ಹಿಟ್ಲರ್ ಟೀಚರ್, ಅವರಪ್ಪ ಹಿಟ್ಲರ್ ಅಂತೆಲ್ಲಾ ಹೇಳೋದನ್ನು ಕೇಳಿರುತ್ತೇವೆ. ಒರಟು ಅನ್ನೋದಕ್ಕೆ ಇನ್ನೊಂದು ಅರ್ಥ ಹಿಟ್ಲರ್ ಎನ್ನುವಷ್ಟು ಫೇಮಸ್. ಇದೀಗ ಕನ್ನಡದ ಜನಪ್ರಿಯ ಸೀರಿಯಲ್ ನಟಿ ಹಿಟ್ಲರ್‌ಗಿಂತ ಒರಟು ಎಂದಿದ್ದಾರೆ ಫ್ಯಾನ್ಸ್.

ಹೌದು. ಜನರ ಮೆಚ್ಚುಗೆ ಗಳಿಸಿರೋ ಕನ್ನಡತಿ ಸೀರಿಯಲ್‌ನ ವರುಧಿನಿ ಪಾತ್ರ ಹಿಟ್ಲರ್‌ಗಿಂತ ಒರಟು ಎಂದು ಅಭಿಮಾನಿಗಳೇ ಹೇಳಿದ್ದಾರೆ. ಒಂಥರಾ ಸೈಕೋನಾ ಎಂದೆನಿಸುವ ಮಟ್ಟಿಗೆ ವಿಚಿತ್ರವಾಗಿ ಆಡುವ ವರುಧಿನಿ ಮಾತ್ರ ಒಳ್ಳೆ ಪಾತ್ರವೋ, ಕೆಟ್ಟ ಪಾತ್ರವೋ ಎಂದು ಹೇಳೋದೇ ಕಷ್ಟ.

ಜೈಲಲ್ಲಿ ಕೂತು ಆಡ್ತಿದ್ದಾರೆ ವರುಧಿನಿ: ಯಾರ್ಯಾರಿಗೆ ನೆನಪಿದೆ ಈ ಆಟ..?

ಇದೀಗ ನಟಿ ಹಾಗೂ ಹಿಟ್ಲರ್‌ನ ಕೊಲೇಜ್ ಫೋಟೋ ಒಂದನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ನಾನು ಜಗತ್ತಿನ ಕ್ರೂರ ವ್ಯಕ್ತಿ ಎಂದು ಹಿಟ್ಲರ್ ಹೇಳುತ್ತಿದ್ದರೆ, ಜೊತೆಗೇ ವರುಧಿನಿಯ ಕೋಪದ ಫೋಟೋ ಹಾಕಿ ಓಹ್ ನಿಜಕ್ಕೂ..? ಎಂದು ಪ್ರಶ್ನಿಸಲಾಗಿದೆ.

ಅಂತೂ ಕನ್ನಡತಿಯ ವರುಧಿನಿ ಹಿಟ್ಲರ್‌ಗಿಂತಾನೂ ಒರಟು ಅಂತ ಹೇಳಿದ್ದಾರೆ ಫ್ಯಾನ್ಸ್. ಇದರ ಜೊತೆಗೇ ಸ್ಪಷ್ಟನೆಯನ್ನೂ ಕೊಟ್ಟಿರೋ ಫ್ಯಾನ್ಸ್, ಇದು ಜಸ್ಟ್ ಮೆಮ್ಸ್. ತೆರೆ ಮೇಲೆ ವರುಧಿನಿ ಎಷ್ಟು ಒರಟು ಅಂತ ತೋರಿಸೋದಕ್ಕೆ ಹೀಗೆ ಮಾಡಿದ್ದೀವೆ ಅಂತಾನೂ ಹೇಳಿದ್ದಾರೆ.