ಬರೋಬ್ಬರು ನಾಲ್ಕು ವಾರಗಳಿಂದ ಬಿಗ್ ಬಾಸ್‌ ಮನೆಯಲ್ಲಿ ನಾನ್ ಸ್ಟಾಪ್ ಅಡುಗೆ ಮಾಡುತ್ತಿರುವ ಸನ್ನಿಧಿ ಉರ್ಫ್ ವೈಷ್ಣವಿ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನಿಧಿ, ಶುಭಾ ಪೂಂಜಾ, ರಘು ಗೌಡ ಹಾಗೂ ಮಂಜು ಮಾತುಗಳಿಂದ ವೈಷ್ಣವಿ ಕಣ್ಣೀರಿಟ್ಟಿದ್ದಾರೆ. 

ಅಗ್ನಿಸಾಕ್ಷಿ ವೈಷ್ಣವಿ ಹಾಕೊಳ್ತಿರೋ ಬಟ್ಟೆ ನೋಡೋಕೆನೇ 'ಬಿಗ್‌ ಬಾಸ್‌' ನೋಡ್ತಿದ್ದಾರೆ ಹೆಣ್ಣುಮಕ್ಕಳು? 

ಯಾವತ್ತೂ ಯಾರಿಗೂ ಕಡಿಮೆ ಹಾಕಿಕೊಳ್ಳಿ, ಹೆಚ್ಚಿಗೆ ಹಾಕಿಕೊಳ್ಳಬೇಡಿ, ನೀವು ತಿನ್ನಬೇಡಿ ಅಂತ ಒಂದು ದಿನವೂ ವೈಷ್ಣವಿ ಯಾರಿಗೂ ಹೇಳಿಲ್ಲ. ಪ್ರಶಾಂತ್ ಹಾಗೂ ನಿಧಿ ನಡುವೆ ಅಡುಗೆ ವಿಚಾರಕ್ಕೆ ಅದರಲ್ಲೂ, ಮೊಟ್ಟೆ ವಿಚಾರಕ್ಕೆ ವಿವಾದ ದೊಡ್ಡ ಮಟ್ಟದಲ್ಲಿ ಆದರೂ ವೈಷ್ಣವಿ ಒಂದು ಮಾತೂ ಆಡಲಿಲ್ಲ. ಸುಮ್ಮನಿದ್ದು ಸಮಾಧಾನ ಮಾಡಿದ್ದರು. ಹಸಿವಾದರೆ ತಮ್ಮ ಪಾಲನ್ನೇ ಅವರಿಗೆ ಕೊಟ್ಟು ಸುಮ್ಮನಾಗುತ್ತಾರೆ.

ಅನ್ನ-ಸಾರು ತಿಂದು ಬೇಸರವಾಗುತ್ತಿದೆ. ಸೋಯಾ ಪಲ್ಯ ಮಾಡುತ್ತೇವೆ ಎಂದು ನಿಧಿ ಹಾಗೂ ಶುಭಾ ಅಡುಗೆ ಮನೆಗೆ ಬಂದು ವೈಷ್ಣವಿಗೆ ಹೇಳುತ್ತಾರೆ. ಈಗ ಬೇಡ ನಾನು ಅನ್ನ ಸಾರು ಮಾಡಿದ್ದೀನಿ, ವೇಸ್ಟ್ ಆಗುತ್ತೆ ಎಂದು ವೈಷ್ಣವಿ ಹೇಳುತ್ತಾರೆ. ನಿಧಿ ಸಿಟ್ಟು ಮಾಡಿಕೊಂಡು ಅದೇ ತಿಂದು ಬೇಸರವಾಗಿದೆ ಎಂದು ಹೇಳುತ್ತಾರೆ. 'ಇವತ್ತು ಆಗಲೇ ಶುಕ್ರವಾರ. ನೀನು ದಿನಸಿ ಉಳಿಸಿಕೊಂಡು ಏನು ಮಾಡುತ್ತೀಯಾ. ಏನು ಮಾಡಬೇಕು ಅಂದುಕೊಂಡಿರುವೆ?' ಎಂದು ಶುಭಾ ಪ್ರಶ್ನೆ ಮಾಡುತ್ತಾರೆ. 'ನಾನು ಏನೂ ಮಾಡುತ್ತಿಲ್ಲ ತಾಳ್ಮೆಯಿಂದ ಕೇಳಿ. ಈಗ ನಿಮ್ಮ ಸೈಡ್‌ಗೆ ತಿನ್ನಲು ಆಲೂಗಡ್ಡೆ ಫ್ರೈ ಮಾಡಿಕೊಡುವೆ .ರಾತ್ರಿಗೆ ಸೋಯಾ ಪಲಾವ್ ಮಾಡುತ್ತೇನೆ,' ಎಂದು ಒಪ್ಪಿಸುತ್ತಾರೆ. 

ವೈಷ್ಣವಿ ಗಂಡ ಒಂದೇ ದಿನಕ್ಕೆ ಓಡಿ ಹೋಗುತ್ತಾನೆ; ಶುಭಾ ಟಾಂಗ್‌ಗೆ ಕ್ಲಾರಿಟಿ ಕೊಟ್ಟ ಸನ್ನಿಧಿ!

ಸದಸ್ಯರು ಊಟ ಮಾಡುವ ಸಮಯದಲ್ಲಿ ಅನ್ನ ಕಡಿಮೆ ಆಗಿದ್ದ ಕಾರಣ, ವೈಷ್ಣವಿ ರೇಷನ್ ಇದ್ದರೂ ಅನ್ನ ಸದಾ ಕಡಿಮೆ ಮಾಡುತ್ತಾಳೆ. ಎಲ್ಲಾ ಉಳಿಸುತ್ತಿದ್ದಾಳೆ ಎಂದು ಸದಸ್ಯರು ಮಾತನಾಡಿಕೊಳ್ಳುತ್ತಾರೆ. ಬೇಸರಗೊಂಡ ವೈಷ್ಣವಿ ಕಣ್ಣೀರಿಟ್ಟು ಸುಮ್ಮನಾಗುತ್ತಾರೆ. ವೈಷ್ಣವಿ ಪರ ಅರವಿಂದ್ ನಿಂತು 'ಹೀಗೆಲ್ಲಾ ಮಾತನಾಡುವವರು ಅಡುಗೆ ಮಾಡಿ ತಿನ್ನಲಿ ಅವರಿಗೆ ಅವರು ಮಾಡಿದ್ದು ರುಚಿ ಸಿಕ್ಕಿಲ್ಲ ಅಂದ್ರೆ ಏನು ಮಾಡುತ್ತಾರೆ ನೋಡೋಣ,' ಎಂದು ಧೈರ್ಯ ತುಂಬುತ್ತಾರೆ.