ಅಮೃತಧಾರೆ ಸೀರಿಯಲ್ ಸೂಪರ್ ಕ್ಲೈಮ್ಯಾಕ್ಸ್: ತನ್ನನ್ನ ತಾನೇ ಶೂಟ್ ಮಾಡ್ಕೊಂಡ ಜೈದೇವ್
ಅಮೃತಧಾರೆ ಸೀರಿಯಲ್ನ ಕೊನೆಯ ಸಂಚಿಕೆಯಲ್ಲಿ ವಿಲನ್ ಜೈದೇವ್ ಎಲ್ಲಾ ಕಡೆಯಿಂದ ಲಾಕ್ ಆಗಿದ್ದಾನೆ. ಭೂಮಿಕಾ ಮತ್ತು ದೀಪಿಕಾಗೆ ಗನ್ ತೋರಿಸಿ ಬೆದರಿಸಿದ ಜೈದೇವ್, ಅಂತಿಮವಾಗಿ ಪೊಲೀಸರ ಎದುರು ಶರಣಾಗುವ ಬದಲು ತನ್ನನ್ನೇ ಶೂಟ್ ಮಾಡಿಕೊಳ್ಳುತ್ತಾನಾ ಎಂಬ ಕುತೂಹಲ ಮೂಡಿದೆ.

ಅಮೃತಧಾರೆ ಸೀರಿಯಲ್ Amruthadhaare
ಅಮೃತಧಾರೆ ಸೀರಿಯಲ್ನ ಖಡಕ್ ವಿಲನ್ ಜೈದೇವ್ ಅಂತ್ಯ ಹೇಗೆ ಎಂಬುದಕ್ಕೆ ಉತ್ತರ ಸಿಕ್ಕಿದೆ. ಇಷ್ಟು ದಿನ ಅಣ್ಣ ಗೌತಮ್ ಮತ್ತು ಪೊಲೀಸರಿಂದಲೂ ಜೈದೇವ್ ತಪ್ಪಿಸಿಕೊಳ್ಳುತ್ತಿದ್ದನು. ಇದೀಗ ಎಲ್ಲಾ ಕಡೆಯಿಂದಲೂ ಜೈದೇವ್ ಲಾಕ್ ಆಗಿದ್ದಾನೆ.
ಭೂಮಿಕಾ-ದೀಪಿಕಾಗೆ ಗನ್ ತೋರಿಸಿದ ಜೈದೇವ್
ದೀಪಿಕಾಳನ್ನು ಕಿಡ್ನ್ಯಾಪ್ ಮಾಡಿ ಆಕೆಯಿಂದ ಆಸ್ತಿಪತ್ರಕ್ಕೆ ಸಹಿ ಮಾಡಿಸಿಕೊಳ್ಳಲು ಜೈದೇವ್ ಮತ್ತು ಶಕುಂತಲಾ ಪ್ಲಾನ್ ಮಾಡಿದ್ದರು. ಆದ್ರೆ ಈ ವೇಳೆ ಅಲ್ಲಿಗೆ ಬಂದ ಭೂಮಿಕಾ, ದೀಪಿಕಾಗೆ ನಾವಿಬ್ಬರೂ ಒಂದೇ ತಾಯಿಯ ಮಕ್ಕಳು ಎಂಬ ಸತ್ಯ ಹೇಳಿದ್ದಳು. ಈ ವಿಷಯ ಕೇಳಿ ಶಕುಂತಲಾ ಮತ್ತು ಜೈದೇವ್ ಶಾಕ್ ಆಗಿದ್ದರು. ಆದ್ರೂ ಭೂಮಿಕಾ-ದೀಪಿಕಾಗೆ ಗನ್ ತೋರಿಸಿ ಆಸ್ತಿಪತ್ರಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕಿದ್ದನು.
ಗೌತಮ್ ಕಣ್ಣೀರು
ಅಷ್ಟರಲ್ಲಿ ಅಲ್ಲಿಗೆ ಗೌತಮ್ ಬಂದು, ತಾಯಿ ಶಕುಂತಲಾ ವಿರುದ್ಧ ತನ್ನ ಅಸಮಾಧಾನ ಹೊರ ಹಾಕಿದ್ದಾನೆ. ಬದಲಾವಣೆ ಜಗದ ನಿಯಮ ಎಂದು ನಿನ್ನನ್ನು ಕ್ಷಮಿಸಿ ಮನೆಗೆ ಸೇರಿಸಿಕೊಂಡೆ ಎಂದು ಶಕುಂತಲಾ ಮೋಸವನ್ನು ನೆನೆದು ಗೌತಮ್ ಕಣ್ಣೀರು ಹಾಕಿದ್ದಾನೆ. ತಂದೆ ಹೇಳಿದ ಎಲ್ಲಾ ಜವಾಬ್ದಾರಿ ನಿರ್ವಹಿಸಿದೆ. ಆದ್ರೆ ಒಬ್ಬ ತಮ್ಮನನ್ನು ಸರಿ ಮಾಡಲು ಸಾಧ್ಯವಾಗಲಿಲ್ಲ ಎಂದು ಗೌತಮ್ ಭಾವುಕನಾಗಿದ್ದಾನೆ.
ಮಲ್ಲಿ ಬರುತ್ತಿದ್ದಂತೆ ಜೈದೇವ್ ಮತ್ತೆ ಹೊಸ ನಾಟಕ
ಗೌತಮ್ ಅಷ್ಟೆಲ್ಲಾ ಬುದ್ದಿಮಾತು ಹೇಳಿದರೂ ಜೈದೇವ್ ಮಾತ್ರ ಬದಲಾಗದೇ ಅಹಂಕಾರದ ಮಾತುಗಳನ್ನಾಡಿದ್ದಾರೆ. ಅಂತಿಮವಾಗಿ ಜೈದೇವ್ನನ್ನು ಬಂಧಿಸಲು ಮಲ್ಲಿ ಪೊಲೀಸರೊಂದಿಗೆ ಆಗಮಿಸಿದ್ದಾಳೆ. ಮಲ್ಲಿ ಬರುತ್ತಿದ್ದಂತೆ ಜೈದೇವ್ ಮತ್ತೆ ಹೊಸ ನಾಟಕ ಆರಂಭಿಸಿದ್ದಾನೆ. ನಾನು ಮಾತ್ರ ಜೈಲು ಸೇರಲ್ಲ ಹಾಗೂ ನನ್ನ ಶತ್ರುಗಳನ್ನು ಉಳಿಸಲ್ಲ ಎಂದು ಗನ್ ಹಿಡಿದುಕೊಂಡು ನಿಂತಿದ್ದಾನೆ.
ಅಮೃತಧಾರೆಯ ಕೊನೆಯ ಸಂಚಿಕೆ
ಗನ್ ಹಿಡಿದಿರೋದನ್ನು ಮಾತ್ರ ಪ್ರೋಮೋದಲ್ಲಿ ತೋರಿಸಲಾಗಿದೆ. ಪ್ರೋಮೋ ನೋಡಿರುವ ವೀಕ್ಷಕರು, ಜೈದೇವ್ ತಾನೇ ಶೂಟ್ ಮಾಡಿಕೊಳ್ಳುವ ಅಂತ್ಯ ಕಾಣಬಹುದು ಅಥವಾ ಮಲ್ಲ ಅಥವಾ ಬೇರೆ ಪೊಲೀಸರ ಗುಂಡೇಟಿನಿಂದ ಸಾಯಬಹುದು ಎಂದು ಅಂದಾಜಿಸುತ್ತಿದ್ದಾರೆ. ಇಂದು ಸಂಜೆ 6.30ಕ್ಕೆ ಪ್ರಸಾರವಾಗಿ 7.30ವರೆಗೆ ಅಮೃತಧಾರೆಯ ಕೊನೆಯ ಸಂಚಿಕೆ ಪ್ರಸಾರವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













