟ್ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಿ ಶೋಭರಾಜ್ ಕ್ಷಮೆ ಕೋರಿದ್ದರೂ ಕ್ಷಮಾಪಣೆ ಪೋಸ್ಟ್ ಮೇಲೂ ಬಹಳಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊನೆಗೆ ಕ್ಷಮಾಪಣೆ ಪೋಸ್ಟ್ ಡಿಲೀಟ್ ಮಾಡಿ ನಟ ಸೈಲೆಂಟ್ ಆಗಿದ್ದಾರೆ.

ರಕ್ಷಿತ್‌ ಶೆಟ್ಟಿಗೆ ಜೋಡಿಯಾಗಲಿದ್ದಾರೆ ಕರಾವಳಿ ಚೆಲುವೆ ರುಕ್ಮಿಣಿ ವಸಂತ್

ಕನ್ನಡ ಸೀರಿಯಲ್ ಗೀತಾ ಸೇರಿ ಹಲವು ಧಾರವಾಹಿಗಳಲ್ಲಿ ನಟಿಸುತ್ತಿರುವ ಶೋಭರಾಜ್ ಕಿರುತೆರೆಯಲ್ಲಿ ಸಕ್ರಿಯ ಕಲಾವಿದ. ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪೋಸ್ಟ್ ಮಾಡಿ ಕಷ್ಟಕ್ಕೆ ಸಿಲುಕಿದ್ದಾರೆ.