ಅಮೃತಧಾರೆಯ ಭಾಗ್ಯಮ್ಮ ಎದ್ದೇಳೋದೇ ಇಲ್ವಾ? ಚಿತ್ಕಲಾ ಬಿರಾದಾರ್ ಫ್ಯಾನ್ಸ್ ಬೇಸರ

 ಅಮೃತಧಾರೆಯ ಭಾಗ್ಯ ದಿವಾನ್‌ ಆಗಿ ಚಿತ್ಕಲಾ ಬೀರಾದಾರ್ ನಟಿಸಲು ಬಂದು ಅದ್ಯಾವುದೋ ಕಾಲ ಆಯ್ತು. ಇನ್ನೂ ಆಕೆ ಮಲಗೇ ಇದ್ದಾರೆ. ಇಂಥ ಅದ್ಭುತ ನಟಿಯನ್ನು ಇನ್ನೆಷ್ಟು ದಿನ ಮಲಗಿಸ್ತೀರಿ, ಎಬ್ಬಿಸಬಾರ್ದಾ ಅಂತ ಫ್ಯಾನ್ಸ್ ಕೇಳ್ತಿದ್ದಾರೆ.

viewers demanding amruthadhare serial bhagyamma role should be active

ಅಮೃತಧಾರೆ ಸೀರಿಯಲ್‌ನಲ್ಲಿ ಭಾಗ್ಯ ದಿವಾನ್ ಪಾತ್ರ ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾದ ಕ್ಯಾರೆಕ್ಟರ್. ಈ ಪಾತ್ರವನ್ನು ನಿರ್ವಹಿಸ್ತಾ ಇರೋದು ಹೆಸರಾಂತ ನಟಿ ಚಿತ್ಕಲಾ ಬಿರಾದಾರ್. ಈ ಹಿಂದೆ ಕಲರ್ಸ್ ಕನ್ನಡದ 'ಕನ್ನಡತಿ' ಸೀರಿಯಲ್‌ನಲ್ಲಿ ಅಮ್ಮಮ್ಮ ಆಗಿ ಫೇಮಸ್ ಆಗಿದ್ದ ಈ ನಟಿ ಆಮೇಲೆ ಸಾಲು ಸಾಲು ಸಿನಿಮಾಗಳಲ್ಲೂ ಬ್ಯುಸಿ ಆದರು. ಸದ್ಯ ಅಮೃತಧಾರೆ ಎಂಬ ಸೀರಿಯಲ್‌ನಲ್ಲಿ ಭಾಗ್ಯಾ ದಿವಾನ್ ಎಂಬ ಪವರ್‌ಫುಲ್ ಪಾತ್ರದಲ್ಲಿ ಚಿತ್ಕಲಾ ಕಾಣಿಸಿಕೊಳ್ತಿದ್ದಾರೆ. ಇಂಗ್ಲೀಷ್ ಪ್ರೊಫೆಸರ್ ಆಗಿದ್ದ ಈ ಉತ್ತರ ಕರ್ನಾಟಕದ ಸುಸಂಸ್ಕೃತ ಹೆಣ್ಣುಮಗಳ ಮನರಂಜನಾ ಮಾಧ್ಯಮದಲ್ಲಿನ ಜರ್ನಿಯೇ ಸಖತ್ ಇಂಟರೆಸ್ಟಿಂಗ್. ಈ ಮೊದಲು ಒಂದಿಷ್ಟು ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದರೂ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟದ್ದು ಕಿರುತೆರೆ. ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚಾಗಿ ಸೌಂಡ್​ ಮಾಡುತ್ತಿದ್ದ ಧಾರಾವಾಹಿ ಎಂದರೆ ಅದು ಕನ್ನಡತಿ. ಇದೇ ಕನ್ನಡತಿ ಸೀರಿಯಲ್​ ಮೂಲಕ ಅಮ್ಮಮ್ಮನಾಗಿ ವೀಕ್ಷಕರ ಮೇಲೆ ಪ್ರಭಾವ ಬೀರಿದ ನಟಿ ಚಿತ್ಕಳಾ ಬಿರಾದಾರ್. ಕನ್ನಡತಿ ಬಳಿಕ ಬೃಂದಾವನ ಧಾರಾವಾಹಿಯಲ್ಲಿ ವಿಭಿನ್ನ ಹೇರ್ ಸ್ಟೈಲ್​ನೊಂದಿಗೆ ವೀಕ್ಷಕರ ಗಮನ ಸೆಳೆದಿದ್ದರು.

ಬೃಂದಾವನದ ನಂತರ ಸೀರಿಯಲ್​ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಚಿತ್ಕಳಾ ಅವರು ಅಮೆರಿಕ ಪ್ರವಾಸದಲ್ಲಿದ್ರು. ಮಗ ಸೊಸೆ ಜೊತೆ ಸಮಯ ಕಾಳಿತಿದ್ರು. ಅಲ್ಲಿಂದ ಬಂದ್ಮೇಲೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ರು. ಸದ್ಯ ಮತ್ತೆ ಹೊಸ ಪಾತ್ರದಲ್ಲಿ ವೀಕ್ಷಕರ ಮುಂದೆ ಬಂದ ಕಮಾಲ್​ ಮಾಡುತ್ತಿದ್ದಾರೆ.

ಅಮೃತಧಾರೆಯಲ್ಲಿ ಭೂಮಿಕಾ ತವರು ಮನೆಯವರೆಲ್ಲಾ ನಾಪತ್ತೆ! ಎಲ್ಲಿದ್ದಾರೆ ಎಲ್ಲರು?

ಈ ಹಿಂದೆ ನಟಿ ಸೀರಿಯಲ್​ನಿಂದ ದೂರ ಉಳಿದುಕೊಂಡಾಗ 'ಯಾವಾಗ ನಿಮ್ಮನ್ನ ನೋಡೋದು ಮೇಡಂ?' ಅಂತ ಅಭಿಮಾನಿಗಳು ಕೇಳಿದ್ದರು. ಈಗಾಗಲೇ ಇದಕ್ಕೆ ಉತ್ತರ ಕೂಡ ಸಿಕ್ಕಿದೆ. ಅಮೃತಧಾರೆ ಧಾರವಾಹಿಯ ಭಾಗ್ಯಮ್ಮನಾಗಿ ಚಿತ್ಕಳಾ ಬಿರಾದಾರ್ ನಟಿಸುತ್ತಿದ್ದಾರೆ. ಅಮ್ಮನಿಗೆ ಹಂಬಲಿಸುತ್ತಿದ್ದ ನಾಯಕ ಗೌತಮ್​ ತಾಯಿ ಭಾಗ್ಯ ಪಾತ್ರಕ್ಕೆ ನಟಿ ಚಿತ್ಕಳಾ ಬಿರಾದಾರ್ ಜೀವ ತುಂಬುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಸದ್ಯ ಗೌತಮ್ ದಿವಾನ್ ತಂಗಿ ಸುಧಾ ಹಾಗೂ ತಾಯಿ ಭಾಗ್ಯ ಗೌತಮ್‌ ಅವರ ಕ್ವಾಟ್ರಸ್‌ನಲ್ಲೇ ಉಳಿದುಕೊಂಡಿದ್ದಾರೆ. ತಾವು ಇದ್ದುಕೊಂಡಿದ್ದ ಮನೆಗೆ ಬೆಂಕಿ ಬಿದ್ದ ಬೆನ್ನಲ್ಲೇ ಗೌತಮ್​ ಮನೆಯಲ್ಲಿ ನೆಲೆಸಿದ್ದಾರೆ. ಆದ್ರೆ ಇವರೇ ನನ್ನ ತಾಯಿ ಹಾಗೂ ತಂಗಿ ಅಂತ ಗೌತಮ್​ಗೆ ಗೊತ್ತಿಲ್ಲ. ಈ ವಿಚಾರ ಗೊತ್ತಾದಾಗ ಗೌತಮ್​ ರಿಯಾಕ್ಷನ್​ ಹೇಗಿರುತ್ತೆ ಅಂತ ನೋಡೋದಕ್ಕೆ ವೀಕ್ಷಕರು ಕೂಡ ಕಾಯುತ್ತಿದ್ದಾರೆ.

ಆದರೆ ಸುಧಾಳೇ ಗೌತಮ್ ತಂಗಿ, ಅವಳ ತಾಯಿಯೇ ಗೌತಮ್ ತಾಯಿ ಅನ್ನೋದು ವಿಲನ್ ಶಕುಂತಲಾದೇವಿಗೆ ಗೊತ್ತಾಗಿದೆ. ಹೇಗಾದರೂ ಮಾಡಿ ಇವರಿಬ್ಬರನ್ನು ದೂರ ಹಾಕಬೇಕು ಅಂತ ಈಕೆ ಮತ್ತು ಇವಳ ಶಕುನಿ ತಮ್ಮ ಸುಧಾಳ ಮೇಲೆ ಕಳ್ಳತನದ ಆರೋಪ ಹೊರೆಸಿದ್ದಾರೆ. ಈ ಮೂಲಕ ಗೌತಮ್‌ಗೆ ಈಕೆಯ ಮೇಲೆ ದ್ವೇಷ ಉಂಟಾಗುವಂತೆ ಮಾಡುವ ಯೋಜನೆ ಅವಳದ್ದು. ಗೌತಮ್‌ಗೆ ನಂಬಿಕೆದ್ರೋಹ ಕಂಡರೆ ಆಗೋದಿಲ್ಲ. ಹೀಗಾಗಿ, ಸುಧಾಳ ಮೇಲೆ ಈ ಮನೆಯಲ್ಲಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಲು ಯತ್ನಿಸುತ್ತಾಳೆ. ಆದರೆ ಸುಧಾ ತನ್ನ ಪ್ರಮಾಣಿಕತೆಯಿಂದಲೇ ಮತ್ತೊಮ್ಮೆ ಗೌತಮ್ ದಿವಾನ್ ಮತ್ತು ಭೂಮಿಕಾ ತನ್ನ ಮೇಲಿಟ್ಟಿರುವ ನಂಬಿಕೆ ಹೆಚ್ಚುವಂತೆ ಮಾಡುತ್ತಾಳೆ.

ತೆಲಂಗಾಣದಲ್ಲಿ ಕಿಚ್ಚು ಹಚ್ಚಿದ ಅಲ್ಲು ಅರ್ಜುನ್ ವಿವಾದ: ರಾಜಕಾರಣಿ ವಿಜಯಶಾಂತಿ ಕಿಡಿ

ಇದರ ನಡುವೆ ವೀಕ್ಷಕರ ಅಸಹನೆಗೆ ತುತ್ತಾಗಿರೋದು ಭಾಗ್ಯಮ್ಮ ಪಾತ್ರ. ಚಿತ್ಕಳಾ ಬಿರಾದಾರ್ ಅವರು ಲವಲವಿಕೆಯ ನಟನೆಗೆ ಹೆಸರಾದವರು. ಅವರನ್ನು ಎಷ್ಟೋ ಕಾಲದಿಂದ ಪೇಶೆಂಟ್ ಮಾಡಿಹಾಕಿ ಬೆಡ್‌ನಿಂದ ಮೇಲೇಳೋದಕ್ಕೇ ಬಿಡ್ತಿಲ್ಲ. ಈ ಭಾಗ್ಯ ಪಾತ್ರಕ್ಕೆ ಮತ್ತೆ ಆರೋಗ್ಯ ಕೊಟ್ಟು ಆಕೆ ಲವಲವಿಕೆಯಿಂದ ಓಡಾಡೋ ಹಾಕಿ ಮಾಡಿ ಅಂತ ವೀಕ್ಷಕರು ಈ ಸೀರಿಯಲ್ ನಿರ್ದೇಶಕರಿಗೆ ದುಂಬಾಲು ಬೀಳ್ತಿದ್ದಾರೆ. ಜೊತೆಗೆ ಚಿತ್ಕಲಾ ಅವರಂಥಾ ಪ್ರತಿಭಾವಂತ ನಟಿಯನ್ನು ಈಗಾಲೇ ಸಾಕಷ್ಟು ಸಮಯದಿಂದ ಬೆಡ್ ರಿಡರ್ನ್ ಮಾಡಿದ್ದೀರಿ. ಬೇಗ ಆಕೆ ಮೇಲೇಳೋ ಹಾಗೆ ಮಾಡಿ ಅನ್ನೋದು ಚಿತ್ಕಳಾ ಅಭಿಮಾನಿಗಳ ಕೋರಿಕೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios