ಪೂರ್ಣಿ ಅಮ್ಮನ ಗುಟ್ಟು ತಿಳಿಯೋ ಕಾಲ ಬಂದೇ ಬಿಡ್ತು! ತುಳಸಿ ಒಡಲಲ್ಲಿ ಬಚ್ಚಿಡಬೇಕಾ ಇನ್ನೊಂದು ಗುಟ್ಟು?

ಪೂರ್ಣಿ ಅಮ್ಮ ಯಾರು ಎನ್ನುವುದನ್ನು ತಿಳಿದುಕೊಳ್ಳುವ ಕಾಲ ಹತ್ತಿರ ಬಂದೇ ಬಿಟ್ಟಿದೆ. ಈಗ ನೆಟ್ಟಿಗರು ಹೇಳ್ತಿರೋದೇನು?
 

Time has come to know who is Poorni's mother in Sheerastu Shubhamastu suc

ಕೊನೆಗೂ ಪೂರ್ಣಿ ಅಮ್ಮ ಯಾರು ಎನ್ನುವುದು ಬಹುತೇಕ ಖಚಿತವಾಗಿದೆ. ಎಲ್ಲರೂ ಅಂದುಕೊಂಡಂತೆ ಪೂರ್ಣಿಯ ನಿಜವಾದ ಅಮ್ಮ ದೀಪಿಕಾಳ ಅಮ್ಮ ವನಜಾ ಎನ್ನುವುದು ತಿಳಿದುಬಂದಿದೆ. ತನ್ನ ಮಗಳನ್ನು ಹುಡುಕಿಕೊಂಡು ವನಜಾ ದೇವಸ್ಥಾನಕ್ಕೆ ಬಂದಿದ್ದಾಳೆ. ಇದರ ಗುಟ್ಟು ಗೊತ್ತಿರೋ ರಾಮಚಂದ್ರ ಅರ್ಚಕರನ್ನು ಹುಡುಕಿ ಬಂದಿದ್ದಾಳೆ. ಅದೇ ಇನ್ನೊಂದೆಡೆ ಪೂರ್ಣಿಯ ಅಪ್ಪ-ಅಮ್ಮ ಯಾರು ಎಂದು ಹುಡುಕಲು ಅದೇ ದೇವಸ್ಥಾನಕ್ಕೆ ಅದೇ ರಾಮಚಂದ್ರ ಅರ್ಚಕರನ್ನು ಹುಡುಕಿ ತುಳಸಿಯೂ ಬಂದಿದ್ದಾಳೆ. ಇಬ್ಬರ ಮುಖಾಮುಖಿಯಾಗಿದೆ. ಅದಕ್ಕೂ ಮುನ್ನ ವನಜಾ, ನಾನು ತಪ್ಪು ಮಾಡಿದ್ದೇನೆ.  ಮಗಳ ವಿಷಯದಲ್ಲಿ ಅಪರಾಧವಾಗಿದೆ ಎಂದಿದ್ದಾಳೆ. ಹಾಗಿದ್ದರೆ, ಪೂರ್ಣಿ ಅಮ್ಮ ವನಜಾ ಎನ್ನುವುದು ಬಹುತೇಕ ಖಚಿತವಾಗಿದೆ.

ಆದರೆ ಈಗಿರುವುದು ಮುಂದಿನ ಸಮಸ್ಯೆ. ಒಂದು ವೇಳೆ ತುಳಸಿಗೂ ಈ ವಿಷಯ ತಿಳಿದರೆ ಮಾಮೂಲಿನಂತೆಯೇ ಈ ಗುಟ್ಟನ್ನೂ ಅವಳು ತನ್ನೊಳಗೇ ಇಟ್ಟುಕೊಳ್ಳುವ ಸಾಧ್ಯತೆ ಬರುತ್ತದೆ. ವನಜಾ ಸತ್ಯವನ್ನು ಹೇಳಿ ಈ ವಿಷಯವನ್ನು ಯಾರಿಗೂ ಹೇಳದಂತೆ ಭಾಷೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನುವುದು ಸೀರಿಯಲ್​ ಪ್ರೇಮಿಗಳ ಅಭಿಮತ. ಇದಾಗಲೇ ನಿಧಿ ಕುಡಿದು ಪಾರ್ಟಿ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ರಹಸ್ಯವನ್ನು ತುಳಸಿ ತನ್ನೊಳಗೆ ಇಟ್ಟುಕೊಂಡಿದ್ದಾಳೆ. ಇದೇ ರೀತಿ ಈಗ ಇನ್ನೊಂದು ಗುಟ್ಟನ್ನೂ ತನ್ನೊಳಗೆ ಇಟ್ಟುಕೊಳ್ಳಬೇಕಿದೆ. ಇದೊಂದು ರೀತಿಯಲ್ಲಿ ತುಳಸಿಗೆ ನುಂಗಲಾಗದ ತುತ್ತಾಗಿಯೂ ಪರಿಣಮಿಸಿಬಹುದು. ಒಂದು ವೇಳೆ ಈ ವಿಷಯವನ್ನು ತುಳಸಿ ಹೇಳಿಬಿಟ್ಟರೆ ಸೀರಿಯಲ್​​ ಮುಂದಕ್ಕೆ ಹೋಗುವುದಾದರೂ ಹೇಗೆ? ಇವೆಲ್ಲ ಕಾರಣಗಳಿಂದ ಸದ್ಯ ಇದರ ಗುಟ್ಟು ತುಳಸಿಯ ಒಳಗೇ ಇರಬೇಕಿದೆ. 

ಸತ್ತಿದ್ದು ಸಹನಾ ಅಲ್ಲ, ಬ್ಯಾಗ್​ ಕಳ್ಳಿ! ಕಮೆಂಟಿಗರಿಂದ ಫ್ರೀ ಬಸ್​, ಆಧಾರ್​ ಕಾರ್ಡ್​ದೇ ಭಾರಿ ಚರ್ಚೆ

ಅಷ್ಟಕ್ಕೂ, ಶ್ರೀರಸ್ತು ಶುಭಮಸ್ತು ಪೂರ್ಣಿ ಅನಾಥೆ ಎಂದೇ ಇಲ್ಲಿಯವರೆಗೆ ತೋರಿಸುತ್ತಾ ಬರಲಾಗಿದೆ. ಅವಳು ತನ್ನನ್ನು ತಾನು ಅನಾಥೆ ಎಂದುಕೊಂಡಿದ್ದಾಳೆ. ಅನಾಥಾಶ್ರಾಮದಲ್ಲಿಯೇ ಬೆಳೆದಿರುವ ಪೂರ್ಣಿಗೆ ತನ್ನ ಹುಟ್ಟಿನ ಬಗ್ಗೆಯೂ ಗೊತ್ತಿಲ್ಲ. ಅದರ ಬಗ್ಗೆ ಆಕೆ ಹೆಚ್ಚಿಗೆ ತಲೆಕೆಡಿಸಿಕೊಂಡೂ ಇಲ್ಲ. ಮಾಧವನ ಮನೆಯಲ್ಲಿ ಎಲ್ಲರೂ ಆಕೆಯನ್ನು ಅನಾಥೆ ಎಂದುಕೊಂಡಿದ್ದಾರೆ. ಮಾಧವನ ಮಗ ಅವಿಯ ಮಡದಿಯಾಗಿ ಬಂದಿದ್ದಾಳೆ. ಅವಿ ಕೂಡ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ, ತುಂಬಾ  ಪ್ರೀತಿ ಮಾಡುತ್ತಿದ್ದಾನೆ. ಇನ್ನು ತುಳಸಿಗೋ ಆ ಮನೆಯಲ್ಲಿ ಮಾಧವ್​ನನ್ನು ಬಿಟ್ಟರೆ ತುಂಬಾ ಪ್ರೀತಿ, ಅಕ್ಕರೆಯಿಂದ ನೋಡಿಕೊಳ್ಳುವವಳು ಇದೇ ಪೂರ್ಣಿ. ಈಕೆಗೂ ತುಳಸಿಯೇ ಅಮ್ಮ. ಆದರೆ ಈಕೆ ಅನಾಥಾಶ್ರಮದಿಂದ ಬಂದವಳು ಎನ್ನುವ ಕಾರಣಕ್ಕೆ ದೀಪಿಕಾ ಆಗ್ಗಾಗ್ಗೆ ಚುಚ್ಚುವುದು ಉಂಟು.

ಈಗ ಆ ಮಗುವಿನ ರಹಸ್ಯವನ್ನು ತುಳಸಿ ಭೇದಿಸುವ ಕಾಲ ಹತ್ತಿರ ಬಂದಿದೆ.  ಈಕೆ ವಿಲನ್​ ದೀಪಿಕಾಳ ಅಕ್ಕನೇ ಇದ್ದಿರಬಹುದು. ಆಕೆಯ ಅಪ್ಪನಿಗೆ ಪೂರ್ಣಿ ಅಕ್ರಮವಾಗಿ ಹುಟ್ಟಿರುವ ಮಗು ಇದ್ದಿರಬಹುದು, ಇಲ್ಲವೇ ಮದುವೆಗೂ ಮುನ್ನ ದೀಪಿಕಾ ಅಮ್ಮನಿಗೆ ಇದು ಹುಟ್ಟಿದ್ದಿರಬಹುದು. ಖಂಡಿತವಾಗಿಯೂ ಪೂರ್ಣಿ ಇದೇ ಶ್ರೀಮಂತರ ಮನೆಯ ಮಗಳು ಎನ್ನುತ್ತಿದ್ದಾರೆ. ಇನ್ನು ಕೆಲವರು, ಪೂರ್ಣಿ, ದೀಪಿಕಾ ಅಪ್ಪನಿಗೆ ಹುಟ್ಟಿದ ಮಗು, ಆ ಮೇಲೆ ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ದೀಪಿಕಾಳನ್ನು ಅನಾಥಾಶ್ರಮದಿಂದ ತಂದಿರಬಹುದು ಎಂದೂ ಹೇಳಿದ್ದರು.  ಅವರ ಅನಿಸಿಕೆ ಈಗ ನಿಜವಾಗುವ ಹಾಗೆ ಕಾಣಿಸುತ್ತಿದೆ. 

ಆಲಿಯಾ ಡೀಪ್​ಫೇಕ್​ ಫೋಟೋ ವೈರಲ್​: ಆದ್ರೆ ಆ ಬಾರಿ ನೆಟ್ಟಿಗರ ಆಸೆಯೇ ಬೇರೆ! ಅದೇನು ನೋಡಿ...

Latest Videos
Follow Us:
Download App:
  • android
  • ios