Asianet Suvarna News Asianet Suvarna News

ಏನ್​ ನಾಟ್ಕ ಗುರೂ... ಸುದೀಪ್​ಗಿಂತ್ಲೂ ಬೆಸ್ಟ್​ ಆ್ಯಕ್ಟ್​ ಮಾಡ್ತಿರಾ ಬಿಡಿ... ವರ್ತೂರ್​ ಸಂತೋಷ್​ ಸಕತ್​ ಟ್ರೋಲ್​!

ವರ್ತೂರು ಸಂತೋಷ್​ ಅವರು ಬಿಗ್​ಬಾಸ್​ ಮನೆಯಲ್ಲಿ ಕಣ್ಣೀರು ಹಾಕಿ ತಾವು ಹೊರಕ್ಕೆ ಹೋಗುವುದಾಗಿ ಹೇಳಿರುವುದು ನಾಟಕ ಎನ್ನುತ್ತಿರುವ ಟ್ರೋಲಿಗರು ಸಕತ್​ ಟ್ರೋಲ್​ ಮಾಡುತ್ತಿದ್ದಾರೆ. 
 

Varthur Santhosh crying in  Bigg Boss house trolling meems viral in social media suc
Author
First Published Nov 15, 2023, 11:59 AM IST

ಬಿಗ್​ಬಾಸ್​ ಭಾಷೆ ಯಾವುದೇ ಇರಲಿ... ಅಲ್ಲಿ  ನಡೆಯುವುದೆಲ್ಲವೂ ಹೈಡ್ರಾಮಾಗಳೇ ಎನ್ನುವುದು ಬಹುತೇಕರ ಅಭಿಪ್ರಾಯ. ಇಲ್ಲಿ ಏನೇ ನಡೆದರೂ, ಯಾವುದೇ ಕೃತ್ಯ ಜರುಗಿದರೂ ಅದು ಎಲ್ಲವೂ ಅಚಾನಕ್​ ಆಗಿ ನಡೆಯುವಂಥದ್ದು ಎಂದು ಬಿಗ್​ಬಾಸ್​ ಪ್ರಿಯರೆಲ್ಲಾ ಕಣ್​ಕಣ್​ ಬಿಟ್ಟು ನೋಡುತ್ತಿದ್ದರೂ,  ಅದರಲ್ಲಿ ನಡೆಯುವ ಘಟನೆಗಳೆಲ್ಲವೂ  ಸ್ಕ್ರಿಪ್ಟೆಡ್​ ಅಂದರೆ ಹೇಳಿ ಮಾಡಿಸಿರುವುದು ಎಂಬುದಾಗಿ ಬಿಗ್​ಬಾಸ್​​  ಮನೆಯಿಂದ ಈ ಹಿಂದೆ ಹೊರಬಂದಿರುವ ಹಲವು ಸ್ಪರ್ಧಿಗಳು ಹೇಳಿದ್ದುಂಟು. ಅಳುವುದು, ಕಿರುಚಾಡುವುದು, ಹೊರಗಡೆ ಇದ್ದಾಗ ಕುಟುಂಬದವರ ಬಳಿ ಸುಳಿಯದೇ ಇದ್ದವರು ಬಿಗ್​ಬಾಸ್​ ಮನೆಯೊಳಕ್ಕೆ ಹೋಗುತ್ತಿದ್ದಂತೆಯೇ ಅವರು ನೆನಪಾಗುತ್ತಾರೆ, ಇವರು ನೆನಪಾಗುತ್ತಾರೆ ಎಂದು ತಾವೂ ಅಳುವುದು ಅಲ್ಲದೇ, ಪ್ರೇಕ್ಷಕರನ್ನೂ ಅಳಿಸುವುದು, ಅದಕ್ಕೆ ಬಿಗ್​ಬಾಸ್​ ನಡೆಸಿಕೊಡುವವರೂ ಸೇರಿದಂತೆ ಮತ್ತೊಂದಿಷ್ಟು ಮಂದಿ ಸಮಾಧಾನ ಮಾಡಿದಂತೆ ಮಾಡುವುದು... ಹೀಗೆ ಎಲ್ಲವೂ ಇಲ್ಲಿ ಮೊದಲೇ ನಿಗದಿಯಾಗಿರುತ್ತದೆ, ಮನೆಯೊಳಕ್ಕೆ ಇದ್ದವರು ಕೈಗೊಂಬೆಗಳಷ್ಟೇ ಎಂದು ಬೇರೆ ಬೇರೆ ಭಾಷೆಗಳ ಸ್ಪರ್ಧಿಗಳೂ ಹೇಳಿದ್ದಾರೆ.  

ಅದೇನೇ ಇದ್ದರೂ ಬಿಗ್​ಬಾಸ್​ ನೋಡುವ ದೊಡ್ಡ ವರ್ಗವೇ ಇದೆ. ಅದೇ ಕಾರಣಕ್ಕೆ ಟಿಆರ್​ಪಿಯಲ್ಲಿಯೂ ಈ ಷೋ ನಂಬರ್​ 1 ಸ್ಥಾನ ಗಳಿಸುತ್ತದೆ. ಸೋಷಿಯಲ್​ ಮೀಡಿಯಾಗಳಲ್ಲಿ ಬಿಗ್​ಬಾಸ್​ ಸ್ಪರ್ಧಿಗಳ ಬಗ್ಗೆ ಟೀಕೆ ಮಾಡುವವರು ಅದೆಷ್ಟೋ ಮಂದಿ, ಮೀಮ್ಸ್​ಗಳಿಗಂತೂ ಕೊರತೆ ಇಲ್ಲ. ಹೀಗೆ ಶಪಿಸುತ್ತಲೇ, ಇದೊಂದು ಕೆಟ್ಟ ಆಟ, ಹುಚ್ಚರ ಸಂತೆ ಅಂತೆಲ್ಲಾ ಹೇಳುತ್ತಲೇ ದಿನವೂ ಮಿಸ್​ ಮಾಡದೇ ನೋಡುವ ವರ್ಗವೂ ಬಹಳ ದೊಡ್ಡದೇ ಇದೆ.  ಆದರೆ ಇದರಲ್ಲಿ ನಡೆಯುವುದೆಲ್ಲವೂ ಸ್ಕ್ರಿಪ್ಟೆಡ್​ ಎನ್ನುವುದು ಮಾತ್ರ ಅರಿತವರು ಕೆಲವೇ ಮಂದಿ. ಅದೇನೇ ಇದ್ದರೂ ಈಗ ಸದ್ಯ ವರ್ತೂರು ಸಂತೋಷ್​ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.

ಬಿಗ್​ಬಾಸ್​ ಮನೆಯ ಗೋಡೆ ಹಾರಿಕೊಂಡು ಹೋಗೋ ಪ್ಲ್ಯಾನ್​! ವೈರಲ್​ ಆಯ್ತು ವರ್ತೂರು ಸಂತೋಷ್​ ಚರ್ಚೆ

ಹುಲಿ ಉಗುರು ಪೆಂಡೆಂಟ್​ ಧರಿಸಿದ ಪ್ರಕರಣದಲ್ಲಿ ಜೈಲುಪಾಲಾಗಿ ಜಾಮೀನು ಸಿಕ್ಕ ಬಳಿಕ ಮತ್ತೆ ಬಿಗ್‌ಬಾಸ್‌ ಮನೆಗೆ ಹೋಗಿರುವ  ವರ್ತೂರ್‌ ಸಂತೋಷ್‌ ಅವರು ಬಿಗ್​ಬಾಸ್​ ಮನೆಯಲ್ಲಿ ಕಣ್ಣೀರು ಹಾಕಿದ್ದೇನು, ತಾವು ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಹೋಗುವುದಾಗಿ ಹೇಳಿದ್ದೇನು, ಸುದೀಪ್​ ಅವರೂ ಸೇರಿದಂತೆ ಉಳಿದವರು ಸಮಾಧಾನ ಮಾಡಿದ್ದೇನು... ಎಲ್ಲವೂ ಆಗಿ ಹೋಗಿದೆ.  ಇವರಿಗೆ 34 ಲಕ್ಷದ 15 ಸಾವಿರದ 472 ವೋಟುಗಳು ಬಂದಿದ್ದು, ಸೇಫ್​ ಆಗಿದ್ದರೂ ಹೊರಗೆ ಹೋಗಬೇಡಿ ಎಂದು ಸುದೀಪ್​ ಅವರೂ ಸಮಾಧಾನ ಮಾಡಿದ್ದೂ ಆಯ್ತು. ನಂತರ  ಸುದೀಪ್‌ ಜನಗಳ ವಿರುದ್ಧವಾಗಿ ನಾನು ಹೋಗಲ್ಲ. ಹೋಗೋದು ಇಲ್ಲ. ನಾನು ನಿಮ್ಮ ನಿರ್ಧಾರಕ್ಕೆ ತುಂಬಾ ಡಿಸಪಾಯಿಂಟೆಡ್‌ ಆಗಿದ್ದೇನೆ ಎಂದು ಹೇಳಿದ್ದೂ ನಡೆಯಿತು.  ಆದರೆ ಯಾರ ಮಾತನ್ನೂ ಕೇಳಿದ ಕಾರಣ, ಸೀರಿಯಲ್​ ನಾಯಕಿಯೊಬ್ಬರು ಬಿಗ್​ಬಾಸ್​ಗೆ ಹೋಗಿ ಅವರನ್ನು ಸಮಾಧಾನ ಪಡಿಸಿದ್ದೂ ನಡೆಯಿತು. ಇದಕ್ಕೂ ಸಂತೋಷ್​ ಜಗ್ಗದಾಗ ಖುದ್ದು ಅವರ ಅಮ್ಮನೇ ಊಟ ತಂದು ಕೈತುತ್ತು ಕೊಡಿಸಿದ್ದೂ ಆಯ್ತು.  

ಇಷ್ಟಾಗುತ್ತಿದ್ದಂತೆಯೇ ಸದ್ಯ ಸಂತೋಷ್​ ಹೊರಗೆ ಹೋಗುವ ಮಾತನಾಡುತ್ತಿಲ್ಲ. ಇವೆಲ್ಲಾ ನೋಡಿದವರು ಆರಂಭದಲ್ಲಿ ನಿಜ ಅಂದುಕೊಂಡುಬಿಟ್ಟಿದ್ದೆವು ಎನ್ನುತ್ತಿದ್ದಾರೆ. ಇದೀಗ ಇದೇ ಕಾರಣಕ್ಕೆ ವರ್ತೂರು ಸಂತೋಷ್​ ಸಕತ್​ ಟ್ರೋಲ್​ಗೆ ಒಳಗಾಗುತ್ತಿದ್ದು, ಅವರ ಬಗ್ಗೆ ಮೀಮ್ಸ್​ಗಳು ಹರಿದಾಡುತ್ತಿವೆ. ಏನ್​ ಗುರು ನಿಜ ಅಂದ್ಕೊಂಡು ಬಿಟ್ವಿದ್ವಿ. ಸಕತ್​ ನಾಟ್ಕ ಆಡ್ತಿಯಾ ಬಿಡು ಎಂದು ಬಿಗ್​ಬಾಸ್​ ಪ್ರೇಮಿಗಳು ಹೇಳುತ್ತಿದ್ದಾರೆ. ಸುದೀಪ್​ ಅವರೇ ಒಳ್ಳೆಯ ನಟ ಅಂದ್ಕೊಂಡ್ರೆ ನೀವು ಅವರಿಗಿಂತ್ಲೂ ಚೆನ್ನಾಗಿ ಆ್ಯಕ್ಟ್​ ಮಾಡಿದ್ರಿ ಬಿಡಿ ಎಂದು ಇನ್ನು ಹಲವರು ಹೇಳುತ್ತಿದ್ದಾರೆ. ಇವೆಲ್ಲಾ ಸ್ಕ್ರಿಪ್ಟೆಡ್​ ಎಂದು ಚಿಕ್ಕ ಮಕ್ಕಳಿಗೂ ಅರ್ಥವಾಗುತ್ತೆ ಅಂತ ಮತ್ತೆ ಕೆಲವರು ಸಂತೋಷ್​ ಹಾಗೂ ಬಿಗ್​ಬಾಸ್​ ಕಾಲೆಳೆಯುತ್ತಿದ್ದಾರೆ.

ಎಲ್ಲಕ್ಕಿಂತಲೂ ಸಕತ್​ ವೈರಲ್​ ಆಗಿರುವುದು ಟ್ರೋಲ್​ ಪಟಿಂಗ್​ ಪೇಜ್​ನಿಂದ ಬಂದಿರುವ ಮೀಮ್ಸ್​ ಒಂದು. ಇದರಲ್ಲಿ ಸಂತೋಷ್​ ಅಮ್ಮಾ ನನಗೆ ಈ ಹಾಸ್ಟೆಲ್​ನಲ್ಲಿ ಇರೋಕೆ ಆಗ್ತಿಲ್ಲ, ನಾನು ಊರಿಗೆ ಬಂದ್​ಬಿಡ್ತೀನಿ ಎನ್ನುತ್ತಾರೆ. ಆಗ ಅವರ ಅಮ್ಮ ಸುಮ್ಕಿರೋ ಮಗನೇ ಅಳ್ಬೇಡ, 10ನೇ ಕ್ಲಾಸ್ ಆದ್ಮೇಲೆ ಅಪ್ಪಂಗೆ ಹೇಳಿ ಬೈಕ್​  ಕೊಡಿಸ್ತೀನಿ ಅಂತಾರೆ. ಆಗ ವರ್ತೂರು ಸಂತೋಷ್​ ಅವ್ರು, ಹಾಗಾದ್ರೆ ಸರಿ ಬಿಡು ಅಮ್ಮ, ಮುಗಿಸಿಕೊಂಡು ಬರ್ತೀನಿ ಎನ್ನುತ್ತಾರೆ. ಈ ಮೀಮ್ಸ್ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ. 

ವರ್ತೂರ್‌ ಸಂತೋಷ್‌ಗೆ ಸಿಕ್ತು ಅಮ್ಮನ ಕೈತುತ್ತು! ಜನಮತಕ್ಕಲ್ಲದಿದ್ದರೂ ಮಾತೆಯ ಮಾತಿಗೆ ತಲೆ ಬಾಗ್ತಾರಾ?

Follow Us:
Download App:
  • android
  • ios