ಕನ್ನಡತಿ ನಟಿ ಸಾರಾ ಅಣ್ಣಯ್ಯ ಜೈಲಿನಲ್ಲಿದ್ದಾರೆ. ಹಾಗಾಗಿಯೇ ಅವರ ಭಾಗದ ಶೂಟಿಂಗ್, ಸೀನ್‌ಗಳು ಸ್ವಲ್ಪ ಕಡಿಮೆಯಾಗಿದೆ. ಜೈಲಿನಿಂದ ಹೊರ ಬಂದ ಮೇಲೆ ಸೀರಿಯಲ್‌ನಲ್ಲಿ ವರುಧಿನಿ ಗೇಮ್ ಸ್ಟಾರ್ಟ್ ಆಗಲಿದೆ.

ನಟಿ ಗೋಕರ್ಣ ಬೀಚ್‌ನಲ್ಲಿ ಎಂಜಾಯ್ ಮಾಡ್ತಿರೋ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಬೀಚ್‌ ಸ್ಟೈಲ್‌ನಲ್ಲಿ ಪೋಸ್ ಕೊಟ್ಟಿದ್ದಾರೆ ಸಾರಾ ಅಣ್ಣಯ್ಯ.

ಜೈಲೊಳಗೆ ಕುಳಿತು ಎಂಥ ಸಂದರ್ಭದಲ್ಲೂ ನಗುತಿರಿ ಎಂದ ನಟಿ

ನಿರೀಕ್ಷೆ ಮತ್ತು ವಾಸ್ತವ ಹೇಗಿರುತ್ತೆ ಅನ್ನುವುದನ್ನು ತೋರಿಸೋ ಎರಡು ಬೀಚ್ ಫೋಟೋಗಳನ್ನು ಪೋಸ್ಟ್ ಮಾಡಿ, ನಿರೀಕ್ಷೆ v/s ವಾಸ್ತವ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಸಾರಾ ಚಂದಕ್ಕೆ ಕಡಲಿನತ್ತ ಮುಖ ಮಾಡಿ ಫೋಟೋಗೆ ಪೋಸ್‌ ಕೊಡ್ತಾ ಇದ್ರೆ ಹಿಂದೆಯಿಂದ ಬಂದು ಒದ್ದಿದ್ದಾರೆ ಆಕೆಯ ಗೆಳತಿ.

ಹೀಗೆ ಫನ್ನಿಯಾಗಿರೋ ಫೋಟೋ ಹಾಕಿ ನಟಿ ಕೊಟ್ಟಿರೋ ಕ್ಯಾಪ್ಶನ್ ಸೂಟ್ ಆಗಿದ್ಯಲ್ಲಾ..? ಗೆಳತಿಯರು, ಫ್ರೆಂಡ್ ಅಂದ ಮೇಲೆ ತರಲೆಗಳಿದ್ದೇ ಇರುತ್ತೆ. ಇದನ್ನೇ ತಮ್ಮ ಪೋಸ್ಟ್‌ನಲ್ಲಿ ತೋರಿಸಿದ್ದಾರೆ ನಟಿ ಸಾರಾ ಅಣ್ಣಯ್ಯ.