ಹೆಣ್ಣಿನ ಗೌರವದ ಬಗ್ಗೆ ಭಾಷಣ ಮಾಡೋ ನೀವೂ ಹೀಗಾ ಥೂ...! ನಟಿ ತ್ರಿಷಾಗೆ ಶಾಕ್​ ಕೊಟ್ಟ ನೆಟ್ಟಿಗರು

ಅನಿಮಲ್​ ಚಿತ್ರವನ್ನು ಹೊಗಳುವ ಭರದಲ್ಲಿ, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ನಟಿ ತ್ರಿಷಾ. ಆಮೇಲೆ ಆದದ್ದೇನು?
 

Trisha calls Ranbir Kapoors Animal a cult film deletes post after getting trolled suc

ಸದ್ಯ ಎಲ್ಲೆಲ್ಲೂ ಅನಿಮಲ್​ ಹವಾ ಸೃಷ್ಟಿಯಾಗಿದೆ. ಇದೇ ಒಂದನ್ನು ಬಿಡುಗಡೆಯಾದ ರಣಬೀರ್​ ಕಪೂರ್​, ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್​ ಮೂರು ದಿನಗಳಲ್ಲಿಯೇ 350 ಕೋಟಿ ರೂಪಾಯಿಗಳ ಭರ್ಜರಿ ಕಲೆಕ್ಷನ್​ ಮಾಡಿದ್ದು, ಇಂದಿಗೂ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುತ್ತಲೇ ಇದೆ. ಇದಾಗಲೇ ಹಲವು ಬ್ಲಾಕ್​ಬಸ್ಟರ್​ ಚಿತ್ರಗಳ ದಾಖಲೆಗಳನ್ನು ಉಡೀಸ್​ ಮಾಡಿದೆ.  ನಟ ರಣಬೀರ್‌ ಕಪೂರ್‌ (Ranbir Kapoor)  ಮತ್ತು ರಶ್ಮಿಕಾ ಮಂದಣ್ಣ ಅವರ ಇಂಟಿಮೇಟ್​ ಸೀನ್​ಗಳು ಹೇರಳವಾಗಿದ್ದ ಕಾರಣ,  ಈ ಚಿತ್ರದಲ್ಲಿನ ಕೆಲವು ಹಸಿಬಿಸಿ ದೃಶ್ಯಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಇದಾಗಲೇ ಕತ್ತರಿ ಹಾಕಿದೆ. ಕತ್ತರಿ ಹಾಕಿದ  ಮೇಲಷ್ಟೇ ಚಿತ್ರ ಬಿಡುಗಡೆಯಾಗಿದೆ. ಆದರೂ ನಾಗಾಲೋಟದಿಂದ ಚಿತ್ರ ಓಡುತ್ತಿದೆ. 

ಚಿತ್ರ ಬಿಡುಗಡೆಗೂ ಮೊದಲು ರಿಲೀಸ್​ ಆಗಿದ್ದ ಹಾಡೊಂದು ಹಲ್​ಚಲ್​ ಸೃಷ್ಟಿಸಿತ್ತು. ಅದರಲ್ಲಿ  ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್​ ಅವರ ಲಿಪ್​ಲಾಕ್​ ಸೀನ್​ ನೋಡಿ ಫ್ಯಾನ್ಸ್​ ಉಫ್​ ಎಂದಿದ್ದರು. ವಿಮಾನವೊಂದರಲ್ಲಿ ರಶ್ಮಿಕಾ ಮಂದಣ್ಣ, ಆಲಿಯಾ ಕಪೂರ್​ ಪತಿ ರಣಬೀರ್​ ಜೊತೆ ದೀರ್ಘ ಲಿಪ್​ಲಾಕ್​  ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಈಗಲೂ ಅದು ಸಾಕಷ್ಟು ವೈರಲ್​ ಆಗುತ್ತಲೇ ಇದೆ.  ಇವರಿಬ್ಬರ ಈ ಸುದೀರ್ಘ ಚುಂಬನ ನೋಡಿ ಫ್ಯಾನ್ಸ್​ ಉಫ್​ ಎಂದಿದ್ದರು. ಇದೇ ಕಾರಣಕ್ಕೆ  ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಅಡಲ್ಟ್​ ಸರ್ಟಿಫಿಕೇಟ್​ ನೀಡಿ ಹಲವು ದೃಶ್ಯಕ್ಕೆ ಕತ್ತರಿ ಹಾಕಿದೆ. ಆದರೆ ತೆರೆಯ ಮೇಲೆ ಕಾಣದಿದ್ದ ಹಲವು ವಿಡಿಯೋಗಳು ಸೋಷಿಯಲ್​  ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ರಣಬೀರ್​ ಕಪೂರ್​ ಅವರ ಬೆತ್ತಲೆ ದೃಶ್ಯ, ರಶ್ಮಿಕಾ ಜೊತೆಗಿನ ಬೆಡ್​ರೂಮ್​ ದೃಶ್ಯ ಮಾತ್ರವಲ್ಲದೇ ಇನ್ನೋರ್ವ ನಟಿ ತೃಪ್ತಿ ಡಿಮ್ರಿ ಅವರು ಸಂಪೂರ್ಣವಾಗಿ ಬೆತ್ತಲಾಗಿದ್ದು, ಅವರ ಮೇಲೆ ರಣಬೀರ್​ ಕಪೂರ್​ ಇದ್ದ ವಿಡಿಯೋಗಳು ವೈರಲ್​  ಆಗುತ್ತಲೇ ಇವೆ.

ಅನಿಮಲ್​ ಚಿತ್ರಕ್ಕಾಗಿ ಸಂಪೂರ್ಣ ಬೆತ್ತಲಾದ ನಟಿ ತೃಪ್ತಿ: ಸಿನಿಮಾದಲ್ಲಿ ಕತ್ತರಿ ಹಾಕಿದ್ದ ವಿಡಿಯೋ ವೈರಲ್​!

ಇದೀಗ ಇದೇ ವಿಷಯವಾಗಿ ನಟಿ ತ್ರಿಷಾ ಸಕತ್ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಅಷ್ಟಕ್ಕೂ ಅನಿಮಲ್​ ಚಿತ್ರಕ್ಕೂ, ನಟಿ ತ್ರಿಷಾಗೂ ಏನಪ್ಪಾ ಸಂಬಂಧ ಎಂದರೆ, ತ್ರಿಷಾ  ಅನಿಮಲ್ ಚಿತ್ರದ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಹಾಕಿರುವ ಪೊಸ್ಟ್​.  ಅದರಲ್ಲಿ ಅವರು ಅನಿಮಲ್​ ಚಿತ್ರವನ್ನು ಕಲ್ಟ್​ ಮೂವಿ ಎಂದು ಬರೆದಿದ್ದಾರೆ. ಇದರ ಅರ್ಥ ಇದು ತುಂಬಾ ಸಂಪ್ರದಾಯಬದ್ಧ, ಸಂಸ್ಕೃತಿ ಇರುವ ಚಿತ್ರ ಎಂದು. ಇದನ್ನು ನೋಡಿ ನೆಟ್ಟಿಗರು ಗರಂ ಆಗಿದ್ದಾರೆ. ಇತ್ತೀಚೆಗೆ ಖಳ ನಟ ಮನ್ಸೂರ್​ ಅಲಿ ಖಾನ್​ ತ್ರಿಷಾ ಜೊತೆ ಚಿತ್ರವೊಂದರಲ್ಲಿ ರೇಪ್​ಸೀನ್​ ಮಾಡುವ ಆಸೆ ವ್ಯಕ್ತಪಡಿಸಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಆ ಸಮಯದಲ್ಲಿ ಖಾನ್​ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ನಟಿ ತ್ರಿಷಾ, ಹೆಣ್ಣಿನ ಮಾನ ಮರ್ಯಾದೆ ಬಗ್ಗೆ ಮಾತನಾಡಿದ್ದರು. 

ಇದೀಗ ಮೂರೂ ಬಿಟ್ಟ ದೃಶ್ಯಗಳಿಗೆ ಅನಿಮಲ್​ ಚಿತ್ರವನ್ನು ಸಂಸ್ಕೃತಿಯ ಚಿತ್ರವೆಂದು ಕರೆಯುವುದಕ್ಕೆ ನಾಚಿಕೆ ಆಗುವುದಿಲ್ಲವಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಹೆಣ್ಣಿನ ಗೌರವದ ಬಗ್ಗೆ ಮಾತಾಡಿದ ನೀವು ಈಗ ಅನಿಮಲ್ ಸಿನಿಮಾವನ್ನು ಹೊಗಳುವ ಪರಿ ನೋಡಿ ನಿಮ್ಮ ಮೇಲೆ ಅಸಹ್ಯ ಹುಟ್ಟುತ್ತಿದೆ ಎನ್ನುತ್ತಿದ್ದಾರೆ.  ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ಗೆ ಒಳಗಾಗುತ್ತಲೇ ನಟಿ ತ್ರಿಷಾ ಈ ಪೋಸ್ಟ್​ ಡಿಲೀಟ್​  ಮಾಡಿಬಿಟ್ಟಿದ್ದಾರೆ! 

ರಣಬೀರ್​ ಕಪೂರ್​- ರಶ್ಮಿಕಾ ಬೆಡ್​ರೂಮ್​ ಸೀನ್​ ಲೀಕ್​: ಇನ್ನೇನ್​ ಉಳಿಸಿದ್ಯಪ್ಪಾ ಎಂದು ಕೇಳಿದ ಫ್ಯಾನ್ಸ್​

Latest Videos
Follow Us:
Download App:
  • android
  • ios