Asianet Suvarna News Asianet Suvarna News

Geetha Serial Updates: ಗೂಳಿ ಜೊತೆ ವಿಜಯ್ ಫೈಟ್, ಕನ್ನಡದ ಬಾಹುಬಲಿ ಎಂದ ನೆಟ್ಟಿಗರು

  • ಸದ್ಯಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ ಗೀತಾ ಧಾರವಾಹಿ
  • ಟ್ವಿಸ್ಟ್ ಮೇಲೆ ಟ್ವಿಸ್ಟ್, ನೆಟ್ಟಿಗರು ಏನಂತಿದ್ದಾರೆ ?
Vijay Fights With Bull Geetha kannada serial trolled dpl
Author
Bangalore, First Published Jan 15, 2022, 12:21 PM IST

ಬಹಳಷ್ಟು ಸಲ ಧಾರವಾಹಿ ಸೀನ್, ಡಯಲಾಗ್‌ಗಳು, ಕಾಸ್ಟ್ಯೂಮ್, ಸ್ಟೋರಿ ಲೈನ್ ವಾಸ್ತವದಿಂದ ದೂರ ಹೋದಾಗ ಟ್ರೋಲ್ ಆಗೋದು ಭಾರೀ ಸಹಜ. ಇಂಥದ್ದು ನಡೆಯುತ್ತಲೇ ಇರುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಗೀತಾ ಧಾರವಾಹಿ ಟ್ರೋಲ್ ಆಗೋದು ಇದೇ ಮೊದಲೇನಲ್ಲ. ಬಹಳಷ್ಟು ಸಲ ಗೀತಾ ಧಾರವಾಹಿ ಟ್ರೋಲ್ ಆಗಿದೆ. ಟ್ರೋಲ್ ಆಗುತ್ತಲೇ ಇರುತ್ತದೆ. ಈ ಹಿಂದೆ ಕಾಡಿನಲ್ಲಿ ಶೂಟಿಂಗ್ ಮಾಡಿ ನಿರ್ದೇಶಕರೂ, ನಟರೂ ಸೇರಿ ಸೀರಿಯಲ್ ತಂಡ ಹಿಗ್ಗಾಮುಗ್ಗ ಟ್ರೋಲ್ ಆಗಿತ್ತು. ಈಗ ಮತ್ತೆ ಅಂತಹದ್ದೇ ಒಂದು ಟ್ವಿಸ್ಟ್‌ಗೆ ಪ್ರೇಕ್ಷಕರು ಸಾಕ್ಷಿಯಾಗಿದ್ದಾರೆ.

ಗೀತಾ ಹಾಗೂ ವಿಜಯ್ ಲವ್‌ಸ್ಟೋರಿ, ಅದಕ್ಕೆ ಎದುರಾಗುವ ಸಮಸ್ಯೆಗಳು, ಮದುವೆಗೆ ಅಡ್ಡ ಬರೋ ಕಂಟಕ, ದೃಢ ಪ್ರೀತಿ, ಸವಾಲು ಎದುರಿಸೋ ಜೋಡಿ ಇವೆಲ್ಲವೂ ಗೀತಾ ಧಾರವಾಹಿಯಲ್ಲಿ ತುಂಬಾ ಕಾಮನ್. ಇವೆಲ್ಲದರ ಮಧ್ಯೆ ಆಗಾಗ ಒಂದೊಂದು ವಿಶೇಷ ಪ್ಲಾಟ್, ಕೆಲವು ವೀಶೇಷ ಎಪಿಸೋಡ್‌ಗಳಲ್ಲಿ ದೊಡ್ಡ ದೊಡ್ಡ ಸಿನಿಮೀಯ ಸಾಹಸಗಳು ನಡೆಯುತ್ತಲೇ ಇರುತ್ತವೆ. ಅಂತಹ ಸಾಹಸ ದೃಶ್ಯಗಳಲ್ಲಿ ಈ ಭಾರಿ ಗೂಳಿ ಜೊತೆ ನಾಯಕನಟ ಫೈಟ್ ಮಾಡಿದ್ದಾನೆ.

ಗೀತಾ ಸೀರಿಯಲ್ ಹಿಗ್ಗಾಮುಗ್ಗಾ ಟ್ರೋಲ್: ಲಾಕ್‌ಡೌನ್ ಮಾಡ್ರಪ್ಪಾ ಇವ್ರ ಕಾಟ ತಡ್ಕೊಳಕಾಗಲ್ಲ ಎಂದ ಫ್ಯಾನ್ಸ್

ಗೀತಾ ಕೆಂಬಣ್ಣದ ಸೀರೆಯುಟ್ಟು ನಸು ನಗುತ್ತಾ ತಲೆ ಬಗ್ಗಿಸಿ ನಡೆಯುತ್ತಿರುವಾಗ ಹಿಂದಿನಿಂದ ಆವೇಶದಲ್ಲಿ ಗೂಳಿಯೊಂದು ನುಗ್ಗಿ ಬರುತ್ತಿರುವುದು ಆಕೆಗೆ ತಿಳಿಯುವುದೇ ಇಲ್ಲ. ಎಲ್ಲಿದ್ದನೋ ವಿಜಿ, ಓಡಿ ಬಂದು ಗೀತಾ ಎಂದು ಕರೆದು ಗೂಳಿಯ ಕೊಂಬುಗಳನ್ನು ಹಿಡಿದು ಪತ್ನಿಗೆ ಅಡ್ಡಲಾಗಿ ನಿಲ್ಲುತ್ತಾನೆ. ಬೆಚ್ಚಿಬಿದ್ದ ಗೀತಾ ಕಣ್ಣರಳಿಸಿ ಭೀತಿಯಿಂದ ನೋಡುತ್ತಿರುವಾಗ ಸಡನ್ನಾಗಿ ಜನರು ಬಂದು ಸೇರುತ್ತಾರೆ.

ವಿಜಿ ಧೀರತನದಿಂದ ಗೂಳಿಯ ಕೊಂಬುಗಳನ್ನು ಹಿಡಿದು ಹೋರಾಡುತ್ತಾನೆ. ಸುತ್ತಲಿದ್ದ ಜನರು ಭೀತಿಯಿಂದ ಈ ದೃಶ್ಯವನ್ನು ನೋಡುತ್ತಲೇ ಇರುತ್ತಾರೆ. ಪಕ್ಕದಲ್ಲೇ ನಿಂತು ನೋಡುವ ಗೀತಾ, ವಿಜಿ ಹುಷಾರು ವಿಜಿ ಎಂದು ಕಾಳಜಿಯ ಮಾತುಗಳನ್ನಾಡುತ್ತಿರುವಾಗಲೇ ವಿಜಿಯ ತಂದೆಯೂ ಸ್ಥಳಕ್ಕೆ ತಲುಪುತ್ತಾರೆ. ವಿಜಿಯನ್ನು ಹಿಂದಕ್ಕೆ ಬರುವಂತೆ ಕರೆಯುತ್ತಾರೆ. ವಿಜಿಯ ಅತ್ತೆಯೂ ಸ್ಥಳಕ್ಕೆ ಬಂದು ಹುಷಾರು ಎಂದು ಧೈರ್ಯ ತುಂಬುತ್ತಾರೆ. ವಿಜಯ ಕಾಲುಗಳು ಧೂಳು ತುಂಬಿದ ನೆಲದಲ್ಲಿ ಜಾರುತ್ತಿರುತ್ತದೆ. ಕೊನೆಗೂ ವಿಜಯ್ ಗೂಳಿಯ ಕೊಂಬನ್ನು ಹಿಡಿದು ಅದನ್ನು ನೆಲಕ್ಕೆ ತಳ್ಳಿ ಹಾಕುತ್ತಾನೆ.

ಒಂದು ದಿನವೂ ಬಟ್ಟೆ ರಿಪೀಟ್ ಮಾಡಲ್ಲ, ಮನೆಯಲ್ಲಿ 3 ಸಾವಿರ ಬಟ್ಟೆಗಳಿವೆ: ನಟಿ ಭವ್ಯಾ ಗೌಡ!

ಈ ದೃಶ್ಯದಲ್ಲಿ ಗ್ರಾಫಿಕ್ಸ್‌ ಗೂಳಿಯನ್ನು ಬಳಸಿದ್ದರೂ ಸೀನ್ ಮಾತ್ರ ವಾಸ್ತವಕ್ಕೆ ತುಂಬಾ ದೂರವಿರುವಂತೆ ಭಾಸವಾಗುತ್ತದೆ. ಇಂತಹ ಸಾಹಸ ದೃಶ್ಯಗಳನ್ನು ಸೇರಿಸಿದರೂ ಬಹಳಷ್ಟು ಸಲ ಇದು ಫನ್ನಿಯಾಗಿ ಪ್ರೇಕ್ಷಕರಿಗೆ ತಲುಪುತ್ತಿದೆ. ಕಲರ್ಸ್ ಕನ್ನಡ ಶೇರ್ ಮಾಡಿದ ವಿಡಿಯೋಗೆ ಕಮೆಂಟಿಸಿರುವ ನೆಟ್ಟಿಗರು, ಗೂಳಿ ಜೊತೆ ವಿಜಯ್ ಫೈಟು! ಎಂದು ಕ್ಯಾಪ್ಶನ್ ಕೊಟ್ಟಿದೆ. ವಿಡಿಯೋ ನೋಡಿದ ನೆಟ್ಟಿಗರು ಫನ್ನಿ ಕಮೆಂಟ್ ಮಾಡುತ್ತಿದ್ದಾರೆ. ಇದರೊಂದಿಗೇ ಈ ಗೂಳೀ ದೃಶ್ಯ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ಕನ್ನಡದ ಬಾಹುಬಲಿ, ಡೈರೆಕ್ಟರ್ ಗೆ ಆಸ್ಕರ್ ಕೊಡಿ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು, ಪ್ರಪಂಚದ 420ನೇ ಅದ್ಬುತ ಎಂದಿದ್ದಾರೆ. ಇನ್ನೂ ಕೆಲವರು ಈ ಗೂಳೀ ಗ್ರಾಫಿಕ್ಸ್ ಅಂತ ಗೊತ್ತೇ ಆಗ್ತಿಲ್ಲ ಎಂದು ಕಾಲೆಳೆದಿದ್ದಾರೆ. ಇವತ್ತು ಬುಲ್ಸ್ ಮ್ಯಾಚ್ ಇದೆ ಮಿಸ್ ಮಾಡ್ಬೇಡಿ ಎಂದಿದ್ದಾರೆ ಇನ್ನು ಕೆಲವರು.

ಗೌರಮ್ಮ 'ಗೀತಾ' ಬಟ್ಟೆ ಇಷ್ಟು ತುಂಡ್ಯಾಕಮ್ಮ ಎಂದ ನೆಟ್ಟಿಗರು!

ಕನ್ನಡ ಧಾರವಾಹಿ ಗೀತಾ ಶೂಟಿಂಗ್ ಸದ್ಯ ಕಾಡಿನಲ್ಲಿ ನಡೆಯುತ್ತಿದೆ. ಕಾಡಿನ ಜನರೂ, ಅಲ್ಲಿ ಸಿಕ್ಕಿ ಹಾಕಿಕೊಳ್ಳುವ ಗೀತಾ-ವಿಜಿ ಜೋಡಿ, ಅಲ್ಲಿನ ಸಂಪ್ರದಾಯ, ರೊಮ್ಯಾನ್ಸ್, ಜಲಸಿ ಎಲ್ಲವನ್ನೂ ತರೋಕೆ ಹೋಗಿ ಸೀರಿಯಲ್ ಬೋರ್ ಹೊಡೆಸಿದ್ದಾರೆ ಡೈರೆಕ್ಟರ್. ಮೆಚ್ಚಿ ಸೀರಿಯಲ್ ನೋಡುತ್ತಿದ್ದ ಜನರೇ ಇದೀಗ ಸೀರಿಯಲ್ ಪ್ರೋಮೋ ನೋಡಿ ಕಾಟ ತಡ್ಕೊಳಕಾಗ್ತಿಲ್ಲ ಎನ್ನುತ್ತಿದ್ದಾರೆ. ರಬ್ಬರ್ ಥರ ಕಾಡಿನ ಸೀನ್, ಸನ್ನಿವೇಶಗಳನ್ನು ಡ್ರಾಗ್ ಮಾಡುತ್ತಿದ್ದು, ಜನರ ಬೋರ್ ಎನ್ನುತ್ತಿದ್ದಾರೆ. ನಮಗೂ ಒಂದ್ ಪಾರ್ಟ್ ಕೊಡೀಪ್ಪಾ, ನಾವು ಕಾಡಲ್ಲಿ ದಾಸವಾಳ ನೋಡ್ತಾ ಕೂರ್ತೀವಿ..(ದಾಸವಾಳ ಕಾಡಿನ ಜನರ ಹುಡುಗಿ), ಲಾಕ್‌ಡೌನ್ ಮತ್ತೆ ಹಾಕ್ರೀ ಪ್ಲೀಸ್, ಇವರ ಕಾಟ ತಡ್ಕೊಳಕಾಗ್ತಿಲ್ಲ ಎಂದಿದ್ದಾರೆ ಜನ.

Follow Us:
Download App:
  • android
  • ios