Asianet Suvarna News Asianet Suvarna News

ಜನರ ಮಾತು ಕೇಳಿ ರೂಮಿನಿಂದ ಹೊರ ಬರುತ್ತಿರಲಿಲ್ಲ; ಮಗಳ ಸ್ಥಿತಿ ನೆನೆದು ವಿ ಮನೋಹರ್ ಪತ್ನಿ ಭಾವುಕ

ರಿಯಾಲಿಟಿ ಶೋನಲ್ಲಿ ಮಗಳ ಜೊತೆ ಡ್ಯಾನ್ಸ್ ಮಾಡಿದ ಸಂಗೀತ ನಿರ್ದಶಕ ಮನೋಹರ್. ತಾಯಿ ಹೆಸರು ಇಡಲು ಕಾರಣವೇನು?

V manohar shares special bond with daughter in Raja rani 2 show vcs
Author
Bangalore, First Published Aug 16, 2022, 4:34 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಮತ್ತು ಪತ್ನಿ ವೇಣಿ ಸ್ಪರ್ಧಿಸುತ್ತಿದ್ದಾರೆ.  ಪತ್ನಿ ಮತ್ತು ಮಗಳ ಜೊತೆ ಡ್ಯಾನ್ಸ್‌ ಮಾಡಿ ವೀಕ್ಷಕರನ್ನು ಮನೋರಂಜಿಸಿದ್ದಾರೆ. ಮೊದಲ ಬಾರಿ ಪಬ್ಲಿಕ್‌ನಲ್ಲಿ ಮಗಳು ಕಾಣಿಸಿಕೊಂಡಿರುವುದರ ಬಗ್ಗೆ ಮಾತನಾಡಿದ್ದಾರೆ.

'ನನ್ನ ತಾಯಿನೇ ನನಗೆ ಮಗಳಾಗಿ ಬಂದಿದ್ದಾಳೆ. ತಾಯಿನ ನಾನು ಚೆನ್ನಾಗಿ ನೋಡಿಕೊಂಡಿಲ್ಲ, ನೋಡಿಕೊಳ್ಳುವುದಕ್ಕೆ ಆಗಿಲ್ಲ ಅನೋ ಫೀಲಿಂಗ್ ಇದೆ ನನಗೆ. ಆದರೀಗ ನನ್ನ ಮಗಳನ್ನು ಕೂಡ ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಆಗುತ್ತಿಲ್ಲ. ತಾಯಿ ನೆನಪು ಆಗಾಗ ಕಾಡುತ್ತಿತ್ತು ಹೀಗಾಗಿ ಅವರ ಹೆಸರನ್ನು ಮಗಳಿಗೆ ಇಡಲಾಗಿದೆ' ಎಂದು ವಿ ಮನೋಹರ್ ಮಾತನಾಡುವಾಗ ಭಾವುಕರಾಗಿದ್ದಾರೆ.

ಗರ್ಭಿಣಿಯಾದ 10 ದಿನಕ್ಕೆ ತಾಯಿ ಕಳೆದುಕೊಂಡಳು: ವೇದಿಕೆ ಮೇಲೆ ಬಿಕ್ಕಿಬಿಕ್ಕಿ ಅತ್ತ ಧನರಾಜ್ ದಂಪತಿ

'ಒಂದೆರಡು ವರ್ಷಗಳಿಂದ ನನ್ನ ಮಗಳು ತುಂಬಾನೇ ಡಲ್ ಆಗಿದ್ದಾಳೆ ಕಾರಣ ಏನೆಂದು ಗೊತ್ತೊಲ್ಲ ಆದರೆ ಅವಳ ಆರೋಗ್ಯದಲ್ಲಿ ಸ್ವಲ್ಪ ಏರು ಪೇರು ಆಯ್ತು. ಮನೆಯಿಂದ ಹೊರಗಡೆನೇ ಬರ್ತಾ ಇರಲಿಲ್ಲ ಆದರೆ ಇವತ್ತು ನನ್ನ ಮಗಳು ನನಗೆ ಸಿಕ್ಕಿದ್ದಾಳೆ. ಅವಳು ಸ್ಟೇಜ್ ಪರ್ಫಾರ್ಮೆನ್ಸ್‌ ಮಾಡುತ್ತಾಳೆಂದು ನಾನು ಕಲ್ಪನೆ  ಕೂಡ ಮಾಡಿರಲಿಲ್ಲ. ಇವತ್ತು ನಮಗೆ ತುಂಬಾನೇ ಖುಷಿ ಇದೆ. ಈ ವೇದಿಕೆ ನನ್ನ ಮಗಳನ್ನು ನನಗೆ ಕೊಡ್ತು.' ಎಂದು ಮನೋಹರ್ ಪತ್ನಿ ವೇಣಿ ಮಾತನಾಡಿದ್ದಾರೆ.

'ಸ್ವತಃ ವೇಣಿ ಕೂಡ ಇಲ್ಲ ನನಗೆ ಇದೆಲ್ಲಾ ಆಗೋಲ್ಲ ನನ್ನ ಬಿಡಿ ನಾನು ಮಾಡೋಲ್ಲ ಅಂತ ಹೇಳುತ್ತಿದ್ದರು ಇವತ್ತು ತುಂಬಾ ಆಕ್ಟಿವ್ ಆಗಿದ್ದಾಳೆ. ಅದಕ್ಕೆ ಕಾರಣ ಈ ವೇದಿಕೆ' ಎಂದು ಮನೋಹರ್ ಹೇಳಿದ್ದಾರೆ.

ನನ್ನನ್ನು ಯಾರು ಸಂಪರ್ಕ ಮಾಡೇ ಇಲ್ಲ; ರಾಜಾ ರಾಣಿ-2 ಬಗ್ಗೆ ನಿರೂಪಕಿ ಅನುಪಮಾ ಸ್ಪಷ್ಟನೆ

'ನನ್ನ ಮಗಳು ಸ್ವಲ್ಪ ದಪ್ಪ ಆದಳು. ಸೆಲೆಬ್ರೀಟಿ ಮಕ್ಕಳು ಅಂದ್ರೆ ಜನರಿಗೆ ನಿರೀಕ್ಷೆ ಇರುತ್ತದೆ ಅದರಲ್ಲೂ ಅಯೋ ಮನೋಹರ್ ಮಗಳು ಹೀಗೆ ಹಾಗೆ ಎಂದು ಮಾತನಾಡಿರುವುದು ನನ್ನ ಕಿವಿಗೆ ಬಿದಿದ್ದೆ. ನಿಮ್ಮ ಮಗಳು ಹಾಡು ಹಾಡುತ್ತಾಳಾ? ಏನೂ ಟ್ಯಾಲೆಂಟ್ ಇಲ್ವಾ? ಎಂದು ಪ್ರಶ್ನೆ ಮಾಡುತ್ತಿದ್ದರು. ಈ ರೀತಿ ಮಾತುಗಳನ್ನು ಕೇಳಿ ಕೇಳಿ ಆಕೆ ರೂಮ್ ಬಿಟ್ಟು ಹೊರಗಡೆ ಬರುತ್ತಿರಲಿಲ್ಲ. ಈ ವೇದಿಕೆ ಆಕೆಯಲ್ಲಿ ಈ ರೀತಿ ಟ್ರ್ಯಾನ್ಸ್‌ಫಾರ್ಮೆಷನ್‌ ಕೊಟ್ಟಿರುವುದಕ್ಕೆ ನಾವು ಋಣ ಬಿದ್ದಿದ್ದೀವಿ' ಎಂದಿದ್ದಾರೆ ವೇಣಿ.

'ಪದ್ಮಾ ನೀನು ಮನೋಹರ್‌ ಅಣ್ಣ ಅವರ ಪುತ್ರಿಯಾಗಿ ಹುಟ್ಟಿರುವುದೇ ದೊಡ್ಡ ಟ್ಯಾಲೆಂಟ್. ತಂದೆ-ತಾಯಿ ಬಗ್ಗೆ ಹೆಮ್ಮೆ ಪಡಬೇಕು. ಎಂದೂ ನಾನು ಮನೋಹರ್‌ನ ಇಷ್ಟು ಎಮೋಷನ್ ಆಗಿ ನೋಡಿಲ್ಲ. ಯಾರ್ ಯಾರಿಗೆ ತಾಯಿ ಇದ್ದಾರೆ ಅವರು ಪುಣ್ಯವಂತರು ಯಾರಿಗೆ ಇಲ್ಲ ಅವರಿಗೆ ನಿಜ ಇಲ್ಲೇ ಎಲ್ಲೋ ಇದ್ದಾರೆ ನಮ್ಮ ತಾಯಿ ನಮ್ಮನ್ನು ನೋಡುತ್ತಿದ್ದಾರೆ. ಮನೋಹರ್‌ ಮಗಳಾಗಿ ನೀನು ಖುಷಿಯಾಗಿರುವ  ಜನರ ಜೊತೆ ಚೆನ್ನಾಗಿ ಡ್ಯಾನ್ಸ್‌ ಮಾಡು ಬೇಗ ಸಣ್ಣ ಅಗುತ್ತೀಯಾ' ಎಂದು ನಟಿ ತಾರಾ ಅನುರಾಧ ಮಾತನಾಡಿದ್ದಾರೆ. 

'ಲೈಫಲ್ಲಿ ನಾನು ಯಾವತ್ತೂ ಡ್ಯಾನ್ಸ್ ಮಾಡಿಲ್ಲ. 17 ವರ್ಷ ನನ್ನ ಬದುಕಿನಲ್ಲಿ ಅಪ್ಪ ಇಷ್ಟು ಎಮೋಷನಲ್ ಆಗಿರುವುದನ್ನು ನೋಡಿಲ್ಲ . ಈ ಶೋಗೆ ಬರುವುದಕ್ಕೂ ಮುಂಚೆ ನಾಚಿಗೆ ಇತ್ತು ಅವರಿಗೋಸ್ಕರ ಗಿಫ್ಟ್‌ ಅಂತ ನಾನು ಬಂದೆ' ಎಂದು ಮನೋಹರ್ ಪುತ್ರಿ ಮಾತನಾಡಿದ್ದಾರೆ.

Follow Us:
Download App:
  • android
  • ios