ಕನ್ನಡತಿ ಧಾರವಾಹಿಯಲ್ಲಿ ವರುಧಿನಿಗೆ ಈಗ ಕಷ್ಟಕಾಲ. ಜೈಲು ಸೇರಿ ಅಷ್ಟು ಸಮಯವಾದರೂ ಗೆಳತಿಯಾಗಲಿ, ಆಕೆಯ ಹೀರೋ ಆಗಲಿ ಆಕೆಯನ್ನು ರಕ್ಷಿಸೋಕೆ ಬಂದಿಲ್ಲ. ಜೈಲಿನ ಒಳಗೇ ನಡೆಯೋ ಸೀನ್‌ಗಳಲ್ಲಿ ಮಾತ್ರ ಸಾರಾ ಅಣ್ಣಯ್ಯ ಕಾಣಿಸಿಕೊಳ್ತಿದ್ದಾರೆ.

ಸೀರಿಯಲ್ ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದ್ದು, ಜೈಲಿನ ಒಳಗಿದ್ದರೂ ಶೂಟಿಂಗ್ ಮಧ್ಯೆ ಫೊಟೋ ತೆಗೆಯುತ್ತಾ, ವಿಡಿಯೋ ಮಾಡ್ತಾ, ರೀಲ್ಸ್ ಮಾಡ್ತಾ ಜಾಲಿಯಾಗಿದ್ದಾರೆ ಸಾರಾ.

ಹಿಟ್ಲರ್‌ಗಿಂತ ಒರಟು ಕನ್ನಡತಿಯ ಈ ನಟಿ: ಹೀಗಂದ್ರು ಫ್ಯಾನ್ಸ್

ಲೇಟೆಸ್ಟ್ ಫೋಟೋ ಶೇರ್ ಮಾಡಿದ ನಟಿ, ಯಾವುದೇ ಸಂದರ್ಭ ಇರಲಿ ನಗುತಿರಿ ಎಂದು ಸುಂದರವಾದ ನಗು ಚೆಲ್ಲಿದ್ದಾರೆ. ಮಾಡೆಲ್ ಆಗಿರೋ ಸಾರಾ ಕನ್ನಡತಿ ಮೂಲಕ ನಟಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ಕನ್ನಡತಿಯಲ್ಲಿ ವಿಭಿನ್ನವಾದ ಪಾತ್ರ ಮಾಡ್ತಿರೋ ಸಾರಾ ಅಣ್ಣಯ್ಯ ಅಭಿನಯ ಎಲ್ಲರಿಗೂ ಮೆಚ್ಚು. ಗೆಳತಿಯಾಗಿ, ನೇರ ಸ್ವಭಾವದ ಹುಡುಗಿಯಾಗಿ ಕಾಣಿಸಿಕೊಳ್ಳೋ ಸಾರಾ ಸೀರಿಯಲ್‌ನಲ್ಲಿ ಸದ್ಯ ಡ್ರಗ್ಸ್ ಆರೋಪದಲ್ಲಿ ಜೈಲು ಸೇರಿದ್ದಾರೆ. ಈ ಹಿಂದೆ ಜೈಲಿನೊಳಗೆ ಕಲ್ಲಾಟ ಆಡೋ ವಿಡಿಯೋ ಶೇರ್ ಮಾಡಿದ್ದರು ಸಾರಾ.