ಗೌತಮ್​ ಮತ್ತು ಭೂಮಿಕಾ ಇನ್ನೇನು ಒಂದಾಗಬೇಕು ಎನ್ನುವಷ್ಟರಲ್ಲಿ ಮಾನ್ಯಳ ಎಂಟ್ರಿಯಾಗಿದೆ. ಗೌತಮ್​ ಈಕೆಯನ್ನು ನೋಡಿ ಶಾಕ್​ ಆಗಿದ್ದಾನೆ. ಯಾರಿವಳು? 

ಗೌತಮ್​ ಮತ್ತು ಭೂಮಿಕಾ ಒಂದಾಗೋ ಟೈಂ ಹತ್ತಿರ ಬಂದೇ ಬಿಟ್ಟಿದೆ. ಹೇಗಾದರೂ ಮಾಡಿ ಭೂಮಿಕಾಗೆ ಪ್ರೀತಿಯನ ನಿವೇದನೆ ಮಾಡಿಕೊಳ್ಳುವ ಮನಸ್ಸು ಮಾಡಿದ್ದಾನೆ ಗೌತಮ್​. ಇದೇ ಕಾರಣಕ್ಕೆ ಭೂಮಿಕಾಳನ್ನು ಕರೆದುಕೊಂಡು ಗಾರ್ಡನ್​ಗೆ ಹೋಗಿದ್ದಾನೆ. ಮುಂದೇನು ಮಾಡುವುದೋ ತಿಳಿಯುತ್ತಿಲ್ಲ. ಇದೇ ಕಾರಣಕ್ಕೆ ಗೆಳೆಯ ಆನಂದ್​ನ ಸಹಾಯ ಪಡೆದಿದ್ದಾರೆ. ಅಷ್ಟಕ್ಕೂ, ಪ್ರೀತಿ-ಗೀತಿ ಅನ್ನೋದೇ ಗೊತ್ತಿಲ್ಲದ ಗೌತಮ್​ಗೆ ಈಗ ಪತ್ನಿ ಭೂಮಿ ಮೇಲೆ ಲವ್​ ಶುರುವಾಗಿದೆ. ಅತ್ತ ಭೂಮಿಕಾ ಅಂತೂ ತನ್ನ ಪ್ರೀತಿಯನ್ನು ಪತಿಗೆ ಹೇಗೆ ತಿಳಿಸಬೇಕು ಎನ್ನುವುದನ್ನು ತಿಳಿಯದೇ ಕಸಿವಿಸಿಯಲ್ಲಿಯೇ ಇದ್ದಾಳೆ. ಅವಳು ಪ್ರೀತಿಯನ್ನು ತಿಳಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಪೆದ್ದು ಗೌತಮ್​ಗೆ ಗೊತ್ತೇ ಆಗುತ್ತಿಲ್ಲ. ಸ್ನೇಹಿತ ಆನಂದ್​, ಗೌತಮ್​ಗೆ ಚಾಲೆಂಜ್​ ಕೊಟ್ಟಿದ್ದ. ಪತ್ನಿಗೆ ಕಿಸ್​ ಮಾಡ್ಲೇಬೇಕು ಎನ್ನುವ ಚಾಲೆಂಜ್​ ಇದಾಗಿತ್ತು. ಇಲ್ಲದಿದ್ದರೆ ಪಾರ್ಟಿಯಲ್ಲಿ ಕುಡಿದ ವಿಷಯವನ್ನು ಅಜ್ಜಿಗೆ ತಿಳಿಸುವುದಾಗಿ ಹೇಳಿದ್ದ. ಗೌತಮ್​ಗೆ ಬೇರೆ ದಾರಿಯೇ ಇರಲಿಲ್ಲ. ಪತ್ನಿಗೆ ಕಿಸ್​ ಕೊಡಲೇಬೇಕು ಎಂದು ಹೋಗಿದ್ದ. ಅಷ್ಟರಲ್ಲಿಯೇ ಭೂಮಿಕಾ ಸಮೀಪ ಹಲ್ಲಿ ಬಂದು ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.

ನಂತರ ಆಫೀಸ್​ನಲ್ಲಿ ಮೀಟಿಂಗ್​ ನಡೆಯುತ್ತಿದ್ದಾಗ ಭೂಮಿಕಾ ಫೋನ್​ ಬಂದಿದೆ. ಎಲ್ಲರೂ ಗೌತಮ್​ಗೆ ತಮಾಷೆ ಮಾಡಿದ್ದಾರೆ. ಭೂಮಿಕಾ ಇನ್ನೂ ಫೋನ್​ ಕಟ್​ ಮಾಡಿರಲಿಲ್ಲ. ಆ ವೇಳೆಗಾಗಲೇ ಭೂಮಿಗೆ ಕಿಸ್​ ಮಾಡುವಂತೆ ಗೌತಮ್​ಗೆ ಆನಂದ್​ ಮತ್ತೆ ಸಜೆಷನ್​ ಕೊಟ್ಟಿದ್ದಾನೆ. ಇದನ್ನೆಲ್ಲಾ ಭೂಮಿಕಾ ಕೇಳಿಸಿಕೊಂಡು ನಾಚಿ ನೀರಾಗಿದ್ದಾಳೆ. ಅಷ್ಟೊತ್ತಿಗಾಗಲೇ ಫೋನ್​ ಕಟ್​ ಆಗದೇ ಇರುವ ವಿಷಯ ಗೌತಮ್​ಗೆ ತಿಳಿದು ಗಾಬರಿಯಾಗಿದ್ದಾನೆ. ಇದೀಗ ಭೂಮಿಕಾಗೆ ಇನ್ನೇನು ಕಿಸ್​ ಕೊಟ್ಟು ಪ್ರೀತಿಯ ನಿವೇದನೆ ಮಾಡಿಕೊಳ್ಳೋಣ ಎಂದುಕೊಂಡಿದ್ದಾನೆ ಗೌತಮ್​. ಆದರೆ ಸೀರಿಯಲ್​ ಬೇರೆಯದ್ದೇ ಹಾದಿ ಹಿಡಿದಿದೆ.

ಛೀ... ರಣವೀರ್​ ಸಿಂಗ್​ ಹೆಸ್ರು ಹೇಳಿ 'ಶಕ್ತಿಮಾನ್'​ ಹೆಸರಿಗೆ ಧಕ್ಕೆ ತರಬೇಡಿ, ಪಾತ್ರದ ಘನತೆ ತಗ್ಗಿಸಬೇಡಿ ಪ್ಲೀಸ್​...

ಗಾಡಿಯನ್ನು ಪಾರ್ಕ್​ ಮಾಡಲು ಸ್ಟಾರ್ಟ್​ ಮಾಡುವ ಹೊತ್ತಿಗೆ ಭಾರಿ ಅಪಘಾತವಾಗಿದೆ. ಕಾರಿನಡಿಗೆ ಸಿಲುಕಿದ್ದು ಮಾನ್ಯ. ಈ ಮಾನ್ಯಳನ್ನು ಶಕುಂತಲಾದೇವಿ ಕೂಡಿಹಾಕಿದ್ದಳು. ಅವಳು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಆದರೆ ಈ ಮಾನ್ಯ ಯಾರು ಎಂಬುದು ಇದೀಗ ರಹಸ್ಯವಾಗಿಯೇ ಉಳಿದಿದೆ. ಭೂಮಿಕಾ ಮತ್ತು ಗೌತಮ್​ ಮದುವೆಯ ಸಂದರ್ಭದಲ್ಲಿಯೂ ಈಕೆಯ ಪ್ರಸ್ತಾಪ ಆಗಿತ್ತು. ಫೋನಿನಲ್ಲಿ ಈಕೆಯ ಧ್ವನಿ ಕೇಳಿ ಗೌತಮ್​ ಗಾಬರಿಗೊಂಡಿದ್ದ. ಆದರೆ ಈಕೆ ಯಾರು ಎಂಬುದು ಬಹಿರಂಗಗೊಂಡಿಲ್ಲ. ಶಕುಂತಲಾದೇವಿ ತನ್ನ ಅಣ್ಣನ ಜೊತೆ ಮಾತನಾಡುವಾಗ ಈ ಮಾನ್ಯ, ಭೂಮಿಕಾಗಿಂತಲೂ ಡೇಂಜರ್​ ಎಂದಿದ್ದಳು. ತಾನೇ ಆಕೆಯನ್ನು ಕೂಡಿ ಹಾಕಿರುವುದಾಗಿ ಹೇಳಿದ್ದಳು. ಆದರೆ ಇವಳು ತಪ್ಪಿಸಿಕೊಂಡು ಬಂದು ಗೌತಮ್​ ಕಾರಿಗೆ ಸಿಲುಕಿದ್ದಾಳೆ. ಗೌತಮ್​ ಆಕೆಯನ್ನು ನೋಡಿ ಗಾಬರಿಗೊಂಡಿದ್ದಾನೆ.

ಭೂಮಿಕಾ ಮಾನ್ಯಳನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ಗೌತಮ್​ ಶಾಕ್​ನಲ್ಲಿ ಇರುವ ಕಾರಣ ಅವಳಿಗೆ ಗೊತ್ತಿಲ್ಲ. ಅಪಘಾತದಿಂದ ಶಾಕ್​ ಆಗಿರಬಹುದು ಎಂದುಕೊಂಡಿದ್ದಾಳೆ. ಅವರಿಗೆ ಏನೂ ಆಗಿಲ್ಲ, ಬೇಗ ಎಚ್ಚರವಾಗುತ್ತದೆ ಎಂದು ಪತಿಗೆ ಧೈರ್ಯ ತುಂಬಿದ್ದಾಳೆ. ಆದರೆ ಗೌತಮ್​ ಮನಸ್ಸಿನಲ್ಲಿಯೇ ಅದೇ ನನಗಿರುವ ಭಯ. ಅವಳಿಗೆ ಎಚ್ಚರ ಆಗುವುದರ ಒಳಗೆ ನಾವಿಲ್ಲಿಂದ ಜಾಗ ಖಾಲಿ ಮಾಡಬೇಕು ಎಂದುಕೊಂಡಿದ್ದಾರೆ. ಅಲ್ಲಿಗೆ ಮಾನ್ಯಳಿಗೆ ಎಚ್ಚರವಾಗಿದೆ. ಹಾಗಿದ್ದರೆ ಈ ಮಾನ್ಯ ಯಾರು? ಗೌತಮ್​ನ ಮಾಜಿ ಪ್ರೇಯಸಿಯೆ ಅಥವಾ ಇನ್ನೇನು? ಇವಳ ಬಗ್ಗೆ ಸದ್ಯ ಸೀಕ್ರೇಟ್​ ಆಗಿ ಇಡಲಾಗಿದೆ. ಒಂದು ವೇಳೆ ಮಾನ್ಯ ಗೌತಮ್​ನ ಮಾಜಿ ಲವರ್​ ಆಗಿದ್ದು ನಿಜವಾಗಿದ್ದರೆ ಶಕುಂತಲಾ ಆಕೆಯನ್ನು ಕೂಡಿ ಹಾಕಿದ್ದು ಯಾಕೆ? ಗೌತಮ್​-ಭೂಮಿಕಾ ಒಂದಾಗುವ ಹೊತ್ತಿನಲ್ಲಿ ಇವಳ ಎಂಟ್ರಿ ನೋಡಿ ಫ್ಯಾನ್ಸ್​ ತುಂಬಾ ನಿರಾಶರಾಗಿದ್ದು, ಇವಳ್ಯಾಕೆ ಮಧ್ಯೆ ತಂದ್ರಿ ಎಂದು ಪ್ರಶ್ನಿಸುತ್ತಿದ್ದಾರೆ. 

ಬಂಧನದ ಭೀತಿಯಿಂದ ನಟಿ ಜಯಪ್ರದಾ ಸದ್ಯ ನಿರಾಳ: ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂಕೋರ್ಟ್​