ಬೆಂಗಳೂರಿನಲ್ಲಿ ಮಧ್ಯರಾತ್ರಿ ಬೈಕ್​ ಹಿಂಬದಿ 'ಭೂತ'ದ ಸವಾರಿ: ವಿಡಿಯೋದಲ್ಲಿರೋ ಕಾಲಿನ ಮೇಲೆ ಎಲ್ಲರ ಕಣ್ಣು!

ಬೈಕ್​ ಹಿಂಭಾಗದಲ್ಲಿ ಶ್ವೇತ ವರ್ಣದ ಬಟ್ಟೆ ಧರಿಸಿ ಬೈಕ್​  ಹಿಂಭಾಗದಲ್ಲಿ ಕೂತು ಹೋಗುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್​ ಆಗಿದ್ದು,  ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ.
 

video of a person wearing white cloth seems life ghost sitting on the back of a bike has gone viral suc

ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. 

ಇದೀಗ ಬೆಂಗಳೂರಿನ ನೆಲಮಂಗಲದ ಬೈಕ್​ನ ಹಿಂದುಗಡೆ ಭೂತ ಒಂದು ಸವಾರಿ ಮಾಡುತ್ತಿರುವ ವಿಡಿಯೋ ವೈರಲ್​  ಆಗಿದೆ. ಕಾರಿನಲ್ಲಿ ಹೋಗುತ್ತಿರುವ ವ್ಯಕ್ತಿಯೊಬ್ಬರು ಇದರ ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ. ಇದರ ವಿಡಿಯೋ ಅನ್ನು ಅಲೆಮಾರಿ ಪ್ರಸನ್ನ ಎನ್ನುವವರು ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬಿಳಿಯ ಬಣ್ಣದ ಬಟ್ಟೆ ಗಾಳಿಯಲ್ಲಿ ಹಾರಾಡುತ್ತಿದೆ.  ಇದಕ್ಕೆ ಅವರು ನಿನ್ನೆ ರಾತ್ರಿ ನೆಲಮಂಗಲ ಬೆಂಗಳೂರು ರಸ್ತೆಯಲ್ಲಿ ಸವಾರನಿಗೆ ಅರಿವಿಲ್ಲದಂತೆ ದ್ವಿಚಕ್ರ ವಾಹನದ ಹಿಂದಿನ ಸೀಟಲ್ಲಿ ಕುಳಿತು ಸವಾರಿ ಮಾಡಿದ ಬಿಳಿ ದೆವ್ವ ಎಂದು ಕ್ಯಾಪ್ಷನ್​ ಕೊಟ್ಟು ಶೇರ್​ ಮಾಡಿದ್ದಾರೆ.

ಟೆರೇಸ್​ ಮೇಲಿಂದ ಪಕ್ಕದ ಮನೆ ಅಂಕಲ್​ರನ್ನು ಮಾತನಾಡಿಸಿ ತಿರುಗಿದ್ರೆ ನಮ್ಮನೆ ಸೋಫಾದ ಮೇಲೆ ಕುಳಿತಿದ್ರು! ಭೂತದ ಕಥೆ ಇದು!

ಇದನ್ನು ನೋಡಿ ನೆಟ್ಟಿಗರು ಬಿದ್ದೂ ಬಿದ್ದೂ ನಗುತ್ತಿದ್ದಾರೆ. ಭೂತಕ್ಕೆ ಕಾಲು ಮತ್ತು ಪ್ಯಾಂಟ್​ ಯಾಕೆ ಇದೆ ಎಂದು ಪ್ರಶ್ನಿಸುತ್ತಿದ್ದಾರೆ. ಅಸಲಿಗೆ ತುಂಬಾ ಚಳಿಯ ಹಿನ್ನೆಲೆಯಲ್ಲಿ ಯಾರೋ ಬಿಳಿ ಬಣ್ಣದ ಶಾಲ್​ ಅನ್ನು ಹೊದ್ದುಕೊಂಡು ಹೋಗುತ್ತಿದ್ದಾರೆ. ಇದು ಗಾಳಿಯಲ್ಲಿ ಹಾರಾಡುತ್ತಿದೆ.  ಆದರೆ ಒಬ್ಬರೇ ಹಿಂದುಗಡೆಯಿಂದ ಬರುತ್ತಿದ್ದರೆ ಅರೆಕ್ಷಣ ಬೆಚ್ಚಿ ಬೀಳೋದಂತೂ ಗ್ಯಾರೆಂಟಿ. ಹೇಳಿ ಕೇಳಿ ಕತ್ತಲು ಜೊತೆಗೆ ಜಿಡಿಜಿಡಿ ಮಳೆ. ಇಂಥ ಸಮಯದಲ್ಲಿ ಹೀಗೆ ಕಾಣಿಸಿಕೊಂಡರೆ ಯಾರಾದರೂ ಹೆದರಿಕೊಂಡು ಬಿಟ್ಟಾರು.

ಆದರೆ ಇದರ ವಿಡಿಯೋ ನೋಡಿದವರು ಥಹರೇವಾರಿ ಕಮೆಂಟ್​ ಹಾಕುತ್ತಿದ್ದಾರೆ. ಬೈಕ್​ ಸವಾರನ ಕಥೆ ಅಷ್ಟೇ ಎಂದು ಕೆಲವರು ತಮಾಷೆ ಮಾಡಿದರೆ, ಪ್ರೇತಾತ್ಮಗಳು ಯಾವಾಗಲೂ ಬಿಳಿಯ ಬಟ್ಟೆಯನ್ನೇ ಯಾಕೆ ಹಾಕುತ್ತವೆ ಎಂದು ಕೆಲವರು ಪ್ರಶ್ನೆ  ಮಾಡಿದ್ದಾರೆ. ಈ ಶಾಲ್​ ಹಾಕಿಕೊಂಡು ಹೋಗುತ್ತಿರುವ ವ್ಯಕ್ತಿಯೇನಾದ್ರೂ ಈ ವಿಡಿಯೋ ನೋಡಿದ್ರೆ ಖುದ್ದು ಗಾಬರಿ ಬೀಳೋದು ಗ್ಯಾರೆಂಟಿ ಎಂದು ಮತ್ತೆ ಕೆಲವರು ತಮಾಷೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಭೂತ, ಪ್ರೇತದ ಈ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸಿದೆ. 
ಭೂತ-ಪ್ರೇತ ಕಾಣಿಸೋದು ರಾಶಿ ನಕ್ಷತ್ರಗಳ ಮೇಲೆ ಡಿಪೆಂಡಾ? ಖ್ಯಾತ ಘೋಸ್ಟ್​ ಹಂಟರ್​ ಇಮ್ರಾನ್​ ಹೇಳಿದ್ದೇನು?

Latest Videos
Follow Us:
Download App:
  • android
  • ios