ಕೊರೋನಾ ಲಾಕ್‌ಡೌನ್‌ ವೇಳೆ ಕೆಲವೊಂದು ಕನ್ನಡ ಧಾರಾವಾಹಿಗಳು ಅಂತ್ಯ ಕಂಡವು. ಅದೇ ಸಮಯಕ್ಕೆ ಅನ್ಯ ಭಾಷಾ ಧಾರಾವಾಹಿಗಳನ್ನು ಡಬ್‌ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಅಪ್ಪಟ್ಟ ಕನ್ನಡಿಗರ ಧಾರಾವಾಹಿ ಅಂತ್ಯವಾಗುತ್ತಿದೆ ಎಂದು ತಿಳಿದು ವೀಕ್ಷಕರು ಶಾಕ್ ಆಗಿದ್ದಾರೆ.

ಆಕೃತಿ ಧಾರಾವಾಹಿಗೆ ಪ್ರೇಕ್ಷಕರ ಮೆಚ್ಚುಗೆ! 

ಆಕೃತಿ ಅಂತ್ಯ?

ಉದಯ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿರುವ ಆಕೃತಿ ಧಾರಾವಾಹಿ ಟಿಆರ್‌ಪಿ ಕಡಿಮೆ ಬರುತ್ತಿರುವ ಕಾರಣ  ಅಂತ್ಯವಾಗಲಿದೆ ಎಂದು ಕೇಳಿ ಬರುತ್ತಿದೆ. ತಂಡದಿಂದ ಅಥವಾ ಕಲಾವಿದರಿಂದ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆಗಸ್ಟ್‌ 24ರಿಂದ ಪ್ರಸಾರವಾಗುತ್ತಿರುವ ಆಕೃತಿ ಈಗಾಗಲೆ 101 ಎಪಿಸೋಡ್‌ಗಳನ್ನು ಪೂರೈಸಿದೆ.

'ಆ ದಿನಗಳು'  ಚಿತ್ರದ ನಿರ್ದೇಶಕ ಚೈತನ್ಯ ನಿರ್ಮಾಣ ಮಾಡುತ್ತಿರುವ ಆಕೃತಿ ಧಾರಾವಾಹಿ ಹಾರರ್‌ ಕಥೆ ಹೊಂದಿದ್ದು, ಆರಂಭದಲ್ಲಿ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿತ್ತು. ಅದರಲ್ಲೂ ಸಕಲೇಶಪುರದಲ್ಲಿ ಒಂದು ಫಾರ್ಮ್‌ ಹೌಸ್‌ ಅಂಗಳದಲ್ಲಿರುವ ಒಂದು ಮರದ ಆಕೃತಿ ಇಡೀ ಕುಟುಂಬಕ್ಕೆ ವಿಚಿತ್ರ ಘಟನೆ ಎದುರಿಸುವಂತೆ ಮಾಡುತ್ತದೆ. ಒಂದೊಂದೇ ಅಪಾಯಗಳನ್ನು ಎದುರಿಸುತ್ತಾ ಕುಟುಂಬ ಪಾರಾಗುತ್ತದೆ. ನಾಯಕಿ ದನ್ಯಾ ತನ್ನ ಕುಟುಂಬವನ್ನು ಸಂಕಷ್ಟದಿಂದ ಪಾರು ಮಾಡಿ ಸತ್ಯ ತಿಳಿದುಕೊಳ್ಳಲು ಪ್ರಯತ್ನ ಮಾಡುತ್ತಾಳೆ.