ಗೀತಾ ಸೀರಿಯಲ್ ಹಿಗ್ಗಾಮುಗ್ಗಾ ಟ್ರೋಲ್: ಲಾಕ್‌ಡೌನ್ ಮಾಡ್ರಪ್ಪಾ ಇವ್ರ ಕಾಟ ತಡ್ಕೊಳಕಾಗಲ್ಲ ಎಂದ ಫ್ಯಾನ್ಸ್

ಕನ್ನಡ ಧಾರವಾಹಿ ಗೀತಾ ಸದ್ಯ ಹಿಗ್ಗಾಮುಗ್ಗಾ ಟ್ರೋಲ್ ಆಗ್ತಿದೆ. ವಿಜಿ ಮತ್ತು ಗೀತಾರ ಕಾಡಿನಲ್ಲಿ ಕಳೆಯೋ ಸೀನ್‌ಗಳನ್ನು ನೋಡಿ ಸುಸ್ತಾಗಿರೋ ಫ್ಯಾನ್ಸ್ ಏನೇನ್ ಹೇಳ್ತಿದ್ದಾರೆ ಕೇಳಿ

Kannada serial Geetha getting trolled in Social media for its latest episodes dpl

ಕನ್ನಡ ಧಾರವಾಹಿ ಗೀತಾ ಶೂಟಿಂಗ್ ಸದ್ಯ ಕಾಡಿನಲ್ಲಿ ನಡೆಯುತ್ತಿದೆ. ಕಾಡಿನ ಜನರೂ, ಅಲ್ಲಿ ಸಿಕ್ಕಿ ಹಾಕಿಕೊಳ್ಳುವ ಗೀತಾ-ವಿಜಿ ಜೋಡಿ, ಅಲ್ಲಿನ ಸಂಪ್ರದಾಯ, ರೊಮ್ಯಾನ್ಸ್, ಜಲಸಿ ಎಲ್ಲವನ್ನೂ ತರೋಕೆ ಹೋಗಿ ಸೀರಿಯಲ್ ಬೋರ್ ಹೊಡೆಸಿದ್ದಾರೆ ಡೈರೆಕ್ಟರ್.

ಮೆಚ್ಚಿ ಸೀರಿಯಲ್ ನೋಡುತ್ತಿದ್ದ ಜನರೇ ಇದೀಗ ಸೀರಿಯಲ್ ಪ್ರೋಮೋ ನೋಡಿ ಕಾಟ ತಡ್ಕೊಳಕಾಗ್ತಿಲ್ಲ ಎನ್ನುತ್ತಿದ್ದಾರೆ. ರಬ್ಬರ್ ಥರ ಕಾಡಿನ ಸೀನ್, ಸನ್ನಿವೇಶಗಳನ್ನು ಡ್ರಾಗ್ ಮಾಡುತ್ತಿದ್ದು, ಜನರ ಬೋರ್ ಎನ್ನುತ್ತಿದ್ದಾರೆ.

ಕನ್ನಡತಿಯಲ್ಲಿ ಭುವಿಯನ್ನು ಕಾಡುವ ತಂಗಿ ಬಿಂದು ಇವರೇ ನೋಡಿ..!

ನಮಗೂ ಒಂದ್ ಪಾರ್ಟ್ ಕೊಡೀಪ್ಪಾ, ನಾವು ಕಾಡಲ್ಲಿ ದಾಸವಾಳ ನೋಡ್ತಾ ಕೂರ್ತೀವಿ..(ದಾಸವಾಳ ಕಾಡಿನ ಜನರ ಹುಡುಗಿ), ಲಾಕ್‌ಡೌನ್ ಮತ್ತೆ ಹಾಕ್ರೀ ಪ್ಲೀಸ್, ಇವರ ಕಾಟ ತಡ್ಕೊಳಕಾಗ್ತಿಲ್ಲ ಎಂದಿದ್ದಾರೆ ಜನ.

Kannada serial Geetha getting trolled in Social media for its latest episodes dpl

Kannada serial Geetha getting trolled in Social media for its latest episodes dpl

ಸದ್ಯ ಸೀರಿಯಲ್ ಪ್ರೋಮೋ ನೋಡುವುದಕ್ಕಿಂತ ಹೆಚ್ಚಾಗಿ ಅವುಗಳಿಗೆ ಬರುವ ಕಮೆಂಟ್‌ಗಳೇ ವೈರಲ್ ಆಗ್ತಿವೆ. ಕಾಡಲ್ಲಿ ಇದ್ದೂ ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾರೆ, ಅವರಲ್ಲಪ್ಪ ಕಾಡು ಮನುಷ್ಯರು, ಇದ್ನೆಲ್ಲಾ ನೋಡೋ ನಾವೇ ಕಾಡು ಮನುಷ್ಯರು ಅಂತಿದ್ದಾರೆ ವೀಕ್ಷಕರು.

'ಡಿಯರ್ ಕಣ್ಮಣಿ' ಚಿತ್ರದಲ್ಲಿ ಕಿರುತೆರೆ ನಟಿ ಭವ್ಯಾ ಗೌಡ; ಹೇಗಿರಲಿದೆ ಗೀತಾ ಪಾತ್ರ?

ಇದೆಂಥಾ ಕರ್ಮ ಮಾರ್ರೆ, ದಯವಿಟ್ಟು ಈ ಸೀರಿಯಲ್ ಸ್ಟಾಪ್ ಮಾಡಿ,  ಬಿಗ್‌ಬಾಸ್ ಅಪ್ಡೇಟ್‌ಗೋಸ್ಕರ ಫಾಲೋ ಮಾಡಿ ಏನೇನ್ ನೋಡ್ಬೇಕಾಗಿದೆ.. ನೋಡಿ ಈವಾಗ ಎಂದು ಗೋಳು ಹೇಳ್ಕೊಂಡಿದ್ದಾರೆ ವೀಕ್ಷಕರು. ಇನ್ನೊಬ್ಬ ಫ್ಯಾನ್ ಪರ್ವಾಗಿಲ್ಲ ಮಂಗಳಗೌರಿಗಿಂತ ಬೆಟರ್ ಎಂದಿದ್ದಾರೆ.

Kannada serial Geetha getting trolled in Social media for its latest episodes dpl

Kannada serial Geetha getting trolled in Social media for its latest episodes dpl

Latest Videos
Follow Us:
Download App:
  • android
  • ios