ವರ್ತೂರ್ ಸಂತೋಷ್‌ ‘ಜೈಲಿಗೆ ಬಂದವರಾರೂ ಈವರೆಗೆ ಆಚೆಗೆ ಬಂದಿಲ್ಲ ಅಲ್ವಾ?’ ಎಂದು ಕೇಳಿದ್ದಾರೆ. ತುಕಾಲಿ ಸಂತೋಷ್‌, ‘ಆಗಿದ್ದಾಗ್ಲಿಈಚೆಗೆ ಬಂದ್ಬಿಡು’ ಎಂದು ಕುಮ್ಮಕ್ಕು ಕೊಟ್ಟಿದ್ದಾರೆ. ವರ್ತೂರ್ ಸಂತೋಷ್ ಜೈಲಿನ ಕಂಬಿಗಳ ನಡುವಿಂದ ನುಸುಳಿಕೊಂಡು ಆಚೆಗೆ ಬಂದಿದ್ದಾರೆ.

ಹುಲಿ ಉಗುರನ್ನು ಇಟ್ಟುಕೊಂಡಿದ್ದ ಕಾರಣಕ್ಕೆ ಬಿಗ್‌ಬಾಸ್ ರಿಯಾಲಿಟಿ ಷೋದಿಂದ ವರ್ತೂರು ಸಂತೋಷ್‌ ಹೊರಗೆ ಹೋಗಿದ್ದರು. ನಂತರ ಮತ್ತೆ ಮನೆಯೊಳಗೆ ಸೇರಿಕೊಂಡಿದ್ದರು. ಅದಾದಮೇಲೂ ‘ನಾನು ಇಲ್ಲಿ ಇರಲಾರೆ. ಹೊರಗೆ ಹೋಗುತ್ತೇನೆ’ ಎಂದು ಅತ್ತೂಕರೆದಿದ್ದೂ ಆಗಿತ್ತು. ಯಾರ ಮಾತನ್ನೂ ಕೇಳದ ಅವರು ಕೊನೆಗೆ ಅಮ್ಮ ಬಂದು ಸಮಾಧಾನ ಮಾಡಿದ ಮೇಲೆ ಮನೆಯೊಳಗೆ ಇರಲು ಒಪ್ಪಿ ಮುಂದುವರಿದಿದ್ದರು. ಆ ನಂತರ ಮನೆಯೊಳಗಿನ ಟಾಸ್ಕ್‌ಗಳಲ್ಲಿ ಭಾಗವಹಿಸುತ್ತ, ಮನೆಯಲ್ಲಿ ತಮ್ಮ ಅಭಿಪ್ರಾಯವನ್ನು ಗಟ್ಟಿ ಧ್ವನಿಯಲ್ಲಿ ಮಂಡಿಸುತ್ತ ಬಂದಿರುವ ವರ್ತೂರ್‍ ಅವರಿಗೆ ಎಸ್ಕೇಪ್‌ ಆಗುವ ಚಾಳಿ ಮಾತ್ರ ಇನ್ನೂ ಬಿಟ್ಟಂತಿಲ್ಲ!

ಹಾಗಾದ್ರೆ ಅವರು ಎಸ್ಕೇಪ್ ಆಗಿದ್ದು ಎಲ್ಲಿಂದ? ಎಲ್ಲಿಗೆ? ಈ ಪ್ರಶ್ನೆಗೆ ಉತ್ತರ JioCinemaಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಇದೆ. ವಾರಾಂತ್ಯದ ‘ಉತ್ತಮ’ ಮತ್ತು ‘ಕಳಪೆ’ ವೋಟಿಂಗ್‌ಗಳಲ್ಲಿ ಅತಿ ಹೆಚ್ಚು ವೋಟ್ ಪಡೆದು ವರ್ತೂರ್‍ ’ಕಳಪೆ’ಯ ಹಣೆಪಟ್ಟಿ ಹಚ್ಚಿಕೊಂಡಿದ್ದಾರೆ. ‘ಯಾರು ಏನೇ ಹೇಳಲಿ ನಾನು ಏನು ಎನ್ನುವುದು ನನಗೆ ಗೊತ್ತು’ ಎಂದು ಹೇಳಿ ಜೈಲುಡುಗೆ ತೊಟ್ಟು ಜೈಲಿನೊಳಗೆ ಹೋಗಿದ್ದಾರೆ ಕೂಡ.

ಆದರೆ ಜೈಲಿನೊಳಗೆ ಸುಮ್ಮನೆ ಕೂತಿಲ್ಲ. ನಡುರಾತ್ರಿ ಜೈಲಿನ ಒಳಗೆ ವರ್ತೂರ್ ಮಲಗಿದ್ದರೆ, ಹೊರಗೆ ತುಕಾಲಿ ಸಂತೋಷ್ ಮಾತಾಡುತ್ತ ಕೂತಿದ್ದರು. ಆಗ ಅಲ್ಲಿಂದ ಎಸ್ಕೇಪ ಆಗುವ ಆಲೋಚನೆ ಬಂದಿದೆ. 

ವರ್ತೂರ್ ಸಂತೋಷ್‌ ‘ಜೈಲಿಗೆ ಬಂದವರಾರೂ ಈವರೆಗೆ ಆಚೆಗೆ ಬಂದಿಲ್ಲ ಅಲ್ವಾ?’ ಎಂದು ಕೇಳಿದ್ದಾರೆ. ತುಕಾಲಿ ಸಂತೋಷ್‌, ‘ಆಗಿದ್ದಾಗ್ಲಿಈಚೆಗೆ ಬಂದ್ಬಿಡು’ ಎಂದು ಕುಮ್ಮಕ್ಕು ಕೊಟ್ಟಿದ್ದಾರೆ. ವರ್ತೂರ್ ಸಂತೋಷ್ ಜೈಲಿನ ಕಂಬಿಗಳ ನಡುವಿಂದ ನುಸುಳಿಕೊಂಡು ಆಚೆಗೆ ಬಂದಿದ್ದಾರೆ. ‘ಮನೆಯವರೆಲ್ಲ ಮಲ್ಕೊಂಡಿದ್ದಾರಲ್ವಾ?’ ಎಂದು ಅವರು ಕೇಳುತ್ತಿದ್ದ ಹೊತ್ತಿನಲ್ಲೇ ಸೋಪಾದ ಮೇಲೆ ಮಲಗಿದ್ದ ಸಂಗೀತಾ ತಲೆ ಎತ್ತಿ ನೋಡಿದ್ದಾರೆ. 

ಬಿಗ್‌ಬಾಸ್‌ ಮನೆಯ ನಿಯಮವನ್ನು ಮುರಿದ ಸಂತೋಷ್ ಮಾಡಿದ್ದೇನು? ಅವರಿಗೆ ಏನಾಗಲಿದೆ? ಸಂಗೀತಾ, ವರ್ತೂರ್ ಅವರನ್ನು ನೋಡಿ ಉಳಿದವರಿಗೂ ತಿಳಿಸುತ್ತಾರಾ? 
ಈ ಎಲ್ಲವನ್ನೂ ತಿಳಿಯಬೇಕಾದರೆ, JioCinemaದಲ್ಲಿ ಪ್ರಕಟವಾಗುತ್ತಿರುವ ಬಿಗ್‌ಬಾಸ್ ಕನ್ನಡ ನೇರಪ್ರಸಾರ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannadaದಲ್ಲಿ ರಾತ್ರಿ 9.30ಕ್ಕೆ, ವಾರಾಂತ್ಯದ (ಶನಿವಾರ-ಭಾನುವಾರ) ಸಂಚಿಕೆಗಳನ್ನು ರಾತ್ರಿ 9.00ಕ್ಕೆ ವೀಕ್ಷಿಸಬಹುದು.