ಇಂದು ನಿವೇದಿತಾ ಗೌಡ ತಾಯಿ ಹೇಮಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​  ಖಾತೆಯಲ್ಲಿ ನಿವೇದಿತಾ ಫೋಟೋಗಳನ್ನು ಶೇರ್​ ಮಾಡಿದ್ದಾರೆ.  

ಬಾರ್ಬಿ ಡಾಲ್​ ಎಂದೇ ಫೇಮಸ್​ ಆದವರು ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಇದ್ದಾರೆ. ಸದಾ ರೀಲ್ಸ್​ ಮಾಡುತ್ತಲೇ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದಿರುವ ನಿವೇದಿತಾ ಗೌಡ (Niveditha Gowda) ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾಗಿ ಲೈಫ್​ ಎಂಜಾಯ್​ ಮಾಡ್ತಿದ್ದಾರೆ. ಮದುವೆಯಾದ ಮೇಲೂ ರೀಲ್ಸ್​ ಮಾಡುತ್ತಲೇ ಚಿಕ್ಕ ಮಕ್ಕಳ ರೀತಿಯಲ್ಲಿ ಕುಣಿದಾಡುತ್ತಿರುತ್ತಾರೆ. ಬೆಡಗಿ ದಿನನಿತ್ಯವೂ ಒಂದಿಲ್ಲೊಂದು ಪೋಸ್ಟ್​ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​ ಮಾಡುತ್ತಾರೆ. ಈಕೆ ಇನ್​ಸ್ಟಾಗ್ರಾಮ್​ನಲ್ಲಿ ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ. ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ. ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಅದೇ ಇನ್ನೊಂದೆಡೆ ಸೌಂದರ್ಯದಲ್ಲಿ ಮಗಳಿಗೇ ಸ್ಪರ್ಧೆ ಒಡ್ಡುತ್ತಾ ಇರೋರು ನಿವೇದಿತಾ ಅಮ್ಮ ಹೇಮಾ ರಮೇಶ್​. ಬಿಗ್​ಬಾಸ್​ 5ರ ಸಮಯದಲ್ಲಿ ನಿವೇದಿತಾ ಗೌಡ ಜೊತೆ ಹೇಮಾ ಅವರೂ ಎಲ್ಲರ ಗಮನ ಸೆಳೆದಿದ್ದರು. ಇವರು ನೋಡಲು ಕೂಡ ಸುಮಾರಾಗಿ ಒಂದೇ ರೀತಿಯಿದ್ದು ಅಕ್ಕ ತಂಗಿಯಂತೆ ಕಾಣಿಸುತ್ತಿದ್ದರು. ಮಗಳು ನಿವೇದಿತಾರಂತೆ ತಾಯಿ ಹೇಮಾ ಕೂಡ ಸಕತ್​ ಡ್ರೆಸ್ಸಿಂಗ್ ಸೆನ್ಸ್​ ಹೊಂದಿದ್ದಾರೆ. ಅವರೂ ಮೇಕ್​ ಓವರ್​ ಮಾಡಿಕೊಂಡು ಬಿಟ್ಟರಂತೂ ನಿವೇದಿತಾ ಅಮ್ಮ ಎನ್ನಲು ಸಾಧ್ಯವೇ ಇಲ್ಲ. ಅದೇ ರೀತಿ ಮೇಕಪ್​ ಮಾಡಿಕೊಂಡು ಅವರು ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವುದೂ ಇದೆ. ನಿವೇದಿತಾ ಅವರ ಮೈ ಕಟ್ಟುನ್ನೇ ತಾಯಿಯೂ ಹೊಂದಿರುವುದರಿಂದ ಮಗಳಿಗೆ ಕಾಪಿಟೇಷನ್​ ನೀಡುತ್ತಿದ್ದಾರೆ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. 

ಅವಳ ಡ್ರೆಸ್ಸು, ಆಭರಣ ಇಷ್ಟ ಆಗಲ್ಲ: ಸೀತಾರಾಮದ ವಿಲನ್​ ಭಾರ್ಗವಿಯ ಅಮ್ಮ ಗಿರಿಜಾ ಲೋಕೇಶ್​ ಹೇಳಿದ್ದೇನು?

 ಹೇಮಾ ರಮೇಶ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆಗಾಗ್ಗೆ ಅಪ್ಪ-ಅಮ್ಮನ ಜೊತೆ ಫೋಟೋ ಶೇರ್​ ಮಾಡಿಕೊಳ್ಳುವ ನಿವೇದಿತಾ ಇದೀಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಮ್ಮ ಹೇಮಾ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಫೋಟೋ ಶೇರ್​ ಮಾಡಿದ್ದಾರೆ. ಹೇಮಾ ಅವರ ಪತಿ ಅಂದರೆ ನಿವೇದಿತಾ ಅವರ ತಂದೆ ಉದ್ಯಮಿಯಾಗಿದ್ದು ಇವರ ಹೆಸರು ಲಕ್ಷ್ಮಣ್​. ಇವರ ಅಮ್ಮನ ಫೋಟೋ ನೋಡಿ ಕ್ಯೂಟ್​ ಎಂದು ಹಾರ್ಟ್​ ಇಮೋಜಿ ಹಾಕುತ್ತಿದ್ದಾರೆ ಫ್ಯಾನ್ಸ್​. ಇವರ ಅಮ್ಮ ಕೂಡ ನಿವೇದಿತಾ ಅವರಂತೆಯೇ ಕ್ಯೂಟ್​ ಆಗಿದ್ದು, ನೆಟ್ಟಿಗರು ಅಕ್ಕ-ತಂಗಿಯಂತೆ ಇದ್ದೀರಿ ಎಂದು ಕಮೆಂಟ್​ ಮಾಡುತ್ತಿದ್ದಾರೆ. ನಿವೇದಿತಾ ಬಾರ್ಬಿ ಡಾಲ್​ನಂತೆ ಕಂಗೊಳಿಸಿದರೆ ಅವರ ಅಮ್ಮ ಕೂಡ ತುಂಬಾ ಸುಂದರವಾಗಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಅಮ್ಮನ ಸೌಂದರ್ಯವೇ ಮಗಳಿಗೂ ಬಂದಿದೆ ಎಂದು ಹಲವರು ಹಾಡಿ ಹೊಗಳುತ್ತಿದ್ದಾರೆ.

 ಅಂದಹಾಗೆ ನಿವೇದಿತಾ ಅವರು, ನಿವೇದಿತಾ ಗೌಡ ಹೆಚ್ಚಾಗಿ ತಮ್ಮ ತಾಯಿಯ ಜೊತೆಗೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ. ತಾಯಿಯ ಜೊತೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಇನ್ನು ನಿವೇದಿತಾ ಅವರ ಬಗ್ಗೆ ಹೇಳುವುದಾದರೆ, ಚಂದನ್ ಮತ್ತು ನಿವೇದಿತಾ ಮದುವೆಯಾದದ್ದು 2020ರಲ್ಲಿ 26ರಂದು. ಮೈಸೂರಿನಲ್ಲಿ ಈ ಜೋಡಿ ವಿವಾಹ ಅದ್ದೂರಿಯಾಗಿ ನೆರವೇರಿದೆ. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆ ಸಾಕ್ಷಿ ಆಗಿದ್ದರು.

ದೀಪಾವಳಿ ವಿಷ್​ ಅಂದ್ರೆ ಹೀಗಿರ್ಬೇಕು: ಕಲರ್ಸ್​ ಕನ್ನಡ ಕಲಾವಿದರ ನೋಡಿ WOW ಅಂದ ಫ್ಯಾನ್ಸ್​

View post on Instagram