Asianet Suvarna News Asianet Suvarna News

'ಚಿಕ್ಕ ವಯಸ್ಸಲ್ಲೇ ಮಕ್ಕಳಿಗೆ ಟ್ಯಾಕ್ಸ್‌ ಬಗ್ಗೆ ತಿಳಿಸಿಕೊಡಿ..' ವಿಕ್ಕಿಪಿಡಿಯಾ ಕಂಟೆಂಟ್‌ಗೆ ಫ್ಯಾನ್ಸ್‌ ಫಿದಾ!

ತನ್ನ ವಿಶಿಷ್ಟ ಕಂಟೆಂಟ್‌ಗಳ ಮೂಲಕವೇ ಸೋಶಿಯಲ್‌ ಮೀಡಿಯಾದಲ್ಲಿ ಫಾಲೋವರ್ಸ್‌ಗಳನ್ನು ಸಂಪಾದಿಸಿರುವ ವಿಕಿಪಿಡಿಯಾ ವಿಕ್ಕಿ ಈಗ ಇಂಡಿಯನ್‌ ಟ್ಯಾಕ್ಸ್‌ ಬಗ್ಗೆ ಮಾಡಿರುವ ಕಂಟೆಂಟ್‌ ಸಖತ್‌ ವೈರಲ್‌ ಆಗಿದೆ.
 

vickypedia New Content on Indian Tax after Union Budget 2024 san
Author
First Published Jul 27, 2024, 8:05 PM IST | Last Updated Jul 27, 2024, 8:05 PM IST


ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಕ್ರಿಯೇಟಿವ್‌ ಕಂಟೆಂಟ್‌ಗಳು, ಅಶ್ಲೀಲತನವೇ ಇಲ್ಲದಂತೆ ರೀಲ್ಸ್‌ಗಳನ್ನು ಮಾಡೋದ್ರಲ್ಲಿ ಹೆಸರುವಾಸಿಯಾಗಿರುವ ವಿಕ್ಕಿಪಿಡಿಯಾ ವಿಕ್ಕಿ ಈಗ ಮತ್ತೊಂದು ಆಕರ್ಷಕ ಕಂಟೆಂಟ್‌ನ ಮೂಲಕ ಇನ್ಸ್‌ಟಾಗ್ರಾಮ್‌ಗೆ ಬಂದಿದ್ದಾರೆ. ಕೇಂದ್ರ ಬಜೆಟ್‌ ಬಳಿಕ ಎಲ್ಲರೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಟೀಕೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ನಿರ್ಮಲಾ ಸೀತಾರಾಮನ್‌ ಯಾವ ರೀತಿಯಲ್ಲೂ ಸ್ಯಾಲರೀಡ್‌ ಕ್ಲಾಸ್‌ ಉದ್ಯೋಗಿಗಳಿಗೆ ಸಹಾಯವಾಗುವಂಥ ಘೋಷಣೆ ಮಾಡಿಲ್ಲ. 17500 ರೂಪಾಯಿ ವಾರ್ಷಿಕವಾಗಿ ಉಳಿತಾಯ ಮಾಡಬಹುದು ಎಂದಿದ್ದರೂ, ಮಧ್ಯಮ ವರ್ಗ ಹಾಗೂ ಸ್ಯಾಲರೀಡ್‌ ಕ್ಲಾಸ್‌ ಉದ್ಯೋಗಿಗಳ ಪ್ರಮುಖ ಹೂಡಿಕೆ ತಾಣವಾಗಿದ್ದ ಷೇರು ಮಾರುಕಟ್ಟೆಯಲ್ಲಿ ಟ್ಯಾಕ್ಸ್‌ಅನ್ನು ಏರಿಕೆ ಮಾಡಿದ್ದಾರೆ. ಷೇರು ಹೂಡಿಕೆಯಿಂದ ಬರುವ ಶಾರ್ಟ್‌ ಟರ್ಮ್‌ ಕ್ಯಾಪಿಟಲ್‌ ಗೇನ್ಸ್‌ ಅನ್ನು ಶೇ. 15 ರಿಂದ ಶೇ. 20ಕ್ಕೆ ಮಹಾ ಏರಿಕೆ ಮಾಡಿದ್ದರೆ, ಎಲ್‌ಟಿಸಿಜಿಯನ್ನು ಶೇ. 10 ರಿಂದ ಶೇ. 12.5ಕ್ಕೆ ಏರಿಕೆ ಮಾಡಿದ್ದಾರೆ. ವಿಕ್ಕಿಪಿಡಿಯಾ ಇದೇ ವಿಚಾರವನ್ನು ಇಟ್ಟುಕೊಂಡು ಮಾಡಿರುವ ಕಂಟೆಂಟ್‌ ಗಮನಸೆಳೆದಿದೆ.

ಫ್ರೆಂಡ್ಸ್‌ ನೀವು ತೇಜುನಾ ಲಾಸ್ಟ್‌ ವಿಡಿಯೋದಲ್ಲಿ ನೋಡಿದ್ದೀರಿ. ಚೆನ್ನಾಗಿ ಆಕ್ಟ್‌ ಮಾಡಿದ್ರೆ ಆತನಿಗೆ ಡೇರಿ ಮಿಲ್ಕ್‌ ಚಾಕಲೇಟ್‌ ಕೊಡ್ತೇನೆ ಎಂದು ಹೇಳಿದ್ದೆ. ಅದರಂತೆ ಆತನಿಗೆ ಚಾಕಲೇಟ್‌ ಕೊಟ್ಟಿದ್ದೇನೆ ಎಂದು ಹೇಳುವ ವಿಕ್ಕಿ ಪುಟ್ಟ ಹುಡುಗನಿಗೆ ಚಾಕಲೇಟ್‌ ನೀಡುತ್ಥಾರೆ. ಒಂದು ಕ್ಷಣದ ಬಳಿಕ ಆತನಿಂದ ಮತ್ತೆ ಚಾಕಲೇಟ್‌ ವಾಪಾಸ್‌ ಪಡೆದುಕೊಳ್ಳುವ ವಿಕ್ಕ, ಅದರ ರಾಪರ್‌ ಬಿಡಿಸಿ ಚಾಕಲೇಟ್‌ನ ಪುಟ್ಟ ತುಂಡನ್ನಷ್ಟೇ ಆತನಿಗೆ ವಾಪಾಸ್‌ ನೀಡುತ್ತಾರೆ. ಪುಟ್ಟ ಹುಡುಗ ಅದನ್ನೂ ಕೊಡಿ ಎಂದಾಗ, ವಿಕ್ಕಿ ಇದು ನನಗೆ ಎಂದು ಹೇಳುತ್ತಾರೆ. ಹುಡುಗ.. ಅಮ್ಮಾ ಎಂದು ಅಳುತ್ತಾ ಮನೆಯ ಒಳಗಡೆ ಹೋಗ್ತಾನೆ.  ಅದರ ಬೆನ್ನಲ್ಲಿಯೇ ಮಾತನಾಡುವ ವಿಕ್ಕಿ, ಸಣ್ಣ ಮಕ್ಕಳಿಗೆ ಟಾಕ್ಸ್‌ ಬಗ್ಗೆ ಆದಷ್ಟು ಬೇಗ ತಿಳಿಸಿಕೊಟ್ರೆ, ದೊಡ್ಡವರಾದ ಬಳಿಕ ಅವರು ಹರ್ಟ್‌ ಆಗೋದು ತಪ್ಪುತ್ತದೆ ಎಂದು ಹೇಳುತ್ತಾರೆ.

ಮೂರು ದಿನಗಳ ಹಿಂದೆ ವಿಕಿಪಿಡಿಯಾ ಪೇಜ್‌ನಲ್ಲಿ ಪೋಸ್ಟ್‌ ಆಗಿರುವ ಈ ರೀಲ್ಸ್‌ಅನ್ನು ಈವರೆಗೂ 244 ಕೆ ಮಂದಿ ವೀಕ್ಷಣೆ ಮಾಡಿದ್ದಾರೆ. 1733 ಕಾಮೆಂಟ್ಸ್‌ಗಳು ಕೂಡ ಇದಕ್ಕೆ ಬಂದಿವೆ. ಹೆಚ್ಚಿನವರು ವಿಕಿಪಿಡಿಯಾ ಕಂಟೆಂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ನೋಡಿ ನಗಾಡಬೇಡಿ. ನಾವು ಯಾವುದೋ ವಿಚಾರಕ್ಕೆ ಸಂಭ್ರಮದಲ್ಲಿದ್ದೇವೆ ಎಂದು ತಿಳಿದು, ತಕ್ಷಣವೇ ಅವರು ಲಾಫ್ಟರ್‌ ಟ್ಯಾಕ್ಸ್‌ ಕೂಡ ಹಾಕಬಹುದು ಎಂದು ಕಾಮೆಂಟ್‌ ಮಾಡಿದ್ದಾರೆ. ಟಿಡಿಎಸ್‌ ಎಂದರೆ, ಟ್ಯಾಕ್ಸ್‌ ಡಿಡಕ್ಟಟೆಡ್‌ ಎಟ್‌ ಸೀತಾರಾಮನ್‌ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ನೀವು ಕೇವಲ 30 ಸೆಕೆಂಡ್‌ನಲ್ಲಿ ಬಜೆಟ್‌ ಬಗ್ಗೆ ತಿಳಿಸಿಕೊಟ್ರಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.

ಬೆಂಗಳೂರು ಅಪರಾಧಿಯನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಿದ ಆರ್‌ಸಿಬಿ ಪುರುಷರ ತಂಡ; ಈಗಲೂ ವಿಕ್ಕಿ ಸೇಫ್‌!

4-5 ಮಕ್ಕಳು ಮಾಡಿಕೊಳ್ಳುವ ಮಂದಿಗೆ ಉಚಿತ ಭಾಗ್ಯಗಳು ನೀಡೋದನ್ನು ಸರ್ಕಾರಗಳು ಬಿಡಬೇಕು. ಆಗ ಮಾತ್ರವೇ ಟ್ಯಾಕ್ಸ್‌ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ನಿರ್ಮಲಾ ಆಂಟಿ ಚಾಕಲೋಟ್‌ ತಿನ್ನಲ್ವಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ. ಹಾಗೇನಾದರೂ ಟವಲ್‌ ಸುತ್ತಿ ಹೊಡೆಯೋದು ಅಂದ್ರೆ ಇದೇ ಇರ್ಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. ನೀವು ಇನ್‌ಡೈರೆಕ್ಟ್‌ ಆಗಿ ನಿರ್ಮಲಾ ಸೀತಾರಾಮನ್‌ ಅವರನ್ನು ರೋಸ್ಟ್‌ ಮಾಡಿದ್ದೀರಲ್ಲ. ' ದುಡಿಯೋದು ತಪ್ಪು, ಅದರಲ್ಲೂ ನಿಯತ್ತಾಗಿ ದುಡಿಯೋದು ಮೂರ್ಖತನ..' ಎಂದು ಕಾಮೆಂಟ್‌ಗಳು ಬಂದಿವೆ.

ಬೆಳ್ಳುಳ್ಳಿ ಕಬಾಬ್​ ಮಾಲೀಕಂಗೂ ವಿಕ್ಕಿಪಿಡಿಯಾಗೂ 'ಸಂಧಾನ'! ಗಿಫ್ಟ್ ನೋಡಿ ಚಂದ್ರು ಏನಂದ್ರು?

 

 

Latest Videos
Follow Us:
Download App:
  • android
  • ios