ಸತ್ತಿದ್ದು ಸಹನಾ ಅಲ್ಲ, ಬ್ಯಾಗ್ ಕಳ್ಳಿ! ಕಮೆಂಟಿಗರಿಂದ ಫ್ರೀ ಬಸ್, ಆಧಾರ್ ಕಾರ್ಡ್ದೇ ಭಾರಿ ಚರ್ಚೆ
ಸಹನಾ ಸತ್ತಿಲ್ಲ, ಬದುಕಿದ್ದಾಳೆ. ಆದರೆ ಇದೀಗ ಮನೆಗೆ ವಾಪಸ್ ಹೋಗಲು ಅವಳ ಬಳಿ ಹಣವಿಲ್ಲ. ಇದಕ್ಕೆ ಕಮೆಂಟಿಗರು ಹೇಳ್ತಿರೋದೇನು?
ಅಂತೂ ಕೊನೆಗೆ ವೀಕ್ಷಕರು ಹೇಳಿದ್ದು ನಿಜವಾಗಿದೆ. ಸತ್ತಿದ್ದು ಸಹನಾ ಅಲ್ಲ, ಆದರೆ ಕಳ್ಳಿ. ಮನೆ ಬಿಟ್ಟ ಸಹನಾ ಬಸ್ನಲ್ಲಿ ಹೋಗುವಾಗ ಪಕ್ಕದಲ್ಲಿಯೇ ಇದ್ದಳು ಈ ಕಳ್ಳಿ. ಸಹನಾ ನಿದ್ದೆಗೆ ಜಾರಿದಾಗ ಅವಳ ಎಲ್ಲಾ ಬ್ಯಾಗ್ ಸೇರಿದಂತೆ ಎಲ್ಲಾ ಸಾಮಾನು ತೆಗೆದುಕೊಂಡು ಓಡಿ ಹೋಗಿದ್ದಾಳೆ. ಓಡಿ ಹೋಗುವ ಸಮಯದಲ್ಲಿ ಅಪಘಾತವಾಗಿ ಅವಳು ಸತ್ತುಹೋಗಿದ್ದಾಳೆ. ಮುಖ ಚಚ್ಚಿದ್ದರಿಂದ ಅವಳ ಗುರುತು ಹಿಡಿಯಲು ಯಾರಿಗೂ ಸಾಧ್ಯವಾಗಲಿಲ್ಲ. ಅವಳ ಬಳಿ ಸಹನಾಗೆ ಸೇರಿದ ಎಲ್ಲಾ ವಸ್ತುಗಳು ಇದ್ದುದರಿಂದ ಪೊಲೀಸರು ಇದು ಸಹನಾ ಇರಬಹುದು ಎಂದಾಗ, ಖುದ್ದು ಪುಟ್ಟಕ್ಕನೇ ಸಹನಾ ಎಂದು ಗುರುತಿಸಿ, ಅಂತ್ಯಕ್ರಿಯೆ ಮಾಡಲಾಗಿದೆ.
ಮನೆಯಲ್ಲಿ ಸಹನಾ ಸತ್ತಿರುವ ಬಗ್ಗೆ ಪುಟ್ಟಕ್ಕನ ರೋಧನೆ ಮುಗಿಲು ಮುಟ್ಟಿದೆ. ಮನೆಗೆ ಬಂದ ಮಗಳನ್ನು ತಾನೇ ಸಾವಿನ ಬಾಯಿಗೆ ನೂಕಿದೆ ಎನ್ನುವುದು ಅವರ ಕೊರಗು. ಅದೇ ಇನ್ನೊಂದೆಡೆ, ಎಲ್ಲರೂ ಸಹನಾ ಸಾವಿಗೆ ಕಣ್ಣೀರು ಹಾಕುತ್ತಿದ್ದಾರೆ. ಪುಟ್ಟಕ್ಕನನ್ನು ಸಮಾಧಾನ ಪಡಿಸುವುದು ಯಾರೂ ಇಲ್ಲ. ಅದೇ ಇನ್ನೊಂದೆಡೆ ಎಚ್ಚರಗೊಂಡ ಸಹನಾಗೆ ತನ್ನ ಬ್ಯಾಗ್ ಕಾಣೆಯಾಗಿರುವುದು ತಿಳಿದಿದೆ. ಕಂಡಕ್ಟರ್ ಬಳಿ ಗೋಳೋ ಎಂದುಕೊಂಡಿದ್ದಾಳೆ.ಕೈಯಲ್ಲಿ ಕಾಸಿಲ್ಲ. ಎಲ್ಲವನ್ನೂ ಕಳೆದುಕೊಂಡಿದ್ದಾಳೆ. ಏನು ಮಾಡುವುದು ಎಂದು ಅವಳಿಗೆ ತಿಳಿಯದೇ ಅಳುತ್ತಿದ್ದಾಳೆ.
ಸಂಪೂರ್ಣ ಬೆತ್ತಲಾದ ಸಮಂತಾ ಫೋಟೋ ವೈರಲ್! ಟ್ರೋಲಿಗರಿಗೆ ನಟಿ ಹೇಳಿದ್ದೇನು?
ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ನೆಟ್ಟಿಗರು, ಫ್ರೀ ಬಸ್ ಇದೆ ವಾಪಸ್ ಮನೆಗೆ ಬಾ ಅಮ್ಮಾ ಎಂದು ಹೇಳುತ್ತಿದ್ದಾರೆ. ಆದರೆ ಆಧಾರ್ ಕಾರ್ಡ್ ಕಳುವಾಗಿದೆ, ಅವಳು ಹೇಗೆ ಬರಲು ಸಾಧ್ಯ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಹೀಗಾಯ್ತು ಎಂದು ನಾವು ಕಂಡಕ್ಟರ್ಗೆ ಹೇಳ್ತೇವೆ, ನೀನು ಧೈರ್ಯವಾಗಿರು, ಮನೆಗೆ ವಾಪಸ್ ಬಾ ಎಂದು ಚರ್ಚೆ ಶುರುವಿಟ್ಟುಕೊಂಡಿದ್ದಾರೆ. ಮತ್ತೆ ಕೆಲವರು, ನೀನು ಅಲ್ಲೇ ಬೆಂಗಳೂರಿನಲ್ಲಿಯೇ ಇದ್ದುಬಿಡು, ನಾವು ನಿಮಗೆ ಸ್ಪಾನ್ಸ್ರ್ ಮಾಡ್ತೇವೆ. ಅಲ್ಲಿಯೇ ತಂಗಿಯ ಹಾಗೆ ಐಎಎಸ್ ಮಾಡು ಅಂತಿದ್ದಾರೆ. ಒಟ್ಟಿನಲ್ಲಿ ಸಹನಾಳಿಗೆ ಡೈರೆಕ್ಷನ್ ಕೊಡುವ ನೆಟ್ಟಿಗರ ಸಂಖ್ಯೆ ಹೆಚ್ಚಾಗಿದೆ.
ಮನೆಗೆ ಬಂದಿರುವ ಮಗಳನ್ನು ಪುಟ್ಟಕ್ಕ ಹೊರೆ ಎಂದೇನೂ ಭಾವಿಸಲಿಲ್ಲ. ಅವಳ ಆಸೆ ಇದ್ದುದು ಪತಿಯ ಜೊತೆ ಹೊಂದಾಣಿಕೆ ಮಾಡಿಕೊಂಡು ಮಗಳು ಹೋಗಲಿ ಎನ್ನುವುದು. ಅದಕ್ಕಾಗಿಯೇ ಒಂದಿಷ್ಟು ಬುದ್ಧಿಮಾತು ಹೇಳಿದ್ದಳು. ಆದರೆ ಸಹನಾ ಗಂಡನ ಮನೆ ಬಿಟ್ಟು ಬಂದಿದ್ದರ ಹಿಂದೆ ಬಹುದೊಡ್ಡ ಕಾರಣವೇ ಇತ್ತು. ಅತ್ತೆ ವಿಷ ಹಾಕಿ ಕೊಲ್ಲಲು ನೋಡಿದ್ದಳು. ಅದನ್ನಾದರೂ ಸಹನಾ ಸಹಿಸಿಕೊಂಡು ಬಿಡುತ್ತಿದ್ದಳೋ ಏನೋ. ಆದರೆ ಪ್ರೀತಿಸಿದ ಪತಿಯೇ ತನ್ನನ್ನು ನಂಬದೇ, ಅಮ್ಮನ ಪರ ವಹಿಸಿಕೊಂಡಿದ್ದು ಆಕೆಗೆ ಸಹಿಸಲು ಆಗಲಿಲ್ಲ. ಅದಕ್ಕಾಗಿಯೇ ಮನೆಗೆ ವಾಪಸಾಗಿದ್ದಳು.ಆದರೆ ಅಮ್ಮನ ಬುದ್ಧಿಮಾತು ಸಹಿಸದೇ ಅವಳು ಮನೆಬಿಟ್ಟು ಹೋಗಿದ್ದಾಳೆ.
ಸಂಪೂರ್ಣ ಬೆತ್ತಲಾದ ರಣಬೀರ್ ರಾಮನಾದ ಬಳಿಕ ಈಗ ಅರೆಬೆತ್ತಲ ರಾಣಿ ಅಂಜಲಿ ಸೀತಾಮಾತೆ! ಭಾರಿ ಆಕ್ರೋಶ