ಕನ್ನಡ ಕಿರುತೆರೆಯ ನಟಿ ವೈಷ್ಣವಿ ಗೌಡ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 'ಅಗ್ನಿಸಾಕ್ಷಿ' ಸನ್ನಿಧಿಯಾಗಿ ಮನೆಮಾತಾದ ಅವರು, 'ಬಿಗ್ ಬಾಸ್' ಮೂಲಕವೂ ಜನಪ್ರಿಯತೆ ಗಳಿಸಿದರು. ಸದ್ಯ 'ಸೀತಾರಾಮ' ಧಾರಾವಾಹಿಯಲ್ಲಿ ಸೀತಾ ಆಗಿ ಮಿಂಚುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ವೈಷ್ಣವಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಮತ್ತು ಜೀ ಕನ್ನಡ ವಾಹಿನಿ ಶುಭ ಕೋರಿದ್ದು, ವೈಷ್ಣವಿ ಧನ್ಯವಾದ ತಿಳಿಸಿದ್ದಾರೆ. 

ಕನ್ನಡ ಕಿರುತೆರೆಯ ಸಹಜ ಸುಂದರಿ ವೈಷ್ಣವಿ ಗೌಡ (natural beauty Vaishnavi Gowda) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಗ್ನಿಸಾಕ್ಷಿ ಸನ್ನಿಧಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದ ವೈಷ್ಣವಿ ಗೌಡ ಈಗ 32ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬಿಗ್ ಬಾಸ್ (Bigg Boss) ಮೂಲಕ ಮತ್ತಷ್ಟು ಅಭಿಮಾನಿಗಳನ್ನು ತನ್ನತ್ತ ಸೆಳೆದಿದ್ದ ವೈಷ್ಣವಿ ಈಗ ಸೀತಾರಾಮದಲ್ಲಿ ಸೀತಮ್ಮನಾಗಿ ಮಿಂಚುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿರುವ ವೈಷ್ಣವಿ ಗೌಡ ಸದಾ ಸುದ್ದಿಯಲ್ಲಿರುವ ನಟಿ. 

ವೈಷ್ಣವಿ ಗೌಡ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಸಾಕಷ್ಟು ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಕಳುಹಿಸಿದ ಸುಂದರ ವಿಡಿಯೋಗಳನ್ನು ಅವರು ಪೋಸ್ಟ್ ಮಾಡಿ, ಧನ್ಯವಾದ ತಿಳಿಸಿದ್ದಾರೆ. ಜೀ ಕನ್ನಡ ವಾಹಿನಿ ಕೂಡ ತನ್ನ ಇನ್ಸ್ಟಾ ಖಾತೆಯಲ್ಲಿ ವೈಷ್ಣವಿ ಹುಟ್ಟುಹಬ್ಬಕ್ಕೆ ಶುಭಕೋರಿದೆ. ಸೀತಾರಾಮ ಸೀರಿಯಲ್ ನ ತುಣುಕು ಹಾಗೂ ಜೀ ಕನ್ನಡ ಕಾರ್ಯಕ್ರಮದಲ್ಲಿ ಮಿಂಚಿದ್ದ ವೈಷ್ಣವಿ ವಿಡಿಯೋವನ್ನು ವಾಹಿನಿ ಹಂಚಿಕೊಂಡಿದೆ. ಇದಕ್ಕೆ ನೂರಾರು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ವೈಷ್ಣವಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ. ಜೀ ಕನ್ನಡ ಪೋಸ್ಟ್ ಗೆ ವೈಷ್ಣವಿ ಪ್ರತಿಕ್ರಿಯೆ ನೀಡಿದ್ದು, ಧನ್ಯವಾದ ಅರ್ಪಿಸಿದ್ದಾರೆ. 

ಸೀರೆ ಮೇಲೆ ಬ್ಲೌಸ್ ಹಾಕೊಂಡ ವೈಷ್ಣವಿ ಗೌಡ… Worst outfit ಅಂದು ಬಿಟ್ರು ಜನ

ವೈಷ್ಣವಿ ಗೌಡ ಸೀರಿಯಲ್ ವೃತ್ತಿ ಶುರುವಾಗಿದ್ದು ಜೀ ಕನ್ನಡದ ಮೂಲಕ. ವೈಷ್ಣವಿ ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ದೇವಿ ಪಾತ್ರಕ್ಕೆ ಜೀವ ತುಂಬುವ ಮೂಲಕ ಕಿರುತೆರೆಗೆ ಎಂಟ್ರಿಯಾಗಿದ್ದರು. ಫೆಬ್ರವರಿ 20ರಂದು ಜನಿಸಿರುವ ವೈಷ್ಣವಿ ಗೌಡ ವಯಸ್ಸಿನ ಬಗ್ಗೆ ಅನುಮಾನವಿದೆ. ಹಿಂದಿನ ವರ್ಷ ಜಾಹೀರಾತೊಂದರಲ್ಲಿ ವೈಷ್ಣವಿ ತಮಗೆ 31 ವರ್ಷ ಅಂತ ಹೇಳಿದ್ದರು. ಬಾಲ್ಯದಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದ ವಿಷ್ಣವಿ, ಭರತನಾಟ್ಯ, ಕುಚುಪುಡಿ, ಬೆಲ್ಲಿ ಡಾನ್ಸ್ ಕಲಿತಿದ್ದಾರೆ. 2011ರಲ್ಲಿ ಜೀ ಕನ್ನಡ ಅವರಿಗೆ ಮೊದಲು ಅವಕಾಶ ನೀಡಿತ್ತು. ದೇವಿ ಧಾರಾವಾಹಿಯಲ್ಲಿ ದೇವಿಯಾಗಿ ವೈಷ್ಣವಿ ಮಿಂಚಿದ್ದರು. ನಂತ್ರ 2012ರಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಮನೆ ಮನೆಗೆ ಪರಿಚಯವಾದವರು ವೈಷ್ಣವಿ ಅಲಿಯಾಸ್ ಸನ್ನಿಧಿ. 2012ರಲ್ಲಿ ಭರ್ಜರಿ ಕಾಮಿಡಿ ಶೋ ನಿರೂಪಕಿಯಾಗಿಯೂ ಕೆಲಸ ಮಾಡಿರುವ ವೈಷ್ಣವಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಡ್ರೆಸ್ ಕೋಡ್ ಮತ್ತು ಗಿರಿಗಿಟ್ಲೆ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ವೈಷ್ಣವಿ, ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿ ಮನೆಗೆ ಬಂದಿದ್ರು. 

ಪ್ರಿಯಾ ಮದ್ವೆ ಆಯ್ತು, ಈಗೇನಿದ್ರೂ ಸೀತಾಳದ್ದು! 'ಆ ಹುಡುಗನ' ಬಗ್ಗೆ ಬಾಯ್ಬಿಟ್ಟು ಎಲ್ಲರ ಹುಬ್ಬೇರಿಸಿದ ವೈಷ್ಣವಿ ಗೌಡ

ಇನ್ಸ್ಟಾ ಜೊತೆ ಯುಟ್ಯೂಬ್ ಚಾನೆಲ್ ಹೊಂದಿರುವ ವೈಷ್ಣವಿ ಗೌಡ, ಬ್ಯೂಟಿ ಟಿಪ್ಸ್ ನೀಡ್ತಿರುತ್ತಾರೆ. ಜೊತೆಗೆ ತಮ್ಮ ಡಾನ್ಸ್ ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಿರುತ್ತಾರೆ. ಸಿಂಗಲ್ ಆಗಿ ಇಲ್ಲವೆ ತಮ್ಮ ಸೀರಿಯಲ್ ತಂಡದ ಜೊತೆ ಡಾನ್ಸ್ ಮಾಡುವ ವೈಷ್ಣವಿ, ಸಿಲ್ಲಿ ಜೋಕ್ಸ್, ವಿಚಿತ್ರ ಪ್ರಶ್ನೋತ್ತರದ ಮೂಲಕ ತಮ್ಮ ಅಭಿಮಾನಿಗಳನ್ನು ಸದಾ ಹಿಡಿದಿಟ್ಟುಕೊಂಡಿರ್ತಾರೆ. ಯೋಗ ಮಾಡೋದ್ರಲ್ಲಿ ವೈಷ್ಣವಿ ಫೇಮಸ್. ಅವರ ಮುಗ್ಧತೆ ಜನರಿಗೆ ಇಷ್ಟವಾಗುತ್ತೆ. ಹಿಂದೊಮ್ಮೆ ಮದುವೆ ವಿಷ್ಯದಲ್ಲಿ ನೋವುಂಡಿರುವ ವೈಷ್ಣವಿ, ಯಾವಾಗ ಮದುವೆ ಆಗ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಇದ್ದೇ ಇದೆ. ಹಿಂದಿನ ಘಟನೆಯನ್ನೆಲ್ಲ ಮರೆತಿರೋದಾಗಿ ವೈಷ್ಣವಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಬಹುತೇಕ ಫ್ಯಾನ್ಸ್, ಬೇಗ ಮದುವೆ ಆಗಿ ಎಂಬ ಬೇಡಿಕೆಯನ್ನು ಸದಾ ವೈಷ್ಣವಿ ಮುಂದಿಡ್ತಿರುತ್ತಾರೆ. ಮದುವೆ ಇಲ್ಲದೆ ಇನ್ನೊಂದು ವರ್ಷ ದಾಟಿರುವ ವೈಷ್ಣವಿಗೆ, ಬರ್ತ್ ಡೇ ವಿಶ್ ಜೊತೆ ಮದುವೆ ಆಗಿ ಎನ್ನುವ ಒತ್ತಾಯದ ಮಾತು ಕೇಳಿ ಬರ್ತಿದೆ. ಸೀತಾರಾಮ ಸೀರಿಯಲ್ ನಲ್ಲಿ ಬ್ಯುಸಿಯಿರುವ ವೈಷ್ಣವಿ ಮುಂದಿನ ಪ್ಲಾನ್ ಏನು ಅನ್ನೋದನ್ನು ರಿವೀಲ್ ಮಾಡಿಲ್ಲ. ಈ ಬಾರಿಯಾದ್ರೂ ಗುಡ್‌ ನ್ಯೂಸ್‌ ನೀಡಿ ಅನ್ನೋದೇ ಫ್ಯಾನ್ಸ್‌ ಬೇಡಿಕೆ. 

View post on Instagram