ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಕ ಸ್ಥಾನ ತೆರವಾಗಿದೆ. ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಈ ರಿಯಾಲಿಟಿ ಶೋಗೆ ನಿರೂಪಣೆಯನ್ನು ಹೊಸ ನಟನಿಗೆ ನೀಡಲಾಗುತ್ತಿದೆ. ಯಾರು ಆ ನಟ?
ಹೈದರಾಬಾದ್(ಮಾ.05) ಬಿಗ್ ಬಾಸ್ ರಿಯಾಲಿಟಿ ಶೋ ಹಲವು ಭಾಷೆಗಳಲ್ಲಿ ಅತ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಕನ್ನಡ, ಹಿಂದೆ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಮುಖ ಸ್ಟಾರ್ ನಟರು ಇದುವರೆಗೂ ಕಾರ್ಯಕ್ರಮ ಹೋಸ್ಟ್ ಮಾಡಿದ್ದಾರೆ. ಕಳೆದ ಬಿಗ್ ಬಾಸ್ ಆವೃತ್ತಿಯೊಂದಿಗೆ ಕನ್ನಡದಲ್ಲಿ ಕಿಚ್ಚ ಸುದೀಪ್ ತಮ್ಮ ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ. ಇದೇ ರೀತಿ ತೆಲುಗು ಬಿಗ್ ಬಾಸ್ ಕಾರ್ಯಕ್ರಮವನ್ನು ನಾಗಾರ್ಜುನ ಹೋಸ್ಟ್ ಮಾಡುತ್ತಿದ್ದಾರೆ. ಆದರೆ ಮುಂದಿನ ಆವೃತ್ತಿಯಲ್ಲಿ ತೆಲುಗು ಬಿಗ್ ಬಾಸ್ ಶೋ ಕಾರ್ಯಕ್ರಮವನ್ನು ನಾಗಾರ್ಜುನ ಬದಲು ಯುವ ನಟನಿಗೆ ಜವಾಬ್ದಾರಿ ನೀಡಲಾಗುತ್ತಿದೆ.
ಹೌದು, ತೆಲುಗು ಬಿಗ್ ಬಾಸ್ ಶೋ ಮುಂದಿನ ನಿರೂಪಣೆ ಜವಾಬ್ದಾರಿಯನ್ನು ವಿಜಯ್ ದೇವರಕೊಂಡಗೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಸಿನಿಮಾ ಸೇರಿದಂತೆ ಇತರ ಕಾರಣಗಳಿಂದ ಮುಂದಿನ ಬಿಗ್ ಬಾಸ್ ಶೋ ನಿರೂಪಕಣೆ ಮಾಡಲು ನಾಗಾರ್ಜುನಗೆ ಸಾಧ್ಯವಾಗುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ನಾಗಾರ್ಜುನ್ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ವಿಜಯ ದೇವರಕೊಂಡ ಜೊತೆ ಮೊದಲ ಸುತ್ತಿನ ಮಾತುಕತೆ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.
ಅರೇ.. 'ಕೋಣ'ಕ್ಕೆ ಕೈ ಹಾಕಿದ್ದೇಕೆ ನಟಿ ತನಿಷಾ..? ಬೆಂಕಿ ಅಂದ್ರೆ ಸುಮ್ನೆ ಅಲ್ಲಾರೀ ಅಂದ್ರೂ ಇದು...
ಬಿಗ್ ಬಾಸ್ ಆಯೋಜಕರು ಈಗಾಗಲೇ ವಿಜಯ್ ದೇವರಕೊಂಡ ಜೊತೆ ಮಾತುಕತೆ ನಡೆಸಿದ್ದಾರೆ. ಬಿಗ್ ಬಾಸ್ ನಿರೂಪಣೆಗೆ ದೊಡ್ಡ ಸಂಭಾವನೆಯನ್ನು ಆಫರ್ ಮಾಡಲಾಗಿದೆ ಎಂದು ಸುದ್ದಿಯಾಗಿದೆ. ವಿಜಯ ದೇವರಕೊಂಡ ಸ್ಟೈಲ್, ಮಾತುಕತೆ ಎಲ್ಲವೂ ಬಿಗ್ ಬಾಸ್ ನಿರೂಪಣೆಗೆ ಸೂಕ್ತ ಎಂದು ಆಯೋಜಕರು ಚರ್ಚಿಸಿದ್ದಾರೆ. ಇತ್ತ ನಾಗಾರ್ಜುನ ತೆಲುಗು ಬಿಗ್ ಬಾಸ್9 ರಿಂದ ನಿರ್ಗಮಿಸುತ್ತಿರುವ ಕುರಿತು ಅಧಿಕೃತ ಹೇಳಿಕೆ ಅಥವಾ ಪ್ರಕಟಣೆ ನೀಡಿಲ್ಲ. ಆದರೆ ಮುಂದಿನ ಆವೃತ್ತಿಯಲ್ಲಿ ನಾಗಾರ್ಜನ ನಿರೂಪಣೆ ಮಾಡುತ್ತಿಲ್ಲ ಅನ್ನೋ ಸುದ್ದಿಗಳು ಭಾರಿ ಹರಿದಾಡುತ್ತಿದೆ. ನಾಗಾರ್ಜುನ ಅಧಿಕೃತ ಹೇಳಿಕೆ ನೀಡದ ಕಾರಣ ವಿಜಯ್ ದೇವರಕೊಂಡ ಬಿಗ್ ಬಾಸ್ ನಿರೂಪಣೆ ಕುರಿತು ಬಿಗ್ ಬಾಸ್ ಆಯೋಜಕರು ಘೋಷಣೆ ಮಾಡಿಲ್ಲ. ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.
ಬಿಗ್ ಬಾಸ್ ತೆಲುಗು ಆವೃತ್ತಿ ಆರಂಭಗೊಂಡಿದ್ದು 2017ರಿಂದ. ಆದರೆ ಮೊದಲ ಸೀಸನ್‌ನಲ್ಲಿ ಜ್ಯೂನಿಯರ್ ಎನ್‌ಟಿಎರ್ ನಿರೂಪಕನಾಗಿ ಕಾಣಿಸಿಕೊಂಡಿದ್ದರು. ಭರ್ಜರಿ ಆರಂಭ ಪಡೆದ ಬಿಗ್ ಬಾಸ್ 2ನೇ ಆವೃತ್ತಿಗೆ ನಿರೂಪಕ ಬದಲಾಗಿದ್ದರು. ಚಿತ್ರದ ಶೂಟಿಂಗ್ ಸೇರಿದಂತೆ ಹಲವು ಕಾರಣಗಳಿಂದ ಎನ್‌ಟಿಆರ್ ನಿರೂಪಣೆ ಮುಂದುವರಿಸಲಿಲ್ಲ. ಆದರೆ 2ನೇ ಆವೃತ್ತಿಯನ್ನು ನಟ ನಾನಿ ನಡೆಸಿಕೊಟ್ಟಿದ್ದರು. ಆದರೆ ಎನ್‌ಟಿಆರ್ ಇದ್ದಾಗಿನ ಪ್ರಚಾರತೆ ಅಬ್ಬರ ಕಾಣಿಸಲಿಲ್ಲ. ಹೀಗಾಗಿ ಮೂರನೇ ಬಿಗ್ ಬಾಸ್ ಆವೃತ್ತಿಗೆ ನಿರೂಪಕನಿಗಾಗಿ ಭಾರಿ ಚರ್ಚೆ ನಡೆಸಿ ಆಯ್ಕೆ ಮಾಡಲಾಗಿತ್ತು. ಈ ವೇಳೆ ಭಾರಿ ಮೊತ್ತ ಆಫರ್ ಮಾಡಿ ನಾಗಾರ್ಜುನಗೆ ಬಿಗ್ ಬಾಸ್ ಶೋ ನಿರೂಪಣೆ ಜವಾಬ್ದಾರಿ ನೀಡಲಾಗಿತ್ತು.
ನಾಗಾರ್ಜುನ ಬಿಗ್ ಬಾಸ್ ನಿರೂಪಕನಾದ ಬಳಿಕ ತೆಲುಗು ರಿಯಾಲಿಟಿ ಶೋನ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿತ್ತು. ಪ್ರತಿ ಆವೃತ್ತಿಗಳಲ್ಲಿ ನಾಗಾರ್ಜುನ ಉತ್ತಮ ನಿರೂಪಕನಾಗಿ ಶೋ ನಡೆಸಿಕೊಟ್ಟಿದ್ದರು. ನಾರ್ಗುಜನ ಸಲಹೆ, ಸೂಚನೆ, ಮಾತುಕತೆ ತೆಲುಗು ಮನೆ ಮಂದಿಗೆ ಇಷ್ಟವಾಗಿತ್ತು. ಹೀಗಾಗಿ ಮೂರನೇ ಆವೃತ್ತಿಯಿಂದ ಇದುವರೆಗೂ ನಾಗಾರ್ಜುನ ಬಿಗ್ ಬಾಸ್ ಶೋ ನಡೆಸಿಕೊಟ್ಟಿದ್ದಾರೆ. ಸದ್ಯ ತೆಲುಗು ಬಿಗ್ ಬಾಸ್ 8 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮುಂದಿನ 9ನೇ ಆವೃತ್ತಿಗೆ ನಿರೂಪಕನ ಬದಲಾವಣೆಯಾಗಲಿದೆ. ಇದೀಗ ತೆಲುಗು ಬಿಗ್ ಬಾಸ್ ಪ್ರೇಕ್ಷರಲ್ಲಿ ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಇಷ್ಟು ಗಾಢ ಹಸಿರು ನಿಮಗೆ ಬೇಡವೆಂದ ನೆಟ್ಟಿಗರು: ಶ್ವೇತಾ ಚಂಗಪ್ಪ ಫೋಟೋಸ್ ವೈರಲ್
