ಬಿಗ್‌ಬಾಸ್ 8ನೇ ಆವೃತ್ತಿಯ ಸ್ಪರ್ಧಿ ವೈಷ್ಣವಿ ಬಿಗ್‌ಬಾಸ್ ಮನೆಯಿಂದ ಹೊರಬಂದು ಆಡಿದ ಮಾತುಗಳ ಹೈಲೈಟ್‌ಸ್ ಇಲ್ಲಿದೆ.
1. ನಾನು ಮನೆಯಲ್ಲಿ ಆರೋಗ್ಯವಾಗಿದ್ದೇನೆ. ನೀವು ಕೂಡ ಸುರಕ್ಷಿತವಾಗಿ ಇರಿ. ನಾನು ನಿಜ ಜೀವನದಲ್ಲೂ ನಾನು ತುಂಬಾ ಮೌನ. ಬಿಗ್ ಬಾಸ್ ಶೋನಲ್ಲೂ ಅಷ್ಟೇ ಸೈಲೆಂಟ್ ಆಗಿದ್ದೆ. ನಾನು ರೋಬೋ ಥರ ಅಲ್ಲ. ನನಗೂ ಎಮೋಷನ್ ಇವೆ. ನಾನು ಎಲ್ಲವನ್ನು ಶಾಂತ ರೀತಿಯಲ್ಲಿ ಹ್ಯಾಂಡಲ್ ಮಾಡುತ್ತೇನೆ.
2. ಯಾವಾಗಲೂ ನಾವು ನಾವಾಗಿರುವುದು ನಿಜವಾದ ಬ್ಯೂಟಿ. ಅದೇ ಪ್ರಾಮಾಣಿಕತೆ. ನೀವು ಕೂಡ ಅಷ್ಟೇ, ನೀವು ನೀವಾಗಿರಿ.
ಅಡುಗೆ ವಿಚಾರಕ್ಕೆ ವೈಷ್ಣವಿ ವಿರುದ್ಧ ಸದಸ್ಯರ ಅಸಮಾಧಾನ; ಕಣ್ಣೀರಿಟ್ಟ ಸನ್ನಿಧಿ!
3. ಬಿಗ್‌ಬಾಸ್ ಮನೆಯಲ್ಲಿ ನನ್ನ ಅಚ್ಚುಮೆಚ್ಚಿನ ಜಾಗ ಕಿಚನ್. ಯಾಕೆಂದರೆ ಅಲ್ಲಿ ಯಾವಾಗಲೂ ಕೆಲಸ ಇರುತ್ತದೆ. ಕುಕ್ಕಿಂಗ್ ಅನ್ನೋದು ಆರ್ಟ್.
![]()
4. ಸೋಷಿಯಲ್ ಮೀಡಿಯಾ ಮೂಲಕವೇ ನನಗೆ ತುಂಬಾ ಮದುವೆ ಪ್ರಪೋಸಲ್‌ಗಳು ಬರುತ್ತಿವೆ. ನೋಡಿ ಖುಷಿ ಆಗುತ್ತಿದೆ.
5. ನನ್ನ ಸಂತೋಷ ನನ್ನದು, ನನ್ನ ಕೋಪ ನನ್ನ ನಿಯಂತ್ರಣದಲ್ಲಿರುತ್ತದೆ. ನನ್ನ ಎಮೋಷನ್ ನನ್ನದಾಗಿರುತ್ತದೆ. ಇದೇ ನನ್ನ ಹಸನ್ಮುಖಿ ಸ್ವಭಾವಕ್ಕೆ ಕಾರಣ.
6. ನನ್ನ ಅಚ್ಚುಮೆಚ್ಚಿನ ಬಿಗ್‌ಬಾಸ್ ಸ್ಪರ್ಧಿ ದಿವ್ಯಾ ಉರುಡುಗ. ಕೊನೆ ಕೊನೆಗೆ ನಾವು ಇಬ್ಬರು ತುಂಬಾ ಕ್ಲೋಸ್ ಆದ್ವಿ.
ಅಗ್ನಿಸಾಕ್ಷಿ ವೈಷ್ಣವಿ ಹಾಕೊಳ್ತಿರೋ ಬಟ್ಟೆ ನೋಡೋಕೆನೇ 'ಬಿಗ್ ಬಾಸ್' ನೋಡ್ತಿದ್ದಾರೆ ಹೆಣ್ಣುಮಕ್ಕಳು?
7. ಶಾಂತಿ, ಖುಷಿ, ನಗು ಇದನ್ನು ಹಂಚಲು ನಾನು ಈ ಶೋಗೆ ಹೋಗಿದ್ದೆ. ಅದನ್ನು ಈಡೇರಿಸಿದ್ದೇನೆ ಅನಿಸುತ್ತದೆ.
8. ಜೀವನ ಅನ್ನೋದು ಶೂನ್ಯ ಅನ್ನೋ ನನ್ನ ಮಾತು ತುಂಬಾ ಜನಕ್ಕೆ ತಲುಪುತ್ತದೆ, ಅದರ ಬಗ್ಗೆ ಮಾತನಾಡುತ್ತಾರೆ ಅಂದುಕೊಂಡಿರಲಿಲ್ಲ. ನಾವು ಹೋಗ್ತಾ ಏನೂ ತೆಗೆದುಕೊಂಡು ಹೋಗಲ್ಲ, ಬರುವಾಗಲೂ ತೆಗೆದುಕೊಂಡು ಬಂದಿಲ್ಲ. ಜೀವನ ಅನ್ನೋದು ಬಿಗ್‌ಬಾಸ್ ಶೋ ಇದ್ದಂತೆ. ಇಲ್ಲಿ ಎಲ್ಲವೂ ಇದೆ. ಆದರೆ, ಹೋಗುವಾಗ ಬರೀ ಕೈಯಲ್ಲಿ ಹೋಗುತ್ತೇವೆ. ಅದಕ್ಕೇ ಜೀವನ ಶೂನ್ಯ ಅಂದಿದ್ದು.
![]()
ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ ಒಂದು ಮಾತಲ್ಲಿ ಹೇಳುವುದಾದರೆ..
ಮಂಜು- ಒಳ್ಳೆಯ ಮನರಂಜನೆಕಾರ
ರಘು- ಒಳ್ಳೆಯ ಫ್ರೆಂಡು
ಪ್ರಶಾಂತ್ ಸಂಬರಗಿ- ತುಂಬಾ ಸ್ಟ್ರಾಂಗ್
ಚಕ್ರವರ್ತಿ ಚಂದ್ರಚೂಡ್- ಮಾತುಗಾರ
ವೈಷ್ಣವಿ ಗಂಡ ಒಂದೇ ದಿನಕ್ಕೆ ಓಡಿ ಹೋಗುತ್ತಾನೆ; ಶುಭಾ ಟಾಂಗ್‌ಗೆ ಕ್ಲಾರಿಟಿ ಕೊಟ್ಟ ಸನ್ನಿಧಿ!
ಶಮಂತ್- ಮುಗ್ಧ
ಶುಭಾ ಪೂಂಜ- ಕ್ಯೂಟ್
ದಿವ್ಯಾ ಉರುಡುಗ-ಫ್ರೆಂಡ್
ನಿಧಿ ಸುಬ್ಬಯ- ನೇರ ಮತ್ತು ಪ್ರಾಮಾಣಿಕ
ಪ್ರಿಯಾಂಕ- ಪಟಾಕ
ದಿವ್ಯಾ ಸುರೇಶ್- ಸ್ಫೂರ್ತಿ
