Asianet Suvarna News Asianet Suvarna News

ದೀಪಾವಳಿ ವಿಷ್​ ಅಂದ್ರೆ ಹೀಗಿರ್ಬೇಕು: ಕಲರ್ಸ್​ ಕನ್ನಡ ಕಲಾವಿದರ ನೋಡಿ WOW ಅಂದ ಫ್ಯಾನ್ಸ್​

ಕಲರ್ಸ್​ ಕನ್ನಡ ವಾಹಿನಿಯ ಧಾರಾವಾಹಿ ಕಲಾವಿದರು ವಿಶೇಷ ರೀತಿಯಲ್ಲಿ ದೀಪಾವಳಿ ಶುಭಾಶಯ ಕೋರಿದ್ದಾರೆ. ಅದರ ಪ್ರೋಮೋ ಬಿಡುಗಡೆಯಾಗಿದೆ.
 

Serial artists of Colors Kannada channel have wished Diwali in a special way suc
Author
First Published Nov 11, 2023, 12:38 PM IST

ದೀಪಾವಳಿ ಹಬ್ಬ ಇಂದಿನಿಂದ ಆರಂಭವಾಗಿದೆ. ಇದಾಗಲೇ ಮನೆ-ಮನಗಳಲ್ಲಿ ಹರ್ಷದ ಝೇಂಕಾರ ಹರಡಿದೆ. ಶ್ರೀಕೃಷ್ಣ ಪರಮಾತ್ಮ ನರಕಾಸುರನನ್ನು ವಧಿಸಿದ್ದು,  ರಾವಣನನ್ನು ಕೊಂದ ನಂತರ ಅಯೋಧ್ಯೆಗೆ ಭಗವಾನ್ ರಾಮನ ಆಗಮನ ಮತ್ತು ಬಲಿಯನ್ನು ವಾಮನ ಸೋಲಿಸಿದ ದಿನ ಹೀಗೆ ಈ ದೀಪಾವಳಿ ಹಬ್ಬವನ್ನು ಹಲವಾರು ಕಾರಣಕ್ಕೆ ಆಚರಿಸಲಾಗುತ್ತದೆ. ಜೊತೆಗೆ ಈ ಹಬ್ಬವು ಅಜ್ಞಾನವನ್ನು ಕಳೆದು ಜ್ಞಾನ, ಕೆಡುಕಿನ ಮೇಲೆ ಒಳ್ಳೆಯ ಮತ್ತು ಹತಾಶೆಯ ಮೇಲೆ ಭರವಸೆಯ ವಿಜಯವನ್ನು ಸಂಕೇತಿಸುತ್ತದೆ. ಇಂಥ ದೀಪಾವಳಿಯ ಸಂಭ್ರಮ ಮನೆಮಾಡಿರುವ ಬೆನ್ನಲ್ಲೇ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. 

ಹಬ್ಬ ಎಂದ ಮೇಲೆ ವಾಹಿನಿಗಳಲ್ಲಿ ಇದರ ಸಂಭ್ರಮ ಇರದೇ ಹೋದರೆ ಹೇಗೆ? ಪ್ರತಿಯೊಂದು ಹಬ್ಬ ಬಂದಾಗಲೂ ಬಹುತೇಕ ಎಲ್ಲಾ ಧಾರಾವಾಹಿಗಳಲ್ಲಿ ಆ ಹಬ್ಬಕ್ಕೆ ಲಿಂಕ್​ ಮಾಡುವ ಸನ್ನಿವೇಶಗಳನ್ನು ಸೃಷ್ಟಿ ಮಾಡಲಾಗುತ್ತದೆ. ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ಧಾರಾವಾಹಿಯ ಕಲಾವಿದರು ಸೀರಿಯಲ್​ ಒಳಗೇ ಅದನ್ನು ಆಚರಿಸುತ್ತಾರೆ. ಅದೇ ರೀತಿ ಕಲರ್ಸ್​ ಕನ್ನಡ ವಾವ್​ ಎನ್ನುವಂಥ ದೀಪಾವಳಿ ವಿಷ್​ ಮಾಡಿದ್ದು, ಅದರ ಪ್ರೋಮೋ ರಿಲೀಸ್​ ಮಾಡಿದೆ.  'ಹಬ್ಬಕ್ಕೆ ಮತ್ತಷ್ಟು ಸೌಂಡ್ ಮಾಡೋಣ; ಇಲ್ಲೇನೋ ನಡೀತಿದೆ... ಸದ್ಯದಲ್ಲೇ ಹೇಳ್ತೀವಿ!' ಅನ್ನೋ ಬರಹದೊಂದಿಗೆ ಮೊನ್ನೆ ಭಾರೀ ಕುತೂಹಲ ಕೆರಳಿಸಿದ್ದ ಪ್ರೋಮೋ ಒಂದು ರಿಲೀಸ್​ ಆಗಿತ್ತು.  ದೀಪಾವಳಿ ಸಮಯದಲ್ಲಿ ಕಲರ್ಸ್ ಕನ್ನಡದಲ್ಲಿ ವಿಶೇಷವಾದ  ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಇದನ್ನು ನೋಡಿದವರು ಹೇಳುತ್ತಿದ್ದರು. ಇದರ ಬೆನ್ನಲ್ಲೇ ಈಗ ಸುಂದರವಾದ ದೀಪಾವಳಿ ಶುಭಾಶಯದ ಪ್ರೊಮೋ ಬಿಡುಗಡೆಯಾಗಿದೆ. 

ಇಲ್ಲೇನೋ ನಡೀತಿದೆ, ಹಬ್ಬಕ್ಕೆ ಮತ್ತಷ್ಟು ಸೌಂಡ್ ಮಾಡೋಣ; ವೀಕ್ಷಕರ ತಲೆಗೆ ಹುಳ ಬಿಟ್ಟ ಕಲರ್ಸ್ ಕನ್ನಡ!

ಇದಾಗಲೇ ಕೆಲವು ಧಾರಾವಾಹಿಗಳು ಟಿಆರ್​ಪಿಯಲ್ಲಿ ಮುನ್ನಡೆ ಸಾಧಿಸಿವೆ. ಭಾಗ್ಯಲಕ್ಷ್ಮಿ, ಅಂತರಪಟದಂಥ ಸೀರಿಯಲ್​, ಅವುಗಳ ಡೈಲಾಗ್​ ಸಕತ್​ ಸೌಂಡ್​ ಮಾಡುತ್ತಿವೆ. ಕೆಲವು ಧಾರಾವಾಹಿಗಳನ್ನು ತಮ್ಮದೇ ಮನೆಯ ಕಥೆಯಂತೆ ಜನತೆ ಸ್ವೀಕರಿಸುತ್ತಿದ್ದಾರೆ. ಈಗ ಬಹುತೇಕ ಧಾರಾವಾಹಿಯ ಕಲಾವಿದರು ಮತ್ತು ಕಲಾವಿದೆಯರನ್ನು ಒಟ್ಟಿಗೇ ನೋಡುವ ಭಾಗ್ಯ ಧಾರಾವಾಹಿ ಪ್ರಿಯರಿಗೆ ಈ ಪ್ರೊಮೋದಲ್ಲಿ ತೋರಿಸಲಾಗಿದೆ. ಧಾರಾವಾಹಿಗಳ ಕಲಾವಿದರು ತಮ್ಮದೇ ಆದ ರೀತಿಯಲ್ಲಿ ಬಂದು ದೀಪವನ್ನು ಬೆಳಗಿದ್ದಾರೆ. ಕೊನೆಗೆ ಝಗಮಗಿಸುವ ಮನೆಯನ್ನೂ ನೋಡಬಹುದು. ಕೊನೆಗೆ ಎಲ್ಲರೂ ದೀಪಾವಳಿಯ ಶುಭಾಶಯ ಕೋರಿದ್ದಾರೆ. 

ಬೆಳಕಿನ ಹಬ್ಬಕ್ಕೆ ಹೊಸ ಹಾಡಿನ ಬಣ್ಣ. ಮನೆಯ ಮನಸ್ಸುಗಳು ಒಂದಾದ್ರೆ ದೀಪ... ದೀಪಾವಳಿ. ಬೆಳಕಿನ ಹಬ್ಬದ ಶುಭಾಶಯಗಳು ಎನ್ನುವ ಶೀರ್ಷಿಕೆಯೊಂದಿಗೆ ಈ ಪ್ರೊಮೋ ರಿಲೀಸ್​ ಆಗಿದೆ. ಆರಂಭದಲ್ಲಿ ನಟಿ ತಾರಾ ಅವರು ನಮಸ್ಕರಿಸುವ ಮೂಲಕ ಈ ಪ್ರೊಮೋ ಶುರುವಾಗುತ್ತದೆ. ನಂತರ ಕಲರ್ಸ್​ ಕನ್ನಡ ಸೀರಿಯಲ್​ ನಟ-ನಟಿಯರು ವಿಶಿಷ್ಟ ರೀತಿಯಲ್ಲಿ ಕಾಣಿಸಿಕೊಂಡು ದೀಪದ ಹಬ್ಬಕ್ಕೆ  ಶುಭಾಶಯ ಕೋರಿರುವುದನ್ನು ನೋಡಬಹುದು. ಇದನ್ನು ನೋಡಿ ಫ್ಯಾನ್ಸ್​ ವ್ಹಾವ್​ ಎನ್ನುತ್ತಿದ್ದಾರೆ. ಈ ಶುಭಾಶಯ ಡಿಫರೆಂಟ್​ ಆಗಿದೆ ಎನ್ನುತ್ತಿರುವ ಕೆಲವರು, ಶುಭಾಶಯ ಎಂದ್ರೆ ಹೀಗಿರಬೇಕು ಎನ್ನುತ್ತಿದ್ದಾರೆ. 

ಕಣ್ಣೀರು ಮಹಿಳೆಯ ವೀಕ್​ನೆಸ್​ ಅಲ್ಲ, ಅದು ಶಕ್ತಿ: ಅಂತರಪಟ ಡೈಲಾಗ್​ಗೆ ಫ್ಯಾನ್ಸ್​ ಫುಲ್​ ಖುಷ್​
 

Follow Us:
Download App:
  • android
  • ios